Posts

Showing posts from July, 2017

ತುಟಿಯ ಬಣ್ಣ ಕಪ್ಪಾಗಿದ್ದರೆ ಚಿಂತಿಸದಿರಿ, ಇಲ್ಲಿದೆ ನೋಡಿ ಸರಳ ಟಿಪ್ಸ್

Image
ಈ ಜಗತ್ತಿನಲ್ಲಿ ಎಲ್ಲರಿಗೂ ತಮ್ಮ ತುಟಿಗಳು ಮೃದು ಹಾಗೂ ಗುಲಾಬಿ ಬಣ್ಣದಲ್ಲಿರುವುದು ಇಷ್ಟ. ವಿಶೇಷವಾಗಿ ಮಹಿಳೆಯರು ತಮ್ಮ ತುಟಿಗಳ ಬಣ್ಣದ ಕುರಿತು ಹೆಚ್ಚಿನ ಕಾಳಜಿ ಹೊಂದಿರುತ್ತಾರೆ. ಕೆಲವರು ನೈಸರ್ಗಿಕವಾಗಿಯೇ ಗುಲಾಬಿ ಬಣ್ಣದ ತುಟಿಗಳನ್ನು ಪಡೆದಿದ್ದು ಕೆಲವರು ಕೊಂಚ ಗಾಢವರ್ಣದ ತುಟಿಗಳನ್ನು ಪಡೆದಿರುತ್ತಾರೆ. ಉಳಿದವಲ್ಲಿ ನೈಸರ್ಗಿಕವಾಗಿ ಗುಲಾಬಿ ವರ್ಣ ಪಡೆದಿದ್ದರೂ ಕೆಲವಾರು ಕಾರಣಗಳಿಂದ ಇವು ಕೊಂಚ ಸಮಯದ ಬಳಿಕ ಕಪ್ಪು ವರ್ಣಕ್ಕೆ ಬದಲಾಗಿರುತ್ತವೆ. ಈ ವ್ಯಕ್ತಿಗಳಿಗೆ ಸಂತೋಷದ ವಿಷಯವೆಂದರೆ ಕೊಂಚ ಆರೈಕೆಯ ಮೂಲಕ ಇವರು ತಮ್ಮ ತುಟಿಗಳ ಮೂಲ ವರ್ಣವನ್ನು ಮತ್ತೊಮ್ಮೆ ಪಡೆಯಬಹುದು.    ತುಟಿಗಳ ಆರೈಕೆಯನ್ನು ಸರಿಯಾಗಿ ಮಾಡುತ್ತಿದ್ದೀರಿ ತಾನೇ? ಇದಕ್ಕಾಗಿ ದೂರವೇನೂ ಹೋಗಬೇಕಾಗಿಲ್ಲ. ಬದಲಿಗೆ ಮನೆಯಲ್ಲಿ ಲಭ್ಯವಿರುವ ಸುಲಭ ಸಾಮಾಗ್ರಿಗಳೇ ಸಾಕು. ಅಷ್ಟೇ ಅಲ್ಲ, ಇವು ಅಗ್ಗವೂ, ಯಾವುದೇ ಅಡ್ಡಪರಿಣಾಮಗಳಿಲ್ಲದೇ ಇರುವುವೂ ಆಗಿರುವ ಕಾರಣ ಎರಡನೇ ಬಾರಿ ಯೋಚಿಸಬೇಕಾಗಿಲ್ಲ. ಬನ್ನಿ, ನೈಸರ್ಗಿಕ ಗುಲಾಬಿ ವರ್ಣದ ತುಟಿಗಳನ್ನು ಪಡೆಯಲು ಇಂದಿನ ಲೇಖನದಲ್ಲಿ ವಿವರಿಸಿರುವ ಸೂಕ್ತ ವಿಧಾನವನ್ನು ಅನುಸರಿಸಿ ಹಿಂದಿನ ಸೌಂದರ್ಯವನ್ನು ಮತ್ತೊಮ್ಮೆ ಪಡೆಯಬಹುದು.. ಬೀಟ್ರೂಟ್ ರಸ ಮತ್ತು ಗ್ಲಿಸರಿನ್   ಒಂದು ತುಂಡು ಬೀಟ್ರೂಟ್ ಅನ್ನು ತುರಿದು ಹಿಂಡಿ ರಸ ಸಂಗ್ರಹಿಸಿ. ಈ ರಸವನ್ನು ಒಂದು ದಿನವಿಡೀ ಫ್ರಿಜ್ಜಿನಲ್ಲಿಟ್ಟು ಗಟ್ಟಿಯಾಗುವಂತೆ...

