Posts

ಕೈಕಾಲುಗಳ ಕೂದಲು ತೆಗೆಯಲು ಶೇವ್ ಹಾಗೂ ವ್ಯಾಕ್ಸಿಂಗ್ ನಲ್ಲಿ ಯಾವುದು ಬೆಸ್ಟ್ ಎಂಬುದು ತಿಳಿಬೇಕಾ?

Image
ಬೆಂಗಳೂರು : ಮಹಿಳೆಯರು ತಮ್ಮ ಕೈಕಾಲುಗಳ ಅಂದವನ್ನು ಹೆಚ್ಚಿಸಲು  ಅಲ್ಲಿ ಬೆಳೆದಿರುವ ಕೂದಲನ್ನು ತೆಗೆಯುತ್ತಾರೆ. ಆದರೆ ಈ ಕೂದಲನ್ನು  ತೆಗೆಯಲು  ಅವರು ವ್ಯಾಕ್ಸ್ ಹಾಗೂ ಶೇವ್ ಮಾಡಿಕೊಳ್ಳುತ್ತಾರೆ. ಆದರೆ ಇವೆರಡರಲ್ಲಿ ಯಾವುದು ಉತ್ತಮ ಎಂಬ ಗೊಂದಲ ಹಲವರಲ್ಲಿದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ. ವ್ಯಾಕ್ಸ್ :  ಸಾಮಾನ್ಯವಾಗಿ ವ್ಯಾಕ್ಸ್ ಮಾಡಿದರೆ ಚರ್ಮ ಸುಕ್ಕುಗಟ್ಟುತ್ತದೆ ಎಂದು ಹೇಳುತ್ತಾರೆ. ಆದರೆ ವ್ಯಾಕ್ಸಿಂಗ್  ತಜ್ಞರ ಪ್ರಕಾರ ವ್ಯಾಕ್ಸಿಂಗ್ ಮಾಡುವಾಗ ಚರ್ಮವನ್ನು ಬಿಗಿಯಾಗಿಟ್ಟುಕೊಳ್ಳಬೇಕು. ಇದರಿಂದ ನೋವು, ಹಾಗೂ ಎಳೆಯುವಿಕೆ ಕಡಿಮೆಯಾಗುತ್ತದೆ. ಇದರಿಂದ ಚರ್ಮ ಸುಕ್ಕುಗಟ್ಟುವುದಿಲ್ಲ ಎನ್ನುತ್ತಾರೆ ತಜ್ಞರು. ಹಾಗೇ ವ್ಯಾಕ್ಸಿಂಗ್ ಮಾಡುವುದರಿಂದ ಕೂದಲು ಬುಡದಿಂದ ಕಿತ್ತು ಬರುವುದರಿಂದ ಕೂದಲು ಬೇಗ ಹುಟ್ಟುವುದಿಲ್ಲ. ಹಾಗೂ ಕೂದಲ  ಬೆಳವಣೆಗೆ ಕೂಡ ಕ್ರಮೇಣ ಕಡಿಮೆಯಾಗುತ್ತದೆ. ಶೇವ್ :   ನೀವು ಕೂದಲು ಶೇವ್ ಮಾಡುವುದರಿಂದ ಕೂದಲು ಬುಡದಿಂದ ಕಿತ್ತು ಬರುವುದಿಲ್ಲ. ಇದರಿಂದ ಕೂದಲು ಬೇಗ ಹುಟ್ಟುತ್ತದೆ. ಅಷ್ಟೇ ಅಲ್ಲದೇ  ಮತ್ತೆ ಹುಟ್ಟುವ ಕೂದಲು ತುಂಬಾ ದಪ್ಪವಾಗಿ, ಕಪ್ಪಾಗಿ ಹುಟ್ಟುತ್ತದೆ. ಹಾಗೇ ಶೇವ್ ಮಾಡಲು ಬ್ಲೇಡ್ ಗಳನ್ನು ಬಳಸುವುದರಿಂದ ಕೆಲಮೊಮ್ಮೆ ಗಾಯಗಳಾಗಿ ಇದರಿಂದ ಇನ್ ಫೆಕ್ಷನ್ ಆಗುವ ಸಂಭವವಿರುತ್ತದೆ.ಆದ್ದರಿಂದ ಕೈಕಾಲುಗಳ ಕೂದಲು ತೆಗೆಯಲು ಶೇವ್ ಗಿಂತ ವ್...

