Posts

Showing posts from March, 2018

ಸೋಯಾಬೀನ್‌‌ನಲ್ಲಿ ಅಡಗಿದೆ ಬ್ಯೂಟಿ ಸೀಕ್ರೆಟ್

Image
ಸೋಯಾಬೀನ್ ಹೆಸರು ಕೇಳಿದರೆ ಸಾಕು ಎಲ್ಲರ ಬಾಯಲ್ಲಿ ನೀರು ಬರುವುದು ಸಹಜ. ಯಾಕೆಂದರೆ ಇದರಿಂದ ಹಲವಾರು ರೀತಿಯ ಅಡುಗೆಗಳನ್ನು ಮಾಡಬಹುದು. ಈ ಸೋಯಾಬೀನ್ ನಲ್ಲಿ ಹಲವಾರು ರೀತಿಯ ಪೋಷಕಾಂಶಗಳಿವೆ. ವಿಟಮಿನ್, ಪ್ರೋಟೀನ್ ಮತ್ತು ಖನಿಜಾಂಶವು ಸಾಕಷ್ಟಿದೆ. ನೀವು ಇದನ್ನು ಕೇವಲ ಆಹಾರಕ್ಕಾಗಿ ಮಾತ್ರ ಬಳಸದೆ ಚರ್ಮ ಮತ್ತು ಕೂದಲಿನ ಸಮಸ್ಯೆಗೂ ಬಳಸಿಕೊಳ್ಳಬಹುದು. ಸೋಯಾಬೀನ್ ನಲ್ಲಿರುವ ಪೌಷ್ಠಿಕಾಂಶಗಳು ಕೂದಲನ್ನು ಕಾಂತಿಯುವಾಗಿ ಮಾಡಿ ಚರ್ಮವು ಹೊಳೆಯುವಂತೆ ಮಾಡುತ್ತದೆ. ಸೋಯಾಬೀನ್‌ನ ಬೀಜ ಮತ್ತು ಅದರ ಮೇಲ್ಭಾಗವನ್ನು ಹಲವಾರು ರೀತಿಯ ಕೂದಲಿನ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತದೆ. ಇದು ಕೂದಲಿಗೆ ಶಕ್ತಿ ಮತ್ತು ಪೋಷಕಾಂಶವನ್ನು ತುಂಬುತ್ತದೆ. ತಲೆಬುರುಡೆಯಾಗಿ ಸರಿಯಾಗಿ ರಕ್ತಸಂಚಾರವಾಗಲು ಇದು ನೆರವಾಗುತ್ತದೆ. ಇದರಿಂದಾಗಿ ಸೋಯಾಬಿನ್ ಅನ್ನು ಹಲವಾರು ಶಾಂಪೂಗಳಲ್ಲಿ ಬಳಸಿಕೊಳ್ಳಲಾಗುತ್ತದೆ.ನಿಮ್ಮ ಆಹಾರದಲ್ಲಿ ಸೋಯಾಬಿನ್ ಬಳಕೆಯಿಂದ ಹಲವಾರು ರೀತಿಯ ಆರೋಗ್ಯ ಲಾಭಗಳಿವೆ. ಇದು ಚರ್ಮ ಮತ್ತು ಕೂದಲಿನ ಸಮಸ್ಯೆಗೆ ಉತ್ತಮ ಪರಿಹಾರ. ಬೋಲ್ಡ್ ಸ್ಕೈ ಈ ಲೇಖನದಲ್ಲಿ ಸೋಯಾಬೀನ್ ನಿಂದ ಆಗುವಂತಹ ಹಲವಾರು ರೀತಿಯ ಸೌಂದರ್ಯ ಲಾಭಗಳ ಬಗ್ಗೆ ವಿವರಿಸಲಿದೆ. ಇದರ ಬಗ್ಗೆ ತಿಳಿದುಕೊಳ್ಳಲು ಲೇಖನವನ್ನು ಓದಿ... ಚರ್ಮಕ್ಕೆ ತೇವಾಂಶ ನೀಡುತ್ತದೆ  ಒಣ ಹಾಗೂ ಒರಟು ಚರ್ಮವನ್ನು ದೂರ ಮಾಡಿ ಚರ್ಮಕ್ಕೆ ತೇವಾಂಶ ನೀಡಬೇಕಾದರೆ ಸೋಯಾಬೀನ್ ಬಳಸಿ....