ಕೊಬ್ಬರಿ ಎಣ್ಣೆ: ಸೌಂದರ್ಯದ ವಿಷಯದಲ್ಲಿ ಎತ್ತಿದ ಕೈ

Image
ಭಾರತೀಯರ ಸಂಸ್ಕೃತಿಯಲ್ಲಿ ವಿದೇಶೀಯರನ್ನು ಅಚ್ಚರಿಗೊಳಿಸುವ ಒಂದು ಸಂಗತಿಯೆಂದರೆ ಅಭ್ಯಂಜನದ ಸ್ನಾನ. ಪ್ರಮುಖ ಹಬ್ಬಗಳ ಮುನ್ನಾದಿನ ಅಥವಾ ಹಬ್ಬದ ದಿನದ ಮುಂಜಾನೆ ಮೈಗೆಲ್ಲಾ ಎಣ್ಣೆ ಹಚ್ಚಿ ಸೀಗೆಪುಡಿ ಬಳಸಿ ತಿಕ್ಕಿ ತಿಕ್ಕಿ ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡುವುದು. ಇದು ಕೊಂಚ ಉರಿ ತರಿಸುವ ಕಾರಣ ಮಕ್ಕಳು ರಚ್ಚೆ ಹಿಡಿದು ಅಳುತ್ತಾರೆ. ಇದಕ್ಕೆ ಉಪಯೋಗಿಸುವ ತೈಲ ಯಾವುದು ಗೊತ್ತೇ? ಅಪ್ಪಟ ಕೊಬ್ಬರಿ ಎಣ್ಣೆ, ಅದೂ ಕೊಂಚ ಬಿಸಿ ಮಾಡಿ ತಲೆಗೂದಲು ಮುಳುಗುವಂತೆ ಮಾಡಿ ಇಡಿಯ ಮೈಯಿಂದ ಸೋರುವಷ್ಟು ದಪ್ಪನಾಗಿ ಹಚ್ಚುವುದು ಆರೋಗ್ಯಕ್ಕೆ ಉತ್ತಮ ಎಂದು ಈಗ ಕಂಡುಕೊಳ್ಳಲಾಗಿದೆ. ಹಬ್ಬದ ನೆವದಲ್ಲಾದರೂ ಅಭ್ಯಂಜನವನ್ನು ವರ್ಷದಲ್ಲಿ ಕೆಲವು ಬಾರಿ ತೆಗೆದುಕೊಳ್ಳುವ ಮೂಲಕ ಚರ್ಮ, ಕೂದಲು ಮತ್ತು ಒಟ್ಟಾರೆ ಆರೋಗ್ಯವನ್ನು ವೃದ್ಧಿಸಲು ನಮ್ಮ ಹಿರಿಯರು ಕಂಡುಕೊಂಡ ಉಪಾಯವೇ ಇದು. ಅಚ್ಚರಿ ಲೋಕಕ್ಕೆ ತಳ್ಳುವ ಕೊಬ್ಬರಿ ಎಣ್ಣೆಯ ಕಮಾಲ್..! ಮೇಕಪ್ ಉಜ್ವಲಗೊಳಿಸಲು  ಕೆಲವು ಸಂದರ್ಭಗಳಲ್ಲಿ ಕೆನ್ನೆಯ ಭಾಗವನ್ನು ಹೆಚ್ಚು ಕೆಂಪಗಾಗಿಸುವಂತೆ ಅಲಂಕಾರ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಕೃತಕವಾಗಿ ಕೆಂಪುಬಣ್ಣ ಹಾಕುವ ಹೈಲೈಟರ್ ಎಂಬ ಪ್ರಸಾಧನವನ್ನು ಹಚ್ಚಬೇಕಾಗುತ್ತದೆ. ಆದರೆ ಇದರ ಬಳಕೆಯಿಂದ ಅತಿ ಹೆಚ್ಚು ಕೆಂಪಗಾಗಿ ಅಲಂಕಾರದ ಮುಖ್ಯ ಉದ್ದೇಶವೇ ಹಾಳಾಗಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ ಮೇಕಪ್ ಉಜ್ವಲಗೊಳಿಸಲು ಇದರ ಬದಲಿಗೆ ಕೆನ್ನೆಯ ಭಾಗದಲ್ಲಿ ಕ...

ಲಿಪ್‍ಸ್ಟಿಕ್ ಬಣ್ಣ ಹಾಗೇ ಉಳಿಯಬೇಕೆಂದರೆ ಇಲ್ಲಿದೆ ನೋಡಿ ಸುಲಭ ಉಪಾಯ...