ವ್ಯಕ್ತಿಯ ಚಂದ ಹೆಚ್ಚಿಸುವ ಕಣ್ಣುಗಳು

Image
ಕಣ್ಣುಗಳು ಕಾಂತಿಯುಕ್ತವಾಗಿ ಆರೋಗ್ಯಪೂರ್ಣವಾಗಿದ್ದರೆ ವ್ಯಕ್ತಿಯ ಸೌಂದರ್ಯ ಇಮ್ಮಡಿಸುತ್ತದೆ. ಕಣ್ಣು ಹಾಗೂ ಅದರ ಸುತ್ತಲಿನ ಭಾಗಗಳು ಸುಂದರವಾಗಿರುವಂತೆ ನೋಡಿಕೊಳ್ಳುವುದು ಆರೋಗ್ಯ ಪರಿರಕ್ಷೆಯಲ್ಲಿ ಅಗತ್ಯ. ಬಣ್ಣಗೆಟ್ಟ ಕಣ್ಣುಗಳು ರೋಗಿಯ ಮುಖದ ಅಂದ ಕೆಡಿಸುತ್ತವೆ. ಮುಖದಲ್ಲಿ ಮೊದಲು ಗಮನ ಸೆಳೆಯುವ ಕಣ್ಣುಗಳು ಆಕರ್ಷಕವಾಗಿ ಕಾಣುವಂತೆ ಮಾಡಲು ನೈಸರ್ಗಿಕ ಚಿಕಿತ್ಸಾ ವಿಧಾನಗಳಿವೆ. ಕಣ್ಣಿನ ಪೇಲವತನಕ್ಕೆ ದೇಹದೊಳಗಿನ ಅನಾರೋಗ್ಯ, ವ್ಯಕ್ತಿ ರೂಢಿಸಿದ ವ್ಯಸನಗಳು ಕಾರಣವಾಗಬಹುದು. ಹೊಗೆಬತ್ತಿ ಅಥವಾ ಧೂಮಪಾನ, ತಂಬಾಕು ಸೇವನೆ ಮಾಡುವವರ ಕಣ್ಣುಗಳು ಕಾಂತಿಯನ್ನು ಕಳೆದುಕೊಳ್ಳುತ್ತವೆ. ರಕ್ತಹೀನತೆಯಿಂದ ನರಳುವವರು, ನಿದ್ದೆಯಿಲ್ಲದೆ ಬಳಲುವವರು, ಯಕೃತುವಿನ ರೋಗದಂತಹ ದೈಹಿಕ ಆನಾರೋಗ್ಯಗಳಿಂದ ನರಳುವವರ ಕಣ್ಣುಳು ಕಾಂತಿರಹಿತವಾಗಿರುತ್ತವೆ.  ಇಂತಹದ್ದೇ ಇನ್ನೊಂದು ಸಮಸ್ಯೆ ಎಂದರೆ ಕಣ್ಣಿನ ಸುತ್ತಲಿನ ಕಪ್ಪುವರ್ತುಲಗಳು. ಕಣ್ಣಿನ ಸುತ್ತಲಿನ ಕಲೆಗಳಿಗೆ ಪ್ರಮುಖ ಕಾರಣವೆಂದರೆ ಚಿಂತೆ ಹಾಗೂ ನಿದ್ದೆಯ ಕೊರತೆ ರೋಗಗಳು. ಹೆಚ್ಚಿನ ನಿದ್ದೆ ಹಾಗೂ ರೋಗಗಳ ಚಿಕಿತ್ಸೆಯಿಂದ ಇದನ್ನು ನಿವಾರಿಸಬಹುದು.  ಈ ಎಲ್ಲಾ ವಿಧಾನಗಳಿಂದ ಕಣ್ಣಿನ ಸೌಂದರ್ಯ ಹೆಚ್ಚಿಸುವುದರೊಂದಿಗೆ ಆರೋಗ್ಯ ಹಿತಕಾರಿ ಸೌಂದರ್ಯ ಸಾಮಗ್ರಿಗಳನ್ನು ಬಳಸುವುದರಲ್ಲೂ ಗಮನಹರಿಸಬಹುದು.

