ನೈಸರ್ಗಿಕ ಹೇರ್ ಪ್ಯಾಕ್-ಕೂದಲಿಗೆ ಯಾವುದೇ ಸಮಸ್ಯೆ ಬರಲ್ಲ...
ಇಂದಿನ ದಿನಗಳಲ್ಲಿ ಕೂದಲು ಉದುರುವುದು, ಕೂದಲು ತೆಳ್ಳಗೆ ಆಗುವುದು ಮತ್ತು ತಲೆ ಬುರುಡೆಯಲ್ಲಿ ತಲೆಹೊಟ್ಟು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇಂತಹ ಸಮಸ್ಯೆಗಳು ನಮ್ಮ ಸಂಪೂರ್ಣ ತಲೆಯನ್ನೇ ಹಾಳುಗೆಡವುತ್ತದೆ. ಒತ್ತಡ, ಸರಿಯಾಗಿಲ್ಲದ ಜೀವನಶೈಲಿ, ಅನಾರೋಗ್ಯಕರ ಆಹಾರ, ನೀರು ಮತ್ತು ಕೂದಲಿನ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳದೆ ಇರುವುದು ಕೂದಲಿನ ಸಮಸ್ಯೆಗಳಿಗೆ ಕಾರಣವಾಗಿದೆ.
ಸಂಪೂರ್ಣವಾಗಿ ನೀವು ಬೋಳು ತಲೆಯವರು ಆಗುವ ಮೊದಲು ಇದಕ್ಕೆ ನೈಸರ್ಗಿಕವಾದ ಕೆಲವೊಂದು ಔಷಧಿಗಳನ್ನು ಬಳಸಿಕೊಂಡು ಕೂದಲಿನ ಆರೈಕೆ ಮಾಡಬಹುದು.... ಚಿಂತಿಸದಿರಿ ಇವೆಲ್ಲಾ ಸಮಸ್ಯೆಗೆ ಮನೆಯಲ್ಲೇ ತಯಾರಿಸಿದ ಕೂದಲಿನ ಪ್ಯಾಕ್‌ನ್ನು ಬೋಲ್ಡ್ ಸ್ಕೈ ನಿಮ್ಮೊಂದಿಗೆ ಹಂಚಿಕೊಳ್ಳಲಿದೆ. ಈ ಕೂದಲಿನ ಪ್ಯಾಕ್‌ಗೆ ಬಳಸುವ ಕೆಲವೊಂದು ಸಾಮಗ್ರಿಗಳು ತುಂಬಾ ಪ್ರಯೋಜನಕಾರಿ. ಇದು ಕೂದಲಿನ ಆರೈಕೆ ಮಾಡುವುದರೊಂದಿಗೆ ಕೂದಲು ದಷ್ಟಪುಷ್ಟವಾಗಿ ಬೆಳೆಯಲು ನೆರವಾಗುವುದು....
*ದಾಲ್ಚಿನ್ನಿ ಪುಡಿ- 2 ಟೀಚಮಚ
ತಯಾರಿಸುವ ಮತ್ತು ಬಳಸುವ ವಿಧಾನ
•ಮೇಲೆ ಹೇಳಿದಷ್ಟು ಪ್ರಮಾಣದ ಸಾಮಗ್ರಿಗಳನ್ನು ಒಂದು ಸಣ್ಣ ಬೌಲ್‌ಗೆ ಹಾಕಿಕೊಂಡು ಮಿಶ್ರಣ ಮಾಡಿ.
•ಈ ಮಿಶ್ರಣವನ್ನು ಸರಿಯಾಗಿ ಕಲಸಿಕೊಳ್ಳಿ.
•ಇನ್ನು ಇದನ್ನು ಕೂದಲಿಗೆ ಸರಿಯಾಗಿ ಹಚ್ಚಿಕೊಳ್ಳಿ. ಅದರಲ್ಲೂ ತಲೆಬುರುಡೆಗೆ ಹೆಚ್ಚು ಹಚ್ಚಿಕೊಳ್ಳಿ.
•ಕೆಲವು ನಿಮಿಷಗಳ ಕಾಲ ತಲೆಗೆ ಮಸಾಜ್ ಮಾಡಿಕೊಳ್ಳಿ.
•25 ನಿಮಿಷಗಳ ಕಾಲ ಕೂದಲನ್ನು ಹಾಗೆ ಬಿಡಿ.
•ನಂತರ ಕೂದಲನ್ನು ಉಗುರುಬೆಚ್ಚಗಿನ ನೀರು ಹಾಗೂ ಶಾಂಪೂನಿಂದ ತೊಳೆಯಿರಿ, ಉತ್ತಮ ಫಲಿತಾಂಶಕ್ಕಾಗಿ ದಿನದಲ್ಲಿ ಎರಡು ಮೂರು ಬಾರಿ ಮಾಡಿ......

