Posts

Showing posts from January, 2018

ಮೊಡವೆ ಸಮಸ್ಯೆಗೆ ಮನೆಮದ್ದುಗಳು- ಒಂದೇ ದಿನದಲ್ಲಿ ಮಂಗಮಾಯ!

Image
ಹದಿಹರೆಯದಲ್ಲಿ ಪ್ರತಿಯೊಬ್ಬರೂ ಮೊಡವೆಗಳ ತೊಂದರೆಗೆ ಒಳಗಾದವರೇ ಆಗಿದ್ದಾರೆ. ಕೆಲವು ಯುವತಿಯರಿಗೆ ಹದಿಹರೆಯ ದಾಟಿದ ಬಳಿಕವೂ ಮೊಡವೆಗಳ ಕಾಟ ಮುಂದುವರೆಯಬಹುದು. ಕೆಲವು ಪುರುಷರೂ ಈ ತೊಂದರೆಗೆ ಒಳಗಾಗುತ್ತಾರೆ. ಮೊಡವೆಗಳು ಸೌಂದರ್ಯವನ್ನು ಕುಂದಿಸುವುದು ಮಾತ್ರವಲ್ಲ ಕೆಲವೊಮ್ಮೆ ಕೆಂಪಗಾಗಿ ಕೊಂಚ ಭಯವನ್ನೂ ಹುಟ್ಟಿಸುತ್ತವೆ. ಮೊಡವೆಗಳನ್ನು ಮುಖದಿಂದ ಇಲ್ಲವಾಗಿಸುವುದು ಎಲ್ಲರ ಆದ್ಯತೆಯ ವಿಷಯವಾಗಿರುವುದು ಮಾತ್ರವಲ್ಲ, ಆತ್ಮವಿಶ್ವಾಸವನ್ನು ಹೆಚ್ಚಿಸಲು ಅಗತ್ಯವೂ ಆಗಿದೆ. ಮೊಡವೆಗಳು ಎಲ್ಲಾ ಬಗೆಯ ತ್ವಚೆಗಳಿಗೂ ಆವರಿಸಬಹುದಾದರೂ ಎಣ್ಣೆ ಚರ್ಮಕ್ಕೆ ಹೆಚ್ಚಾಗಿ ಕಾಡುತ್ತದೆ. ತ್ವಚೆಯಲ್ಲಿರುವ ಎಣ್ಣೆಯಂಶ ಹೆಚ್ಚಾಗಿದ್ದರೆ ಸೋಂಕು ಸಹಾ ಹೆಚ್ಚಾಗುತ್ತದೆ ಹಾಗೂ ಮೊಡವೆಗಳು ಮೂಡುವ ಸಾಧ್ಯತೆಗಳೂ ಹೆಚ್ಚುತ್ತದೆ. ಚರ್ಮದ ಸೂಕ್ಷ್ಮರಂಧ್ರಗಳು ಮುಚ್ಚಿದ್ದರೆ ಎಣ್ಣೆ ಹಾಗೂ ಬೆವರು ಹೊರಹರಿಯದೇ ಒಳಗೇ ಉಳಿದುಕೊಳ್ಳುತ್ತದೆ ಹಾಗೂ ಸೋಂಕು ಉಂಟು ಮಾಡುವ ಮೂಲಕ ಮೊಡವೆಗೆ ಕಾರಣವಾಗುತ್ತದೆ. ಮನೆಮದ್ದಿನ ಮಾಯಾ ಜಾದೂಗೆ ಮೊಡವೆ ಮಂಗಮಾಯ! ಯುವತಿಯರಿಗೆ ಕಾಡುವ ಮೊಡವೆಗಳಿಂದ ಹೆಚ್ಚು ವ್ಯಾಕುಲರಾಗುತ್ತಾರೆ. ಯಾವುದಾದರೊಂದು ವಿಶೇಷ ಸಂದರ್ಭದಲ್ಲಿ ಭಾಗಿಯಾಗುವ ಸಂದರ್ಭ ಎದುರಾದರೆ ಮೊಡವೆಗಳಿರುವ ಮುಖವನ್ನು ಹೊತ್ತು ಹೋಗುವುದು ಹೇಗೆ ಎಂಬುದೇ ಇವರಿಗೆ ದೊಡ್ಡ ಚಿಂತೆಯಾಗುತ್ತದೆ. ಔಷಧೀಯ ಗುಣವಿರುವ ಕ್ರೀಮುಗಳನ್ನು ಮೊಡವೆಗಳ ನಿವಾರಣೆಗಾಗಿ ಬಳಸುವುದು ಅಪಾಯಕಾರಿ! ಈ ಕ್ರ...