ಉಗುರಿನ ಸಂರಕ್ಷಣೆ-ಸುಂದರ ಉಗುರಿನ ಒಡೆಯರಾಗಬೇಕೇ?

Image
ಸಾಮಾನ್ಯವಾಗಿ ಪೆಡಿಕ್ಯೂರ್ ಮತ್ತು ಮ್ಯಾನಿಕುರ್ ಮಾಡಿಕೊಳ್ಳುವುದರಿಂದ ನಾವು ಉಗುರಿನ  ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದಾಗಿದೆ. ಆದರೆ ಅದನ್ನು ಹೊರತು ಪಡಿಸಿಯೂ ನೀವು ಗಮನ  ಕೊಟ್ಟು ಮಾಡಿಕೊಳ್ಳುವ ಅನೇಕ ಉಪಚಾರಗಳು ಉಗುರಿನ ರಕ್ಷಣೆ ಮಾಡುತ್ತದೆ.  ಕೆಳಗೆ ನೀಡಿರುವ ಅಂಶಗಳತ್ತ ಗಮನ ನೀಡಿದರೆ ಸುಂದರ ಉಗುರಿನ ಒಡೆಯರಾಗುತ್ತೀರಿ  ನಿಸ್ಸಂಶಯವಾಗಿ. ಮಾಡ ಬೇಕಾಗಿರುವುದು: ನೀವು ನೈಲ್ ಪಾಲಿಶ್ ತೆಗೆದ ಬಳಿಕ ತಪ್ಪದೆ ಕೈ ಮತ್ತು  ಉಗುರಿಗೆ ಮಾಯಿಶ್ಚರೈಸರ್ ಕ್ರೀಮ್ ಲೇಪಿಸಿ ನಿಮ್ಮ ಕೈಗಳನ್ನು ನಿಧಾನವಾಗಿ ಸೋಪಿನಿಂದ ಉಜ್ಜಿ  ತೊಳೆಯಿರಿ. ಒಂದು ಸರಳ ಪ್ಯಾಕ್ ಹಾಕಿರಿ. ಈ ಪ್ರಕ್ರಿಯೆಯಿಂದ ಚರ್ಮದಲ್ಲಿ ಅಡಗಿರುವ ಸತ್ತ ಕಣಗಳು ಹೊರ ಬಂದು  ಚರ್ಮವು ತಾಜವಾಗುತ್ತದೆ. ನೀವು ಆರೈಕೆ ಮಾಡಿಸಿಕೊಳ್ಳುವ ಸೆಲೂನ್ ಶುಚಿಯಾಗಿದ್ದಾರೆ ಮಾತ್ರ ಅವರ ಸೇವೆ ಪಡೆಯಿರಿ.. ಇದು  ನಿಮ್ಮ ಉಗುರಿನ ಆರೋಗ್ಯದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ.  ನೀವು ಹೆಚ್ಚು ಬಾರಿ ಪೆಡಿಕ್ಯೂರ್ ಮತ್ತು ಮ್ಯಾನಿಕ್ಯೂರ್ ಮಾಡಿಕೊಳ್ಳುತ್ತಿದ್ದರೆ ನಿಮ್ಮದೇ ಸ್ವಂತ  ಪೆಡಿಕ್ಯೂರ್ -ಮ್ಯಾನಿಕ್ಯೂರ್ ಸೆಟ್ ಮನೆಯಲ್ಲಿ ತಂದಿಟ್ಟು ಕೊಂಡು ಬಳಸುವುದು ಎಲ್ಲ ರೀತಿಯಿಂದಲೂ  ಸೂಕ್ತ. ನೀವು ಬಳಸುವ ಉಪಕರಣಗಳು ಸ್ವಚ್ಛವಾಗಿರುವಂತೆ ನೋಡಿ ಕೊಳ್ಳಿ  ನೀವು ಉಗುರುಗಳಿಗೆ ಬಳಸುವ ಪಾಲೀಶ್ 3 ರಿ...