ಆಕರ್ಷಕ ತ್ವಚೆಯನ್ನು ಪಡೆಯಲು ಅಲೋವೆರಾ ಜೆಲ್ ಬಳಕೆ ಮಾಡಿ

Image
ಮುಖದ ಕ್ಲೆನ್ಸರ್ ಎನ್ನುವುದು ಚರ್ಮದ ಆರೈಕೆಯ ಒಂದು ಉತ್ಪನ್ನ ಎನ್ನಬಹುದು. ಇದರ ಉಪಯೋಗಿಸಿ ಚರ್ಮದ ಆಕರ್ಷಣೆಯನ್ನು ದ್ವಿಗುಣಗೊಳಿಸಬಹುದು. ಇದು ಚರ್ಮದ ಮೇಲೆ ಹಾಗೂ ರಂಧ್ರದ ಒಳಗೆ ಸಂಗ್ರಹವಾದ ಕೊಳಕನ್ನು ತೆಗೆದುಹಾಕುತ್ತದೆ. ಜೊತೆಗೆ ಚರ್ಮವು ತಾಜಾ ಮತ್ತು ಉಲ್ಲಾಸದ ನೋಟದಿಂದ ಕೂಡಿರುತ್ತದೆ.  ಇತ್ತೀಚಿನ ದಿನಗಳಲ್ಲಿ ವ್ಯಾಪಾರೋದ್ಯಮದ ದೃಷ್ಟಿಯಿಂದ ಕ್ಲೆನ್ಸರ್‍ಗಳಲ್ಲಿ ರಾಸಾಯನಿಕ ಉತ್ಪನ್ನಗಳನ್ನು ಬಳಕೆ ಮಾಡಲಾಗುತ್ತಿದೆ. ಇಂತಹ ಉತ್ಪನ್ನಗಳಿಂದ ಮುಖದ ಆರೈಕೆ ಮಾಡಿದರೆ ತ್ವಚೆಯಲ್ಲಿ ಆಕರ್ಷಣೆ ಕಂಡುಬಂದರೂ ಇನ್ನಿತರ ಅಡ್ಡ ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ. ಹಾಗಾಗಿ ಆದಷ್ಟು ನೈಸರ್ಗಿಕ ಉತ್ಪನ್ನಗಳ ಬಳಕೆ ಮಾಡುವುದು ಉತ್ತಮ. ಅಂತಹ ಅತ್ಯುತ್ತಮ ಪರಿಣಾಮವನ್ನು ನೀಡಬಹುದಾದ ನೈಸರ್ಗಿಕ ಉತ್ಪನ್ನವೆಂದರೆ ಅಲೋವೆರಾ. ಅಲೋವೆರಾ ವಿಟಮಿನ್ ಇ ಯೊಂದಿಗೆ ಸಮೃದ್ಧವಾಗಿದೆ. ಇದರೊಂದಿಗೆ ಇನ್ನಿತರ ನೈಸರ್ಗಿಕ ಘಟಕಗಳ ಸಂಯೋಜನೆ ಮಾಡಿದರೆ ಇದರ ಶಕ್ತಿಯು ದ್ವಿಗುಣವಾಗುವುದು. ನಿಮಗೂ ಈ ಹೊಸ ಆರೈಕೆಯ ಪದ್ಧತಿ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದ್ದರೆ ಮುಂದಿರುವ ವಿವರಣೆಯನ್ನು ಪರಿಶೀಲಿಸಿ. ಗುಲಾಬಿ ನೀರು ಮತ್ತು ಅಲೋವೆರಾ ಜೆಲ್  - 1 ಟೇಬಲ್ ಚಮಚ ಅಲೋವೆರಾ ಜೆಲ್ ಗೆ 2 ಟೀಚಮಚ ಗುಲಾಬಿ ನೀರನ್ನು ಸೇರಿಸಿ.  - ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ ಮಸಾಜ್ ಮಾಡಿ.  - ಬಳಿಕ ಶುದ್ಧವಾದ ನೀರಿನಿಂದ ಸ್ವಚ್ಛಗೊಳಿಸಿ. - ತೆಳುವ...