Image
ನಾವು ಹಚ್ಚಿಕೊಳ್ಳುವ ತುಟಿಯ ಬಣ್ಣ ನಮ್ಮ ಮುಖದ ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ. ತುಟಿ ಬಣ್ಣದ ಆಯ್ಕೆ ಮಾಡಿಕೊಳ್ಳುವಾಗ ಸೂಕ್ತ ರೀತಿಯ ಜ್ಞಾನ ಇರಬೇಕು. ನಾವು ಆಯ್ದ ಬಣ್ಣ ನಮ್ಮ ತ್ವಚೆಗೆ, ಬಣ್ಣಕ್ಕೆ ಅಥವಾ ನಾವು ಧರಿಸಿರುವ ಉಡುಗೆಗೆ ಹೊಂದಾಣಿಕೆ ಆಗುವಂತಿರಬೇಕು. ಇಲ್ಲವಾದರೆ ಮುಖದ ಸೌಂದರ್ಯವನ್ನು ಇದು ಕೆಡಿಸಿ ಬಿಡುತ್ತದೆ. ಕೆಲವರ ತುಟಿಯ ಆಕಾರದಲ್ಲಿ ವ್ಯತ್ಯಾಸಗಳಿರುತ್ತವೆ ಅವುಗಳನ್ನು ಮರೆ ಮಾಚುವಂತಹ ಸೂಕ್ತ ಕಲೆಯೂ ತಿಳಿದಿರಬೇಕು.    ಹಲ್ಲಿಗೆ ಹಿಡಿಯೋ ಲಿಪ್‌ಸ್ಟಿಕ್‌ ಕಿರಿಕಿರಿಗೆ ಫುಲ್‌ಸ್ಟಾಪ್  ನಾವು ಖರೀದಿಸುವ ತುಟಿಯ ಬಣ್ಣ (ಲಿಪ್‍ಸ್ಟಿಕ್) ಕಳಪೆ ಗುಣಮಟ್ಟದ್ದಾಗಿದ್ದರೂ ಅದು ಉಪಯೋಗಕ್ಕೆ ಬಾರದು. ಬದಲಿಗೆ ಮುಖದ ತುಂಬಾ ಹರಡಿಕೊಳ್ಳಬಹುದು. ಅಲ್ಲದೆ ಇದರ ಬಣ್ಣ ಹಲ್ಲುಗಳಿಗೆ ತಗುಲಿ ಹೊಟ್ಟೆಗೆ ಹೋಗುವುದರಿಂದಲೂ ಅಪಾಯ ಉಂಟಾಗುವುದು. ಹಚ್ಚಿದ ಬಣ್ಣ ಸೂಕ್ತ ರೀತಿಯಲ್ಲಿರದಿದ್ದರೆ ಮನೆಯಿಂದ ಹೊರ ಬಂದಾಗ ಅದು ಮುಜುಗರಕ್ಕೆ ಕಾರಣವಾಗಬಹುದು. ಈ ವಿಚಾರದ ಕುರಿತು ಇನ್ನಷ್ಟು ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.... ಮೊದಲ ಕಾಳಜಿ  ತುಟಿ ಬಣ್ಣ(ಲಿಪ್‍ಸ್ಟಿಕ್) ಅನ್ವಯಿಸಿಕೊಳ್ಳಬೇಕಾದರೆ ತುಟಿಯು ಮೊದಲು ತೇವಾಂಶದಿಂದ ಮೃದುವಾಗಿರಬೇಕು. ಒರಟಾದ ತುಟಿಗಳ ಮೇಲೆ ಲಿಪ್‍ಸ್ಟಿಕ್ ಸರಿಯಾಗಿ ಕುಳಿತುಕೊಳ್ಳುವುದಿಲ್ಲ. ಸರಿಯಾಗಲೆಂದು ಎರಡು ಮೂರು ಬಾರಿ ಬಣ್ಣ ಹಚ್ಚಿಕೊಂಡರೂ ಅದು ಅಸಹ್ಯವಾಗಿ ಕಾಣಿಸುವುದು....

ಕೂದಲುದುರುವುದು ತಡೆಯಬೇಕಾ? ಹಾಗಿದ್ದರೆ ಸೀಬೆ ಎಲೆಯನ್ನು ಬಳಸಿ

Image
ಕೂದಲು ಚಿಕ್ಕದಾಗಿರಲಿ ಅಥವಾ ಉದ್ದವಾಗಿರಲಿ ಸೊಂಪಾದ ಕೇಶರಾಶಿ ಇರಬೇಕೆಂದು ಪ್ರತಿಯೊಬ್ಬ ಮಹಿಳೆ ಬಯಸುತ್ತಾಳೆ. ವಯಸ್ಸಾದಂತೆ ಕೂದಲು ಉದುರುವುದು, ಬಣ್ಣ ಕಳೆದುಕೊಳ್ಳುವುದು ಹಾಗೂ ಒರಟಾದ ಕೂದಲು ಹುಟ್ಟುವುದು ಸಹಜ. ಹಾಗಂತ ಅವುಗಳ ಆರೈಕೆ ಮಾಡದೇ ಇರಲು ಸಾಧ್ಯವಿಲ್ಲ. ಸೌಂದರ್ಯಕ್ಕೆ ಮೆರಗು ನೀಡುವ ಕೇಶಗಳ ರಕ್ಷಣೆಗೆ ಅನೇಕ ಔಷಧಿ ಹಾಗೂ ತೈಲಗಳಿವೆ. ಇವು ಕೂದಲುಗಳನ್ನು ಸಂರಕ್ಷಿಸುತ್ತವೆಯಾದರೂ ಅಡ್ಡ ಪರಿಣಾಮಗಳೇ ಹೆಚ್ಚು. ಆರೋಗ್ಯ ವರ್ಧಿಸುವ ಸೀಬೆಹಣ್ಣು ಎಲೆಗಳ ಅದ್ಭುತ ಚಿಕಿತ್ಸಾ ಗುಣಗಳು ಕೇಶರಾಶಿಗೆ ಆರೈಕೆ ನೀಡುವ ಒಂದು ಉತ್ತಮ ಮನೆ ಔಷಧ ಎಂದರೆ ಸೀಬೆ ಎಲೆಗಳ ಲೇಪನ. ನೈಸರ್ಗಿಕವಾಗಿಯೇ ಹೆಚ್ಚು ಪೋಷಕಾಂಶ ಹೊಂದಿರುವ ಸೀಬೆ ಎಲೆ ಕೇಶರಾಶಿಯನ್ನು ಸಂರಕ್ಷಿಸುತ್ತದೆ. ಕೆಲವು ಸಂಶೋಧನೆಯ ಪ್ರಕಾರ ಉರಿಯೂತ, ಕೂದಲುದುರುವುದು, ಕೇಶಗಳ ಉದುರುವಿಕೆಯನ್ನು ತಡೆಯುತ್ತದೆ. ಹೌದಾ! ಹಾಗಿದ್ದರೆ ಇನ್ಯಾವ ಉಪಯೋಗಗಳನ್ನು ಪಡೆಯಬಹುದು? ಕೇಶಗಳ ರಕ್ಷಣೆಯಲ್ಲಿ ಸೀಬೆ ಎಲೆಗಳ ಪಾತ್ರವೇನು ಎಂಬುದನ್ನು ಈ ಮುಂದೆ ವಿವರಿಸಲಾಗಿದೆ... ಕೂದಲುದುರುವಿಕೆಯನ್ನು ತಡೆದು ಅಧಿಕ ಪ್ರಮಾಣದಲ್ಲಿ ಕೂದಲು ಹುಟ್ಟಲು ಸಹಾಯ ಮಾಡುತ್ತದೆ ಸೀಬೆ ಎಲೆ. ಮನೆಯಲ್ಲಿಯೇ ಇದರ ಔಷಧ ತಯಾರಿಸುವುದು ಹೇಗೆ? ಎನ್ನುವ ವಿವರಣೆ ಇಲ್ಲಿದೆ ನೋಡಿ... ತಯಾರಿಸಲು ಬೇಕಾಗುವ ಸಾಮಾಗ್ರಿಗಳು  * ಒಂದು ಮುಷ್ಟಿ ಸೀಬೆ ಎಲೆಗಳು  * ಒಂದು ಲೀಟರ್ ನೀರು  * ಕುದಿಸಲೊಂ...