ಕೂದಲಿನ ಎಲ್ಲಾ ಸಮಸ್ಯೆಗೆ ಒಂದೇ ಪರಿಹಾರ ಈ ಎಣ್ಣೆ

Image
ಬೆಂಗಳೂರು : ಕೂದಲಿನ ಯಾವುದೇ ಸಮಸ್ಯೆ ಇದ್ದರೂ ಅವೆಲ್ಲವು ಪರಿಹಾರವಾಗಬೇಕೆಂದರೆ ಈ ಎಣ್ಣೆಯನ್ನು ಮನೆಯಲ್ಲೇ ತಯಾರಿಸಿ ಬಳಸಿ. ಇದು ಕೂದಲುದುರುವುದು, ಕವಲೊಡೆಯುವುದು, ತಲೆಹೊಟ್ಟು, ಬಿಳಿ ಕೂದಲ ಸಮಸ್ಯೆ, ಕೂದಲು ತೆಳುವಾಗಿದ್ದರೆ ಎಲ್ಲವನ್ನು ಈ ಎಣ್ಣೆ ನಿವಾರಿಸುತ್ತದೆ. ಕೊಬ್ಬರಿ ಎಣ್ಣೆ 100 ಎಂಎಲ್ ಗೆ ತೆಗೆದುಕೊಂಡು ಅದಕ್ಕೆ 1 ಲಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಸಣ್ಣ ಉರಿಯಲ್ಲಿ  20 ನಿಮಿಷ ಕುದಿಸಬೇಕು. ನಂತರ ಅದು ತಣ್ಣಗಾದ ನಂತರ ಒಂದು ಗಾಜಿನ ಬಾಟಲ್ ನಲ್ಲಿ ಸ್ಟೋರ್ ಮಾಡಿ ಇಡಿ. ಇದನ್ನು ವಾರದಲ್ಲಿ 3-4 ಬಾರಿ ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ನಂತರ ನ್ಯಾಚುರಲ್ ಶಾಂಪುವಿನಿಂದ ತಲೆ ಸ್ನಾನ ಮಾಡಬೇಕು. ಹೀಗೆ ಇದನ್ನು 4-5 ತಿಂಗಳು ಮಾಡಿದರೆ ನಿಮ್ಮ  ಕೂದಲಿನ ಯಾವುದೇ ಸಮಸ್ಯೆ ಇದ್ದರೂ ಅವೆಲ್ಲವು ಪರಿಹಾರವಾಗುತ್ತದೆ. ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಹೊಳೆಯುವ ಕಾಂತಿಯುತ ತ್ವಚೆ ನಿಮ್ಮದಾಗಲು ಈ ಬಾತ್ ಪೌಡರ್ ಬಳಸಿ

