ಚಳಿಗಾಲದಲ್ಲಿ ಕಾಡುವ ತ್ವಚೆಯ ಸಮಸ್ಯೆಗಳಿಗೆ ಇಲ್ಲಿದೆ ಸರಳ ಪರಿಹಾರಗಳು
ಒಂದೊಂದು ಋತುವಿನಲ್ಲಿ ಒಂದೊಂದು ರೀತಿಯ ಸಮಸ್ಯೆಗಳು ಇದ್ದೇ ಇರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕೇವಲ ಆರೋಗ್ಯ ಮಾತ್ರವಲ್ಲ, ನಮ್ಮ ತ್ವಚೆಯ ಕಡೆ ಕೂಡ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ಯಾಕೆಂದರೆ ಚಳಿಗಾಲದಲ್ಲಿ ಚರ್ಮವು ಒಡೆದು ನೋವು ಕಾಣಿಸಿಕೊಳ್ಳುತ್ತದೆ. ಚಳಿಗಾಲದಲ್ಲಿ ಚರ್ಮದ ಆರೈಕೆ ಬಗ್ಗೆ ಎಷ್ಟೇ ಮುತುವರ್ಜಿ ವಹಿಸಿದರೂ ಸಮಸ್ಯೆಯಿಂದ ಪಾರಾಗುವುದು ತುಂಬಾ ಕಷ್ಟವೆನಿಸುತ್ತದೆ ಅದರಲ್ಲೂ ಒಣಚರ್ಮವನ್ನು ಹೊಂದಿರುವವರಿಗೆ ಇದು ತೀರ ಸಾಮಾನ್ಯವಾಗಿರುತ್ತದೆ. ಒಣಚರ್ಮ ಮಾತ್ರವಲ್ಲದೆ ಎಣ್ಣೆಯಾಂಶವುಳ್ಳ ಚರ್ಮದವರಿಗೂ ಸಮಸ್ಯೆ ಕಾಡುತ್ತದೆ. ಚಳಿಗಾಲದಲ್ಲಿ ಪ್ರತಿಯೊಬ್ಬರು ಇದರ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಿಕೊಳ್ಳಬೇಕು. ಈ ಲೇಖನದಲ್ಲಿ ನೀಡಿರುವ ಕೆಲವೊಂದು ಸಲಹೆಗಳನ್ನು ಬಳಸಿಕೊಂಡು ನೀವು ಚಳಿಗಾಲದಲ್ಲಿ ಚರ್ಮ ಒಡೆಯುವ ಸಮಸ್ಯೆಯಿಂದ ಪಾರಾಗಬಹುದು. ಇದಕ್ಕೆ ತಾಳ್ಮೆ ಹಾಗೂ ಸಮಯ ನೀಡಿದರೆ ನೀವು ಸಮಸ್ಯೆಯಿಂದ ಪಾರಾಗಬಹುದು. ಯಾರೂ ಕೂಡ ಚಳಿಗಾಲದಲ್ಲಿ ನೋವಿನ ತ್ವಚೆಯನ್ನು ಬಯಸುವುದಿಲ್ಲ. ಚರ್ಮವು ಒಡೆಯುವುದರಿಂದ ಕಾಂತಿಯುವ ತ್ವಚೆಯು ಸೌಂದರ್ಯವನ್ನು ಕಳೆದುಕೊಳ್ಳುವುದು ಮಾತ್ರವಲ್ಲದೆ ನೋವನ್ನು ನೀಡುವುದು. ಚಳಿಗಾಲದಲ್ಲಿ ಇಲ್ಲಿ ಕೊಟ್ಟಿರುವ ಕೆಲವೊಂದು ಸಲಹೆಗಳನ್ನು ಕಟ್ಟುನಿಟ್ಟಾಗಿ ನಿಯಮಿತವಾಗಿ ಪಾಲಿಸಿಕೊಂಡು ಹೋದರೆ ಒಡೆದ ಚರ್ಮದ ಸಮಸ್ಯೆಯಿಂದ ದೂರ ಉಳಿಯಬಹುದು.... ಆದಷ್ಟು ಉಗುರುಬ...