ಇದು ತುಟಿಯ ಅಂದ-ಚೆಂದ ಹೆಚ್ಚಿಸುವ ನೈಸರ್ಗಿಕ ರೆಸಿಪಿ!

Image
ಈಗ ನಮ್ಮ ಕಾಲವು ಸೆಲ್ಫಿ ಜಮಾನದಲ್ಲಿ ಬದುಕುತ್ತಿರುವ ಬದುಕಾಗಿದೆ. ಮಾತಿಗಿಂತ ನಾವು ಮೊಬೈಲ್‌ನಲ್ಲಿ ಸೆಲ್ಫಿ ಕಳುಹಿಸುವುದರಲ್ಲಿಯೇ ಹೆಚ್ಚು ಬ್ಯುಸಿಯಾಗಿದ್ದೇವೆ. ಅದಕ್ಕಾಗಿ ನಮ್ಮನ್ನೆ ನಾವು ಗುರಿಯಾಗಿಸಿಕೊಂಡು ಯಾವಾಗಲೂ ಫೋಟೋಗಳನ್ನು ತೆಗೆದುಕೊಳ್ಳುತ್ತಿರುತ್ತೇವೆ.  ಫೋಟೋ ತೆಗೆದುಕೊಳ್ಳುವಾಗ ತುಟಿಯನ್ನು ವೃತ್ತಾಕಾರವಾಗಿ ಊಮ್...ಎನ್ನುವುದು ವಾಡಿಕೆ. ಇದರಿಂದ ತುಟಿಗಳು ಫೋಟೋಗಳಲ್ಲಿ ಎದ್ದು ಕಾಣುತ್ತವೆ. ಆದರೆ ಸೆಲ್ಫಿಯಲ್ಲಿ ಆ ನಿಮ್ಮ ತುಟಿಗಳು ದಪ್ಪಗಿಲ್ಲ ಎಂದು ನಿಮಗೆ ಮುಜುಗರವನ್ನುಂಟು ಮಾಡುತ್ತಿದ್ದಲ್ಲಿ ನಿಮಗಾಗಿ ನಾವು ಕೆಲವೊಂದು ರೆಸಿಪಿಗಳ ಕುರಿತು ತಿಳಿಸಿ ಕೊಡುತ್ತಿದ್ದೇವೆ. ಇದನ್ನು ಪ್ರಯತ್ನಿಸಿ ನೋಡಿ ನಿಮ್ಮ ತುಟಿಯು ಮತ್ತೆ ಸೌಂದರ್ಯದಿಂದ ಕಂಗೊಳಿಸುತ್ತದೆ.  ತುಟಿಯ ಸೌಂದರ್ಯಕ್ಕೆ ಬೀಟ್‌ರೂಟ್ ಲಿಪ್ ಬಾಮ್  ಕೆಲವರು ಈ ಸಮಸ್ಯೆಯಿಂದ ಹೊರ ಬರಲು ಲಿಪ್ ಫಿಲ್ಟರ್‌ಗಳನ್ನು ಬಳಸುತ್ತಾರೆ. ಇನ್ನೂ ಕೆಲವರು ಮನೆಯಲ್ಲಿಯೇ ಇದಕ್ಕೆ ಮದ್ದನ್ನು ಹುಡುಕಿಕೊಳ್ಳುತ್ತಾರೆ. ಜನ ಸಣ್ಣ ತುಟಿಗಳನ್ನು ಸಮಸ್ಯೆಯಾಗಿ ಕಾಣುತ್ತಾರೆ ಏಕೆಂದರೆ ದಪ್ಪ ತುಟಿಗಳು ಅಂದರೆ ಪ್ಲಂಪ್ ತುಟಿಗಳು ಈಗ ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸುವ ಅಂಶಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ಅದೇ ಈಗ ಫ್ಯಾಷನ್ ಆಗಿ ಬಿಂಬಿಸಲ್ಪಡುತ್ತಿವೆ. ದಪ್ಪನಾದ ತಿಳಿಗುಲಾಬಿ ಬಣ್ಣದ ತುಟಿಗಳು ನಿಮ್ಮ ಆತ್ಮವಿಶ್ವಾಸ ಹಾಗು ನಿಮ್ಮ ಸೌಂದರ್ಯ ಎರಡನ್ನೂ ಸಹ ...

