Posts

Showing posts from June, 2017

ನೀರಿಗೆ ಈ ಸಾಮಗ್ರಿಗಳನ್ನು ಬೆರೆಸಿ ಸ್ನಾನ ಮಾಡಿ ನೋಡಿ...

Image
ಸ್ನಾನ ಎನ್ನುವುದು ಮೈಮನಗಳಿಗೆ ಮುದ ನೀಡುವ ಕ್ರಿಯೆಯಾಗಿರುತ್ತದೆ. ನಾವಷ್ಟೇ ಅಲ್ಲದೆ ಪ್ರಾಣಿ ಮತ್ತು ಪಕ್ಷಿಗಳೂ ಸಹ ಸ್ನಾನ ಮಾಡುತ್ತವೆ. ನಮ್ಮ ದೇಹ ಸ್ವಚ್ಛಗೊಳಿಸಲು ಮತ್ತು ನಮಗೆ ಇರುವ ಒತ್ತಡದಿಂದ ಮುಕ್ತಿ ಪಡೆಯಲು ಸ್ನಾನ ನಮಗೆ ಸಹಾಯ ಮಾಡುತ್ತದೆ. ರಿಲ್ಯಾಕ್ಸಿಂಗ್ ಬಾತ್ ಅಥವಾ ಸ್ನಾನ ಇತ್ತೀಚೆಗೆ ಜನಪ್ರಿಯಗೊಳ್ಳುತ್ತಿದೆ. ಇದು ಮುಖ್ಯವಾಗಿ ಮಾನಸಿಕ ಒತ್ತಡದಿಂದ ನಿಮ್ಮನ್ನು ಮುಕ್ತಗೊಳಿಸಲು ನೆರವು ನೀಡುತ್ತದೆ. ಜೊತೆಗೆ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುವ ಸ್ನಾನದ ಪ್ರಕಾರಗಳು ಸಹ ಈಗ ಜನಪ್ರಿಯಗೊಳ್ಳುತ್ತಿವೆ. ಒಂದು ವೇಳೆ ನೀವು ಅದ್ಧೂರಿಯಾದ ರಿಲ್ಯಾಕ್ಸಿಂಗ್ ಬಾತ್ ಅನ್ನು ಮಾಡಲು ಇಷ್ಟಪಡುತ್ತಿದ್ದಲ್ಲಿ ಈ ಕೆಳಕಂಡ ವಸ್ತುಗಳನ್ನು ಸ್ನಾನದ ನೀರಿನಲ್ಲಿ ಬೆರೆಸಿಕೊಂಡು ಸ್ನಾನ ಮಾಡಿ. ಬನ್ನಿ ಯಾವ ಯಾವ ಪದಾರ್ಥಗಳನ್ನು ಬೆರೆಸಿಕೊಂಡು ಸ್ನಾನ ಮಾಡಬಹುದು ಎಂಬ ಪಟ್ಟಿಯನ್ನು ನೋಡೋಣ.... ಜೇನು  ಜೇನು ತುಪ್ಪವು ಸೌಂದರ್ಯವರ್ಧಕ ಗುಣಗಳನ್ನು ಒಳಗೊಂಡಿರುತ್ತದೆ. ತ್ವಚೆಯ ಮೇಲೆ ಜೇನು ತುಂಬಾ ಪರಿಣಾಮಗಳನ್ನು ಉಂಟು ಮಾಡುತ್ತದೆ. ತ್ವಚೆಯನ್ನು ಪೋಷಕಾಂಶಗೊಳಿಸುವುದರಿಂದ ಹಿಡಿದು ತುರಿಕೆ ಇತ್ಯಾದಿಗಳನ್ನು ಪರಿಹರಿಸುವವರೆಗೆ ಜೇನು ತುಪ್ಪ ಉಪಯೋಗಕಾರಿಯಾಗಿರುತ್ತದೆ. ಜೇನು ತುಪ್ಪದಲ್ಲಿ ಆಂಟಿಆಕ್ಸಿಡೆಂಟ್‌ಗಳ ಗಣಿಯೇ ಇರುತ್ತದೆ. ಹೀಗಾಗಿ ಜೇನು ತುಪ್ಪವನ್ನು ನಿಮ್ಮ ಸ್ನಾನದ ನೀರಿನಲ್ಲಿ ಬೆರೆಸಿಕೊಳ್ಳುವುದರಿಂದ ತ್ವಚೆಯು ಒಣಗುವಿಕೆಯನ್ನು ...