ಬ್ಯೂಟಿ ಟಿಪ್ಸ್: ಮುಖದ ಅಂದ ಹೆಚ್ಚಿಸುವ ಕ್ಯಾರೆಟ್ ಫೇಸ್ ಮಾಸ್ಕ್

Image
ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವಂತಹ ತರಕಾರಿಗಳಲ್ಲಿ ಕ್ಯಾರೆಟ್ ಕೂಡ ಒಂದು. ಅತ್ಯುತ್ತಮ ಪೋಷಕಾಂಶಗಳನ್ನು ಒಳಗೊಂಡಿರುವ ಕ್ಯಾರೆಟ್ ಖನಿಜ, ಜೀವಸತ್ವ, ಬೀಟಾ-ಕ್ಯಾರೋಟಿನ್ ಹೊಂದಿರುವ ಆಂಟಿ ಆಕ್ಸಿಡೆಂಟ್‍ಗಳಿಂದ ಕೂಡಿದೆ. ಸಿಹಿತಿಂಡಿ, ವಿವಿಧ ಬಗೆಯ ಆಹಾರ ಪದಾರ್ಥಗಳು ಹಾಗೂ ಸಲಾಡ್‍ಗಳಲ್ಲಿ ಈ ತರಕಾರಿಯನ್ನು ಸೇರಿಸಬಹುದು. ಆಹಾರ ಪದಾರ್ಥಗಳಿಗೆ ಅತ್ಯುತ್ತಮ ರುಚಿಯನ್ನು ನೀಡಬಲ್ಲ ಈ ತರಕಾರಿ ಆರೋಗ್ಯದ ವಿಚಾರದಲ್ಲೂ ಅತ್ಯುತ್ತಮವಾದ ಆರೈಕೆಯನ್ನು ಮಾಡುವುದು. ಚರ್ಮದ ಆರೋಗ್ಯವನ್ನು ಸದಾ ಕಾಪಾಡುವ ಅತ್ಯುತ್ತಮ ತರಕಾರಿ ಎಂದು ಹೇಳಲಾಗುತ್ತದೆ. ಚರ್ಮದ ಕಂದು ಕಲೆ, ಶುಷ್ಕ ಚರ್ಮ, ಉರಿಯೂತ, ಸೇರಿದಂತೆ ಇನ್ನೂ ಅನೇಕ ಚರ್ಮ ಸಂಬಂಧಿ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುತ್ತದೆ. ಇದರೊಂದಿಗೆ ಇನ್ನೂ ಕೆಲವು ನೈಸರ್ಗಿಕ ಉತ್ಪನ್ನಗಳನ್ನು ಸೇರಿಸುವುದರ ಮೂಲಕ ಚರ್ಮದ ಸೌಂದರ್ಯವನ್ನು ದ್ವಿಗುಣ ಗೊಳಿಸಬಹುದು. ನೀವು ನಿಮ್ಮ ತ್ವಚೆಯ ಆರೈಕೆಗೆ ಹೊಸ ಮಾರ್ಗವನ್ನು ಅರಸುತ್ತಿದ್ದೀರಿ ಎಂದಾದರೆ ಈ ಮುಂದೆ ನೀಡಿರುವ ಮಾರ್ಗಗಳು ನಿಮಗೆ ಉತ್ತಮ ಪರಿಹಾರ ನೀಡಲಬಲ್ಲವು. ಹೊಳೆಯುವ ತ್ವಚೆಗಾಗಿ  ಕ್ಯಾರೆಟ್‍ನಲ್ಲಿರುವ ವಿಟಮಿನ್ ಸಿ ಹಾಗೂ ಉತ್ಕರ್ಷಣ ನಿರೋಧಕ ಗುಣಗಳು ಚರ್ಮವನ್ನು ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ. ಅಲ್ಲದೆ ತ್ವಚೆಯನ್ನು ಮೃದು ಹಾಗೂ ಕೋಮಲವಾಗಿರಲು ಸಹಕರಿಸುವುದು. - ಸ್ವಲ್ಪ ತುರಿದ ಕ್ಯಾರೆಟ್‌ನ ಜೊತೆ ಜೇನುತುಪ್ಪ ಬೆರೆಸಿ, ಮಿಶ್ರಗೊಳಿ...