ನೈಸರ್ಗಿಕ ಹೇರ್ ಪ್ಯಾಕ್-ಕೂದಲಿಗೆ ಯಾವುದೇ ಸಮಸ್ಯೆ ಬರಲ್ಲ...

Image
ಭಾರತೀಯರೂ ಸೌಂದರ್ಯ ಪ್ರಿಯರು, ಸಾವಿರಾರು ವರ್ಷಗಳ ಹಿಂದಿನಿಂದಲೂ ಮಹಿಳೆಯರು ತಮ್ಮ ಕೂದಲಿನ ಸೌಂದರ್ಯ ಕಾಪಾಡಿಕೊಳ್ಳಲು ಶ್ರಮ ವಹಿಸಿಕೊಂಡು ಬರುತ್ತಾ ಇದ್ದಾರೆ. ಉದ್ದಗಿನ, ರೇಷ್ಮೆಯಂತಹ ಹಾಗೂ ಕಾಂತಿಯುತ ಕೂದಲು ಭಾರತೀಯ ಮಹಿಳೆಯರ ಸೌಂದರ್ಯದ ಪ್ರತೀಕ. ಆದರೆ ಆಧುನಿಕ ಯುಗದಲ್ಲಿ ಹಲವಾರು ರೀತಿಯ ಸಮಸ್ಯೆಯಿಂದ ಕೂದಲು ಉದುರುವುದು ಸಾಮಾನ್ಯವಾಗಿದೆ. ಕೂದಲು ಸುಂದರ ಹಾಗೂ ಉದ್ದವಾಗಿದ್ದರೆ ಅದು ಆರೋಗ್ಯದ ಲಕ್ಷಣವೆನ್ನಬಹುದು.  ಇಂದಿನ ದಿನಗಳಲ್ಲಿ ಕೂದಲಿನ ಆರೋಗ್ಯ ಕಾಪಾಡಿಕೊಳ್ಳುವುದು ಕಷ್ಟಕರ. ಕಲುಷಿತ ವಾತಾವರಣ, ಅನಿಯಮಿತ ಹವ್ಯಾಸ, ಒತ್ತಡ, ಚಟ, ಆಹಾರ ಕ್ರಮ ಸರಿಯಾಗಿ ಇಲ್ಲದೆ ಇರುವುದು ಮತ್ತು ಇತರ ಕೆಲವೊಂದು ಕಾರಣಗಳಿಂದಾಗಿ ಕೂದಲು ಹಾಗೂ ತ್ವಚೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗಬಹುದು. ಕೂದಲು ನಿಸ್ತೇಜವಾಗಿ ಉದುರುತ್ತಾ ಇದ್ದರೆ ಆಗ ನಿಮ್ಮ ದೇಹದಲ್ಲಿ ಏನಾದರೂ ಸಮಸ್ಯೆಯಿದೆ ಎಂದು ಹೇಳಬಹುದು. ಇದನ್ನು ಸರಿಪಡಿಸಬೇಕು. ನಾವು ಬಳಸುವಂತಹ ಗಡಸು ನೀರಿನಲ್ಲಿ ಹಲವಾರು ರೀತಿಯ ಖನಿಜಾಂಶಗಳು ಇವೆ. ಬರೀ ಎರಡೇ ದಿನಗಳಲ್ಲಿ ಕೂದಲುದುರುವ ಸಮಸ್ಯೆ ನಿಯಂತ್ರಣಕ್ಕೆ! ಇದು ಕೂಡ ಕೂದಲಿಗೆ ಹಾನಿ ಮಾಡಬಹುದು. ಕೂದಲಿಗೆ ಬಣ್ಣ ಹಚ್ಚಿಕೊಳ್ಳುವುದು ಮತ್ತು ಕೂದಲಿನ ಉತ್ಪನ್ನಗಳು ಬಳಸುವುದರಿಂದಲೂ ಕೂದಲಿಗೆ ಹಾನಿಯುಂಟಾಗುವುದು. ಕೂದಲಿನ ಆರೋಗ್ಯ ಕಾಪಾಡಲು ಮನೆಯಲ್ಲೇ ತಯಾರಿಸುವಂತಹ ಕೆಲವು ಹೇರ್ ಪ್ಯಾಕ್ ನ್ನು ಬಳಸಿಕೊಳ್ಳಿ. ಇದು ತುಂಬಾ ಪರಿಣಾಮಕಾರ...

