ಕೂದಲು ಉದುರುತ್ತಿದೆಯೇ?'ಉಪ್ಪಿನಿಂದ' ಕೂದಲಿಗೆ ಮಸಾಜ್ ಮಾಡಿ

ಉಪ್ಪಿಗಿಂತ ರುಚಿಯಿಲ್ಲ ಎನ್ನುವ ನಾಣ್ಣುಡಿಯಿದೆ. ಉಪ್ಪು ಇಲ್ಲದೆ ಇದ್ದರೆ ಯಾವುದೇ ಆಹಾರ ಕೂಡ ನಾಲಗೆಗೆ ರುಚಿಸದು ಪ್ರತಿಯೊಂದು ಆಹಾರಕ್ಕೂ ಉಪ್ಪನ್ನು ಬಳಸುತ್ತಾರೆ. ಅದೇ ರೀತಿ ಉಪ್ಪುನಲ್ಲಿರುವಂತಹ ಕೆಲವೊಂದು ಅಂಶಗಳು ದೇಹಕ್ಕೂ ಒಳ್ಳೆಯದು. ಉಪ್ಪಿನಲ್ಲಿ ಕೂದಲು ಮತ್ತು ತ್ವಚೆಯನ್ನು ಆರೈಕೆ ಮಾಡುವಂತಹ ಗುಣಗಳು ಕೂಡ ಇವೆ.

 ಕೂದಲು ಹಾಗೂ ತ್ವಚೆಯನ್ನು ರಕ್ಷಣೆ ಮಾಡಿ ಅದನ್ನು ಮರುಸ್ಥಾಪಿಸುವಂತಹ ಗುಣವು ಉಪ್ಪಿನಲ್ಲಿದೆ. ಕೂದಲು ಹಾಗೂ ತ್ವಚೆಯ ಆರೈಕೆಯಲ್ಲಿ ಉಪ್ಪನ್ನು ಬಳಸಿಕೊಂಡರೆ ಅದರಿಂದ ಭಾರೀ ಲಾಭಗಳು ನಿಮಗೆ ಸಿಗಲಿದೆ. ಶಾಂಪೂವಿಗೆ ಚಿಟಿಕೆಯಷ್ಟು ಉಪ್ಪನ್ನು ಹಾಕಿಕೊಂಡು ಬಳಸಿದರೆ ಅದರಿಂದ ನಿಮಗೆ ಹೆಚ್ಚಿನ ಲಾಭ ಸಿಗಲಿದೆ ಎಂದು ಬೋಲ್ಡ್ ಸ್ಕೈ ಹೇಳಿಕೊಡಲಿದೆ, ಮುಂದೆ ಓದಿ...

ಕೂದಲು ಉದುರುವಂತಹ ಸಮಸ್ಯೆ ಇರುವವರು

 ಉಪ್ಪು ಕೂದಲಿನ ಬೆಳವಣಿಗೆಗೆ ತುಂಬಾ ನೆರವಾಗಲಿದೆ. ಕೂದಲು ಉದುರುವಂತಹ ಸಮಸ್ಯೆ ಇರುವವರು ಸಮುದ್ರದ ಉಪ್ಪನ್ನು ಬಳಸಿಕೊಂಡು ಚಿಕಿತ್ಸೆ ನೀಡಿದರೆ ಅದರಿಂದ ಕೂದಲಿನ ಬೆಳವಣಿಗೆ ನೈಸರ್ಗಿಕವಾಗಿ ಆಗಲಿದೆ. ಆದರೆ ಕೂದಲಿಗೆ ಇದನ್ನು ತುಂಬಾ ಸುಲಭವಾಗಿ ಬಳಸಿಕೊಳ್ಳಬಹುದು. ಯಾವ ರೀತಿಯಲ್ಲಿ ಉಪ್ಪನ್ನು ಬಳಸಿಕೊಳ್ಳಬಹುದು ಎಂದು ನೀವು ತಿಳಿಯಿರಿ. ಕೂದಲನ್ನು ಯಾವಾಗಲೂ ತೊಳೆಯುವಂತೆ ತೊಳೆಯಿರಿ.

ಕೂದಲು ಉದುರುವ ಸಮಸ್ಯೆಯೇ-ಇಲ್ಲಿವೆ ಸೂಕ್ತ ಮನೆಮದ್ದುಗಳು

ತಲೆಗೆ ಹತ್ತು ನಿಮಿಷ ಕಾಲ ಮಸಾಜ್... 

ಒಂದು ಟೀ ಚಮಚ ಉಪ್ಪನ್ನು ತೆಗೆದುಕೊಂಡು ಅದನ್ನು ತಲೆಗೆ ಹತ್ತು ನಿಮಿಷ ಕಾಲ ಮಸಾಜ್ ಮಾಡಿ. ಕೂದಲನ್ನು ಮತ್ತೆ ತೊಳೆಯಿರಿ. ಈ ಕ್ರಮವನ್ನು ವಾರದಲ್ಲಿ ಎರಡು ಸಲ ಮುಂದುವರಿಸಿ. ಒಂದು ತಿಂಗಳ ಒಳಗಡೆ ನಿಮಗೆ ಫಲಿತಾಂಶ ಕಂಡುಬರುವುದು.

