Posts

Showing posts from June, 2018

ಸಿಂಪಲ್ ಬ್ಯೂಟಿ ಟಿಪ್ಸ್: ಮೇಕಪ್ ಇಲ್ಲದೇ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಿ!

Image
ಮೇಕಪ್ ಮಾಡಿಕೊಂಡ ಬಳಿಕ ಎಂತವರು ಕೂಡ ತುಂಬಾ ಸುಂದರವಾಗಿ ಕಾಣುವರು. ಮೇಕಪ್ ಇಲ್ಲದೆ ಇದ್ದರೆ ಕೆಲವರ ಮುಖ ನೋಡಲು ಸಾಧ್ಯವಾಗದಂತೆ ಇರುವುದು. ಮೇಕಪ್ ಎಲ್ಲವನ್ನು ಮುಚ್ಚಿ ಅವರಿಗೆ ಸೌಂದರ್ಯ ನೀಡುವುದು. ಪ್ರತಿ ಮಹಿಳೆ ಕೂಡ ಬಯಸುವುದು ಸೌಂದರ್ಯವನ್ನು. ತಾನು ಸೌಂದರ್ಯವತಿಯಾಗಿ ಕಾಣಬೇಕೆಂದು ಆಕೆ ಬಯಸುವಳು. ಆದರೆ ಮೇಕಪ್ ಇಲ್ಲದೆಯೂ ನೀವು ಸುಂದರವಾಗಿ ಕಾಣುವುದು ಹೇಗೆ ಎಂದು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.  ಅನುವಂಶೀಯತೆ, ಹಾರ್ಮೋನು ಅಸಮತೋಲನ ಮತ್ತು ಕಲುಷಿತ ವಾತಾವರಣವು ಹಾನಿಯಾದ ಮತ್ತು ನಿಸ್ತೇಜ ಚರ್ಮಕ್ಕೆ ಕಾರಣವಾಗಿರುವುದು. ನಾವು ಮಾಡುವಂತಹ ಕೆಲವೊಂದು ತಪ್ಪುಗಳಿಂದಾಗಿ ನಮ್ಮ ಚರ್ಮದ ಕಾಂತಿಯು ನಿಸ್ತೇಜವಾಗುತ್ತದೆ ಎಂದು ನಾವು ತಿಳಿದಿಲ್ಲ. ಇದಕ್ಕಾಗಿ ನಾವು ಹಲವಾರು ರೀತಿಯ ಉತ್ಪನ್ನಗಳನ್ನು ಬಳಸಿದರೂ ಅದರಿಂದ ಯಾವುದೇ ರೀತಿಯ ಲಾಭವಾಗದು. ಮನೆಯಲ್ಲೇ ತಯಾರಿಸಬಹುದಾದ ಕೆಲವೊಂದು ಪ್ಯಾಕ್ ಮತ್ತು ಸ್ಕ್ರಬ್ ಗಳಿಂದ ನಿಮ್ಮ ಚರ್ಮದ ಕಾಂತಿ ಹೆಚ್ಚಿಸಿ. ಟೊಮೆಟೊ ಫೇಸ್ ಪ್ಯಾಕ್  ಬೇಕಾಗುವ ಸಾಮಗ್ರಿಗಳು  1 ಟೊಮೆಟೋ  1 ಚಮಚ ಸಕ್ಕರೆ   ವಿಧಾನ  ಮೊದಲಿಗೆ ಟೊಮೆಟೋವನ್ನು ಸಣ್ಣಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಂಡು ಹಿಚುಕಿಕೊಂಡು ಪೇಸ್ಟ್ ಮಾಡಿ. ಇದಕ್ಕೆ ಒಂದು ಚಮಚ ಸಕ್ಕರೆ ಸೇರಿಸಿಕೊಳ್ಳಿ ಮತ್ತು ಎರಡನ್ನು ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆಗ...

ಕೇವಲ 2 ಪದಾರ್ಥಗಳನ್ನು ಬಳಸಿ ಹೊಳೆಯುವ ಚರ್ಮವನ್ನು ಪಡೆಯುವುದು ಹೇಗೆ!?