ಬ್ಯೂಟಿ ಟಿಪ್ಸ್: ಮಸೂರ್ ದಾಲ್‌ನ ಫೇಸ್ ಪ್ಯಾಕ್‌ಗಳು

Image
ಮನುಷ್ಯನ ದೇಹದ ಪ್ರತಿಯೊಂದು ಭಾಗಕ್ಕೆ ಕೂಡ ಪೋಷಕಾಂಶಗಳು ಅಗತ್ಯವಾಗಿ ಬೇಕೇಬೇಕು. ಪೋಷಕಾಂಶಗಳು ಸಿಗದೆ ಇದ್ದರೆ ದೇಹದ ಅಂಗಗಳು ಅಥವಾ ಆವಯವಗಳು ಕೆಲಸ ಮಾಡದೆ ಇರಬಹುದು. ದೇಹದ ಬೆಳವಣಿಗೆಗೆ ಪ್ರಮುಖವಾಗಿ ಪ್ರೋಟೀನ್ ಅಗತ್ಯವಿದೆ. ಪ್ರೋಟೀನ್ ಹಲವಾರು ಮೂಲಗಳಿಂದ ನಮ್ಮ ದೇಹಕ್ಕೆ ಲಭ್ಯವಾಗುವುದು. ಅದೇ ನಮ್ಮ ಚರ್ಮಕ್ಕೂ ಪ್ರೋಟೀನ್ ಬೇಕೇ ಬೇಕು. ದೇಹಕ್ಕೆ ಪ್ರೋಟೀನ್ ಬೇಕಾದರೆ ಧಾನ್ಯಗಳನ್ನು ಸೇವಿಸಬೇಕು. ಅದೇ ತ್ವಚೆಗೆ ಪ್ರೋಟೀನ್ ಬೇಕಾದರೆ ಧಾನ್ಯಗಳಿಂದಲೇ ತ್ವಚೆಯ ಆರೈಕೆ ಮಾಡಬೇಕಾಗುತ್ತದೆ.   ಸ್ವಾದಿಷ್ಟಕರ ಮಸೂರ್ ದಾಲ್ ರೆಸಿಪಿ ತ್ವಚೆಯ ಆರೈಕೆ ಮಾಡಲು ಸರಿಯಾದ ಧಾನ್ಯ ಆಯ್ಕೆ ಮಾಡಿಕೊಳ್ಳುವುದು ಅತೀ ಅಗತ್ಯ. ಅದರಲ್ಲೂ ನಮಗೆ ತಿನ್ನಲು ತುಂಬಾ ಇಷ್ಟವಾಗಿರುವ ಮಸೂರ್ ದಾಲ್ ಅನ್ನು ಬಳಸಿಕೊಂಡು ತ್ವಚೆಯ ಆರೈಕೆ ಮಾಡಬಹುದು. ಮಸೂರ್ ದಾಲ್‌ನ ಬಣ್ಣ ಕಿತ್ತಳೆಯಾಗಿರುವ ಕಾರಣದಿಂದ ಇದರಲ್ಲಿ ಹೆಚ್ಚಿನ ಪ್ರೋಟೀನ್ ಅಡಗಿದೆ. ಆದರೆ ತ್ವಚೆಗೆ ಮಸೂರ್ ದಾಲ್ ಅನ್ನು ಬಳಸಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆ ಪ್ರತಿಯೊಬ್ಬರಲ್ಲೂ ಇದೆ. ಮಸೂರ್ ದಾಲ್‌ನ್ನು ಮಾತ್ರ ಬಳಸಿಕೊಂಡು ತ್ವಚೆಯ ಆರೈಕೆ ಮಾಡಲು ಸಾಧ್ಯವಿಲ್ಲ. ಮಸೂರ್ ದಾಲ್ ನೊಂದಿಗೆ ಇತರ ಕೆಲವೊಂದು ಸಾಮಗ್ರಿಗಳನ್ನು ಸೇರಿಸಿಕೊಂಡು ತ್ವಚೆಯ ಆರೈಕೆ ಮಾಡಬೇಕು. ತ್ವಚೆಯ ಆರೈಕೆ ಮಾಡಲು ತಯಾರಿಸುವ ಮಸೂರ್ ದಾಲ್‌ನ ಫೇಸ್ ಪ್ಯಾಕ್ ಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಇದನ್ನು ಮನೆಯಲ್ಲ...