Image
ಬೆಂಗಳೂರು : ಹೆಣ್ಣು ಮಕ್ಕಳು ತಮ್ಮ ಸ್ಕೀನ್ ಹೊಳೆಯುವಂತೆ ಮಾಡಲು ಅನೇಕ ಕೆಮಿಕಲ್ ಯುಕ್ತ ಸೋಪ್ ಗಳನ್ನು ಬಳಸುತ್ತಾರೆ. ಆದರೆ ಇದರಿಂದ ಅವರ ಮುಖ ಹೊಳೆಯುವ ಬದಲು ಹಾಳಾಗುವುದೇ ಹೆಚ್ಚು. ಆದರಿಂದ ಮನೆಯಲ್ಲೇ ತಯಾರಿಸಿದ 100% ನೈಸರ್ಗಿಕವಾದ ಈ ಬಾತ್ ಪೌಡರ್ ನ್ನು ಬಳಸುವುದರಿಂದ ಯಾವುದೇ ಎಫೆಕ್ಟ್ ಆಗದೇ ಹೊಳೆಯುವ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ. ಮೊದಲಿಗೆ ಹುರಿದು ಪುಡಿ ಮಾಡಿದ ಉದ್ದಿನ ಬೇಳೆ ಪೌಡರ್ 50 ಗ್ರಾಂ, ಹುರಿದು ಪುಡಿ ಮಾಡಿದ ಅಗಸೆ ಬೀಜ ಪೌಡರ್ 50 ಗ್ರಾಂ, ಹುರಿದು ಪುಡಿ ಮಾಡಿದ ಪಿಪ್ಪಲಿ ಪೌಡರ್ 50 ಗ್ರಾಂ, ಗೋಧಿಹಿಟ್ಟು 50ಗ್ರಾಂ ಇವಿಷ್ಟನ್ನು ತೆಗೆದುಕೊಂಡು ಮಿಕ್ಸ್ ಮಾಡಿ ಒಂದು ಗಾಜಿನ ಬಾಟಲ್ ನಲ್ಲಿ ಸ್ಟೋರ್ ಮಾಡಿ ಇಡಿ. ಈ ಮಿಕ್ಸ್ ಪುಡಿಯನ್ನು ತೆಗೆದುಕೊಂಡು ಹಸುವಿನ ತುಪ್ಪದ ಜೊತೆ ಮಿಕ್ಸ್ ಮಾಡಿ ಪೇಸ್ಟ್ ರೀತಿ ಮಾಡಿಕೊಂಡು ದೇಹಕ್ಕೆ ಹಚ್ಚಿಕೊಳ್ಳಿ. ನಂತರ ಅರ್ಧಗಂಟೆ ಬಿಟ್ಟು ಬಿಸಿ ನೀರಿನಲ್ಲಿ ಸ್ನಾನಮಾಡಿ. ಆದರೆ ಸ್ನಾನಕ್ಕೆ ಸೋಪ್ ಬದಲು ಕಡಲೆಹಿಟ್ಟನ್ನು ಬಳಸಿ. ಕಡಲೆಹಿಟ್ಟು ಬಳಸಲು ಇಷ್ಟವಿಲ್ಲದವರು ಮೈಲ್ಡ್ ಗ್ರೇಡ್ ಒನ್ ಸೋಪ್ ಮಾತ್ರವೇ ಬಳಸಿ.

ತುಟಿಗಳು ಸುಂದರವಾಗಿ ಕಾಣಬೇಕೇ? ಹಾಗಾದರೆ ಆರೈಕೆ ಹೀಗಿರಲಿ...