ಒಂದೆರಡು ವಾರದಲ್ಲಿಯೇ ಬಳಿ ಕೂದಲನ್ನು ಕಪ್ಪು ಮಾಡುವ ಮನೆಮದ್ದುಗಳು

Image
ಕೂದಲು ನೆರೆಯುವುದಕ್ಕೆ ಅಥವಾ ಬಿಳಿಯಾಗುವುದಕ್ಕೆ ಇಂತಿಷ್ಟೇ ಎಂಬ ವಯಸ್ಸಿನ ನಿರ್ಬಂಧವಿಲ್ಲ. ಕೆಲವರಿಗೆ ಇಪ್ಪತ್ತರಲ್ಲಿಯೇ ನೆರೆಯಲು ಪ್ರಾರಂಭಿಸಿದರೆ ಕೆಲವರಿಗೆ ಐವತ್ತರ ಬಳಿಕ ಪ್ರಾರಂಭವಾಗಬಹುದು. ಆದರೆ ಯಾವಾಗ ಪ್ರಾರಂಭವಾದರೂ ಇದು ಆತಂಕವನ್ನು ಮಾತ್ರ ತಪ್ಪದೇ ತರುತ್ತದೆ. ಏಕೆಂದರೆ ಕೂದಲು ನೆರೆಯುವುದು ವೃದ್ಧಾಪ್ಯದ ಲಕ್ಷಣ ಎಂದೇ ಎಲ್ಲರೂ ಅಂದುಕೊಂಡಿದ್ದಾರೆ. ಇದನ್ನು ತಡೆಯಲು ಮಾಡದ ಪ್ರಯತ್ನವಿಲ್ಲ, ಅನುಸರಿಸದ ವಿಧಾನವಿಲ್ಲ. ಆದರೂ ಯಾವುದೇ ಪ್ರಯತ್ನ ಶೇಖಡಾ ನೂರರಷ್ಟು ಫಲ ನೀಡುತ್ತಿಲ್ಲ. ಕೂದಲ ನೆರೆಯುವಿಕೆಗೆ ಸ್ಪಷ್ಟವಾದ ಕಾರಣ ಇದುವರೆಗೆ ಗೊತ್ತಾಗಿಲ್ಲ. ಸ್ಥೂಲವಾಗಿ ಹೇಳಬೇಕೆಂದರೆ ತಾಮ್ರದ ಕೊರತೆಯಿಂದ ಕೂದಲಿಗೆ ಬಣ್ಣ ನೀಡುವ ಮೆಲನಿನ್ ಎಂಬ ವರ್ಣದ್ರವ್ಯ ಉತ್ಪತ್ತಿಯಾಗದೇ ಬಣ್ಣ ನೆರೆಯತೊಡಗುತ್ತದೆ. ಕೆಲವು ಊಹಾಪೋಹಗಳ ಪ್ರಕಾರ ಕೇಸರಿ ಬಣ್ಣದ ಬೇಳೆ ತಿನ್ನುವ ಕಾರಣದಿಂದಲೂ ಕೂದಲು ಅಕಾಲಿಕವಾಗಿ ನೆರೆಯುತ್ತದೆಯಂತೆ!, ಅಂತಹ ಕಟ್ಟು ಕಥೆಗಳನ್ನೆಲ್ಲಾ ಪಕ್ಕಕ್ಕಿಟ್ಟು ಕೂದಲು ಬಿಳಿಯಾಗುವ ಸಮಸ್ಯೆಯಿಂದ ಪಾರಾಗಲು ಕೆಲವೊಂದು ಸಿಂಪಲ್ ಮನೆಮದ್ದುಗಳನ್ನು ಪರಿಚಯಿಸುತ್ತಿದ್ದೇವೆ ಮುಂದೆ ಓದಿ.... ಬಾದಾಮಿ ಎಣ್ಣೆ  ಸಮಪ್ರಮಾಣದಲ್ಲಿ ಬಾದಾಮಿ ಎಣ್ಣೆ, ಲಿಂಬೆರಸ ಮತ್ತು ನೆಲ್ಲಿಕಾಯಿಯ ರಸಗಳನ್ನು ಮಿಶ್ರಣಮಾಡಿಕೊಂಡು (ಬಿಸಿ ಮಾಡಬಾರದು) ನೇರವಾಗಿ ಕೂದಲಿಗೆ ಹಾಗೂ ಕೂದಲ ಬುಡಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಬಿಳಿಗೂದಲು ಶೀಘ್ರವೇ ಕಪ್...

