ಒಮ್ಮೆ ಚಾಕಲೇಟ್ ಫೇಸ್ ಮಾಸ್ಕ್ ಬಳಸಿ ನೋಡಿ...
ಚಾಕಲೇಟ್ ಯಾರಿಗೇ ತಾನೇ ಇಷ್ಟವಾಗಲ್ಲ ಹೇಳಿ. ಮಕ್ಕಳಿಂದ ಹಿಡಿದು ದೊಡ್ಡವರ ತನಕ ಪ್ರತಿಯೊಬ್ಬರಿಗೂ ಚಾಕಲೇಟ್ ಇಷ್ಟ. ಅದರಲ್ಲೂ ಮಹಿಳೆಯರು ಇದನ್ನು ತುಂಬಾ ಇಷ್ಟಪಡುವುದು. ಇದಕ್ಕೆ ಮುಖ್ಯ ಕಾರಣ ಇದು ತ್ವಚೆಯ ಆರೋಗ್ಯಕ್ಕೂ ಒಳ್ಳೆಯದು. ಚಾಕಲೇಟ್ ತ್ವಚೆಯ ಆರೈಕೆಗೆ ತುಂಬಾ ದುಬಾರಿ ವಸ್ತು. ಚಾಕಲೇಟ್ ನಲ್ಲಿ ಇರುವಂತಹ ಫ್ಲಾವನಾಯ್ಡ್, ಆ್ಯಂಟಿಆಕ್ಸಿಡೆಂಟ್ ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡಿ ತ್ವಚೆಗೆ ಹಾನಿಯಾಗದಂತೆ ತಡೆಯುವುದು. ಚರ್ಮಕ್ಕೆ ಫ್ರೀ ರ್ಯಾಡಿಕಲ್ ತುಂಬಾ ಹಾನಿಕಾರಕ. ಇದು ಕಾಲಜನ್ ವಿಘಟಿಸಿ ವಯಸ್ಸಾಗುವ ಲಕ್ಷಣಗಳನ್ನು ತೋರಿಸುವುದು ಮತ್ತು ಇದರಿಂದ ನೀವು ತುಂಬಾ ವಯಸ್ಸಾದವರಂತೆ ಕಾಣುವಿರಿ. ಇಂತಹ ಸಮಯದಲ್ಲಿ ಚಾಕಲೇಟ್ ತುಂಬಾ ಪರಿಣಾಮಕಾರಿ ಮತ್ತು ಚರ್ಮಕ್ಕೆ ಹಾನಿ ಉಂಟು ಮಾಡುವ ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು. ಯೌವನಭರಿತ ಚರ್ಮವನ್ನು ಪಡೆಯಲು ಹಲವಾರು ರೀತಿಯ ವಿಧಾನಗಳು ಇಂದಿನ ದಿನಗಳಲ್ಲಿ ಲಭ್ಯವಿದೆ. ಇಂದು ಬೋಲ್ಡ್ ಸ್ಕೈ ನಿಮಗೆ ತುಂಬಾ ಸರಳ ಹಾಗೂ ಮನೆಯಲ್ಲೇ ತಯಾರಿಸಬಹುದಾದ ಪರಿಣಾಮಕಾರಿ ಮಾಸ್ಕ್ ಬಗ್ಗೆ ತಿಳಿಸಿಕೊಡಲಿದೆ. ಈ ಮಾಸ್ಕ್ ಗಳಿಂದ ವಯಸ್ಸಾಗುವ ಚಿಹ್ನಗಳು ದೂರವಾಗಿ ಯೌವನಭರಿತ ಚರ್ಮ ಪಡೆಯಬಹುದು. ಇದನ್ನು ಪ್ರಯತ್ನಿಸಿ ನೋಡಿ.... ಸೂಚನೆ: ಚಾಕಲೇಟ್ ಅನ್ನು ಮುಖಕ್ಕೆ ಹಚ್ಚಿಕೊಳ್ಳುವ ಮೊದಲು ದೇಹದ ಬೇರೆ ಭಾಗಕ್ಕೆ ಹಚ್ಚಿ ಅಲರ್ಜಿಯಾಗುವುದೇ ಎಂದು ತಿಳಿದುಕೊಳ್ಳಿ... ಚಾಕಲೇಟ್ ಮತ್ತು ಮ...