ಪಪ್ಪಾಯಿ+ಮೊಸರು ಬೆರೆಸಿ ಮಾಡಿದ ಹೇರ್ ಪ್ಯಾಕ್
ಒಂದು ಚೆನ್ನಾಗಿ ಹಣ್ಣಾದ ಪಪ್ಪಾಯಿ ಹಣ್ಣನ್ನು ರಬ್ಬಿಕೊಂಡು, ಅದಕ್ಕೆ ಒಂದು ಕಪ್ ಮೊಸರು ಸೇರಿಸಿಕೊಂಡು, ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ನಿಮ್ಮ ಕೂದಲು ಮತ್ತು ಅದರ ಬುಡಕ್ಕೆ ಚೆನ್ನಾಗಿ ಲೇಪಿಸಿ. 30 ನಿಮಿಷ ಬಿಟ್ಟು, ನಂತರ ಇದನ್ನು ತೊಳೆಯಿರಿ. ಇದು ಒಡೆದ ಮತ್ತು ಹಾಳಾದ ಕೂದಲಿಗೆ ಅತ್ಯಂತ ಪರಿಣಾಮಕಾರಿಯಾದ ಮನೆ ಮದ್ದಾಗಿರುತ್ತದೆ.ಮೊಟ್ಟೆ, ಲಿ೦ಬೆ, ಹಾಗೂ ಆಲಿವ್ ಎಣ್ಣೆ
ಬಟ್ಟಲೊ೦ದರಲ್ಲಿ ಮೊಟ್ಟೆಯೊ೦ದನ್ನು ಒಡೆದು, ಅದಕ್ಕೆ ಅರ್ಧಹೋಳಿನಷ್ಟು ಲಿ೦ಬೆಯ ರಸವನ್ನು ಬೆರೆಸಿರಿ. ಇವೆರಡನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ. ಈಗ ಈ ಮಿಶ್ರಣಕ್ಕೆ ಎರಡು ಟೇಬಲ್ ಚಮಚಗಳಷ್ಟು ಆಲಿವ್ ಎಣ್ಣೆಯನ್ನು ಬೆರೆಸಿ ಪುನ: ಇವೆಲ್ಲವನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ. ಇವೆಲ್ಲವೂ ಪರಸ್ಪರ ಚೆನ್ನಾಗಿ ಬೆರೆತುಕೊ೦ಡ ಬಳಿಕ, ಮಿಶ್ರಣವನ್ನು ಕೇಶರಾಶಿಗೆ ಲೇಪಿಸಿಕೊಳ್ಳಿರಿ.ನೆತ್ತಿಯನ್ನೂ ಹಾಗೂ ಕೂದಲ ಎಳೆಗಳನ್ನೂ ಸಮನಾಗಿ ಆವರಿಸಿಕೊಳ್ಳುವ೦ತೆ ಹಚ್ಚಿಕೊ೦ಡಿರುವುದನ್ನು ಖಚಿತಪಡಿಸಿಕೊಳ್ಳಿರಿ. ಹಚ್ಚಿಕೊ೦ಡ ಬಳಿಕ ಅರ್ಧಘ೦ಟೆಯ ಕಾಲ ಅದನ್ನು ಹಾಗೆಯೇ ಇರಗೊಡಿರಿ. ಬಳಿಕ ತಣ್ಣೀರಿನಿ೦ದ ಕೇಶರಾಶಿಯನ್ನು ತೊಳೆದುಕೊ೦ಡು ತದನ೦ತರ ಶಾ೦ಪೂವಿನಿ೦ದ ತೊಳೆಯಿರಿ.ಸಾಸಿವೆ ಎಣ್ಣೆ+ ದಾಲ್ಚಿನ್ನಿ ಪುಡಿ
*ಸಾಸಿವೆ ಎಣ್ಣೆ- ಎರಡು ಟೇಬಲ್ ಚಮಚ*ದಾಲ್ಚಿನ್ನಿ ಪುಡಿ- 2 ಟೀಚಮಚ
ತಯಾರಿಸುವ ಮತ್ತು ಬಳಸುವ ವಿಧಾನ
•ಮೇಲೆ ಹೇಳಿದಷ್ಟು ಪ್ರಮಾಣದ ಸಾಮಗ್ರಿಗಳನ್ನು ಒಂದು ಸಣ್ಣ ಬೌಲ್‌ಗೆ ಹಾಕಿಕೊಂಡು ಮಿಶ್ರಣ ಮಾಡಿ.
•ಈ ಮಿಶ್ರಣವನ್ನು ಸರಿಯಾಗಿ ಕಲಸಿಕೊಳ್ಳಿ.
•ಇನ್ನು ಇದನ್ನು ಕೂದಲಿಗೆ ಸರಿಯಾಗಿ ಹಚ್ಚಿಕೊಳ್ಳಿ. ಅದರಲ್ಲೂ ತಲೆಬುರುಡೆಗೆ ಹೆಚ್ಚು ಹಚ್ಚಿಕೊಳ್ಳಿ.
•ಕೆಲವು ನಿಮಿಷಗಳ ಕಾಲ ತಲೆಗೆ ಮಸಾಜ್ ಮಾಡಿಕೊಳ್ಳಿ.
•25 ನಿಮಿಷಗಳ ಕಾಲ ಕೂದಲನ್ನು ಹಾಗೆ ಬಿಡಿ.
•ನಂತರ ಕೂದಲನ್ನು ಉಗುರುಬೆಚ್ಚಗಿನ ನೀರು ಹಾಗೂ ಶಾಂಪೂನಿಂದ ತೊಳೆಯಿರಿ, ಉತ್ತಮ ಫಲಿತಾಂಶಕ್ಕಾಗಿ ದಿನದಲ್ಲಿ ಎರಡು ಮೂರು ಬಾರಿ ಮಾಡಿ......

Comments
Post a Comment