ಮೊಡವೆಯ ಕಾಟ ನಿಯಂತ್ರಿಸುವ ಕೆಮಿಕಲ್‌ ಫ್ರೀ ಫೇಶಿಯಲ್

Image
ಹದಿಹರೆಯದವರ ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುವುದು ವಯಸ್ಸಿನ ಪ್ರಭಾವದಿಂದ ಎನ್ನಬಹುದು. ಕೆಲವರಲ್ಲಿ ಹದಿಹರೆಯ ದಾಟಿದ ಬಳಿಕವೂ ಮೊಡವೆಗಳು ಕಾಣಿಸಿಕೊಳ್ಳುತ್ತಾ ಇರುತ್ತದೆ. ಇಂತಹವರ ತ್ವಚೆಯು ತುಂಬಾ ಸೂಕ್ಷ್ಮವಾಗಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಮೊಡವೆಗಳು ಇರುವಾಗ ಯಾವುದೇ ಬ್ಯೂಟಿ ಸಲೂನಿಗೆ ಹೋದರೂ ಫೇಶಿಯಲ್ ಮಾಡಿಕೊಳ್ಳಿ, ಮುಖದ ಮೇಲಿನ ಮೊಡವೆಗಳು ಹೋಗುತ್ತದೆ ಎಂದು ಹೇಳುತ್ತಾರೆ. ಪ್ರತಿಯೊಬ್ಬರ ಚರ್ಮವು ಒಂದೇ ರೀತಿಯಾಗಿ ಇರದೆ ಇರುವ ಕಾರಣದಿಂದ ಹಲವಾರು ರೀತಿಯ ಫೇಶಿಯಲ್‌ಗಳು ಮಾರುಕಟ್ಟೆಗೆ ಬಂದಿದೆ. ಆದರೆ ನಮ್ಮ ಚರ್ಮ ಯಾವ ವರ್ಗಕ್ಕೆ ಸೇರಿದ್ದು ಮತ್ತು ಇದಕ್ಕೆ ಯಾವ ಫೇಶಿಯಲ್ ಅಗತ್ಯವೆಂದು ನಮಗೆ ತಿಳಿದಿದ್ದರೆ ಒಳ್ಳೆಯದು. ಒಂದು ವೇಳೆ ನಿಮ್ಮ ಚರ್ಮ ಯಾವ ವರ್ಗಕ್ಕೆ ಸೇರಿದ್ದು ಎಂದು ತಿಳಿಯದೇ ಇದ್ದರೆ ತಜ್ಞರನ್ನು ಭೇಟಿಯಾಗಿ ಅವರಿಂದ ಮಾಹಿತಿ ಪಡೆದು ಯಾವ ರೀತಿಯ ಫೇಶಿಯಲ್ ಬಳಸಬಹುದು ಎಂದು ತಿಳಿಯಬಹುದು. ತ್ವಚೆಯ ಸೌಂದರ್ಯಕ್ಕಾಗಿ ಫೇಶಿಯಲ್ ಮಸಾಜ್‌  ಆದರೆ ಮಾರುಕಟ್ಟೆಯಲ್ಲಿ ಸಿಗುವಂತಹ ಫೇಶಿಯಲ್ ಗಳು ಮೊಡವೆಗಳನ್ನು ನಿವಾರಣೆ ಮಾಡುವಲ್ಲಿ ಶೇಕಡಾ ನೂರರಷ್ಟು ಪರಿಣಾಮಕಾರಿಯಾಗಿ ಇರುವುದಿಲ್ಲ. ನಿಮಗೆ ಬೇಕಾದಂತೆ ಮನೆಯಲ್ಲೇ ಕೆಲವೊಂದು ಫೇಶಿಯಲ್ ನ್ನು ತಯಾರಿಸಿಕೊಂಡು ಬಳಸಬಹುದು. ಇದರಿಂದ ಯಾವುದೇ ಅಡ್ಡಪರಿಣಾಮಗಳು ಇಲ್ಲ. ಮುಖದ ಮೇಲಿನ ಮೊಡವೆಗಳಿಗೆ ಯಾವ ರೀತಿಯ ಫೇಶಿಯಲ್ ಬಳಸಬಹುದು ಎಂದು ಬೋಲ್ಡ್ ಸ್ಕೈ ನಿಮಗೆ ಈ ಲೇಖ...

ಚೆಲುವೆಯ ಅಂದದ ಮುಖಕ್ಕೆ ಜೇನಿನ ಫೇಸ್ ಮಾಸ್ಕ್!