ಮುಖದ ಕಲೆ ಹೋಗಲಾಡಿಸಬೇಕೆ? ಈ ರೀತಿ ಮಾಡಿ

Image
ಮೊಡವೆ ಕಲೆಗಳನ್ನು ತೆಗೆಯಲು ಸಾಕಷ್ಟು ವಿಧಾನಗಳಿವೆ. ಈ ಮೊಡವೆಗಳು ಪ್ರಾರಂಭವಾಗುವುದು ಯೌವನದಲ್ಲಿ. ಪ್ರಾಯದ ಕಾಲದಲ್ಲಿ ಹಾರ್ಮೋನ್ ಏರುಪೇರಾದಾಗ ಮೆದೋಗ್ರಂಥಿಗಳ ಸ್ರಾವದಿಂದಾಗಿ ಮೊಡವೆಗಳು ಪ್ರಾರಂಭವಾಗುತ್ತವೆ. ಇದಕ್ಕೆ ಕೆಲವು ಔಷಧೀಯ ಚಿಕಿತ್ಸೆಗಳಿವೆ, ಆದರೆ ಮನೆಯಲ್ಲಿಯೇ ಮಾಡಿಕೊಳ್ಳುವ ಪ್ರಾಕೃತಿಕ ಚಿಕಿತ್ಸೆಯಿಂದ ಸಾಕಷ್ಟು ಹಣ ಉಳಿಸಬಹುದು.  ಸ್ವಾಭಾವಿಕ ವಿಧಾನದಿಂದ ಮೊಡವೆ ಕಲೆಗಳಿಂದ ಮುಕ್ತಿ ಹೊಂದುವುದು ಹೇಗೆ ಎಂದು ತಿಳಿಯಬೇಕೆ? ಹಾಗಾದರೆ ಮುಂದೆ ಓದಿ: 1.ಹೈಡ್ರೇಶನ್ ಕೀಲಿ  ನೀರು ಮೊಡವೆ ಕಲೆಗಳನ್ನು ತಡೆಗಟ್ಟುವ ಉತ್ತಮ ಸ್ವಾಭಾವಿಕ ವಿಧಾನ ಎಂದು ಸಾಬೀತಾಗಿದೆ.ಪ್ರತಿ ದಿನ 8 ಲೋಟ ಅಥವಾ ಅದಕ್ಕಿಂತ ಹೆಚ್ಚು ನೀರು ಕುಡಿದರೆ ಅದು ಬೇಡದ ಚರ್ಮವನ್ನು,ಕಲೆಗಳನ್ನು ತೆಗೆಯುತ್ತದೆ ಎಂದು ಹೇಳಲಾಗುತ್ತದೆ. 2. ಮೆಂತೆ ಸೊಪ್ಪಿನ ಟ್ರೀಟ್ ಮೆಂಟ್  ಮೆಂತೆ ಸೊಪ್ಪನ್ನು ನೆನೆಸಿ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಇದನ್ನು ಒಣಗಲು ಬಿಡಿ ಮತ್ತು ಸ್ವಲ್ಪ ಹೊತ್ತಿನ ನಂತರ ತೊಳೆಯಿರಿ. ಸ್ವಲ್ಪ ದಿನಗಳವರೆಗೆ ಇದನ್ನು ಅನುಸರಿಸಿ ಇದರಿಂದ ಮೊಡವೆಗಳು ಮಾಯವಾಗುತ್ತವೆ ಮತ್ತು ಚರ್ಮವನ್ನು ಮೃದುವಾಗಿಸುತ್ತದೆ. 3. ಸೂಕ್ತ ಡಯಟ್  ತರಕಾರಿ ಮತ್ತು ಹಣ್ಣುಗಳಲ್ಲಿ ಸಾಕಷ್ಟು ಕಬ್ಬಿಣ ಮತ್ತು ವಿಟಮಿನ್ ಗಳಿರುತ್ತವೆ ಇದು ಮುಖದ ಸೌಂದರ್ಯ ಮರಳಿ ಪಡೆಯಲು ಸಹಾಯ ಮಾಡುತ್ತವೆ.ಅದರಲ್ಲಿರುವ ಜ್ಯೂಸ್ ಅಂಶ ದೇಹದಲ್ಲಿ ನೀರನ್ನು...