ಒಣ ಚರ್ಮದ ಸಮಸ್ಯೆಗೆ 'ಹಣ್ಣುಗಳ ಫೇಸ್ ಪ್ಯಾಕ್' ಪ್ರಯತ್ನಿಸಿ ನೋಡಿ..

Image
ಚರ್ಮ ನೋಡಿ ದೇಹದ ಆರೋಗ್ಯದ ಬಗ್ಗೆ ಹೇಳಬಹುದು ಎನ್ನುತ್ತಾರೆ. ಒಬ್ಬನ ಚರ್ಮವು ಒಳ್ಳೆಯ ರೀತಿಯಲ್ಲಿದ್ದರೆ ಆಗ ಆತನ ಆರೋಗ್ಯವು ಚೆನ್ನಾಗಿ ಇದೆ ಎನ್ನಬಹುದು. ಆದರೆ ದೇಹದಲ್ಲಿ ಕೆಲವೊಂದು ಬದಲಾವಣೆಗಳು ಆದಾಗ ಅದು ಚರ್ಮದಲ್ಲಿ ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ನೈಸರ್ಗಿಕ ತೇವಾಂಶ ಇಲ್ಲದೆ ಇರುವಂತಹ ಸಂದರ್ಭದಲ್ಲಿ ಒಣ ಚರ್ಮವು ಕಂಡುಬರುವುದು. ಸಂಪೂರ್ಣ ದೇಹವು ಇದರಿಂದ ಒಣಗದೆ ಇದ್ದರೂ ಕೆಲವೊಂದು ಭಾಗಗಳು ಒಣಗಿರುತ್ತದೆ. ಇಂತಹ ಒಣಚರ್ಮವು ಕೆಲವು ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಚರ್ಮವು ಒಣಗಿದ್ದ ಕಡೆಗಳಲ್ಲಿ ತುರಿಸುವುದು ಮತ್ತು ಗಡುಸಾಗಿರುತ್ತದೆ. ತುರಿಸಿದರೆ ಬಿಳಿ ಬಣ್ಣದ ಗೆರೆ ಚರ್ಮದ ಮೇಲೆ ಮೂಡುತ್ತದೆ. ಒಣ ಚರ್ಮದ ಸಮಸ್ಯೆಯು ಕೆಲವೊಂದು ಸಲ ತೀವ್ರವಾಗಬಹುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಇರುತ್ತದೆ. ಇದಕ್ಕೆ ಕೆಲವೊಂದು ಕ್ರೀಮ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇಂತಹ ಕ್ರೀಮ್‌ಗಳನ್ನು ಬಳಸಿಕೊಂಡು ಒಣ ಚರ್ಮ ನಿವಾರಣೆ ಮಾಡಬಹುದು. ಒಣ ಚರ್ಮ ಸಮಸ್ಯೆಗೆ ನೈಸರ್ಗಿಕ ಪರಿಹಾರ-ಪ್ರಯತ್ನಿಸಿ ನೋಡಿ ಆದರೆ ಇದಕ್ಕೆ ಉತ್ತಮ ಪರಿಹಾರವೆಂದರೆ ಮನೆಯಲ್ಲಿ ತಯಾರಿಸುವಂತಹ ಫೇಸ್ ಪ್ಯಾಕ್ ಬಳಸಿಕೊಳ್ಳುವುದು. ಹಣ್ಣುಗಳಿಂದ ತಯಾರಿಸುವಂತಹ ಫೇಸ್ ಪ್ಯಾಕ್ ಚರ್ಮಕ್ಕೆ ತೇವಾಂಶ ನೀಡುವುದು. ದೇಹದ ಯಾವುದೇ ಭಾಗಕ್ಕೆ ಈ ಪ್ಯಾಕ್ ಹಚ್ಚಿಕೊಳ್ಳಬಹುದು. ಒಳ್ಳೆಯ ಫಲಿತಾಂಶ ನೀಡಿದರೆ ಇದನ್ನು ಮುಂದೆ ಕೂಡ ಬಳಸಬಹುದು. ಹಣ್ಣುಗಳಿಂದ ಫೇಸ್ ಪ...