Image
ಹಲವರ ಸೌಂದರ್ಯ ಸಮಸ್ಯೆ ಆರಂಭವಾಗುವುದೇ ಚರ್ಮದ ಬಣ್ಣ ಕಪ್ಪಾಗಿರುವುದರಿಂದ. ನಿಮ್ಮ ಚರ್ಮದ ಬಣ್ಣ ಕುಂಠಿತವಾಗಲು ಹಲವು ಕಾರಣಗಳಿವೆ. ನಿಮ್ಮ ಚರ್ಮವನ್ನು ಉತ್ತಮವಾಗಿ ಆರೈಕೆ ಮಾಡದಿದ್ದರೆ ಚರ್ಮದ ನೈಸರ್ಗಿಕವಾದ ಹೊಳಪು ಮತ್ತು ಮೃದುತ್ವ ಕಡಿಮೆಯಾಗುತ್ತದೆ. ಸೂರ್ಯನ ಕಿರಣಗಳಿಗೆ ಅತಿಯಾಗಿ ತೆರೆದುಕೊಂಡರೆ ನಿಮ್ಮ ಚರ್ಮದ ಬಣ್ಣ ಕಪ್ಪಾಗುತ್ತದೆ ಮತ್ತು ಚರ್ಮವನ್ನು ಒಣಗಿಸುತ್ತದೆ. ಅದಲ್ಲದೆ, ಚರ್ಮದ ಹೊಳಪಿಗಾಗಿ ನೀವು ಬಳಸುವ ಔಷಧಗಳಲ್ಲಿನ ರಾಸಾಯನಿಕ ಪದಾರ್ಥಗಳೂ ಸಹ ನಿಮ್ಮ ಚರ್ಮದ ಆರೋಗ್ಯಕ್ಕೆ ಹಾನಿಯನ್ನುಂಟುಮಾಡಬಹುದು. ನೀವು ಈ ಸಮಸ್ಯೆಯಿಂದ ಬಳಲುತ್ತಿದ್ದೆ ಯೋಚಿಸಬೇಕಾದ ಅಗತ್ಯವಿಲ್ಲ. ಕೇವಲ ಎರಡೇ ಪದಾರ್ಥಗಳನ್ನು ಬಳಸಿ ಹೊಳೆಯುವ ಸುಂದರವಾದ ಚರ್ಮವನ್ನು ನಿಮ್ಮದಾಗಿಸಿಕೊಳ್ಳಬಹುದು. ನಿಮ್ಮ ಚರ್ಮದ ಸೌಂದರ್ಯವನ್ನು ಕಾಪಾಡಲು ನಿಮಗೆ ಬೇಕಾಗುವ ಸಾಮಗ್ರಿಗಳು, * ಕಲ್ಲುಪ್ಪು * ಹಸಿ ಹಾಲು ಹೌದು, ಕೇವಲ ಈ ಎರಡು ವಸ್ತುಗಳಿಂದ ನೀವು ಹೊಳೆಯುವ ಸುಂದರ ಚರ್ಮವನ್ನು ನಿಮ್ಮದಾಗಿಸಿಕೊಳ್ಳಬಹುದು. ಮೊದಲು ನಿಮ್ಮ ಮುಖವನ್ನು ಹಸಿ ಹಾಲನ್ನು ಬಳಸಿ ಚೆನ್ನಾಗಿ ಮಸಾಜ್ ಮಾಡಿ. ನಂತರ ಸ್ವಲ್ಪ ಕಲ್ಲುಪ್ಪನ್ನು ತೆಗೆದುಕೊಂಡು ಮೇಲ್ಮುಖವಾಗಿ 1 ನಿಮಿಷ ಮಸಾಜ್ ಮಾಡಿ. ಅದನ್ನು 5 ರಿಂದ 10 ನಿಮಿಷ ಹಾಗೆಯೇ ಬಿಡಿ. ನಂತರ ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆದರೆ ಹೊಳೆಯುವ ಚರ್ಮ ನಿಮ್ಮದಾಗುತ್ತದೆ. ನೀವು ಈ ವಿಧಾನವನ್ನು ಕಾಲು ಮತ್ತು ಕೈಗಳಿಗೂ ಸಹ ಬಳಸಬಹುದಾಗಿದೆ....