ತಲೆಹೊಟ್ಟು ನಿವಾರಣೆ 

ತಲೆಬುರುಡೆಯಲ್ಲಿ ಸತ್ತಿರುವ ಚರ್ಮದ ತೊಗಟೆಗಳು ಏಳುವುದೇ ತಲೆಹೊಟ್ಟು. ಸರಿಯಾದ ರಕ್ತಸಂಚಾರವಿಲ್ಲದೆ ಇರುವ ಕಾರಣದಿಂದ ತಲೆಹೊಟ್ಟು ನಿರ್ಮಾಣವಾಗುತ್ತದೆ. ಸಮುದ್ರದ ಉಪ್ಪು ರಕ್ತ ಸಂಚಾರ ಉತ್ತೇಜಿಸುವ ಗುಣ ಹೊಂದಿದೆ. ಇದರಿಂದ ತಲೆಬುರುಡೆಯು ಆರೋಗ್ಯವಾಗಿದ್ದು, ತಲೆಹೊಟ್ಟು ನಿವಾರಣೆಯಾಗುವುದು. 

ಅಪ್ಪಿತಪ್ಪಿಯೂ ತಲೆ ಹೊಟ್ಟಿನ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ

ತಲೆಹೊಟ್ಟು ನಿವಾರಣೆ

 ಕೂದಲನ್ನು ಎರಡು ಭಾಗಗಳನ್ನಾಗಿ ಮಾಡಿಕೊಂಡು ಅದಕ್ಕೆ ಉಪ್ಪು ಸಿಂಪಡಣೆ ಮಾಡಿ. 10-15 ನಿಮಿಷ ಕಾಲ ಬೆರಳನ್ನು ಬಳಸಿಕೊಂಡು ಕೂದಲಿಗೆ ಸರಿಯಾಗಿ ಮಸಾಜ್ ಮಾಡಿ. ಸ್ವಲ್ಪ ಸಮಯ ಬಿಟ್ಟು ಕೂದಲು ತೊಳೆಯಿರಿ. ಇದರಿಂದ ತಲೆಬುರುಡೆಯು ರಕ್ಷಣೆಯಾಗುವುದು ಮತ್ತು ಶಿಲೀಂಧ್ರಿಯಗಳು ಬೆಳೆಯುವುದು ತಪ್ಪುತ್ತದೆ.

ಎಣ್ಣೆಯುಕ್ತ ಕೂದಲು ಹಾಗೂ ಜಿಡ್ಡಿನ ತಲೆಬುರುಡೆ ನಿವಾರಣೆ

 ಮೇದಸ್ಸಿನ ಗ್ರಂಥಿಗಳು ಅತಿಯಾಗಿ ಸ್ರವಿಸುವ ಕಾರಣದಿಂದ ತಲೆಬುರುಡೆ ಮತ್ತು ಕೂದಲು ಎಣ್ಣೆಯಂಶದಿಂದ ಕೂಡಿರುತ್ತದೆ. ಉಪ್ಪು ಬಳಸಿದರೆ ಈ ಸಮಸ್ಯೆ ನಿವಾರಣೆ ಮಾಡಬಹುದು. ನೀವು ಬಳಸುವಂತಹ ಶಾಂಪೂವಿಗೆ ಎರಡು ಚಮಚ ಉಪ್ಪು ಹಾಕಿಕೊಂಡು ಅದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

ಎಣ್ಣೆಯುಕ್ತ ಕೂದಲು ಹಾಗೂ ಜಿಡ್ಡಿನ ತಲೆಬುರುಡೆ ನಿವಾರಣೆ

 ಈ ಶಾಂಪೂ ಬಳಸಿಕೊಂಡು ಕೂದಲು ತೊಳೆಯಿರಿ. ಮೊದಲ ಬಳಕೆಯ ಬಳಿಕವೇ ನಿಮಗೆ ಬದಲಾವಣೆಗಳು ಕಂಡುಬರುವುದು. ಕೂದಲು ಆರೋಗ್ಯಕರವಾಗಿ ಎಣ್ಣೆಯಂಶವು ಕಡಿಮೆಯಾಗುವುದು.








Comments

Popular posts from this blog

ಕೂದಲು ತೊಳೆದ ಬಳಿಕ, ಆರೈಕೆ ಹೀಗಿರಲಿ.. ಯಾವ ಸಮಸ್ಯೆಯೂ ಬಾರದು!

ಚೆಲುವೆಯ ಅಂದದ ಮುಖಕ್ಕೆ ಜೇನಿನ ಫೇಸ್ ಮಾಸ್ಕ್!

ತ್ವಚೆಯ ಎಲ್ಲಾ ಸಮಸ್ಯೆಗೆ ರಾಮಬಾಣ 'ಅಲೋವೆರಾ' ಫೇಸ್ ಮಾಸ್ಕ್