ಕೂದಲು ಉದುರುತ್ತಿದೆಯೇ?'ಉಪ್ಪಿನಿಂದ' ಕೂದಲಿಗೆ ಮಸಾಜ್ ಮಾಡಿ

Image
ಉಪ್ಪಿಗಿಂತ ರುಚಿಯಿಲ್ಲ ಎನ್ನುವ ನಾಣ್ಣುಡಿಯಿದೆ. ಉಪ್ಪು ಇಲ್ಲದೆ ಇದ್ದರೆ ಯಾವುದೇ ಆಹಾರ ಕೂಡ ನಾಲಗೆಗೆ ರುಚಿಸದು ಪ್ರತಿಯೊಂದು ಆಹಾರಕ್ಕೂ ಉಪ್ಪನ್ನು ಬಳಸುತ್ತಾರೆ. ಅದೇ ರೀತಿ ಉಪ್ಪುನಲ್ಲಿರುವಂತಹ ಕೆಲವೊಂದು ಅಂಶಗಳು ದೇಹಕ್ಕೂ ಒಳ್ಳೆಯದು. ಉಪ್ಪಿನಲ್ಲಿ ಕೂದಲು ಮತ್ತು ತ್ವಚೆಯನ್ನು ಆರೈಕೆ ಮಾಡುವಂತಹ ಗುಣಗಳು ಕೂಡ ಇವೆ.  ಕೂದಲು ಹಾಗೂ ತ್ವಚೆಯನ್ನು ರಕ್ಷಣೆ ಮಾಡಿ ಅದನ್ನು ಮರುಸ್ಥಾಪಿಸುವಂತಹ ಗುಣವು ಉಪ್ಪಿನಲ್ಲಿದೆ. ಕೂದಲು ಹಾಗೂ ತ್ವಚೆಯ ಆರೈಕೆಯಲ್ಲಿ ಉಪ್ಪನ್ನು ಬಳಸಿಕೊಂಡರೆ ಅದರಿಂದ ಭಾರೀ ಲಾಭಗಳು ನಿಮಗೆ ಸಿಗಲಿದೆ. ಶಾಂಪೂವಿಗೆ ಚಿಟಿಕೆಯಷ್ಟು ಉಪ್ಪನ್ನು ಹಾಕಿಕೊಂಡು ಬಳಸಿದರೆ ಅದರಿಂದ ನಿಮಗೆ ಹೆಚ್ಚಿನ ಲಾಭ ಸಿಗಲಿದೆ ಎಂದು ಬೋಲ್ಡ್ ಸ್ಕೈ ಹೇಳಿಕೊಡಲಿದೆ, ಮುಂದೆ ಓದಿ... ಕೂದಲು ಉದುರುವಂತಹ ಸಮಸ್ಯೆ ಇರುವವರು  ಉಪ್ಪು ಕೂದಲಿನ ಬೆಳವಣಿಗೆಗೆ ತುಂಬಾ ನೆರವಾಗಲಿದೆ. ಕೂದಲು ಉದುರುವಂತಹ ಸಮಸ್ಯೆ ಇರುವವರು ಸಮುದ್ರದ ಉಪ್ಪನ್ನು ಬಳಸಿಕೊಂಡು ಚಿಕಿತ್ಸೆ ನೀಡಿದರೆ ಅದರಿಂದ ಕೂದಲಿನ ಬೆಳವಣಿಗೆ ನೈಸರ್ಗಿಕವಾಗಿ ಆಗಲಿದೆ. ಆದರೆ ಕೂದಲಿಗೆ ಇದನ್ನು ತುಂಬಾ ಸುಲಭವಾಗಿ ಬಳಸಿಕೊಳ್ಳಬಹುದು. ಯಾವ ರೀತಿಯಲ್ಲಿ ಉಪ್ಪನ್ನು ಬಳಸಿಕೊಳ್ಳಬಹುದು ಎಂದು ನೀವು ತಿಳಿಯಿರಿ. ಕೂದಲನ್ನು ಯಾವಾಗಲೂ ತೊಳೆಯುವಂತೆ ತೊಳೆಯಿರಿ. ಕೂದಲು ಉದುರುವ ಸಮಸ್ಯೆಯೇ-ಇಲ್ಲಿವೆ ಸೂಕ್ತ ಮನೆಮದ್ದುಗಳು ತಲೆಗೆ ಹತ್ತು ನಿಮಿಷ ಕಾಲ ಮಸಾಜ್...   ...

ತ್ವಚೆಯ ಎಲ್ಲಾ ಸಮಸ್ಯೆಗೆ ರಾಮಬಾಣ 'ಅಲೋವೆರಾ' ಫೇಸ್ ಮಾಸ್ಕ್

Image
ಪ್ರಕೃತಿಯಲ್ಲಿರುವ ಅಸಂಖ್ಯ ಗಿಡಮೂಲಿಕೆಗಳು ನಮ್ಮ ಸೌಂದರ್ಯ ಸಮಸ್ಯೆಗಳನ್ನು ನಿವಾರಿಸುವ ಉತ್ತಮ ಔಷಧವಾಗಿದೆ. ಹಿಂದಿನ ಕಾಲದಿಂದಲೂ ಯಾವುದೇ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ನಮ್ಮ ಪೂರ್ವಜರು ಪ್ರಕೃತಿಯ ಮೊರೆಹೋಗುತ್ತಿದ್ದರು. ಯಾವುದೇ ದುಷ್ಪರಿಣಾಮವನ್ನು ಬೀರದೆಯೇ ಈ ಗಿಡಮೂಲಿಕೆಗಳು ಸೌಂದರ್ಯ ಸಮಸ್ಯೆಯನ್ನು ಹೋಗಲಾಡಿಸಿ ಉತ್ತಮ ತ್ವಚೆಯನ್ನು ದಯಪಾಲಿಸುತ್ತಿದ್ದವು. ಆದರೆ ಇಂದು ಪ್ರಾಕೃತಿಕವಾಗಿ ದೊರೆಯುವ ಉತ್ಪನ್ನಕ್ಕಿಂತಲೂ ನಾವು ರೆಡಿಮೇಡ್ ಆಗಿ ದೊರೆಯುವ ಸಂಪನ್ಮೂಲಗಳನ್ನು ಬಳಸಿಕೊಂಡು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿಕೊಳ್ಳುತ್ತಿದ್ದೇವೆ.  ಸಮಯದ ಅಭಾವ ಮತ್ತು ಉದಾಸೀನದಿಂದಾಗಿ ಮಾರುಕಟ್ಟೆಯಲ್ಲಿ ದೊರೆಯುವ ಸಿದ್ಧ ಉತ್ಪನ್ನಕ್ಕಾಗಿ ನಾವು ಈಗ ಕೈಚಾಚುತ್ತಿದ್ದೇವೆ. ಆದರೆ ಇಂತಹ ತಪ್ಪುಗಳನ್ನು ಎಸಗಿ ನಂತರ ಪಶ್ಚತ್ತಾಪ ಪಡುವುದರ ಬದಲಿಗೆ ನಿಮ್ಮ ಸೌಂದರ್ಯದ ಸಮಸ್ಯೆಗಳನ್ನು ಚಿಟಿಕೆ ಹೊಡೆಯುವಷ್ಟರಲ್ಲೇ ಪರಿಹರಿಸುವ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ. ಇಂತಹ ಸಂಪನ್ಮೂಲಗಳಲ್ಲಿ ಅಲೊವೇರಾ ಕೂಡ ಒಂದು. ಹೆಚ್ಚು ಬಿಸಿಲು ಮತ್ತು ಕಡಿಮೆ ನೀರಿನಲ್ಲಿ ಬೆಳೆಯುವ ಅತ್ಯಮೂಲ್ಯ ಸಸ್ಯಸಂಪತ್ತು ಅಲೊವೇರಾ ಆಗಿದ್ದು ನಿಮ್ಮ ಕೂದಲು ಮತ್ತು ತ್ವಚೆಗೆ ಇದು ಸಂಜೀವಿನಿಯಾಗಿದೆ. ಮನೆಯೊಳಗೆ ಅಂತೆಯೇ ಟೆರೇಸ್ ಮೇಲೆ ಕೂಡ ಸಣ್ಣ ಹೂಕುಂಡಲ್ಲಿ ಈ ಸಸ್ಯವನ್ನು ನಿಮಗೆ ಬೆಳೆಸಬಹುದಾಗಿದೆ. ಹೆಚ್ಚಿನ ಆಮ್ಲಜನಕ ಮತ್ತು ಬಿಸಿಲನ್ನು ನೀವು ಈ ಸಸ್ಯಕ್ಕ ...