ನೈಸರ್ಗಿಕ ಹೇರ್ ಪ್ಯಾಕ್-ಕೂದಲಿಗೆ ಯಾವುದೇ ಸಮಸ್ಯೆ ಬರಲ್ಲ...

Image
ಇಂದಿನ ದಿನಗಳಲ್ಲಿ ಕೂದಲು ಉದುರುವುದು, ಕೂದಲು ತೆಳ್ಳಗೆ ಆಗುವುದು ಮತ್ತು ತಲೆ ಬುರುಡೆಯಲ್ಲಿ ತಲೆಹೊಟ್ಟು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇಂತಹ ಸಮಸ್ಯೆಗಳು ನಮ್ಮ ಸಂಪೂರ್ಣ ತಲೆಯನ್ನೇ ಹಾಳುಗೆಡವುತ್ತದೆ. ಒತ್ತಡ, ಸರಿಯಾಗಿಲ್ಲದ ಜೀವನಶೈಲಿ, ಅನಾರೋಗ್ಯಕರ ಆಹಾರ, ನೀರು ಮತ್ತು ಕೂದಲಿನ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳದೆ ಇರುವುದು ಕೂದಲಿನ ಸಮಸ್ಯೆಗಳಿಗೆ ಕಾರಣವಾಗಿದೆ.  ಸಂಪೂರ್ಣವಾಗಿ ನೀವು ಬೋಳು ತಲೆಯವರು ಆಗುವ ಮೊದಲು ಇದಕ್ಕೆ ನೈಸರ್ಗಿಕವಾದ ಕೆಲವೊಂದು ಔಷಧಿಗಳನ್ನು ಬಳಸಿಕೊಂಡು ಕೂದಲಿನ ಆರೈಕೆ ಮಾಡಬಹುದು.... ಚಿಂತಿಸದಿರಿ ಇವೆಲ್ಲಾ ಸಮಸ್ಯೆಗೆ ಮನೆಯಲ್ಲೇ ತಯಾರಿಸಿದ ಕೂದಲಿನ ಪ್ಯಾಕ್‌ನ್ನು ಬೋಲ್ಡ್ ಸ್ಕೈ ನಿಮ್ಮೊಂದಿಗೆ ಹಂಚಿಕೊಳ್ಳಲಿದೆ. ಈ ಕೂದಲಿನ ಪ್ಯಾಕ್‌ಗೆ ಬಳಸುವ ಕೆಲವೊಂದು ಸಾಮಗ್ರಿಗಳು ತುಂಬಾ ಪ್ರಯೋಜನಕಾರಿ. ಇದು ಕೂದಲಿನ ಆರೈಕೆ ಮಾಡುವುದರೊಂದಿಗೆ ಕೂದಲು ದಷ್ಟಪುಷ್ಟವಾಗಿ ಬೆಳೆಯಲು ನೆರವಾಗುವುದು.... ಪಪ್ಪಾಯಿ+ಮೊಸರು ಬೆರೆಸಿ ಮಾಡಿದ ಹೇರ್ ಪ್ಯಾಕ್  ಒಂದು ಚೆನ್ನಾಗಿ ಹಣ್ಣಾದ ಪಪ್ಪಾಯಿ ಹಣ್ಣನ್ನು ರಬ್ಬಿಕೊಂಡು, ಅದಕ್ಕೆ ಒಂದು ಕಪ್ ಮೊಸರು ಸೇರಿಸಿಕೊಂಡು, ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ನಿಮ್ಮ ಕೂದಲು ಮತ್ತು ಅದರ ಬುಡಕ್ಕೆ ಚೆನ್ನಾಗಿ ಲೇಪಿಸಿ. 30 ನಿಮಿಷ ಬಿಟ್ಟು, ನಂತರ ಇದನ್ನು ತೊಳೆಯಿರಿ. ಇದು ಒಡೆದ ಮತ್ತು ಹಾಳಾದ ಕೂದಲಿಗೆ ಅತ್ಯಂತ ಪರಿಣಾಮಕಾರಿಯಾದ ಮನೆ ಮದ್ದಾಗಿ...

