ಲಿಂಬೆಯ ಮಾಯಾ ಜಾದೂಗೆ, 'ಸಲಾಂ' ಎನ್ನಲೇಬೇಕು ...
ವರ್ಷದ ಹೆಚ್ಚಿನ ಋತುಗಳಲ್ಲಿ ಕಂಡುಬರುವಂತಹ ನಿಂಬೆಹಣ್ಣೆಯಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಸ್ವಲ್ಪ ಹುಳಿ ಸ್ವಭಾವ ಹೊಂದಿರುವ ಕಾರಣದಿಂದಾಗಿ ಹೆಚ್ಚಿನವರು ನಿಂಬೆಹಣ್ಣಿನ ರಸದಿಂದ ದೂರ ಉಳಿಯುತ್ತಾರೆ. ಇದರಲ್ಲಿ ವಿಟಮಿನ್ ಸಿ ಅಧಿಕ ಮಟ್ಟದಲ್ಲಿ ಇರುವ ಕಾರಣದಿಂದಾಗಿ ಇದನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು. ಲಿಂಬೆಹಣ್ಣನ್ನು ತ್ವಚೆ ಮತ್ತು ಕೂದಲಿನ ಆರೈಕೆಯಲ್ಲಿ ಬಳಸಬಹುದು. ಇದನ್ನು ಯಾವ ರೀತಿಯಿಂದ ಕೂದಲು ಮತ್ತು ಚರ್ಮದ ಆರೈಕೆಯಲ್ಲಿ ಬಳಸಬಹುದು ಎಂದು ಈ ಲೇಖನವನ್ನು ಮುಂದಕ್ಕೆ ಓದುತ್ತಾ ತಿಳಿಯಿರಿ.....
ಲಿಂಬೆ ರಸ ಬೆರೆಸಿದ ನೀರು, ಅದೇನು ಮಾಯೆ, ಅದೇನು ಜಾದೂ!
ಲಿಂಬೆ ಸಿಪ್ಪೆ: ಸಂಧಿವಾತ ಸಮಸ್ಯೆಗೆ ಶಕ್ತಿಶಾಲಿ ಮನೆಮದ್ದು
ನೈಸರ್ಗಿಕವಾಗಿ ಚರ್ಮದ ಬ್ಲೀಚಿಂಗ್
ಲಿಂಬೆಯಲ್ಲಿ ಸಮೃದ್ಧವಾಗಿರುವಂತಹ ವಿಟಮಿನ್ ಸಿ ಚರ್ಮವನ್ನು ನೈಸರ್ಗಿಕವಾಗಿ ಬಿಳಿಯಾಗಿಸುವುದು. ಇದರಲ್ಲಿ ಇರುವಂತಹ ನೈಸರ್ಗಿಕ ಬ್ಲೀಚಿಂಗ್ ಗುಣಗಳು ಚರ್ಮವನ್ನು ಬಿಳಿಯಾಗಿಸಲು ನೆರವಾಗುವುದು. ಇದರಿಂದ ಮುಖದ ಮೇಲಿನ ಕಪ್ಪು ಕಲೆಗಳು ನಿವಾರಣೆಯಾಗುವುದು. ಮೊಣಕೈ, ಮೊಣಕಾಲು ಮತ್ತು ಬೇರೆ ಯಾವುದೇ ಕಲೆಗಳು ಇದ್ದರೆ ಆ ಜಾಗಕ್ಕೆ ನಿಂಬೆರಸವನ್ನು ಹಚ್ಚಿಕೊಳ್ಳಿ. ಒಳ್ಳೆಯ ಫಲಿತಾಂಶಕ್ಕಾಗಿ ಒಂದು ತಿಂಗಳ ಕಾಲ ನಿಂಬೆರಸ ಹಚ್ಚಿಕೊಳ್ಳಿ.ಲಿಂಬೆ ರಸ ಬೆರೆಸಿದ ನೀರು, ಅದೇನು ಮಾಯೆ, ಅದೇನು ಜಾದೂ!
ಮೊಡವೆಗಳು
ನಿಂಬೆ ರಸದಿಂದ ಮೊಡವೆಗಳನ್ನು ತುಂಬಾ ಸುಲಭವಾಗಿ ತೆಗೆದುಹಾಕಬಹುದು. ನಿಂಬೆರಸದಲ್ಲಿ ಇರುವಂತಹ ಕೆಲವೊಂದು ಅಂಶಗಳು ಮೊಡವೆಗಳನ್ನು ತೆಗೆದುಹಾಕಿ ಕಾಂತಿಯುತ ಹಾಗೂ ನಯವಾದ ಚರ್ಮವನ್ನು ನೀಡುವುದು. ಒಂದು ತುಂಡು ನಿಂಬೆ ತೆಗೆದುಕೊಂಡು ಅದರ ಮೇಲೆ ಅಡುಗೆ ಸೋಡಾವನ್ನು ಸಿಂಪಡಿಸಿ. ಇದನ್ನು ಬಾಧಿತ ಪ್ರದೇಶಕ್ಕೆ ಮಸಾಜ್ ಮಾಡಿ. ಕಾಂತಿಯುತ ತ್ವಚೆ ಪಡೆಯಲು ನಿಯಮಿತವಾಗಿ ಇದನ್ನು ಬಳಸಿ.ತ್ವಚೆಯನ್ನು ಶುಚಿಗೊಳಿಸುವುದು
ಲಿಂಬೆಯನ್ನು ಬಳಸಿಕೊಂಡು ತ್ವಚೆಯನ್ನು ಶುಚಿಗೊಳಿಸಬಹುದಾಗಿದೆ. ಲಿಂಬೆರಸರದಲ್ಲಿ ಉತ್ತಮ ಮಟ್ಟದ ಪ್ರೋಟೀನ್, ವಿಟಮಿನ್ ಮತ್ತು ಸಿಟ್ರಿಕ್ ಆಮ್ಲವು ಇರುವುದರಿಂದ ಇದು ಮುಖದಲ್ಲಿರುವ ಕೊಳೆ ಹಾಗೂ ಧೂಳನ್ನು ತೆಗೆದು ಹಾಕುವುದು. ತ್ವಚೆಯನ್ನು ಕಾಂತಿಯುತ ಹಾಗೂ ಸುಂದರವಾಗಿಡಲು ಇದು ಒಂದು ನೈಸರ್ಗಿಕ ಟೋನರ್ ನಂತೆ ಕೆಲಸ ಮಾಡುತ್ತದೆ. ಸ್ವಲ್ಪ ನಿಂಬೆರಸ ತೆಗೆದುಕೊಂಡು ಅದಕ್ಕೆ ಅಷ್ಟೇ ಪ್ರಮಾಣದ ನೀರು ಹಾಕಿಕೊಳ್ಳಿ. ಹತ್ತಿ ಉಂಡೆಯನ್ನು ಬಳಸಿಕೊಂಡು ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ.ಲಿಂಬೆ ಸಿಪ್ಪೆ: ಸಂಧಿವಾತ ಸಮಸ್ಯೆಗೆ ಶಕ್ತಿಶಾಲಿ ಮನೆಮದ್ದು





Comments
Post a Comment