ಮುಖದ ಕಾಂತಿ ಹೆಚ್ಚಿಸಲು ಸೌತೆಕಾಯಿ ಫೇಸ್ ಪ್ಯಾಕ್ ಪ್ರಯತ್ನಿಸಿ

Image
ಬೇಸಿಗೆಯ ದಿನದಲ್ಲಿ ವ್ಯಾಪಕವಾಗಿ ಬಳಸುವ ತರಕಾರಿ ಎಂದರೆ ಸೌತೆಕಾಯಿ. ಹೇರಳವಾದ ನೀರಿನಿಂದ ಕೂಡಿರುವ ಸೌತೆಕಾಯಿ ದೇಹದ ತಾಪವನ್ನು ಕಡಿಮೆಮಾಡುವುದು. ಜೊತೆಗೆ ದೇಹ ಮತ್ತು ಚರ್ಮದ ಆರೋಗ್ಯವನ್ನು ಕಾಪಾಡುವುದು. ಅಗ್ಗದ ಹಾಗೂ ವಿನಮ್ರವಾದ ಈ ತರಕಾರಿಯು ವಿಟಮಿನ್ ಸಿ, ವಿಟಮಿನ್ ಎ ಹಾಗೂ ಕ್ಯಾರೋಟಿನ್‍ಗಳನ್ನು ಒಳಗೊಂಡಿದೆ. ಹಾಗಾಗಿಯೇ ಸೌತೆಕಾಯಿಯನ್ನು ದೇಹದಲ್ಲಿ ನಿರ್ಜಲೀಕರಣವುಂಟಾದಾಗ ಹಾಗೂ ಚರ್ಮದ ಸಮಸ್ಯೆ ಕಾಣಿಸಿಕೊಂಡಾಗ ಹೆಚ್ಚು ಸೇವನೆಯನ್ನು ಮಾಡುತ್ತಾರೆ.ಸೌತೆಕಾಯಿ: ಆರೋಗ್ಯಕ್ಕೂ ಸೈ, ಸೌಂದರ್ಯದ ವಿಷಯದಲ್ಲೂ ಜೈ!  ಅತ್ಯುತ್ತಮ ಪೋಷಕಾಂಶಗಳಿಂದ ಕೂಡಿರುವ ಸೌತೆಕಾಯಿಂದ ಮಂಕಾದ ಚರ್ಮದ ಆರೈಕೆಯನ್ನು ಮಾಡಬಹುದು. ಬಹು ಸುಲಭವಾಗಿ ಹಾಗೂ ಸರಳ ವಿಧಾನದಿಂದ ಮುಖಕ್ಕೆ ಸೌತೆಕಾಯಿ ಫೇಸ್ ಪ್ಯಾಕ್ ಅನ್ನು ಅನ್ವಯಿಸಬಹುದು. ಇದು ಪೀಡಿತ ಪ್ರದೇಶಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತದೆ. ಜೊತೆಗೆ ಚರ್ಮವು ತೇವಾಂಶದಿಂದ ಕೂಡಿರುವಂತೆ ಕಂಗೊಳಿಸುವುದು. ನಿಮಗೂ ಈ ಬೇಸಿಗೆ ಉರಿಯಲ್ಲಿ ತಂಪಾದ ಆರೈಕೆಗೆ ಒಳಗಾಗಬೇಕು ಎನಿಸುತ್ತಿದೆ ಎಂದಾದರೆ ಈ ಮುಂದೆ ನೀಡಿರುವ ಸೂಕ್ತ ವಿವರಣೆಯನ್ನು ಪರಿಶೀಲಿಸಿ.... ಸೌತೆಕಾಯಿ ಮತ್ತು ಮೊಸರು  ಸೌತೆಕಾಯಿ ಮತ್ತು ಮೊಸರು ಫೇಸ್ ಪ್ಯಾಕ್ ಒಣ ಚರ್ಮಕ್ಕಾಗಿ ಅತ್ಯುತ್ತಮವಾದ ಪೋಷಣೆಯನ್ನು ನೀಡುವುದು. - ಅರ್ಧ ಸೌತೆಕಾಯಿಯನ್ನು ತೆಗೆದುಕೊಂಡು ಪೇಸ್ಟ್ ಮಾಡಿ. - ಸೌತೆಕಾಯಿ ಪೇಸ್ಟ್‌ಗೆ ಮೊಸರನ್ನು ಸೇರಿಸಿ, ಮಿಶ್ರಗ...

ನಿತ್ಯ ಬಳಸುವ ಸಕ್ಕರೆ ಸೌಂದರ್ಯದ ಸುಧಾರಣೆಗೆ ಸಹಾಯ ಮಾಡುವುದು

Image
ಸಕ್ಕರೆ ಅಂಟಿನಂತಹ ಗುಣವನ್ನು ಹೊಂದಿರುವ ಸಿಹಿ ವಸ್ತು. ಅನೇಕರು ಸಕ್ಕರೆಯಿಂದ ಆದಷ್ಟು ದೂರ ಇರಲು ಪ್ರಯತ್ನಿಸುತ್ತಾರೆ. ಕಾರಣ ಅದು ಆರೋಗ್ಯದ ಮೇಲೆ ಕೆಲವು ಋಣಾತ್ಮಕ ಪರಿಣಾಮ ಬೀರುವುದು ಎನ್ನುವ ಕಾರಣವಷ್ಟೆ. ಆದರೆ ದೂರ ಇರುವವರು ಸಹ ಆಂತರಿಕವಾಗಿ ಸಕ್ಕರೆಯನ್ನು ಹಾಗೂ ಅದರ ಸಿಹಿಯನ್ನು ಹೆಚ್ಚು ಇಷ್ಟಪಡುತ್ತಾರೆ. ನಾಲಿಗೆಯನ್ನು ಸಿಹಿ ಮಾಡುವ ಈ ಸಕ್ಕರೆಯಿಂದ ನಮ್ಮ ಸೌಂದರ್ಯದ ಆರೈಕೆಯನ್ನು ಮಾಡಬಹುದು. ನಾವು ಬಯಸುವ ಆಕರ್ಷಣೆ ಹಾಗೂ ಹೊಳಪನ್ನು ನೀಡುವುದು. ನೈಸರ್ಗಿಕವಾದ ಉತ್ಪನ್ನಗಳೊಂದಿಗೆ ತಯಾರಿಸುವ ಈ ಸ್ಕ್ರಬ್ ತ್ವಚೆಯ ಮೇಲೆ ಯಾವುದೇ ಅಡ್ಡ ಪರಿಣಾಮವನ್ನು ಉಂಟುಮಾಡದು. ಹೌದು, ದ್ರವರೂಪಕ್ಕೆ ಪರಿವರ್ತಿಸಿದಾಗ ಅಂಟಾದ ಗುಣವನ್ನು ಹೊಂದುವ ಸಕ್ಕರೆಯನ್ನು ಕೆಲವು ನೈಸರ್ಗಿಕ ಉತ್ಪನ್ನ ಗಳೊಂದಿಗೆ ಬೆರೆಸಿ ಸ್ಕ್ರಬ್‍ಗಳನ್ನಾಗಿ ಬಳಸಬಹುದು. ಇದರಿಂದ ಚರ್ಮವನ್ನು ಆರೋಗ್ಯವಾಗಿ ಹಾಗೂ ಆಕರ್ಷವಾಗಿರುವಂತೆ ಮಾಡಬಹುದು. ಇದು ಚರ್ಮದ ಮೇಲಿರುವ ಕೊಳೆಯನ್ನು ನಿವಾರಿಸುವುದು. ಜೊತೆಗೆ ಸತ್ತ ಜೀವಕೋಶಗಳನ್ನು ತೆಗೆದು ಚರ್ಮವು ತೇವಾಂಶ ಹಾಗೂ ತಾಜಾತನದಿಂದ ಕೂಡಿರುವಂತೆ ಮಾಡುವುದು. ಹಾಗಾದರೆ ಸ್ಕ್ರಬ್ ತಯಾರಿಸುವ ವಿಧಾನ ಹಾಗೂ ಅದರ ಬಳಕೆಯ ವಿಧಾನದ ಬಗ್ಗೆ ತಿಳಿಯೋಣ ಬನ್ನಿ... ಜೇನುತುಪ್ಪ, ನಿಂಬೆ ಮತ್ತು ಸಕ್ಕರೆ ಜೇನುತುಪ್ಪ ಮತ್ತು ನಿಂಬೆ ರಸವು ಚರ್ಮವನ್ನು ಹೊಳಪಿನಂತೆ ಕೂಡಿರುವಂತೆ ಮಾಡುತ್ತದೆ. ಜೊತೆಗೆ ತೇವಾಂಶದಿಂದ ಕಂಗೊಳಿಸುವಂತೆ ಮಾಡುವುದು....