Image
ಜೇನುತುಪ್ಪ ಸೇವಿಸಲು ಎಷ್ಟು ರುಚಿಯೋ ಹಾಗೆಯೇ ಆರೋಗ್ಯಕ್ಕೂ ಅಷ್ಟೇ ಹಿತ. ಜೇನಿಗೆ ಜೇನೇ ಸಾಟಿ ಎಂಬ ಮಾತಿದೆ. ಇದರಿಂದ ಅನೇಕ ರೀತಿಯ ಆರೋಗ್ಯಕ ಲಾಭಗಳುಂಟು. ಇದು ನಮಗೆ ಸುಲಭವಾಗಿ ಸಿಗುವಂತಿದ್ದು, ಒಂದು ರೀತಿಯಲ್ಲಿ ಮಾನವರಿಗೆ ಸಂಜೀವಿನಿಯೇ ಸರಿ. ಇದರಿಂದ ನಮ್ಮ ಚರ್ಮದ ಸಮಸ್ಯೆಗಳನ್ನೂ ಸಹ ಪರಿಣಾಮಕಾರಿಯಾಗಿ ನಿವಾರಿಸಬಹುದು ಎಂಬ ಅಂಶವು ಹೆಚ್ಚಿನವರಿಗೆ ತಿಳಿದಿಲ್ಲ. ಹೌದು ಇದು ಚರ್ಮಕ್ಕೆ ಉತ್ತಮ ಸೌಂದರ್ಯ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಮುಖದ ಕಾಂತಿಗೆ ಪಪ್ಪಾಯ-ಜೇನುತುಪ್ಪದ ಫೇಸ್ ಪ್ಯಾಕ್ ಇದರಲ್ಲಿರುವ ಕೆಲವು ವಿಶಿಷ್ಟ ಗುಣಲಕ್ಷಣದಿಂದ ನಿಮಗೆ ಹೆಚ್ಚು ಉಪಯುಕ್ತವಾಗುತ್ತದೆ. ಚರ್ಮದ ಸಮಸ್ಯೆಯನ್ನು ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ನಿವಾರಿಸುವ ಜೇನಿನ ಫೇಸ್‌ ಪ್ಯಾಕ್ ನಿಜಕ್ಕೂ ಅದ್ಭುತ ಫಲಿತಾಂಶವನ್ನು ನೀಡುತ್ತದೆ. ಈ ಲೇಖನದಲ್ಲಿ ನಿಮಗೆ ಜೇನಿನ ಫೇಸ್ ಪ್ಯಾಕ್‌ಗಳ ಬಳಕೆಯ ಬಗ್ಗೆ ಕೆಲವು ಸಂಗತಿಗಳನ್ನು ನೀಡಲಾಗಿದೆ, ಮುಂದೆ ಓದಿ. ಜೇನುತುಪ್ಪ ಮತ್ತು ಬಾದಾಮಿ ಎಣ್ಣೆಯ ಫೇಸ್ ಪ್ಯಾಕ್  ಒಂದು ಚಮಚ ಬಾದಾಮಿ ಎಣ್ಣೆ ತೆಗೆದುಕೊಂಡರೆ ಎರಡು ಚಮಚ ಜೇನುತುಪ್ಪವನ್ನು ತೆಗೆದುಕೊಳ್ಳಬೇಕು. ಇವೆರಡನ್ನು ಚೆನ್ನಾಗಿ ಮಿಶ್ರಣಗೊಳಿಸಿ ಮುಖಕ್ಕೆ ಹಚ್ಚಬೇಕು. ಸುಮಾರು ಅರ್ಥ ಗಂಟೆಗಳ ಕಾಲ ಮುಖದ ಮೇಲೆ ಆರಲು ಬಿಡಿ. ನಂತರ ತಣ್ಣೀರಿನಲ್ಲಿ ಫೇಸ್ ಪ್ಯಾಕ್ ತೆಗೆಯಿರಿ. ಮುಖದಲ್ಲಿ ಇರುವ ಸೂರ್ಯನ ಕಿರಣದ ಕಪ್ಪು ಕಲೆ ಹೋಗಬೇಕೆಂದರೆ ಈ ಮಿಶ್ರಣಕ್ಕೆ ...

ಮುಖದ ಸೌಂದರ್ಯಕ್ಕೆ 'ಟೊಮೆಟೊ ಹಣ್ಣಿನ' ಫೇಸ್ ಪ್ಯಾಕ್

Image
ನಮ್ಮ ಸುತ್ತಮುತ್ತಲು ಇರುವಂತಹ ಹಣ್ಣು ಹಾಗೂ ತರಕಾರಿಗಳನ್ನು ಬಳಸಿಕೊಂಡು ತ್ವಚೆಯ ಆರೈಕೆ ಮಾಡಬಹುದು ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಈ ರೀತಿ ತ್ವಚೆಯ ಆರೈಕೆ ಮಾಡಿದರೆ ಅದರಿಂದ ಯಾವುದೇ ಅಡ್ಡಪರಿಣಾಮಗಳು ಕೂಡ ನಮಗೆ ಆಗದು. ಆದರೆ ಸಾವಯವ ರೀತಿಯಲ್ಲಿ ಬೆಳೆಸಿದ ಹಣ್ಣು ಹಾಗೂ ತರಕಾರಿಗಳನ್ನು ಬಳಸಿದರೆ ತುಂಬಾ ಒಳ್ಳೆಯದು. ಬೋಲ್ಡ್ ಸ್ಕೈ ಈ ಲೇಖನದಲ್ಲಿ ಹೇಳಲು ಹೊರಟಿರುವುದು ಟೊಮೆಟೊ ಬಗ್ಗೆ. ಟೊಮೆಟೊ ಅತ್ತ ತರಕಾರಿಯೂ ಅಲ್ಲ, ಇತ್ತ ಹಣ್ಣು ಅಲ್ಲ ಎನ್ನುವಂತಹ ವಸ್ತು. ಟೊಮೆಟೊ ಬಳಸಿಕೊಂಡು ಹಲವಾರು ರೀತಿಯ ಅಡುಗೆ ತಯಾರಿಸುತ್ತೇವೆ. ಆದರೆ ಇದೇ ಟೊಮೆಟೊ ಬಳಸಿ ತ್ವಚೆಯ ಆರೈಕೆ ಮಾಡಬಹುದು ಎಂದು ನಿಮಗೆ ತಿಳಿದಿದೆಯಾ? ಹೌದು, ಟೊಮೆಟೊ ಬಳಸಿಕೊಂಡು ತ್ವಚೆಯನ್ನು ಒಳ್ಳೆಯ ರೀತಿಯಿಂದ ಆರೈಕೆ ಮಾಡಬಹುದು. ಇದರಲ್ಲಿರುವ ವಿಟಮಿನ್ ಸಿ, ಆ್ಯಂಟಿ ಆಕ್ಸಿಡೆಂಟ್ ಮತ್ತು ಪ್ರೋಟೀನ್ ಚರ್ಮಕ್ಕೆ ನೆರವು ನೀಡಲಿದೆ. ಮುಖದ ಅಂದಕ್ಕೆ, ಟೊಮೆಟೊ-ಶ್ರೀಗಂಧದ ಫೇಸ್ ಪ್ಯಾಕ್  ಟೊಮೆಟೊದಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಇರುವ ಕಾರಣದಿಂದ, ತ್ವಚೆಯ ಮೇಲಿನ ವಯಸ್ಸಾಗುವ ಲಕ್ಷಣಗಳನ್ನು ಹೋಗಲಾಡಿಸುತ್ತದೆ. ಟೊಮೆಟೊವನ್ನು ಯಾವ ರೀತಿ ತ್ವಚೆಯ ಆರೈಕೆಯಲ್ಲಿ ಬಳಸಿಕೊಳ್ಳಬಹುದು ಎಂದು ಮುಂದಕ್ಕೆ ಓದುತ್ತಾ ತಿಳಿಯಿರಿ... ಟೊಮೆಟೊ ಮತ್ತು ಜೇನುತುಪ್ಪದ ಮಾಸ್ಕ್  ಒಂದು ಟೊಮೆಟೊದ ತಿರುಳು ತೆಗೆದು ಅದಕ್ಕೆ ಎರಡು ಚಮಚ ಜೇನುತುಪ್ಪ, ಒಂದು ಚಮಚ ನಿಂಬೆರಸ ಸ...