ಹೆಚ್ಚು ಕಾಲ ನೀರಿನಲ್ಲಿ ಸಮಯ ಕಳೆದರೆ ಹೀಗೂ ಆಗುವುದು..!

Image
ದಿನದಲ್ಲೊಮ್ಮೆ ಈಜುವುದರಿಂದ ದೇಹಕ್ಕೆ ಉತ್ತಮ ರೀತಿಯ ವ್ಯಾಯಾಮವಾಗುತ್ತದೆ. ಮೈ ಮನಸ್ಸು ಎರಡು ತಾಜಾತನದಿಂದ ಕೂಡಿರುತ್ತದೆ. ಮಾಡುವ ಕೆಲಸಲ್ಲಿ ಹೆಚ್ಚಿನ ಉತ್ಸಾಹ ಹಾಗೂ ಶ್ರದ್ಧೆ ಬರುವಂತೆ ಮಾಡುತ್ತದೆ. ದಿನದಲ್ಲಿ ಕೆಲ ಸಮಯ ಈಜುವುದರಿಂದ ದೇಹದ ತೂಕವನ್ನು ಇಳಿಸಬಹುದು. ಇಷ್ಟೇ ಅಲ್ಲದೆ ನಮ್ಮ ಶರೀರದ ಪ್ರತಿಯೊಂದು ಭಾಗವು ಸಡಿಲವಾಗಿ, ಆರೋಗ್ಯ ಪೂರ್ಣವಾಗಿ ಇರುತ್ತದೆ. ಆದರೆ ಇವೆಲ್ಲಕ್ಕೂ ಒಂದು ಮಿತಿ ಇರಬೇಕು.  ಕೆಲವರು ಈಜುವುದು ಎಂದರೆ 10-15 ನಿಮಿಷಗಳ ಕಾಲ ನೀರಿನಲ್ಲೇ ಇರುತ್ತಾರೆ. ಹೀಗೆ ಮಾಡುವುದರಿಂದ ತ್ವಚೆ ಹಾಗೂ ಕೇಶರಾಶಿಗೆ ಒಳ್ಳೆಯದಲ್ಲ. ಕ್ಲೋರಿನೇಟೆಡ್ ನೀರಾಗಿದ್ದರೂ ಅನೇಕ ಆರೋಗ್ಯ ಸಮಸ್ಯೆ ಹುಟ್ಟಿಸಬಹುದು. ಬ್ಯಾಕ್ಟೀರಿಯಾಗಳು ತ್ವಚೆಯ ಮೇಲೆ ದಾಳಿಮಾಡಬಹುದು. ನೀರಿನಲ್ಲಿ ಹೆಚ್ಚುಕಾಲ ಕಳೆದರೂ ತ್ವಚೆ ಮತ್ತು ಕೇಶ ರಾಶಿಯ ಆರೋಗ್ಯವನ್ನು ಹೇಗೆ ಕಾಪಾಡಬಹುದು ಎಂಬ ಮಾಹಿತಿ ಇಲ್ಲಿದೆ... ಮುನ್ನೆಚ್ಚರಿಕೆ ಅಗತ್ಯ  ನೀರಿನಲ್ಲಿ ಹೆಚ್ಚು ಕಾಲ ಕಳೆಯಬೇಕು ಅಥವಾ ಈಜಬೇಕು ಎನ್ನುವ ಬಯಕೆ ಇದ್ದರೆ ಮೊದಲು ಗುಣಮಟ್ಟದ ಸಿಲಿಕೋನ್ ಟೋಪಿ, ಇಯರ್ ಪ್ಲಗ್ ಹಾಗೂ ಕನ್ನಡಕವನ್ನು ಧರಿಸಿ. ಇಲ್ಲವಾದರೆ ಇವು ನಿಮ್ಮ ರಕ್ಷಣೆ ಮಾಡುವುದಿಲ್ಲ. ಕೆಲವರು ಕಣ್ ಕಪ್ಪು, ಕಿವಿ ಓಲೆ, ತುಟಿ ಬಣ್ಣವನ್ನು ಬಳಿದುಕೊಂಡೇ ನೀರಿನಲ್ಲಿ ಇಳಿಯುತ್ತಾರೆ. ಕ್ಲೋರಿನ್‍ಯುಕ್ತ ನೀರಿನಲ್ಲಿ ಇವುಗಳ ಮಿಶ್ರಣದಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಕೇಶರಾಶಿಗ...