Posts

Showing posts from September, 2017

ಹಿಮ್ಮಡಿ ಆರೋಗ್ಯ ಕಾಪಾಡಬೇಕೆ? ಹಾಗಾದರೆ ಆಯುರ್ವೇದದ ಮೊರೆ ಹೋಗಿ

Image
ಸೌಂದರ್ಯ ಎನ್ನುವುದು ಕೇವಲ ಮುಖಕ್ಕೆ ಸೀಮಿತವಾಗಿದ್ದಲ್ಲ. ಇಡೀ ದೇಹವನ್ನು ಆಧರಿಸಿಯೇ ಸೌಂದರ್ಯವನ್ನು ಅಳೆಯಲಾಗುತ್ತದೆ. ಹಾಗಾಗಿ ಮುಖದ ಜೊತೆಗೆ ಕೈಬೆರಳು, ಪಾದ ಹಾಗೂ ಹಿಮ್ಮಡಿಯ ಆರೋಗ್ಯವೂ ಗಣನೆಗೆ ಬರುತ್ತದೆ. ಪಾದ ಹಾಗೂ ಹಿಮ್ಮಡಿಯ ಬಗ್ಗೆ ಹೆಚ್ಚು ಕಾಳಜಿ ವಹಿಸದಿದ್ದರೆ ಅದೆಷ್ಟೇ ಬೆಲೆಬಾಳುವ ಅಥವಾ ಸುಂದರವಾದ ಪಾದರಕ್ಷೆಯನ್ನು ಧರಿಸಿದರೂ ಅದು ಸುಂದರವಾಗಿ ಕಾಣದು.   ಕಾಡುವ ಸಮಸ್ಯೆ ಹಿಮ್ಮಡಿ ಒಡಕು-ಇಲ್ಲಿದೆ ಸಿಂಪಲ್ ಮದ್ದು  ದೇಹದ ಎಲ್ಲಾ ಭಾರವನ್ನು ಹೊರುವ ಪಾದಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಪಾದದ ವಿಚಾರವನ್ನು ತೆಗೆದುಕೊಂಡರೆ ಹಿಮ್ಮಡಿ ಒಡೆಯುವುದು, ಹಿಮ್ಮಡಿ ಬಿರುಕು ಬಿಡುವುದು ಸಾಮಾನ್ಯವಾದ ಸಮಸ್ಯೆ. ಈ ಸಮಸ್ಯೆ ನಮ್ಮ ನಿರ್ಲಕ್ಷ್ಯದಿಂದ ಹಾಗೂ ವಂಶಾವಳಿಯ ಸಮಸ್ಯೆಯಿಂದ ಉಂಟಾಗುವ ಸಾಧ್ಯತೆ ಇದೆ. ಧೂಳು ಹಾಗೂ ಶುಷ್ಕ ತ್ವಚೆಯು ನಮ್ಮ ಹಿಮ್ಮಡಿಯ ಆರೋಗ್ಯವನ್ನು ಬಹು ಬೇಗ ಹಾಳು ಮಾಡುತ್ತವೆ. ಇದು ಮೇಲ್ನೋಟಕ್ಕೆ ದೊಡ್ಡ ಸಮಸ್ಯೆ ಅನಿಸದಿದ್ದರೂ, ಸದಾ ಕಾಲ ನೋವು ಉರಿಯಿಂದ ಕೂಡಿರುತ್ತದೆ. ಪದೇ ಪದೇ ಕಾಡುವ ಹಿಮ್ಮಡಿ ಒಡೆತಕ್ಕೆ ಬೇಸತ್ತು ಹೋಗಿರುವಿರಾ?  ಈ ಸಮಸ್ಯೆಯಿಂದ ಹೊರ ಬರಲು ಕ್ರೀಮ್ ಹಾಗೂ ಲೋಷನ್ ತಾತ್ಕಾಲಿಕವಾದ ಪರಿಹಾರವನ್ನು ನೀಡುತ್ತವೆ. ಆದರೆ ಶಾಶ್ವತವಾಗಿ ಈ ಸಮಸ್ಯೆಯಿಂದ ಮುಕ್ತಿ ಹೊಂದಬೇಕು ಎನ್ನುವ ಮನಸ್ಸು ನಿಮ್ಮದಾಗಿದ್ದರೆ ಆಯುರ್ವೇದ ಚಿಕಿತ್ಸೆಯ ಮೊರೆ ಹೋಗಬಹುದು. ಅದು ಹೇಗೆ? ಎನ್ನುವ ಗೊ...

ಮೇಕಪ್ ವಿಷಯಕ್ಕೆ ಬಂದಾಗ ಇಂತಹ ಬ್ರಷ್‌ಗಳು ನಿಮ್ಮಲ್ಲಿರಲೇಬೇಕು!

Image
ಮಹಿಳೆಯರು ಮೇಕಪ್ ಇಲ್ಲದೆ ಮನೆಯಿಂದ ಹೊರಗಡೆ ಕಾಲಿಡುವುದು ತುಂಬಾ ಕಡಿಮೆ ಎನ್ನಬಹುದು. ಕೆಲವು ಮಹಿಳೆಯರು ಯಾವುದಾದರೂ ಕಾರ್ಯಕ್ರಮ ಅಥವಾ ಬೇರೆ ಸಂದರ್ಭದಲ್ಲಿ ಮಾತ್ರ ಮೇಕಪ್ ಮಾಡಿಕೊಳ್ಳುವರು. ಇನ್ನು ಕೆಲವರಿಗೆ ಮೇಕಪ್ ಎನ್ನುವುದು ದಿನನಿತ್ಯದ ಕೆಲಸವಾಗಿರುವುದು. ಮೇಕಪ್ ಮಾಡದೆ ಇವರು ಹೊರಗೆ ಹೋಗುವುದೇ ಇಲ್ಲ.  ಪ್ರತಿನಿತ್ಯ ಮೇಕಪ್ ಮಾಡಿಕೊಳ್ಳವವರು ಕೆಲವು ವಿಷಯಗಳನ್ನು ಅಗತ್ಯವಾಗಿ ಪಾಲಿಸಬೇಕು. ಇದರಲ್ಲಿ ಪ್ರಮುಖವಾಗಿ ಮೇಕಪ್ ಮಾಡಿಕೊಳ್ಳುವಂತಹ ಬ್ರಷ್. ಮೇಕಪ್ ಮಾಡಿಕೊಳ್ಳಲು ನಿಮ್ಮ ಕೈಬೆರಳುಗಳು ಕೂಡ ಸಾಕಾಗುವುದು. ಆದರೆ ದಿನನಿತ್ಯ ಮೇಕಪ್ ಮಾಡುವುದಾದರೆ ಅಗತ್ಯವಾಗಿ ಬ್ರಷ್ ಬೇಕೇಬೇಕು.   ಮೇಕಪ್ ಪ್ರಿಯ ಮಹಿಳೆಯರಿಗೆ ಸಿಂಪಲ್ ಟ್ರಿಕ್ಸ್! ಒಮ್ಮೆ ಪ್ರಯತ್ನಿಸಿ ನೋಡಿ...  ಬ್ರಷ್ ಅನ್ನು ಬಳಸಿಕೊಂಡು ಮೇಕಪ್ ಮಾಡಿದರೆ ತುಂಬಾ ಒಳ್ಳೆಯದು. ಇದರಿಂದ ಮೇಕಪ್ ವೇಗ ಹಾಗೂ ಒಳ್ಳೆಯ ರೀತಿ ಮಾಡಲು ಸಾಧ್ಯ. ಮೇಕಪ್ ಮಾಡಿಕೊಳ್ಳುವ ಬ್ರಷ್‌ನ್ನು ತುಂಬಾ ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ. ಬ್ರಷ್ ಸ್ವಚ್ಛವಾಗಿಲ್ಲದೆ ಇದ್ದರೆ ಅದರಿಂದ ಚರ್ಮಕ್ಕೆ ಹಾನಿಯಾಗಬಹುದು ಬ್ರಷ್‌ನ್ನು ಬಳಸುವುದು ಮತ್ತು ಅದರ ಸ್ವಚ್ಛತೆ ಬಗ್ಗೆ ತಿಳಿದುಕೊಳ್ಳಿ... ಮಹಿಳೆಯರು ಮೇಕಪ್ ಇಲ್ಲದೆ ಮನೆಯಿಂದ ಹೊರಗಡೆ ಕಾಲಿಡುವುದು ತುಂಬಾ ಕಡಿಮೆ ಎನ್ನಬಹುದು. ಕೆಲವು ಮಹಿಳೆಯರು ಯಾವುದಾದರೂ ಕಾರ್ಯಕ್ರಮ ಅಥವಾ ಬೇರೆ ಸಂದರ್ಭದಲ್ಲಿ ಮಾತ್ರ ಮೇಕಪ್ ಮಾಡಿಕೊ...

ಸೌಂದರ್ಯ ಕೂದಲಿನ ಆರೈಕೆಯ ರಹಸ್ಯ ಲಿಂಬೆ ಜ್ಯೂಸ್‌ನಲ್ಲಿದೆ!

Image
ಮಹಿಳೆಯರು ಹಾಗೂ ಪುರುಷರಲ್ಲಿ ಕೂದಲು ಉದುರುವ ಸಮಸ್ಯೆ ಇರುವುದು. ಹೊರಗಿನ ಕಲುಷಿತ ವಾತಾವರಣ, ಜೀವನಶೈಲಿ, ಆಹಾರ ಇತ್ಯಾದಿಗಳು ಕೂದಲು ಉದುರುವಿಕೆಗೆ ಪ್ರಮುಖ ಕಾರಣವಾಗಿದೆ. ಆದರೆ ಪ್ರಕೃತಿದತ್ತವಾಗಿರುವ ಕೆಲವೊಂದು ಹಣ್ಣುಗಳು ಹಾಗೂ ತರಕಾರಿಗಳು ಕೂದಲು ಉದುರುವ ಸಮಸ್ಯೆ ಕಡಿಮೆ ಮಾಡುವುದು. ಇದರಲ್ಲಿ ಪ್ರಮುಖವಾಗಿ ಲಿಂಬೆ. ಹೌದು, ಲಿಂಬೆರಸವು ಕೂದಲು ಉದುರುವಿಕೆ ತಡೆದು ಕೂದಲಿನ ಬೆಳವಣೆಗೆಗೆ ನೆರವಾಗುವುದು. ವಿಟಮಿನ್ ಎ, ಬಿ, ಫೋಸ್ಪರಸ್ ಮತ್ತು ಆ್ಯಂಟಿಆಕ್ಸಿಡೆಂಟ್ ಹೊಂದಿರುವ ಲಿಂಬೆಯು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವುದು. ಲಿಂಬೆ ಹಣ್ಣು: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು..! ಕೂದಲಿಗೆ ಲಿಂಬೆರಸ ಬಳಸಿದರೆ ಅದರಿಂದ ಕೂದಲು ಆರೋಗ್ಯಕಾರಿ, ಕಾಂತಿಯುತ ಮತ್ತು ಬಲಿಷ್ಠವಾಗುವುದು. ಉಗುರುಬೆಚ್ಚಗಿನ ಎಣ್ಣೆಗೆ ಕೆಲವು ಹನಿ ಲಿಂಬೆರಸ ಹಾಕಿಕೊಂಡು ಅದನ್ನು ತಲೆಬುರುಡೆಗೆ ಮಸಾಜ್ ಮಾಡಿಕೊಳ್ಳಬೇಕು. ಕೂದಲು ಉದುರುವಿಕೆ ಮತ್ತು ತಲೆಹೊಟ್ಟಿಗೆ ಇದು ಪ್ರಮುಖ ಮನೆಮದ್ದಾಗಿದೆ. ನೇರವಾಗಿ ಲಿಂಬೆರಸ ಹಚ್ಚಿಕೊಂಡರೆ ಕೂದಲು ಬಲವಾಗುವುದು ಮತ್ತು ತಲೆಹೊಟ್ಟು ಕಡಿಮೆಯಾಗುವುದು. ಲಿಂಬೆರಸ ಬಳಸಿಕೊಂಡರೆ ಒಂದೇ ತಿಂಗಳಲ್ಲಿ ಫಲಿತಾಂಶ ಕಂಡುಬರುವುದು. ಕೂದಲಿಗೆ ಲಿಂಬೆರಸ ಬಳಸಿಕೊಳ್ಳುವ ವಿಧಾನಗಳು 1.ಒಂದು ಮೊಟ್ಟೆಯ ಲೋಳೆ, ಒಂದು ಕಪ್ ಬಿಸಿ ನೀರಿಗೆ ಐದು ಚಮಚ ಹೆನ್ನಾ ಹಾಕಿ. ಇದಕ್ಕೆ ಅರ್ಧ ಚಮಚ ತಾಜಾ ಲಿಂಬೆರಸ ಹಾಕಿ ಮತ್ತು ಇದನ್ನು ತಲೆಬುರುಡ...

ಹೀರೋ-ಹೀರೋಯಿನ್ ರೀತಿ ಕಾಣಿಸಿಕೊಳ್ಳಬೇಕೇ?-ಈ ತಪ್ಪುಗಳನ್ನು ಮಾಡದಿರಿ!

Image
ಚರ್ಮದ ಕಾಳಜಿ ಪ್ರತಿಯೊಬ್ಬರಿಗೂ ಇರುವುದು. ಯಾಕೆಂದರೆ ಚರ್ಮವು ಕಾಂತಿ ಕಳಕೊಂಡರೆ ಅದು ದೇಹದ ಸೌಂದರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ಇಂತಹ ಸಮಯದಲ್ಲಿ ಚರ್ಮವನ್ನು ವಿವಿಧ ರೀತಿಯಿಂದ ಆರೈಕೆ ಮಾಡುವರು. ಇದರಲ್ಲಿ ಪುರುಷರು ಹಾಗೂ ಮಹಿಳೆಯರೆಂಬ ಭೇದವಿಲ್ಲ. ಪ್ರತಿಯೊಬ್ಬರಿಗೂ ಸುಂದರ ಚರ್ಮ ಬೇಕೇಬೇಕು. ಆದರೆ ಚರ್ಮದ ಆರೈಕೆಯಲ್ಲಿ ಕೆಲವೊಂದು ತಪ್ಪುಗಳು ನಡೆಯುತ್ತಿದೆ. ಇದು ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ತಪ್ಪುಗಳು ಆಗುತ್ತದೆ.   ಈ ಬ್ಯೂಟಿ ಟಿಪ್ಸ್ ಅನುಸರಿಸಿ-ಇನ್ನಷ್ಟು ಸುಂದರವಾಗಿ ಕಾಣುವಿರಿ!  ಚರ್ಮದ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆದುಕೊಂಡರೆ ಕೆಲವು ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು. ಆದರೆ ಮಹಿಳೆಯರು ಹಾಗೂ ಪುರುಷರು ಕೆಲವೊಂದು ಸಾಮಾನ್ಯ ತಪ್ಪುಗಳನ್ನು ಆಗಾಗ ಮಾಡುತ್ತಿರುವರು. ನಮಗೆ ತಿಳಿದೋ ಅಥವಾ ತಿಳಿಯದೆಯೋ ಇಂತಹ ತಪ್ಪುಗಳು ಆಗುತ್ತಿದೆ. ಚರ್ಮದ ಆರೈಕೆಯಲ್ಲಿ ಆಗುವಂತಹ ಐದು ಸಾಮಾನ್ಯ ತಪ್ಪುಗಳು ಯಾವುದು ಎಂದು ತಿಳಿದುಕೊಂಡು ಮುಂದೆ ಅದು ಪುನರಾವರ್ತನೆಯಾಗದಂತೆ ನೋಡಿಕೊಳ್ಳಿ.... ಒಂದನೇ ತಪ್ಪು  ಚರ್ಮವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಹಾಗೂ ಕಲ್ಮಶ ತೆಗೆದುಹಾಕಲು ಪ್ರಮುಖವಾಗಿ ಇರುವಂತಹ ಅಸ್ತ್ರವೆಂದರೆ ಸ್ಕ್ರಬ್ ಮತ್ತು ಸತ್ತ ಚರ್ಮ ಕಿತ್ತೊಗೆಯುವುದು. ಸ್ಕ್ರಬ್ ಮತ್ತು ಸತ್ತ ಚರ್ಮ ಕಿತ್ತೊಗೆಯುವ ಕೆಲಸ ನಿಯಮಿತವಾಗಿ ಮಾಡಬಹುದು. ಆದರೆ ಅತಿಯಾಗಿ ಮಾಡಿದರೆ ಸಮಸ್ಯೆಯಾಗುವುದು. ...

ಸೌಂದರ್ಯ ಪ್ರಿಯರಿಗೆ 'ಚಾಕೊಲೇಟ್' ಫೇಸ್ ಪ್ಯಾಕ್!

Image
ಚಾಕೊಲೇಟ್ ಹೆಸರು ಕೇಳಿದರೆ ಸಾಕು ಬಾಯಿಯೊಳಗೆ ನಾಲಗೆ ತನ್ನದೇ ಹಾಡು ಹೇಳಲು ಆರಂಭಿಸುತ್ತದೆ. ಚಾಕೊಲೇಟ್ ರುಚಿಯೇ ಹಾಗೆ. ಅದರಲ್ಲೂ ಈಗ ವಿವಿಧ ಬಗೆಯ ಚಾಕೊಲೇಟ್ ಲಭ್ಯವಿರುವ ಕಾರಣದಿಂದ ಪ್ರತಿಯೊಬ್ಬರಿಗೂ ಚಾಕೊಲೇಟ್ ಇಷ್ಟ. ಕೋಕಾದಿಂದ ಮಾಡಲ್ಪಡುವ ಚಾಕೊಲೇಟ್ ಕೇವಲ ತಿನ್ನಲು ಮಾತ್ರವಲ್ಲದೆ ಅದರಿಂದ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಕೆಲವರಿಗೆ ತಿಳಿದಿದ್ದರೂ ಚಾಕೊಲೇಟ್ ಅನ್ನು ಸೌಂದರ್ಯ ವರ್ಧಕವಾಗಿ ಬಳಸುವ ಮೊದಲು ಅದು ಬಾಯಿಯೊಳಗೆ ಹೋಗಿರುತ್ತದೆ. ಇದರಿಂದ ಚಾಕೊಲೇಟ್ ಅನ್ನು ಸೌಂದರ್ಯವರ್ಧಕವಾಗಿ ಬಳಸುವವರ ಸಂಖ್ಯೆ ಕಡಿಮೆ. ಕೋಕಾ ಕೂಡ ದುಬಾರಿಯಾಗಿರುವುದು ಇದಕ್ಕೆ ಮತ್ತೊಂದು ಕಾರಣವಾಗಿದೆ. ಆದರೆ ತುಂಬಾ ದುಬಾರಿಯಾದರೂ ಚಾಕಲೇಟ್‌ನಲ್ಲಿ ಹಲವಾರು ರೀತಿಯ ಸೌಂದರ್ಯವರ್ಧಕ ಗುಣಗಳು ಇವೆ! ಇದು ಯಾವುದೆಂದು ನೀವು ಮುಂದಕ್ಕೆ ಓದುತ್ತಾ ತಿಳಿಯಿರಿ... ಚಾಕೊಲೇಟ್ ತೆಂಗಿನಕಾಯಿ ಸ್ಕ್ರಬ್  ಚರ್ಮದ ಸತ್ತ ಕೋಶಗಳನ್ನು ತೆಗೆಯಲು ನಿಮಗೆ ಒಳ್ಳೆಯ ಚಿಕಿತ್ಸೆ ಬೇಕೆಂದರೆ ನೀವು ಕಂದು ಸಕ್ಕರೆಯನ್ನು ತೆಂಗಿನೆಣ್ಣೆಯಲ್ಲಿ ಬಿಸಿ ಮಾಡಿಕೊಳ್ಳಿ. ಇದು ಬಿಸಿಯಾಗಿರುವಾಗಲೇ ಇದಕ್ಕೆ ಕೋಕಾ ಹುಡಿ ಹಾಕಿಕೊಳ್ಳಿ. ಓಟ್ ಮೀಲ್ ಪೌಡರ್ ನ್ನು ಈ ಮಿಶ್ರಣಕ್ಕೆ ಹಾಕಿಕೊಂಡರೆ ಒಳ್ಳೆಯ ಸ್ಕ್ರಬ್ ಆಗುವುದು. ಸ್ಕ್ರಬ್ ಅನ್ನು ಮುಖಕ್ಕೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ತಿರುಗಿಸಿ. ಚಾಕೊಲೇಟ್-ಗ್ರೀನ್ ಟೀ...

ಕೂದಲಿನ ಸರ್ವರೋಗಕ್ಕೂ ಪರ್ಫೆಕ್ಟ್ ಹೇರ್ ಮಾಸ್ಕ್-ಪ್ರಯತ್ನಿಸಿ ನೋಡಿ

Image
ಸುಂದರವಾಗಿರುವ ಕೇಶರಾಶಿಯಿದ್ದರೆ ಆ ಮಹಿಳೆಯ ಸೌಂದರ್ಯವು ಮತ್ತಷ್ಟು ಹೆಚ್ಚುವುದರಲ್ಲಿ ಯಾವುದೇ ಸಂಶಯವಿಲ್ಲ. ಸುಂದರ ಕೂದಲು ಪಡೆಯಲು ಅದರ ಆರೈಕೆ ಕೂಡ ಮಾಡಬೇಕಾಗುವುದು ಅಗತ್ಯ. ಉದ್ದ ಕೂದಲಿನ ಆರೈಕೆ ತುಂಬಾ ಕಠಿಣವೆನ್ನಬಹುದು. ಯಾಕೆಂದರೆ ಕೂದಲು ಉದ್ದಗಿದ್ದರೆ ಅದನ್ನು ತೊಳೆಯುವುದು, ಎಣ್ಣೆ ಹಾಕುವುದು ಮತ್ತು ಬಾಚಿಕೊಳ್ಳುವುದು ತುಂಬಾ ಕಷ್ಟ.  ಆದರೆ ಇಂದಿನ ದಿನಗಳಲ್ಲಿ ಸಮಯದ ಅಭಾವದಿಂದಾಗಿ ಕೂದಲಿನ ಆರೈಕೆಗೆ ಯಾರೂ ಹೆಚ್ಚಿನ ಗಮನಹರಿಸುವುದೇ ಇಲ್ಲ. ಇದರಿಂದಾಗಿ ಕೂದಲಿನ ವಿವಿಧ ರೀತಿಯ ಸಮಸ್ಯೆಗಳಾದ ಕೂದಲು ಉದುರುವಿಕೆ, ತುಂಡಾಗುವುದು, ತಲೆಹೊಟ್ಟು, ಒಣ ತಲೆಬುರುಡೆ, ಬೋಳಾಗುವುದು ಇತ್ಯಾದಿ ಕಾಣಿಸಿಕೊಳ್ಳುವುದು. ಕೇವಲ ಶಾಂಪೂ ಮತ್ತು ಎಣ್ಣೆಯಿಂದ ಇಂತಹ ಸಮಸ್ಯೆ ಹೋಗಲಾಡಿಸಲು ಸಾಧ್ಯವಿಲ್ಲ. ಇದಕ್ಕಾಗಿ ಕೂದಲಿನ ಕೆಲವು ಮಾಸ್ಕ್ ಬಳಸಿಕೊಂಡರೆ ಒಳ್ಳೆಯದು. ಈ ಮಾಸ್ಕ್‌ಗಳನ್ನು ತಲೆಗೆ ಹಚ್ಚಿಕೊಂಡು ರಾತ್ರಿಯಿಡಿ ಕೂದಲಿನಲ್ಲಿ ಬಿಟ್ಟರೆ ಮರುದಿನ ಕೂದಲು ಕಾಂತಿಯುತವಾಗುವುದು. ಮನೆಯಲ್ಲೇ ತಯಾರಿಸಬಹುದಾದ ಕೆಲವು ಮಾಸ್ಕ್ ಗಳ ಬಗ್ಗೆ ತಿಳಿಸಲಿದ್ದೇವೆ. ಆದರೆ ಇದು ತುಂಬಾ ಜಿಗುಟು ಹಾಗೂ ವಾಸನೆ ಹೊಂದಿರುವುದು. ಈ ಮಾಸ್ಕ್ ಬಳಸಿಕೊಂಡರೆ ಮರುದಿನ ಬೆಳಗ್ಗೆ ಎದ್ದು ಕೂದಲಿಗೆ ಸ್ನಾನ ಮಾಡುವುದು ಅತೀ ಅಗತ್ಯವಾಗಿದೆ. ವಾರಾಂತ್ಯ ಅಥವಾ ನಿಮಗೆ ಸಮಯ ಸಿಗುವಾಗ ಈ ಮಾಸ್ಕ್ ಬಳಸಿಕೊಳ್ಳಿ. ಈ ಮಾಸ್ಕ್ ತಯಾರಿಸಲು ಯಾವೆಲ್ಲಾ ಸಾಮಗ್ರಿಗಳು ಬೇಕು ಮತ್ತು ಇ...