ಚಿಂತೆಯಿಲ್ಲದೆ ಈ 'ಫೇಸ್ ಮಾಸ್ಕ್' ಹಚ್ಚಿ, ಖುಷಿ ಖುಷಿಯಾಗಿರಿ!

Image
ತ್ವಚೆಯು ನಮ್ಮ ಸೌಂದರ್ಯಕ್ಕೆ ಕನ್ನಡಿ ಹಿಡಿಯುತ್ತದೆ ಎಂದರೆ ತಪ್ಪಾಗಲಾರದು. ಮುಖದ ಮೇಲಿರುವ ಕಲೆ ಹಾಗೂ ಸುಕ್ಕು ನಮ್ಮ ಆಯಸ್ಸು ಹೆಚ್ಚಾದಂತೆ ತೋರಿಸುತ್ತವೆ. ಸಾಮಾನ್ಯವಾಗಿ 35 ವರ್ಷದ ನಂತರ ಮುಖದ ಚರ್ಮಗಳು ಗಡುಸಾಗಿ, ತೇವಾಂಶ ಕಳೆದುಕೊಳ್ಳುವುದು. ಈ ಬಗೆಯ ಸಮಸ್ಯೆಗೆ ಅನೇಕರು ದುಬಾರಿ ಬೆಲೆಯ ಸೌಂದರ್ಯ ಚಿಕಿತ್ಸೆಗೆ, ವಿಟಮಿನ್ ಮಾತ್ರೆಗಳ ಸೇವನೆಗೆ ಮೊರೆಹೋಗುತ್ತಾರೆ. ಯಾವುದೇ ಅಡ್ಡ ಪರಿಣಾಮ ಬೀರದ ಕೆಲವು ನೈಸರ್ಗಿಕ ಉತ್ಪನ್ನಗಳ ಬಳಕೆಯಿಂದ ಮುಖದ ಮಾಸ್ಕ್‍ಗಳನ್ನು ತಯಾರಿಸಬಹುದು. ಸುಲಭವಾಗಿ ಸಿಗುವ ಈ ಉತ್ಪನ್ನಗಳ ಗಣನೀಯ ಬಳಕೆಯಿಂದ ತ್ವಚೆಯ ಆರೋಗ್ಯವನ್ನು ಕಾಪಾಡಬಹುದು. ಬೆರಳೆಣಿಕೆಯಷ್ಟು ಮಂದಿಯಲ್ಲಿ ಕೆಲವು ಉತ್ಪನ್ನಗಳು ಅಲರ್ಜಿ ಉಂಟು ಮಾಡಬಹುದು. ಮುಖದ ಕಂದು ಕಲೆಗಳನ್ನು ಹೋಗಲಾಡಿಸಬೇಕೆ?  ಅದಕ್ಕಾಗಿ ಮೊದಲು ಮನೆಯಲ್ಲಿ ತಯಾರಿಸಿದ ಮಾಸ್ಕ್ ಮಿಶ್ರಣವನ್ನು ಕೈಮೇಲೆ ಹಚ್ಚಿಕೊಂಡು ಪರೀಕ್ಷಿಸಿಕೊಳ್ಳಬೇಕು. ಯಾವುದೇ ತೊಂದರೆ ಇಲ್ಲ ಎನ್ನುವುದು ಅರಿವಾದ ನಂತರ ಮುಖದ ಮೇಲೆ ಲೇಪಿಸಿಕೊಳ್ಳಬಹುದು. ಈ ಲೇಪನಗಳನ್ನು ಹೇಗೆ ತಯಾರಿಸುವುದು? ಅವುಗಳ ಪರಿಣಾಮ ಮತ್ತು ಉಪಯೋಗಗಳ ಸಂಕ್ಷಿಪ್ತ ವಿವರಣೆ ಇಲ್ಲಿದೆ.... ಅನಾನಸ್, ಮೊಟ್ಟೆ ಮತ್ತು ಜೇನುತುಪ್ಪ  ಈ ಮೂರು ಉತ್ಪನ್ನಗಳಲ್ಲಿ ಅಂಟಿಆಕ್ಸಿಡೆಂಟ್ (ಉತ್ಕರ್ಷಣ ನಿರೋಧಕ) ಶಕ್ತಿ ಸಮೃದ್ಧವಾಗಿದೆ. ಇವುಗಳ ಮಿಶ್ರಣದಿಂದ ಮುಖದ ಮಾಸ್ಕ್ ಹಾಕಿಕೊಂಡರೆ ತ್ವಚೆಯ ಮೇಲಿರುವ ಕಪ್ಪು ಕಲೆ, ಸುಕ್ಕ...

ಮೈ ಕಾಂತಿ ಹೆಚ್ಚಿಸಬೇಕೇ? ಬಾದಾಮಿ ಫೇಸ್ ಮಾಸ್ಕ್ ಪ್ರಯತ್ನಿಸಿ

Image
ಸಾಮಾನ್ಯವಾಗಿ ಅಡುಗೆಯಲ್ಲಿ ಬಾದಾಮಿಯ ಬಳಕೆ ಖಾದ್ಯಗಳ ಸ್ವಾದ ಹಾಗೂ ರುಚಿ ಹೆಚ್ಚಿಸಲು ಬಳಸಲಾಗುತ್ತದೆ. ಸಿಹಿಖಾದ್ಯ, ಬಿರಿಯಾನಿ, ಪಲಾವ್ ಮೊದಲಾದವುಗಳ ರುಚಿಯನ್ನೂ, ನೋಡಲಿಕ್ಕೆ ಚೆನ್ನಾಗಿರುವಂತೆಯೂ ಉಪಯೋಗಿಸಲಾಗುತ್ತದೆ. ಆರೋಗ್ಯಕ್ಕೆ ತುಂಬಾ ಉತ್ತಮವಾಗಿರುವ ಕಾರಣ ಕೆಲವೊಮ್ಮೆ ಹಾಲಿನ ಬದಲಾಗಿಯೂ ಬಳಸಲಾಗುತ್ತದೆ. ನಮಗೆಲ್ಲರಿಗೂ ಗೊತ್ತಿರುವ ಹಾಗೆ ಒಣಫಲಗಳೆಲ್ಲವೂ ಆರೋಗ್ಯಕ್ಕೆ ಉತ್ತಮ. ಅವುಗಳಲ್ಲಿ ಬಾದಾಮಿಯದ್ದು ಅಗ್ರಸ್ಥಾನವಾಗಿದ್ದು ಇದರ ಪೋಷಕಾಂಶಗಳು ಹಲವು ರೀತಿಯಲ್ಲಿ ದೇಹಕ್ಕೆ ಪೋಷಣೆಯನ್ನು ನೀಡುತ್ತವೆ. ಅಷ್ಟೇ ಅಲ್ಲ, ಚರ್ಮ ಮತ್ತು ಕೂದಲ ಆರೈಕೆಗೂ ಅತ್ಯುತ್ತಮವಾಗಿವೆ. ತ್ವಚೆಯ ಕಾಂತಿ ಹೆಚ್ಚಲು ಬಾದಾಮಿಯನ್ನು ಬಳಸಿ ತಯಾರಿಸಿದ ಮುಖಲೇಪಗಳು ಬಹಳ ಹಿಂದಿನಿಂದ ಆಚರಿಸಿಕೊಂಡು ಬರಲಾಗಿರುವ ವಿಧಾನವಾಗಿದ್ದು ತಾಜಾತನವನ್ನು ಹೆಚ್ಚು ಕಾಲ ಉಳಿಸಿಕೊಳ್ಳಲು ನೆರವಾಗುತ್ತದೆ.   ಬಾದಾಮಿ ಎಣ್ಣೆ: ಸ್ವಲ್ಪ ದುಬಾರಿ, ಆದರೆ ಕೂದಲಿಗೆ ಒಳ್ಳೆಯದು...  ಬಾದಾಮಿಯನ್ನು ಮುಖದ ಚರ್ಮದ ಆರೈಕೆಗೆ ಬಳಸುವ ಮೂಲಕ ವೃದ್ಧಾಪ್ಯದ ಚಿಹ್ನೆಯನ್ನು ನಿಧಾನಗೊಳಿಸಲು ಹಾಗೂ ಮೃದುವಾದ ಮತ್ತು ಕಲೆರಹಿತವಾದ ತ್ವಚೆಯನ್ನು ಹೊಂದಲು ಸಾಧ್ಯವಾಗುತ್ತದೆ. ಇಷ್ಟೆಲ್ಲಾ ಗುಣಗಳಿರುವ ಬಾದಾಮಿಯನ್ನು ಮುಖಲೇಪದ ರೂಪದಲ್ಲಿ ಹೇಗೆ ಬಳಸಬಹುದು ಎಂಬುದನ್ನು ಇಂದು ಪ್ರಸ್ತುತಪಡಿಸಲಾಗುತ್ತಿದ್ದು ಇವು ಸುಲಭವಾಗಿ ಮನೆಯಲ್ಲಿಯೇ ಆಚರಿಸಬಹುದಾಗಿವೆ... ನೈಸರ್ಗಿಕ ತೇವಕಾರಕ (ಮಾ...

ಲಿಂಬೆಯ ಮಾಯಾ ಜಾದೂಗೆ, 'ಸಲಾಂ' ಎನ್ನಲೇಬೇಕು ...

Image
ವರ್ಷದ ಹೆಚ್ಚಿನ ಋತುಗಳಲ್ಲಿ ಕಂಡುಬರುವಂತಹ ನಿಂಬೆಹಣ್ಣೆಯಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಸ್ವಲ್ಪ ಹುಳಿ ಸ್ವಭಾವ ಹೊಂದಿರುವ ಕಾರಣದಿಂದಾಗಿ ಹೆಚ್ಚಿನವರು ನಿಂಬೆಹಣ್ಣಿನ ರಸದಿಂದ ದೂರ ಉಳಿಯುತ್ತಾರೆ. ಇದರಲ್ಲಿ ವಿಟಮಿನ್ ಸಿ ಅಧಿಕ ಮಟ್ಟದಲ್ಲಿ ಇರುವ ಕಾರಣದಿಂದಾಗಿ ಇದನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು. ಲಿಂಬೆಹಣ್ಣನ್ನು ತ್ವಚೆ ಮತ್ತು ಕೂದಲಿನ ಆರೈಕೆಯಲ್ಲಿ ಬಳಸಬಹುದು. ಇದನ್ನು ಯಾವ ರೀತಿಯಿಂದ ಕೂದಲು ಮತ್ತು ಚರ್ಮದ ಆರೈಕೆಯಲ್ಲಿ ಬಳಸಬಹುದು ಎಂದು ಈ ಲೇಖನವನ್ನು ಮುಂದಕ್ಕೆ ಓದುತ್ತಾ ತಿಳಿಯಿರಿ..... ನೈಸರ್ಗಿಕವಾಗಿ ಚರ್ಮದ ಬ್ಲೀಚಿಂಗ್  ಲಿಂಬೆಯಲ್ಲಿ ಸಮೃದ್ಧವಾಗಿರುವಂತಹ ವಿಟಮಿನ್ ಸಿ ಚರ್ಮವನ್ನು ನೈಸರ್ಗಿಕವಾಗಿ ಬಿಳಿಯಾಗಿಸುವುದು. ಇದರಲ್ಲಿ ಇರುವಂತಹ ನೈಸರ್ಗಿಕ ಬ್ಲೀಚಿಂಗ್ ಗುಣಗಳು ಚರ್ಮವನ್ನು ಬಿಳಿಯಾಗಿಸಲು ನೆರವಾಗುವುದು. ಇದರಿಂದ ಮುಖದ ಮೇಲಿನ ಕಪ್ಪು ಕಲೆಗಳು ನಿವಾರಣೆಯಾಗುವುದು. ಮೊಣಕೈ, ಮೊಣಕಾಲು ಮತ್ತು ಬೇರೆ ಯಾವುದೇ ಕಲೆಗಳು ಇದ್ದರೆ ಆ ಜಾಗಕ್ಕೆ ನಿಂಬೆರಸವನ್ನು ಹಚ್ಚಿಕೊಳ್ಳಿ. ಒಳ್ಳೆಯ ಫಲಿತಾಂಶಕ್ಕಾಗಿ ಒಂದು ತಿಂಗಳ ಕಾಲ ನಿಂಬೆರಸ ಹಚ್ಚಿಕೊಳ್ಳಿ. ಲಿಂಬೆ ರಸ ಬೆರೆಸಿದ ನೀರು, ಅದೇನು ಮಾಯೆ, ಅದೇನು ಜಾದೂ! ಮೊಡವೆಗಳು  ನಿಂಬೆ ರಸದಿಂದ ಮೊಡವೆಗಳನ್ನು ತುಂಬಾ ಸುಲಭವಾಗಿ ತೆಗೆದುಹಾಕಬಹುದು. ನಿಂಬೆರಸದಲ್ಲಿ ಇರುವಂತಹ ಕೆಲವೊಂ...

ಕಡು ಕಪ್ಪು ಕೂದಲಿಗೆ ಬಹು ಉಪಯುಕ್ತ 'ಹೇರ್ ಮಾಸ್ಕ್'