Image
ದೇಹದ ಇತರ ಯಾವುದೇ ಭಾಗಕ್ಕಿಂತಲೂ ತುಟಿಗಳು ತುಂಬಾ ಸೂಕ್ಷ್ಮ ಚರ್ಮವನ್ನು ಹೊಂದಿರುವುದು. ತುಟಿಗಳು ತುಂಬಾ ನಯವಾಗಿರುವ ಕಾರಣದಿಂದ ಹಾಕಿರುವಂತಹ ಲಿಪ್ ಸ್ಟಿಕ್ ನ್ನು ತೆಗೆಯಲು ಒರಟಾಗಿ ವರ್ತಿಸಲು ಸಾಧ್ಯವಿಲ್ಲ. ತುಟಿಯ ಚರ್ಮವು ತುಂಬಾ ತೆಳುವಾಗಿರುವ ಕಾರಣದಿಂದ ಇದು ಬೇಗನೆ ಹಾನಿಗೀಡಾಗುವುದು. ಇದರಿಂದ ದೈನಂದಿನ ಸೌಂದರ್ಯದ ಆರೈಕೆ ವೇಳೆ ತುಟಿಗಳಿಗೆ ಹೆಚ್ಚಿನ ಗಮನಹರಿಸಬೇಕು. ತುಟಿಗಳ ಕಡೆ ಗಮನಹರಿಸಲು ಇಲ್ಲಿ ಕೆಲವೊಂದು ಸಲಹೆಗಳನ್ನು ನೀಡಲಾಗಿದೆ. ಇದನ್ನು ನೀವು ಪಾಲಿಸಿಕೊಂಡು ಹೋಗಿ ತುಟಿಗಳ ಅಂದವನ್ನು ಮತ್ತಷ್ಟು ಹೆಚ್ಚಿಸಿ.... ತುಟಿಗಳನ್ನು ನೆಕ್ಕಬೇಡಿ! ತುಟಿಗಳನ್ನು ನೆಕ್ಕುವುದು ಅಥವಾ ಮುಟ್ಟುವುದು ಚರ್ಮದ ಮೇಲೆ ನೇರ ಪರಿಣಾಮ ಬೀರಬಹುದು. ಚರ್ಮಕ್ಕೆ ಮೊಶ್ಚಿರೈಸ್ ನೀಡುತ್ತಿದ್ದೇವೆಂದು ಭಾವಿಸಿ ಹೆಚ್ಚಿನವರು ತುಟಿಗಳನ್ನು ನೆಕ್ಕುತ್ತಲಿರುತ್ತಾರೆ. ಆದರೆ ಇದು ಸಮಸ್ಯೆಯನ್ನು ಮತ್ತಷ್ಟು ಕೆಡಿಸುವುದು. ನೀವು ತುಟಿಗಳನ್ನು ನೆಕ್ಕಿದ ಸ್ವಲ್ಪ ಸಮಯ ಅದು ತೇವಾಂಶದಿಂದ ಇರುವಂತೆ ಮಾಡಬಹುದು. ಆದರೆ ಸಮಯ ಕಳೆದ ಬಳಿಕ ಮತ್ತೆ ಒಣ ಹಾಗೂ ಚರ್ಮ ಎದ್ದಂತೆ ಕಾಣಬಹುದು. ಯಾಕೆಂದರೆ ಜೊಲ್ಲಿನಲ್ಲಿರುವಂತಹ ಕಿಣ್ವಗಳು ತುಟಿಗಳ ಮೇಲೆ ಕೆಟ್ಟ ಪರಿಣಾಮ ಬೀರುವುದು. ಪದೇ ಪದೇ ತುಟಿಗಳನ್ನು ಮುಟ್ಟುವ ಕಾರಣ ನೈಸರ್ಗಿಕ ಮೊಶ್ಚಿರೈಸರ್ ಕಳೆದುಕೊಂಡು ತುಟಿಗಳು ಒಣಗಬಹುದು. ಮೇಕಪ್ ತೆಗೆಯಿರಿ ತುಟಿಗಳು ಉಸಿರಾಡುವಂತೆ ಮಾಡುವುದು ಅತೀ ಅಗತ್ಯ. ಇದಕ್ಕಾಗಿ ಮಲ...

ಕಣ್ಣಿನ ಆರೋಗ್ಯಕ್ಕಾಗಿ ಒಂದಷ್ಟು ...!