ಕೂದಲ ಆರೈಕೆಗೆ ಐದೇ ಐದು ಸರಳ ಸೂತ್ರಗಳು

Image
ಪ್ರತಿಯೊಂದು ಹೆಂಗಳೆಯರು ತಮ್ಮ ಕೂದಲು ಸುಂದರವಾಗಿ ನೀಳವಾಗಿ ಇರಬೇಕೆಂದು ಬಯಸುವವರೇ ಹೆಚ್ಚು. ಈಗ ಹಲವಾರು ಕೇಶ ವಿನ್ಯಾಸಗಳಿಂದ ಮಹಿಳೆಯರು ವಿಜೃಂಭಿಸುತ್ತಾರೆ. ಕೂದಲು ತುಂಬಾ ಸೂಕ್ಷ್ಮ ಅಂಗವಾಗಿದ್ದು ಸಾಕಷ್ಟು ಚಿಕಿತ್ಸಕ ಗುಣಗಳನ್ನು ಬೇಡುತ್ತವೆ. ನಿಮ್ಮ ಕೂದಲಿನ ವಿಚಾರಕ್ಕೆ ಬಂದಾಗ ಸಾಕಷ್ಟು ಪರಿಮಾಣವನ್ನು ಹೊಂದದೆ ಇರಬಹುದು, ವಿಶೇಷವಾಗಿ ನೀವು ಪ್ರಯತ್ನಿಸಲು ಬಯಸುವ ಎಲ್ಲಾ ಅಲಂಕಾರಿಕ ಹೊಸ ಕೇಶವಿನ್ಯಾಸ ಇದ್ದಾಗ, ನಿಮ್ಮ ಕೂದಲು ನಿಮ್ಮ ಹಣೆಯ ಕಡೆಗೆ ಫ್ಲಾಟ್ ಆಗಿ ಅಂಟಿಕೊಳ್ಳುವುದು ಮತ್ತು ಕೂದಲು ಬೇಕಾದ ರೀತಿಯಲ್ಲಿ ಸಹಕಾರವನ್ನು ನಿರಾಕರಿಸುತ್ತದೆ.  ಫ್ಲಾಟ್ ಕೂದಲು ಮುಖ್ಯವಾಗಿ ಹೈಪರ್ ಆಕ್ಟಿವ್ ಸೆಬಾಸಿಯಸ್ ಗ್ರಂಥಿಗಳೊಂದಿಗೆ ಸೇರಿ ಜಿಡ್ಡಿನ ಕೂದಲುಗಳಾಗುವವು. ಈ ರೀತಿಯ ಕೂದಲು ಆಗಾಗ್ಗೆ ತನ್ನದೇ ಆದ ತೂಕದಲ್ಲಿ ಕೆಳಗೆ ಇಳಿಯುತ್ತದೆ ಮತ್ತು ಯಾವುದೇ ತೈಲವನ್ನು ಲೇಪಿಸದೆ, ಆಗಾಗ್ಗೆ ಶಾಂಪೂಗಳೊಂದಿಗೆ ಕೂದಲನ್ನು ತೊಳೆಯಬೇಕು. ಕೂದಲನ್ನು ಹೇರಳವಾಗಿ ಮತ್ತು ಆರೋಗ್ಯಕರವಾಗಿ ಬೆಳೆಸಲು ಯಾವುದೇ ಹೆಚ್ಚಿನ ಸಮಸ್ಯೆಯಿಲ್ಲ ಮತ್ತು ಇಲ್ಲಿ ಐದು ಅಸಾಧಾರಣ ಮಾರ್ಗಗಳಿವೆ, ಅದು ನಿಮಗೆ ಮನೆಯಲ್ಲಿಯೇ ಸುಲಭವಾಗಿ ಹೇಗೆ ಕಾರ್ಯನಿರ್ವಹಿಸಬಹುದು ಎಂಬುದನ್ನು ತಿಳಿಸುತ್ತದೆ ನಿಮ್ಮ ಕೂದಲಿನ ಭಾಗವನ್ನು ಬದಲಿಸಿ  ಹೆಚ್ಚಿನ ಮಹಿಳೆಯರು ನಿರ್ದಿಷ್ಟ ಶೈಲಿಯಲ್ಲಿ ತಮ್ಮ ಕೂದಲನ್ನು ಧರಿಸುತ್ತಾರೆ ಮತ್ತು ಕೇಂದ್ರದಲ್ಲಿ ಅಥ...