ಬ್ಯೂಟಿ ಟಿಪ್ಸ್: 'ಹಲಸಿನ ಹಣ್ಣಿನ' ಫೇಸ್ ಪ್ಯಾಕ್

Image
ಸೌಂದರ್ಯ ಪ್ರತಿ ಮಹಿಳೆಯ ಕನಸು. ಆಕೆ ಸೌಂದರ್ಯವತಿಯಾಗಿರಬೇಕು ಅಂದ್ರೆ ಕೇವಲ ಆಕೆ ತೆಗೆದುಕೊಳ್ಳುವ ಆಹಾರ ಕ್ರಮದಿಂದ ಮಾತ್ರ ಸಾಧ್ಯವಲ್ಲ. ಸ್ವಲ್ಪ ಆಕೆಯ ಬಗ್ಗೆ ಸ್ವಯಂ ಕಾಳಜಿ ತೆಗೆದುಕೊಂಡಾಗ ಮಾತ್ರ ಇನ್ನಷ್ಟು ಬ್ಯೂಟಿಫುಲ್ ಆಗಿ ಕಾಣಲು ಸಾಧ್ಯವಾಗುತ್ತೆ. ಆ ನಿಟ್ಟಿನಲ್ಲಿ ನಮ್ಮ ಪ್ರಕೃತಿ ಆಯಾ ಕಾಲಕ್ಕೆ ನೀಡುವ ಕೊಡುಗೆಗಳನ್ನೇ ಬಳಸಿಕೊಳ್ಳಬಹುದು. ಆದ್ರೆ ಹಾಗೆ ಬಳಸಿಕೊಂಡು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಬಗೆ ಹೆಚ್ಚಿನ ಮಹಿಳೆಯರಿಗೆ ತಿಳಿದಿರೋದಿಲ್ಲ. ಹಣ್ಣುಗಳು ಯಾವಾಗಲೂ ಕೂಡ ಸೌಂದರ್ಯ ವರ್ಧಕಗಳೇ.  ಆ ನಿಟ್ಟಿನಲ್ಲಿ ಹಲಸಿನ ಹಣ್ಣಿನ ಕೊಡುಗೆ ಕೂಡ ಅಪಾರ.. ವರ್ಷದ ಕೆಲವೇ ತಿಂಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಹಣ್ಣುಗಳಲ್ಲಿ ಹಲಸು ಕೂಡ ಒಂದು. ಇನ್ನೇನು ಹಲಸಿನ ಸೀಸನ್ ಶುರುವಾಗಿದೆ. ವೆರೈಟಿ ಹಲಸುಗಳು, ಅದರ ವಾಸನೆ ಮೂಗಿಗೆ ಬಡಿಯುವ ಸಂದರ್ಭ ಇದು.. ಕೇವಲ ಹಲಸಿನ ವಾಸನೆ ಸವಿದ್ರೆ ಹೇಗೆ ಸಾಧ್ಯ ಹೇಳಿ. ಹಲಸು ಅಂದ ಕೂಡಲೇ ಬಾಯಲ್ಲಿ ಕೆಲವರಿಗೆ ನೀರೂರುತ್ತೆ. ಹಲಸಿನ ಹಣ್ಣಿನ ಬೀಜ ಎಸೆಯುವ ಮುನ್ನ ಎರಡು ಬಾರಿ ಆಲೋಚಿಸಿ!  ಹಾಗಂತ ಬಾಯಲ್ಲಿ ನೀರೂರಿಸಿ, ತಿನ್ನಲು ಮಾತ್ರ ಟೇಸ್ಟಿಯಾಗಿರುವ ಹಣ್ಣು ಹಲಸು ಅಂತ ಅಂದುಕೊಳ್ಳಬೇಡಿ.. ಬದಲಾಗಿ ಹಲಸು ನಿಮ್ಮ ಸೌಂದರ್ಯವರ್ಧಕ ಕೂಡ ಹೌದು.. ಹಲಸಿನ ಹಣ್ಣನ್ನು ಬಳಸಿ ಹೇಗೆ ನಿಮ್ಮ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು ಅನ್ನೋದನ್ನು ನಾವ್ ನಿಮಗೆ ಸಿಂಪಲ್ ಆಗಿ ತಿಳಿಸಿಕೊಡ್ತೀವಿ...