Image
ಸೌಂದರ್ಯದ ಪ್ರಮುಖ ಅಂಗಗಳಲ್ಲಿ ಒಂದಾಗಿರುವಂತ ಕೂದಲು ಆರೋಗ್ಯ ಹಾಗೂ ಹೊಳೆಯುವಂತಿರಬೇಕು. ಪ್ರತಿಯೊಬ್ಬರೂ ಕಪ್ಪಗಿನ ಉದ್ದ ಕೂದಲು ಬಯಸುತ್ತಾರೆ. ಇಂತಹ ಕೂದಲು ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಯಾಕೆಂದರೆ ಇದಕ್ಕೆ ಕಠಿಣ ಪರಿಶ್ರಮ ಬೇಕೇಬೇಕು. ಕೂದಲಿನ ಆರೈಕೆಗಾಗಿ ಹಲವಾರು ರೀತಿಯ ಶಾಂಪೂ ಹಾಗೂ ಕಂಡೀಷನರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದನ್ನು ಕೆಲವು ದಿನಗಳ ಕಾಲ ಕೂದಲಿಗೆ ಕಾಂತಿಯನ್ನು ನೀಡಬಹುದು. ಆದರೆ ಕೆಲವು ಮನೆಮದ್ದನ್ನು ಬಳಸಿಕೊಂಡು ಮಾಡಬಹುದಾದ ಕೂದಲಿನ ಆರೈಕೆ ಶಾಶ್ವತವಾಗಿ ಕೂದಲನ್ನು ಆರೋಗ್ಯ ಹಾಗೂ ರೇಷ್ಮೆಯಂತೆ ಮಾಡುವುದು. ಕೂದಲಿನ ಬೆಳವಣಿಗೆ ಮತ್ತು ಕೂದಲು ಕಾಂತಿಯನ್ನು ಕಾಪಾಡಲು ಆರೋಗ್ಯಕರ ಆಹಾರ ಪಥ್ಯ ಮತ್ತು ಕೂದಲಿನ ಆರೈಕೆ ಸರಿಯಾಗಿ ಮಾಡಬೇಕಾಗಿದೆ. ಕರಿಬೇವಿನ ಎಲೆಗಳು ಮತ್ತು ತೆಂಗಿನ ಎಣ್ಣೆ  ಕರಿಬೇವಿನ ಎಲೆಗಳು ಮತ್ತು ತೆಂಗಿನ ಎಣ್ಣೆಯು ಕೂದಲಿನ ಬೆಳವಣಿಗೆಗೆ ನೆರವಾಗುವುದು ಮತ್ತು ಕೂದಲನ್ನು ಮಾಯಿಶ್ಚರೈಸ್ ಹಾಗೂ ತೇವಾಂಶದಿಂದ ಇಡುವುದು. ತಾಜಾವಿರುವ ಕರಿಬೇವಿನ ಎಲೆಗಳನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಸ್ವಲ್ಪ ತೆಂಗಿನ ಎಣ್ಣೆ ಹಾಕಿ. ಈಗ ಎರಡನ್ನು ಸರಿಯಾಗಿ ಕುದಿಸಿ ಮತ್ತು ಕರಿಬೇವಿನ ಎಲೆಗಳು ಸಂಪೂರ್ಣ ಕಪ್ಪು ಆಗುವ ತನಕ ಕುದಿಸಿ. ಈ ಮಿಶ್ರಣವನ್ನು ತೆಗೆದುಕೊಂಡು ತಣ್ಣಗಾಗಲು ಬಿಡಿ. ಇದಕ್ಕೆ 1-2 ಚಮಚ ನಿಂಬೆರಸವನ್ನು ಹಾಕಿ ಮತ್ತು ಇದನ್ನು ತಲೆಬುರುಡೆಗೆ ಹಾಕಿಕೊಳ್ಳಿ. ರಾತ್ರಿಯಿಡಿ ಹಾಗೆ ಬಿಟ್ಟ...

ಮುಖದ ಅಂದ-ಚೆಂದ ಹೆಚ್ಚಿಸುವ ಅರಿಶಿನ-ಅಲೋವೆರಾ ಫೇಸ್ ಪ್ಯಾಕ್‍

Image
ಪುರಾತನ ಕಾಲದಿಂದಲೂ ಅರಿಶಿನ ಮತ್ತು ಅಲೋವೆರಾವನ್ನು ಸೌಂದರ್ಯ ಚಿಕಿತ್ಸಾ ಉತ್ಪನ್ನ ಎಂದು ಪರಿಗಣಿಸಲಾಗಿದೆ. ಹಸಿರು ಕಳ್ಳಿ ಸಸ್ಯದಂತಹ ಅಲೋವೆರಾ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿ, ಕೂದಲಿನ ಸಮಸ್ಯೆಗೆ ಚಿಕಿತ್ಸೆಯನ್ನು ನೀಡುತ್ತದೆ. ಇದನ್ನು ಪ್ರಬಲವಾದ ಔಷಧೀಯ ಗುಣವನ್ನು ಹೊಂದಿರುವ ಸಸ್ಯ ಎಂದು ಗುರುತಿಸಲಾಗಿದೆ. ಅರಿಶಿನವು ಸಮೃದ್ಧವಾದ ಜೀವಸತ್ವ, ಖನಿಜಗಳು ಮತ್ತು ಫೈಟೋನ್ಯೂಟ್ರಿಯೆಂಟ್‍ಗಳನ್ನು ಒಳಗೊಂಡಿದೆ. ಇವು ತ್ವಚೆಯ ಮೇಲಿರುವ ಪಿಗ್ಮೆಂಟೇಷನ್, ಗುಳ್ಳೆಗಳು, ಮೊಡವೆ ಮತ್ತು ಚರ್ಮದ ಸೋಂಕುಗಳನ್ನು ನಿವಾರಿಸುತ್ತವೆ. ಉತ್ತಮ ಔಷಧೀಯ ಗುಣವನ್ನು ಹೊಂದಿರುವ ಈ ಎರಡು ವಸ್ತುಗಳ ಮಿಶ್ರಣದಿಂದ ತ್ವಚೆಯ ಪೋಷಣೆಯನ್ನು ಮಾಡಬಹುದು.  ಮೊಡವೆಯ ಹುಟ್ಟಡಗಿಸುವ-ಅರಿಶಿನದ ಫೇಸ್ ಪ್ಯಾಕ್  ಅಷ್ಟೇ ಅಲ್ಲದೆ ಈ ಎರಡು ಉತ್ಪನ್ನಗಳು ಗಾಯಗಳು ಮತ್ತು ಚರ್ಮದ ಸೋಂಕಿಗೆ ಉತ್ತಮವಾದ ಚಿಕಿತ್ಸೆ ನೀಡುವವು. ಅರಿಶಿನ ಮತ್ತು ಅಲೋವೆರಾ ಮಿಶ್ರಣದ ಲೇಪವನ್ನು ಮುಖಕ್ಕೆ ಅನ್ವಯಿಸಿಕೊಳ್ಳುವುದರಿಂದ ಮುಖದ ಮೇಲಿರುವ ಸತ್ತ ಚರ್ಮ ಹಾಗೂ ಬೇಡದ ಕೂದಲನ್ನು ತೆಗೆಯುವುದು. ಅಲ್ಲದೆ ನಂಜಿನಿಂದ ಉಂಟಾಗುವ ಗುಳ್ಳೆಗಳು ಮತ್ತು ಮೊಡವೆಗಳು ನಿವಾರಣೆಹೊಂದುವವು. ಇವೆರಡು ಮಿಶ್ರಣದ ಬಳಕೆಯಿಂದ ಅನೇಕ ಉಪಯೋಗಗಳನ್ನು ಪಡೆಯಬಹುದು. ಅವು ಯಾವದು ಎಂಬುದರ ವಿವರ ಇಲ್ಲಿದೆ.. ವಯಸ್ಸಾದಂತೆ ಕಾಣದು  ಮುಖ, ಕುತ್ತಿಗೆ ಮತ್ತು ಕೈಗಳ ಮೇಲೆ ವಯಸ್ಸಾದ ಚಿಹ್ನೆಯನ್ನು ಬಹಳ ಬೇಗ ...