ಮನೆಔಷಧಿ: ಪಾಪಸು ಕಳ್ಳಿಯಿಂದ ತಯಾರಿಸಿದ ಫೇಸ್ ಪ್ಯಾಕ್

Image
ಪ್ರತಿಯೊಬ್ಬರು ಇಂದಿನ ದಿನಗಳಲ್ಲಿ ಏನಾದರೊಂದು ಸಂಶೋಧನೆಯಲ್ಲಿ ತೊಡಗಿಕೊಂಡಿರುತ್ತಾರೆ. ಇದರಿಂದ ಹೊಸ ಹೊಸ ಸಾಮಗ್ರಿಗಳು ನಮ್ಮ ದೇಹದ ಆರೈಕೆಗೆ ನಮಗೆ ಲಭ್ಯವಾಗುತ್ತಾ ಇದೆ. ಅಲೋವೆರಾವು ಇಂದು ವಿಶ್ವದೆಲ್ಲೆಡೆಯಲ್ಲಿ ತುಂಬಾ ಜನಪ್ರಿಯವಾಗಿದೆ.  ಅಲೋವೆರಾದಿಂದ ದೇಹದ ಆರೈಕೆ ಮಾಡುವುದು ಮಾತ್ರವಲ್ಲದೆ ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಅಲೋವೆರಾದ ಜ್ಯೂಸ್ ಕೂಡ ಮಾರುಕಟ್ಟೆಗೆ ಬಂದಿದೆ. ಆದರೆ ಪಾಪಸು ಕಳ್ಳಿಯನ್ನು ತ್ವಚೆಯ ಆರೈಕೆಗೆ ಬಳಸುವ ಬಗ್ಗೆ ನೀವು ಕೇಳಿದ್ದೀರಾ? ಇಲ್ಲ ತಾನೇ? ಆದರೆ ಅಲೋವೆರಾದ ಕುಟುಂಬಕ್ಕೆ ಸೇರಿರುವ ಪಾಪಸು ಕಳ್ಳಿ ಕೂಡ ತ್ವಚೆಯ ಆರೈಕೆಗೆ ತುಂಬಾ ಒಳ್ಳೆಯದು. ಇದನ್ನು ಕೇಳಿ ನಿಮಗೆ ಅಚ್ಚರಿಯಾಗಬಹುದು. ಆದರೆ ಇದು ನಿಜ. ಮೊಡವೆಗಳಿಂದ ಉಂಟಾಗುವಂತಹ ಕಲೆಗಳ ನಿವಾರಣೆ ಮಾಡುವಲ್ಲಿ ಪಾಪಸು ಕಳ್ಳಿಯ ಲೋಳೆಯು ತುಂಬಾ ಪರಿಣಾಮಕಾರಿ ಎಂದು ಸಾಬೀತಾಗಿದೆ. ಮುಳ್ಳುಗಳಿಂದಲೇ ತುಂಬಿರುವ ಪಾಪಸು ಕಳ್ಳಿಯ ಲೋಳೆ ತೆಗೆಯುವುದು ತುಂಬಾ ಕಠಿಣ ಕೆಲಸ. ಆದರೆ ಜಾಗೃತೆ ವಹಿಸಿ ಇದರ ಲೋಳೆ ಬಳಸಿಕೊಂಡರೆ ಅದು ತುಂಬಾ ಪರಿಣಾಮಕಾರಿಯಾಗಲಿದೆ. ಮನೆಮದ್ದುಗಳು ತುಂಬಾ ನಿಧಾನವಾಗಿ ಫಲಿತಾಂಶ ನೀಡುವ ಕಾರಣದಿಂದ ಒಂದು ಸಲ ಇದನ್ನು ಬಳಸಿಕೊಂಡರೆ ಅದರಿಂದ ಯಾವುದೇ ಪರಿಣಾಮವಾಗದು. ಇದನ್ನು ನಿಯಮಿತವಾಗಿ ಬಳಸಿದರೆ ಫಲಿತಾಂಶ ಖಚಿತ. ಪಾಪಸು ಕಳ್ಳಿಯ ಲೋಳೆಯನ್ನು ತಿಂಗಳಲ್ಲಿ 8-10 ಸಲ ಬಳಸಿದರೆ ಅದು ಫಲಿತಾಂಶ ನೀಡುವುದು. ತ್ವಚೆಯ ಬಣ್ಣದಲ್ಲಿ ಬದಲಾವ...

ಹೀರೋ-ಹೀರೋಯಿನ್ ರೀತಿ ಕಾಣಿಸಿಕೊಳ್ಳಬೇಕೇ?-ಈ ತಪ್ಪುಗಳನ್ನು ಮಾಡದಿರಿ!

Image
ಚರ್ಮದ ಕಾಳಜಿ ಪ್ರತಿಯೊಬ್ಬರಿಗೂ ಇರುವುದು. ಯಾಕೆಂದರೆ ಚರ್ಮವು ಕಾಂತಿ ಕಳಕೊಂಡರೆ ಅದು ದೇಹದ ಸೌಂದರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ಇಂತಹ ಸಮಯದಲ್ಲಿ ಚರ್ಮವನ್ನು ವಿವಿಧ ರೀತಿಯಿಂದ ಆರೈಕೆ ಮಾಡುವರು. ಇದರಲ್ಲಿ ಪುರುಷರು ಹಾಗೂ ಮಹಿಳೆಯರೆಂಬ ಭೇದವಿಲ್ಲ. ಪ್ರತಿಯೊಬ್ಬರಿಗೂ ಸುಂದರ ಚರ್ಮ ಬೇಕೇಬೇಕು. ಆದರೆ ಚರ್ಮದ ಆರೈಕೆಯಲ್ಲಿ ಕೆಲವೊಂದು ತಪ್ಪುಗಳು ನಡೆಯುತ್ತಿದೆ. ಇದು ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ತಪ್ಪುಗಳು ಆಗುತ್ತದೆ.   ಈ ಬ್ಯೂಟಿ ಟಿಪ್ಸ್ ಅನುಸರಿಸಿ-ಇನ್ನಷ್ಟು ಸುಂದರವಾಗಿ ಕಾಣುವಿರಿ!  ಚರ್ಮದ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆದುಕೊಂಡರೆ ಕೆಲವು ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು. ಆದರೆ ಮಹಿಳೆಯರು ಹಾಗೂ ಪುರುಷರು ಕೆಲವೊಂದು ಸಾಮಾನ್ಯ ತಪ್ಪುಗಳನ್ನು ಆಗಾಗ ಮಾಡುತ್ತಿರುವರು. ನಮಗೆ ತಿಳಿದೋ ಅಥವಾ ತಿಳಿಯದೆಯೋ ಇಂತಹ ತಪ್ಪುಗಳು ಆಗುತ್ತಿದೆ. ಚರ್ಮದ ಆರೈಕೆಯಲ್ಲಿ ಆಗುವಂತಹ ಐದು ಸಾಮಾನ್ಯ ತಪ್ಪುಗಳು ಯಾವುದು ಎಂದು ತಿಳಿದುಕೊಂಡು ಮುಂದೆ ಅದು ಪುನರಾವರ್ತನೆಯಾಗದಂತೆ ನೋಡಿಕೊಳ್ಳಿ.... ಒಂದನೇ ತಪ್ಪು  ಚರ್ಮವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಹಾಗೂ ಕಲ್ಮಶ ತೆಗೆದುಹಾಕಲು ಪ್ರಮುಖವಾಗಿ ಇರುವಂತಹ ಅಸ್ತ್ರವೆಂದರೆ ಸ್ಕ್ರಬ್ ಮತ್ತು ಸತ್ತ ಚರ್ಮ ಕಿತ್ತೊಗೆಯುವುದು. ಸ್ಕ್ರಬ್ ಮತ್ತು ಸತ್ತ ಚರ್ಮ ಕಿತ್ತೊಗೆಯುವ ಕೆಲಸ ನಿಯಮಿತವಾಗಿ ಮಾಡಬಹುದು. ಆದರೆ ಅತಿಯಾಗಿ ಮಾಡಿದರೆ ಸಮಸ್ಯೆಯಾಗುವುದು....

ಬ್ಯೂಟಿ ಟಿಪ್ಸ್: ಮುಖದ ಅಂದಕ್ಕೆ ಗ್ರೀನ್ ಟೀ ಫೇಸ್ ಪ್ಯಾಕ್

Image
ಸೌಂದರ್ಯವೆಂಬುದು ಇಂದು ಎಲ್ಲ ಹೆಂಗಳೆಯರ ಅಚ್ಚುಮೆಚ್ಚಿನ ವಿಷಯ ಎಂದೇ ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಉಂಟಾಗುತ್ತಿರುವ ಪರಿಸರ ಮಾಲಿನ್ಯದಿಂದ ಹೆಚ್ಚು ಪರಿಣಾಮಕ್ಕೆ ಒಳಗಾಗುತ್ತಿರುವುದು ಕೂದಲು ಮತ್ತು ತ್ವಚೆಯಾಗಿದೆ. ಅದಕ್ಕಾಗಿಯೇ ಸೌಂದರ್ಯವನ್ನು ಅತ್ಯುತ್ತಮಗೊಳಿಸುವ ಯಾವುದೇ ಉತ್ಪನ್ನ ಮಾರುಕಟ್ಟೆಗೆ ಬರಲಿ ಅದನ್ನು ಖರೀದಿಸಿ ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಎಲ್ಲಾ ಪ್ರಯತ್ನವನ್ನು ಸ್ತ್ರೀಯರು ಮಾಡುತ್ತಾರೆ. ಅಂತೆಯೇ ಸೌಂದರ್ಯದ ಕುರಿತಾಗಿ ಸಲಹೆಗಳನ್ನು ಅಕ್ಕ ಪಕ್ಕದವರೊಂದಿಗೆ ಚರ್ಚಿಸಿ ಅಂತೆಯೇ ಪಾಲಿಸುತ್ತಾರೆ.  ಆದರೆ ಈ ಕೃತಕ ಉತ್ಪನ್ನಗಳಿಗಿಂತಲೂ ನೈಸರ್ಗಿಕವಾಗಿ ದೊರೆಯುವುದನ್ನು ನೀವು ಪ್ರಯತ್ನಿಸಿದರೆ ನಿಮ್ಮ ತ್ವಚೆಯಲ್ಲಿ ಉಂಟಾಗುವ ಚಮತ್ಕಾರವನ್ನು ನೀವೇ ಸ್ವತಃ ಅರಿತುಕೊಳ್ಳಬಹುದಾಗಿದೆ. ಇಂತಹ ನೈಸರ್ಗಿಕ ಉತ್ಪನ್ನಗಳಲ್ಲಿ ಗ್ರೀನ್ ಟೀ ಕೂಡ ಒಂದು. ಚೀನಾ ಮೂಲದ ಈ ಚಹಾವು ನಿಮ್ಮ ತ್ವಚೆಯ ಕೋಶಗಳನ್ನು ಸಕ್ರಿಯಗೊಳಿಸುತ್ತವೆ ಅಂತೆಯೇ ಒಂದಿಷ್ಟು ವೈದ್ಯಕೀಯ ಪ್ರಯೋಜನಗಳನ್ನು ಇದು ಹೊಂದಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಗ್ರೀನ್ ಟೀಯನ್ನು ಯಾವೆಲ್ಲಾ ಬಗೆಯಲ್ಲಿ ನಿಮ್ಮ ತ್ವಚೆಗೆ ಬಳಸಬಹುದು ಎಂಬುದನ್ನು ಅರಿತುಕೊಳ್ಳೋಣ.... ಗ್ರೀನ್ ಟೀ-ಮೊಸರು  *ಒಂದು ಚಿಕ್ಕಚಮಚ ಮೊಸರಿಗೆ ಒಂದು ಚಿಕ್ಕಚಮಚ ಲಿಂಬೆಹಣ್ಣಿನ ರಸ ಸೇರಿಸಿ. (ಈಗ ತಾನೇ ಹಿಂಡಿದ ಲಿಂಬೆರಸ)  *ಇದಕ್ಕೆ ಒಂದರಿಂದ ಎರಡು ಚಿಕ್ಕ ಚಮಚ ಹಸಿರು ಟೀ ...

ಕೂದಲು ತೊಳೆದ ಬಳಿಕ, ಆರೈಕೆ ಹೀಗಿರಲಿ.. ಯಾವ ಸಮಸ್ಯೆಯೂ ಬಾರದು!

Image
ಸುಂದರವಾಗಿ ಕಾಣಲು ನಮ್ಮಿಂದ ಹೆಚ್ಚಿನ ಶ್ರಮ, ಬದ್ಧತೆ ಇದ್ದರೆ ಮಾತ್ರ ಸಾಧ್ಯವಾಗುವುದು. ದೇವರು ನೀಡಿರುವಂತಹ ಸೌಂದರ್ಯವನ್ನು ಇಂದಿನ ಕಲುಷಿತವಾಗಿರುವಂತಹ ವಾತಾವರಣದಲ್ಲಿ ಕಾಪಾಡಿಕೊಳ್ಳುವುದು ತುಂಬಾ ಕಠಿಣ ಕೆಲಸ. ಪ್ರತೀ ದಿನ ಹೊರಗಡೆ ಹೋಗುವಾಗ ವಾತಾವರಣದಲ್ಲಿರುವ ಧೂಳು ಹಾಗೂ ಇನ್ನಿತರ ಪದಾರ್ಥಗಳು ನಮ್ಮ ಕೂದಲು ಹಾಗೂ ದೇಹವನ್ನು ಸೇರಿಕೊಳ್ಳುವುದು. ಉದ್ದ, ದಪ್ಪ ಹಾಗೂ ಕಪ್ಪಗಿನ ಕೂದಲು ಪ್ರತಿಯೊಬ್ಬರಿಗೂ ಇಷ್ಟವಾಗಿರುವಂತದ್ದಾಗಿದೆ. ಅದೇ ಕೂದಲನ್ನು ಆರೈಕೆ ಮಾಡಲು ತುಂಬಾ ಕಷ್ಟಪಡಬೇಕಾಗುತ್ತದೆ.    ಇಂತಹ ಎಣ್ಣೆ ಕೂದಲಿಗೆ ಬಳಸಿ, ಕೂದಲು ಕಪ್ಪಾಗಿ, ಉದ್ದವಾಗಿ ಬೆಳೆಯುತ್ತೆ  ಯಾಕೆಂದರೆ ಸಮಯದ ಅಭಾವ. ಕೂದಲಿನ ಆರೈಕೆಗೆ ಸಮಯವಿಲ್ಲದೆ ಇರುವ ಕಾರಣ ಮಾರುಕಟ್ಟೆಯಲ್ಲಿ ಸಿಗುವಂತಹ ಕೆಲವು ದುಬಾರಿ ಉತ್ಪನ್ನಗಳನ್ನು ತಂದು ಕೂದಲಿನ ಆರೈಕೆ ಮಾಡಲು ಪ್ರಯತ್ನಿಸುತ್ತೇವೆ. ಆದರೆ ಇಂತಹ ಉತ್ಪನ್ನಗಳ ಬದಲಿಗೆ ನೈಸರ್ಗಿಕವಾಗಿ ಲಭ್ಯವಾಗುವಂತಹ ಕೂದಲಿನ ಆರೈಕೆಯ ಸಾಮಗ್ರಿ ಬಳಸಿಕೊಂಡರೆ ಅದರಿಂದ ಕೂದಲು ಉದ್ದ, ದಪ್ಪ ಹಾಗೂ ಕಪ್ಪಾಗಿ ಬೆಳೆಯುವುದು. ಕೂದಲುದುರುವ ಸಮಸ್ಯೆಗೆ, ಮನೆಯಂಗಳದ 'ದಾಸವಾಳದ ಎಣ್ಣೆ'  ಇನ್ನು ಕೆಲವರು ಸ್ಪಾ ಗಳಿಗೆ ಹೋಗಿ ಕೂದಲಿಗೆ ತೈಲ ಹಾಗೂ ಬೇರೆ ರೀತಿಯ ಮಸಾಜ್ ಮಾಡಿಸಿಕೊಳ್ಳುವರು. ಇದು ದುಡ್ಡು ವೆಚ್ಚ ಮಾಡುವುದೇ ಹೊರತು ಇದರಿಂದ ಬೇರೆ ಯಾವುದೇ ಪ್ರಯೋಜನವಿಲ್ಲ. ಕೂದಲು ತೊಳೆದ ಬಳಿಕ ಅದರ ಅರೈಕೆ ಯಾವ ...