Image
ಕಣ್ಣು ಸೌಂದರ್ಯ ಮತ್ತು ಆತ್ಮವಿಶ್ವಾಸಕ್ಕೆ ಪ್ರತೀಕ. ಇದು ಮುಖದ ಸೌಂದರ್ಯ ಆಕರ್ಷಣೀಯವಾಗಿ ಇರಬೇಕೆಂದರೆ ಕಣ್ಣಿನ ಹೊಳಪು ಸುಂದರವಾಗಿರ ಬೇಕು ಎನ್ನುತ್ತಾರೆ ತಜ್ಞರು. ಆದ್ದರಿಂದ ಸೌಂದರ್ಯ ವರ್ಣಿಸಬೇಕೆಂದರೆ ಕಣ್ಣಿನ ಬಗ್ಗೆ ಬರೆಯುವುದು- ಹೇಳುವುದು ಸಾಮಾನ್ಯ ಸಂಗತಿ. ಮುತ್ತಿನಂತಹ, ದುಂಬಿಯಂತಹ ಕಣ್ಣು ಎಂದೆಲ್ಲ ವರ್ಣಿಸುವುದು ಸಾಮಾನ್ಯ.  ಆದರೆ ಅನೇಕ ಕಾರಣಗಳಿಂದ ಕಣ್ಣುಗಳು ಕಳಾಹೀನವಾಗುತ್ತದೆ. ಇದಕ್ಕೆ ಮುಖ್ಯ ಕಾರಣಗಳು ಏನೇ ಇದ್ದರೂ, ಮನಸ್ಸಿಗೆ ಕಿರಿಕಿರಿ ಆಗುವುದು ಸಹಜ. ಅದರಲ್ಲೂ ಕಣ್ಣಿನ ಕೆಳಗೆ ಉಬ್ಬಿದಂತೆ ಇದ್ದರೆ, ಕಪ್ಪು ವರ್ತುಲದಂತಹ ಸಮಸ್ಯೆಗಳು ಇದ್ದಾಗ ನಮ್ಮಲ್ಲಿ ಆತ್ಮವಿಶ್ವಾಸವೇ ದೂರವಾಗುತ್ತದೆ.  ಒಂದು ಕರವಸ್ತ್ರ ಇಲ್ಲವೇ ಚಿಕ್ಕ ಟವೆಲಿನಲ್ಲಿ ಐಸ್ ಕ್ಯೂಬ್ ಇಟ್ಟು ಸ್ವಲ್ಪ ಕಾಲ ಕಣ್ಣಿನ ಮೇಲಿಡಿ. ಹಸಿಯಾದ ಆಲುಗಡ್ಡೆ ತುರಿದು ಅದನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳಿ  ಸೌತೆ ಕಾಯಿಯನ್ನು ಸಹ ಇದೆ ರೀತಿ ಮಾಡ ಬಹುದಾಗಿದೆ.  ಸಮಯಕ್ಕೆ ಸರಿಯಾಗಿ ನಿದ್ರಿಸಿ, ಅನಗತ್ಯ ಸಂಗತಿಗಳ ಬಗ್ಗೆ ಚಿಂತೆ ಮಾಡದಿರಿ. ದೇಹಕ್ಕೆ ವ್ಯಾಯಾಮ ಅತ್ಯಗತ್ಯ . ನಿರಂತವಾದ ವ್ಯಾಯಾಮ ಮಾಡುವುದರಿಂದ ಕಣ್ಣಿನ ಕೆಳಗೆ ಇರುವ ಉಬ್ಬು ದೂರ ಮಾಡ ಬಹುದಾಗಿದೆ. ಉಪ್ಪಿನ ಪ್ರಮಾಣದ ಬಳಕೆ ಮಿತಿಯಲ್ಲಿರಲಿ .  ಹೀಗೆ ಸಣ್ಣ ಪುಟ್ಟ ಸಂಗತಿಗಳು ನಿಮ್ಮ ಕಣ್ಣನ್ನು ಸುಂದರವಾಗಿಡುತ್ತದೆ