ಆಲೂಗಡ್ಡೆಯಲ್ಲಿ ಅಡಗಿದೆ ಬಹಳಷ್ಟು 'ಸೌಂದರ್ಯದ' ಗುಣಗಳು!

Image
ಅಡುಗೆಮನೆಯಲ್ಲಿ ಅತಿ ಹೆಚ್ಚಿನ ಖಾದ್ಯಗಳಿಗೆ ಬಳಸಲ್ಪಡುವ ತರಕಾರಿ ಎಂದರೆ ಆಲೂಗಡ್ಡೆ. ಆಲುಗಡ್ಡೆಯನ್ನು ಜೋಡಿಯಾಗಿಸಿ ತಯಾರಿಸುವ ಖಾದ್ಯಗಳ ಪಟ್ಟಿ ನೂರನ್ನೂ ದಾಟುತ್ತದೆ. ಅತಿ ಹೆಚ್ಚು ಕಾಲ ಕೆಡದೇ ಶೇಖರಿಸಿಡಬಹುದಾದ ತರಕಾರಿ, ಸುಲಭದರದಲ್ಲಿ, ವರ್ಷದ ಎಲ್ಲಾ ಸಮಯದಲ್ಲಿ ಸಿಗುವ ತರಕಾರಿಯೂ ಆದ ಆಲೂಗಡ್ಡೆಯಲ್ಲಿ ಪಿಷ್ಟದ ಪ್ರಮಾಣವೇ ಪ್ರಮುಖವಾಗಿದೆ. ಆಲೂಗಡ್ಡೆ ಜ್ಯೂಸ್ ಬಳಸಿ ಮುಖದ ಸುಕ್ಕು ನಿವಾರಿಸಿ.. .  ನೂರಾರು ವರ್ಷಗಳಿಂದ ಆಲೂಡ್ಡೆಯನ್ನು ತರಕಾರಿಯ ರೂಪದಲ್ಲಿಯೂ, ಸೌಂದರ್ಯವರ್ಧಕವಾಗಿಯೂ ಬಳಸಲಾಗುತ್ತಿದೆ. ಇದರಲ್ಲಿರುವ ವಿಟಮಿನ್ ಸಿ ಹಾಗೂ ಕಾರ್ಬೋಹೈಡ್ರೇಟುಗಳು ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿವೆ. ಸ್ಟ್ರೆಚ್ ಮಾರ್ಕ್ ಸಮಸ್ಯೆಗೆ, ಹರಳೆಣ್ಣೆ-ಆಲೂಗಡ್ಡೆ ಪ್ಯಾಕ್  ಇದು ಕೇವಲ ಹೊಟ್ಟೆಯ ಹಸಿವು ನೀಗಿಸಲು ಮಾತ್ರವಲ್ಲ, ಚರ್ಮ ಮತ್ತು ಕೂದಲ ಸೌಂದರ್ಯ ಹೆಚ್ಚಿಸಲೂ ನೆರವಾಗುತ್ತದೆ. ಇದೇ ಕಾರಣಕ್ಕೆ ಚರ್ಮದ ಮತ್ತು ಕೂದಲ ಪೋಷಣೆಗಾಗಿ ಮತ್ತು ನೈಸರ್ಗಿಕ ಸೌಂದರ್ಯ ಪಡೆಯಲು ಆಲೂಗಡ್ಡೆಯನ್ನು ಅಲಕ್ಷಿಸುವಂತೆಯೇ ಇಲ್ಲ. ಅದೆಲ್ಲಾ ಸರಿ, ಆಲೂಗಡ್ಡೆಯ ಇಷ್ಟೆಲ್ಲಾ ಗುಣಗಳನ್ನು ಪಡೆದುಕೊಳ್ಳುವುದಾದರೂ ಹೇಗೆ? ಬನ್ನಿ, ಆಲೂಗಡ್ಡೆಯನ್ನು ಬಳಸಿ ಸೌಂದರ್ಯವನ್ನು ಹೇಗೆ ಅದ್ಭುತವಾಗಿ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ನೋಡೋಣ.. ಕಣ್ಣುಗಳ ಕಪ್ಪು ವರ್ತುಲವನ್ನು ನಿವಾರಿಸಲು  ಕಣ್ಣುಗಳ ಸುತ್ತಲ ಭಾಗದ ಚರ್ಮದ ಪದರಗಳ...