ಕಂಕುಳಿನ ಮೊಡವೆಗಳಿಗೆ ಇಲ್ಲಿದೆ ನೋಡಿ ಸರಳ ಮನೆಮದ್ದುಗಳು

Image
ಮೊಡವೆ ಹಾಗೂ ಬೊಕ್ಕೆಗಳು ಮುಖ ಮಾತ್ರವಲ್ಲದೆ ದೇಹದ ಇತರ ಭಾಗಗಳಲ್ಲಿಯೂ ಮೂಡುವುದು. ಈ ಸಮಸ್ಯೆಯು ನಮಗೆ ತುಂಬಾ ಕಿರಿಕಿರಿ ಹಾಗೂ ಹೇಸಿಗೆ ಹುಟ್ಟಿಸುವುದು. ಅದರಲ್ಲೂ ಸ್ಲೀವ್ ಲೆಸ್ ಬಟ್ಟೆ ಧರಿಸುವಂತಹ ಮಹಿಳೆಯರಿಗೆ ಇದು ದೊಡ್ಡ ಸಮಸ್ಯೆ. ಹೀಗೆ ಇದ್ದರೆ ಸ್ಲೀವ್ ಲೆಸ್ ಬಟ್ಟೆ ಧರಿಸಿಕೊಂಡು ಹೋಗಿ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗುವಂತಿಲ್ಲ. ನಾಲ್ಕು ಜನರ ಮುಂದೆ ಸ್ಲೀವ್ ಲೆಸ್ ಬಟ್ಟೆ ಧರಿಸದಂತೆ ಆಗುವುದು. ದುಗ್ದರಸ ಗ್ರಂಥಿಗಳು ಹಿಗ್ಗಿಕೊಂಡಾಗ ಇಂತಹ ಸಮಸ್ಯೆಯು ಕಂಡುಬರುವುದು. ಕಂಕುಳಿನಡಿಯಲ್ಲಿ ಮೂಡುವ ಬೊಕ್ಕೆಗಳಿಂದಾಗಿ ಕಿರಿಕಿರಿ ಉಂಟಾಗುವುದು.  ಕ್ಷೌರ, ಸೋಂಕು, ಕೋಶದ ರಚನೆಯಿಂದಾಗಿ ಇಂತಹ ಸಮಸ್ಯೆಯು ಬರುವುದು. ಇದನ್ನು ಬೇಗನೆ ಪತ್ತೆ ಮಾಡಬಹುದು. ಯಾಕೆಂದರೆ ಅವುಗಳು ಗುಲಾಬಿ ಬಣ್ಣದಲ್ಲಿರುವುದು. ಹೆಚ್ಚಾಗಿ ಇಂತಹ ಬೊಕ್ಕೆಗಳು ಸೋಂಕಿನಿಂದ ನಿರ್ಮಾಣವಾಗಿರುವುದು ಮತ್ತು ಅದು ಮಾಯವಾಗುವ ತನಕ ನೋವುಂಟು ಮಾಡುವುದು. ಕೆಲವೊಂದು ಸ್ವಚ್ಛತೆಯ ಕ್ರಮಗಳೊಂದಿಗೆ ಮನೆಮದ್ದುಗಳನ್ನು ಬಳಸಿಕೊಂಡರೆ ಇದನ್ನು ನಿವಾರಣೆ ಮಾಡಬಹುದು. ಸ್ವಲ್ಪವೂ ನೋವಿಲ್ಲದೆ ಅಥವಾ ತುಂಬಾ ಕಡಿಮೆ ನೋವಿನಲ್ಲಿ ಬೊಕ್ಕೆ ದಿನದಿಂದ ದಿನಕ್ಕೆ ದೊಡ್ಡದಾಗುತ್ತಾ ಇದ್ದರೆ ಆಗ ನೀವು ವೈದ್ಯರ ಬಳಿಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಈ ಲೇಖನದಲ್ಲಿ ಮನೆಯಲ್ಲೇ ಇದ್ದುಕೊಂಡು ನೀವು ಕಂಕುಳಿನ ಮೊಡವೆ ಅಥವಾ ಬೊಕ್ಕೆ ಹೇಗೆ ನಿವಾರಣೆ ಮಾಡಬಹುದು ಎಂದು ತಿಳಿಸಿಕೊಡಲಿದ್ದೇವೆ...

ಕೂದಲುದುರುವ ಸಮಸ್ಯೆಯೇ? ಹಾಗಾದರೆ ಸರಿಯಾಗಿ ಹರಳೆಣ್ಣೆ ಹಚ್ಚಿ...

Image
ಹರಳೆಣ್ಣೆ ಭಾರತದಲ್ಲಿ ಸಾವಿರಾರು ವರ್ಷಗಳಿಂದ ವಿವಿಧ ರೂಪದಲ್ಲಿ ಬಳಕೆಯಲ್ಲಿದೆ. Ricinus communis ಎಂಬ ವೈಜ್ಞಾನಿಕ ಹೆಸರಿನ ಸಸ್ಯದ ಬೀಜಗಳನ್ನು ಒಣಗಿಸಿ ಹಿಂಡಿ ತೆಗೆಯಲಾದ ಈ ಎಣ್ಣೆ ಅತಿ ಸ್ನಿಗ್ಧವಾಗಿದ್ದು ಕೀಲೆಣ್ಣೆ, ದೀಪ, ಆರೋಗ್ಯವರ್ಧಕ ಹಾಗೂ ಸೌಂದರ್ಯವರ್ಧಕ ರೂಪದಲ್ಲಿ ಬಳಸಲಾಗುತ್ತಾ ಬರಲಾಗಿದೆ. ಸೌಂದರ್ಯವರ್ಧಕವಾಗಿ ಮೊಡವೆಗಳನ್ನು ನಿವಾರಿಸಲು, ಕೂದಲು ಉದುರುವುದನ್ನು ತಡೆಯಲು, ಚರ್ಮದ ಉರಿಯನ್ನು ತಗ್ಗಿಸಲು ಮೊದಲಾದವುಗಳಿಗೆ ಬಳಸಲಾಗುತ್ತದೆ. ಹರಳೆಣ್ಣೆಯಲ್ಲಿಲ್ ವಿಟಮಿನ್ ಇ, ವಿವಿಧ ಖನಿಜಗಳು, ಒಮೆಗಾ 6 ಮತ್ತು 9 ಕೊಬ್ಬಿನ ಎಣ್ಣೆಗಳು, ಪ್ರೋಟೀನುಗಳು ಮೊದಲಾದವುಗಳು ಕೂದಲ ಬೆಳವಣಿಗೆಗೆ ನೆರವಾಗುತ್ತವೆ. ಅಷ್ಟೇ ಅಲ್ಲ, ನೆತ್ತಿಯಲ್ಲಿ ಎದುರಾಗುವ ಕೂದಲ ಹೊಟ್ಟನ್ನು ನಿವಾರಿಸಲು, ತಲೆಯ ಚರ್ಮದಲ್ಲಿ ಎದುರಾಗಿದ್ದ ಸೋಂಕು ನಿವಾರಿಸಲು ಹಾಗೂ ತ್ವಚೆಯಲ್ಲಿ ನೈಸರ್ಗಿಕ ತೈಲಗಳನ್ನು ಹೆಚ್ಚಿಸಲು ಹಾಗೂ ಇದಕ್ಕೂ ಮುನ್ನ ಉಪಯೋಗಿಸಿದ್ದ ಹಾನಿಕಾರಕ ರಾಸಾಯನಿಕಗಳಿಂದ ಘಾಸಿಗೊಂಡಿದ್ದ ಕೂದಲಿಗೆ ಮರುಚೈತನ್ಯ ನೀಡಲೂ ನೆರವಾಗುತ್ತದೆ.   ಕೂದಲ ಉದ್ದವನ್ನು ಹೆಚ್ಚಿಸುತ್ತವೆ ಎಂದು ಭರ್ಜರಿ ಪ್ರಚಾರ ಮಾಡುವ ಹಲವು ಉತ್ಪನ್ನಗಳನ್ನು ದುಬಾರಿ ಬೆಲೆ ಕೊಟ್ಟು ಉಪಯೋಗಿಸಿದಾಗ ಯಾವುದೋ ಪ್ರಚೋದನೆಯಿಂದ ಬಲವಂತವಾಗಿ ಕೂದಲು ಉದ್ದವಾದರೂ, ಇದರ ರಾಸಾಯನಿಕಗಳು ಕೂದಲು ಉದುರುವುದನ್ನು ತಡೆಯಲಾರವು.  ಹರಳೆಣ್ಣೆ ಬೋಳು ತಲೆಯಲ್ಲಿ ಕೂದಲು ಮೂಡಿಸ...

ಮುಖದ ಸೌಂದರ್ಯ ಹೆಚ್ಚಿಸಲು ಆಲೂಗಡ್ಡೆ ಮತ್ತು ಅರಿಶಿನದ ಫೇಸ್ ಮಾಸ್ಕ್..

Image
ಬಿಳಿಯಾದ ಮತ್ತು ಹೊಳೆಯವ ಚರ್ಮ ಬೇಕು ಎನ್ನುವುದು ಬಹುಶ್ಯ ಪ್ರತಿಯೊಬ್ಬರ ಕನಸೂ ಆಗಿರುತ್ತದೆ. ಆದರೆ, ಅದರಲ್ಲಿ ಕೆಲವರು ಮಾತ್ರ ಹೊಳೆಯುವ ಮತ್ತು ತಾಜಾವಾಗಿರುವ ಚರ್ಮವನ್ನು ನೈಸರ್ಗಿಕವಾಗಿ ಪಡೆಯಲು ಯಶಸ್ವಿ ಆಗುತ್ತಾರೆ. ಅದೆಷ್ಟೋ ಮಹಿಳೆಯರು ಈಗಾಗಲೇ ಹಲವು ರೀತಿಯ ಬ್ಯೂಟಿ ಪ್ರೊಡಕ್ಟ್ ಗಳನ್ನು ಇದಕ್ಕಾಗಿ ಬಳಸಿ, ಸೋತಿದ್ದಾರೆ. ಯಾಕೆಂದರೆ ಅದರಿಂದ ಹಲವು ಅಡ್ಡ ಪರಿಣಾಮಗಳು ಆಗುವ ಸಾಧ್ಯತೆಗಳಿರುತ್ತೆ. ಅಷ್ಟೇ ಅಲ್ಲದೆ ದುಬಾರಿಯೂ ಆಗಬಹುದು. ಪದೇ ಪದೇ ಬಳಸಿದರೆ ಖಂಡಿತ ಇದು ನಿಮಗೆ ಉತ್ತಮ ಪರಿಹಾರವನ್ನು ನೀಡುವುದಿಲ್ಲ.  ಹಾಗಾಗಿ ಈಗ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ನೈಸರ್ಗಿಕ ಬ್ಯೂಟಿ ಪ್ರೊಡಕ್ಟ್ ಗಳನ್ನು ತಮ್ಮ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಬಳಸಲು ಇಚ್ಛಿಸುತ್ತಿದ್ದಾರೆ. ಕಳೆಗುಂದಿದ ಮತ್ತು ಕಪ್ಪು ವರ್ಣಕ್ಕೆ ತಿರುಗಿದ ಚರ್ಮದ ಕಾಂತಿ ಹೆಚ್ಚಿಸಲು ಆಲೂಗಡ್ಡೆ ಒಂದು ಅತ್ಯತ್ತಮ ಮನೆ ಔಷಧಿಯಾಗಬಲ್ಲದು. ಇದನ್ನು ಬಳಸುವುದರಿಂದಾಗಿ ಚರ್ಮದ ಟೆಕ್ಚರ್ ಬದಲಾಗುತ್ತೆ ಮತ್ತು ನೆರಿಗೆಗಳನ್ನು ನಿಮ್ಮ ಚರ್ಮದಿಂದ ದೂರ ಓಡಿಸುವ ತಾಕತ್ತು ಇದಕ್ಕಿದೆ ಅಷ್ಟೇ ಅಲ್ಲ ಕಪ್ಪು ಚುಕ್ಕೆಗಳು, ಮೊಡವೆ ಸಮಸ್ಯೆಗಳಿಗೂ ಇದು ಉತ್ತಮವಾಗಿ ವರ್ತಿಸುತ್ತೆಯ ಇಲ್ಲಿ ಆಲೂಗಡ್ಡೆ ಮತ್ತು ಅರಿಶಿನ ಬಳಸಿ ತಯಾರಿಸುವ ಕೆಲವು ಪರಿಣಾಮಕಾರಿ ಮಾಸ್ಕ್ ಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇದನ್ನು ಓದಿ. ನೀವೂ ಪ್ರಯತ್ನಿಸಿ ನೋಡಿ.. 1. ಬಿಳಿಯ ತ್ವಚೆ ಪಡೆಯಲು ಆಲೂಗಡ್...

ಕೂದಲಿನ ಹಲವು ರೋಗಗಳಿಗೆ ರಾಮಬಾಣ 'ಕರಿಬೇವು'

Image
ದಕ್ಷಿಣ ಭಾರತೀಯರು ಚಟ್ನಿ, ಸಾಂಬಾರು ಮತ್ತು ಇತರ ಪದಾರ್ಥಗಳಿಗೆ ಒಗ್ಗರಣೆ ಹಾಕುವಾಗ ತಪ್ಪದೇ ಬಳಸುವಂತಹ ಸಾಮಗ್ರಿಯೇ ಕರಿಬೇವಿನ ಎಲೆಗಳು. ಇದು ಆಹಾರಕ್ಕೆ ರುಚಿ ಹಾಗೂ ಸುವಾಸನೆ ನೀಡುವುದು ಮಾತ್ರವಲ್ಲದೆ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಅನಾದಿ ಕಾಲದಿಂದ ನಮ್ಮ ಹಿರಿಯರು ಇದನ್ನು ಬಳಸಿಕೊಂಡು ಬರುತ್ತಿದ್ದು, ಇದರಲ್ಲಿರುವಂತಹ ಆರೋಗ್ಯ ಗುಣಗಳನ್ನು ಅವರು ಗುರುತಿಸಿಕೊಂಡು ತಮ್ಮ ದೈನಂದಿನ ಆಹಾರ ಕ್ರಮದಲ್ಲಿ ಬಳಸಿಕೊಳ್ಳುತ್ತಿದ್ದರು. ಇದನ್ನು ಆರೋಗ್ಯ ಮತ್ತು ಸೌಂದರ್ಯವರ್ಧಕವಾಗಿಯೂ ಬಳಸಿಕೊಳ್ಳಲಾಗುತ್ತಿತ್ತು. ಇದು ಸಣ್ಣ ಕರುಳಿಗೆ ಕ್ಯಾನ್ಸರ್ ಬರದಂತೆ ತಡೆಯುವುದು.  ಕರಿಬೇವನ್ನು ಕೆಲವೊಂದು ರೀತಿಯ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಕೂಡ ಬಳಸಲು ಆರಂಭಿಸಿದ್ದಾರೆ. ಇದನ್ನು ಕೂದಲಿನ ಎಣ್ಣೆ, ಕೂದಲಿನ ಮಾಸ್ಕ್ ಇತ್ಯಾದಿಗಳಲ್ಲಿ ಬಳಸುವರು. ತಲೆಹೊಟ್ಟು, ಎಣ್ಣೆಯುಕ್ತ ತಲೆಬುರುಡೆ, ತುರಿಕೆ ಇತ್ಯಾದಿ ತಲೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡುವುದು. ಆರೋಗ್ಯಕರ ಕೂದಲನ್ನು ಪಡೆಯಲು ಕರಿಬೇವು ನಮಗೆ ಹೇಗೆ ನೆರವಾಗುವುದು ಎಂದು ತಿಳಿಯುವ. ಆರೋಗ್ಯಕರ ಕೂದಲಿಗೆ ಕರಿಬೇವಿನ ಎಣ್ಣೆ ಬಳಸುವುದು ಹೇಗೆ ಎಂದು ನೀವು ಇಲ್ಲಿ ತಿಳಿಯಿರಿ. ಕೂದಲಿಗೆ ಕರಿಬೇವಿನ ಲಾಭಗಳು ಯಾವುದು?  •ಕರಿಬೇವಿನಲ್ಲಿ ಉನ್ನತ ಮಟ್ಟ ಆ್ಯಂಟಿಆಕ್ಸಿಡೆಂಟ್ ಗಳು ಇವೆ. ಇದು ತಲೆಬುರುಡೆಗೆ ಮೊಶ್ಚಿರೈಸ್ ಮಾಡುವುದು. ಇದರಿಂದ ಸತ್ತ ಚರ್ಮದ ಕೋಶಗಳು ತೆಗೆಯುವುದ...