ಮೊಡವೆ ನಿವಾರಣೆಗೆ ಇಷ್ಟು ಮಾಡಿದರೆ ಸಾಕು, ಬೇಗನೇ ಕಡಿಮೆಯಾಗುವುದು

Image
ಹದಿಹರೆಯದಲ್ಲಿ ಮೊಡವೆಗಳು ಅತಿ ಸಾಮಾನ್ಯವಾಗಿದೆ. ಕೆಲವರಿಗಂತೂ ನಡುವಯಸ್ಸು ದಾಟುವವರೆಗೂ ಮೊಡವೆಗಳ ಕಾಟ ಇದ್ದೇ ಇರುತ್ತದೆ. ಇವುಗಳನ್ನು ನಿಗ್ರಹಿಸಲು ಹಲವಾರು ಮದ್ದುಗಳಿವೆಯಾದರೂ ಸತತವಾಗಿ ಮತ್ತೆ ಮತ್ತೆ ಮೂಡುವ ಮೊಡವೆಗಳೇ ಹೆಚ್ಚಿನ ಚಿಂತೆ ಹಚ್ಚಿಸುತ್ತವೆ. ಕೆಲವೊಮ್ಮೆ ಯಾವುದಾದರೂ ಕಾರ್ಯಕ್ರಮಕ್ಕೆ ಹೊರಟಿರುವಾಗ ಬೆಳಿಗ್ಗೆ ಇರದಿದ್ದ ಮೊಡವೆ ಮಧ್ಯಾಹ್ನದ ಹೊತ್ತಿನಲ್ಲಿ ಧುತ್ತನೇ ಎದ್ದುಬಿಟ್ಟಿರುವುದಂತೂ ಅತೀವ ದುಃಖ ತರಿಸುತ್ತದೆ. ಅಮೃತದಂತಹ ಮದ್ದಿರುವಾಗ ಮೊಡವೆಗೆ ಅಂಜುವುದೇಕೆ?  ಒಡೆದು ಬಿಡೋಣವೆಂಬ ತರ್ಕಕ್ಕೇ ಹೆಚ್ಚಿನವರು ಒಳಗಾಗಿ ಸಹನೆಯಿಲ್ಲದ ಯುವಜನತೆ ಈ ತರ್ಕಕ್ಕೆ ಸೋಲುತ್ತಾರೆ ಹಾಗೂ ಬಳಿಕ ಕಪ್ಪು ಕಲೆಯೊಂದನ್ನು ಉಳಿಸಿಕೊಳ್ಳುತ್ತಾರೆ. ಈ ಸಮಯದಲ್ಲಿ ಕೆಲವು ಮನೆಮದ್ದುಗಳು ನಿಮ್ಮ ನೆರವಿಗೆ ಬರಲಿವೆ. ಇವು ಮೊಡವೆಯನ್ನು ಬೇಗನೇ ಹಣ್ಣಾಗುವಂತೆ ಮಾಡಿ ಒಳಗಿನ ಕೀವು ಸುಲಭವಾಗಿ ಹೊರಬರುವಂತೆ ಮಾಡುತ್ತದೆ ಹಾಗೂ ಬಳಿಕ ಹುಟ್ಟುವ ಹೊಸ ಚರ್ಮದಲ್ಲಿ ಕಲೆಯಿಲ್ಲದಂತೆಯೂ ನೋಡಿಕೊಳ್ಳುತ್ತದೆ. ಕೆಳಗಿನ ಮನೆಮದ್ದುಗಳನ್ನು ಕೇವಲ ಹದಿನೈದೇ ನಿಮಿಷದಲ್ಲಿ ಮಾಡಿ ಮುಗಿಸುವಂತಹದ್ದಾಗಿದ್ದು ನಿಮಗೆ ಅತಿ ಸೂಕ್ತ ಎನ್ನಿಸಿದ್ದನ್ನು ಆರಿಸಿಕೊಳ್ಳಿ.... ಟೊಮೇಟೊ  ಒಂದು ಚಿಕ್ಕ ಬೋಗುಣಿಯಲ್ಲಿ ಎರಡು ದೊಡ್ಡ ಚಮಚ ಟೊಮೇಟೊ ಜ್ಯೂಸ್ (ಸಿಪ್ಪೆ ಮತ್ತು ಬೀಜ ತೆಗೆದ ತಿರುಳನ್ನು ಮಿಕ್ಸಿಯಲ್ಲಿ ಕಡೆಯುವ ಮೂಲಕ ಪಡೆದ ರಸ), ಒಂದು ದೊಡ್ಡಚಮಚ ಜೇನು ಮ...