ಸೌಂದರ್ಯವರ್ಧಕ ಉತ್ಪನ್ನವಾಗಿ ಶ್ರೀಗಂಧದ ಪುಡಿಯನ್ನು ಬಳಸಿ

Image
ಮುಖದ ಮೇಲಿರುವ ಕಪ್ಪು ಕಲೆ, ಮೊಡವೆಗಳು, ಸುಕ್ಕುಗಟ್ಟುವುದು ಸೇರಿದಂತೆ ಇನ್ನಿತರ ಸಮಸ್ಯೆಗಳು ನಮ್ಮ ಸೌಂದರ್ಯವನ್ನು ಹಾಳುಮಾಡುತ್ತವೆ. ಕಣ್ಣಿನ ಕೆಳಭಾಗದಲ್ಲಿ ಗೋಚರಿಸುವ ಕಪ್ಪು ಕಲೆಗಳು ಮುಖದ ಸೌಂದರ್ಯವನ್ನು ಮಂಕಾಗಿಸುತ್ತದೆ. ಇವುಗಳ ನಿವಾರಣೆಗೆ ಅನೇಕ ಔಷಧಗಳು ಹಾಗೂ ಮರೆ ಮಾಚುವಂತಹ ಸೌಂದರ್ಯ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಅವುಗಳಿಂದ ಶಾಶ್ವತವಾದ ಪರಿಹಾರವನ್ನು ಕಂಡು ಕೊಳ್ಳಲು ಸಾಧ್ಯವಿಲ್ಲ. ಜೊತೆಗೆ ಒಂದಿಷ್ಟು ಅಡ್ಡ ಪರಿಣಾಮಗಳನ್ನು ಎದುರಿಸ ಬೇಕಾಗುವುದು.  ನೈಸರ್ಗಿಕ ಉತ್ಪನ್ನಗಳಲ್ಲಿ ಒಂದಾದ ಶ್ರೀಗಂಧವು ಸೌಂದರ್ಯದ ಆರೈಕೆಗೆ ಬಹು ಉಪಕಾರಿ ಉತ್ಪನ್ನ. ಇದು ಬ್ಯಾಕ್ಟೀರಿಯಾಗಳ ವಿರುದ್ಧ ಉತ್ತಮವಾಗಿ ಹೋರಾಡುತ್ತವೆ. ಚರ್ಮ ಸುಕ್ಕುಗಟ್ಟುವುದು, ಮಂಕಾಗುವುದು ಹಾಗೂ ಕಲೆಗಳ ನಿವಾರಕವಾಗಿ ಕೆಲಸ ನಿರ್ವಹಿಸುವುದು. ಶ್ರೀಗಂಧ ಆಯುರ್ವೇದದಲ್ಲಿ ಅತ್ಯುತ್ತಮ ಔಷಧೀಯ ಗುಣವನ್ನು ಹೊಂದಿರುವ ಉತ್ಪನ್ನ. ಇದನ್ನು ಗಣನೀಯವಾಗಿ ಬಳಸುವುದರಿಂದ ಅನೇಕ ರೋಗಗಳನ್ನು ಸಹ ನಿವಾರಿಸಬಹುದು. ನೀವೂ ಸಹ ಸೌಂದರ್ಯಕ್ಕೆ ಅಥವಾ ಚರ್ಮಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳಿಂದ ಬಳಲುತ್ತಿದ್ದೀರಿ ಎಂದಾದರೆ ಶ್ರೀಗಂಧದೊಡನೆ ಇನ್ನಿತರ ನೈಸರ್ಗಿಕ ಉತ್ಪನ್ನಗಳನ್ನು ಸೇರಿಸಿ ಆರೈಕೆ ಮಾಡಿ. ಆರೈಕೆಯ ವಿಧಿ ವಿಧಾನಗಳ ಪರಿಚಯವನ್ನು ತಿಳಿಯಲು ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ... ಶ್ರೀಗಂಧದ ಪುಡಿ ಮತ್ತು ಹಾಲು   - ಒಂದು ಬೌ...

30ರ ಹರೆಯದ ಮಹಿಳೆಯರು ಪಾಲಿಸಬೇಕಾದ ಸೌಂದರ್ಯ ಸಲಹೆಗಳು

Image
ಸೌಂದರ್ಯವೆಂದರೆ ಮಹಿಳೆಯರು ಎನ್ನುವ ಮಾತಿದೆ. ಮಹಿಳೆಯರು ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು ಹಲವಾರು ರೀತಿಯ ಕಸರತ್ತು ನಡೆಸುವುದು ಇದೆ. ಆದರೆ ಮಹಿಳೆಯರು 30ರ ಹರೆಯಕ್ಕೆ ಬರುತ್ತಿರುವಂತೆ ಅವರಲ್ಲಿ ಹಲವಾರು ರೀತಿಯ ಚರ್ಮದ ಬದಲಾವಣೆಗಳು ಕಾಣಿಸಿಕೊಳ್ಳಲು ಆರಂಭವಾಗುವುದು. ಚರ್ಮದ ಕೋಶಗಳ ಪುನರುಜ್ಜೀವನ ಪ್ರಕ್ರಿಯೆ ನಿಧಾನವಾಗುವುದು, ಕಾಲಜನ್ ವಿಘಟನೆಗಳ್ಳುವುದು ಅಥವಾ ಸ್ಥಿತಿಸ್ಥಾಪಕತ್ವ ಕುಂದುವುದು ಇದು ಚರ್ಮದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳು. 30 ಹರೆಯದಲ್ಲೂ ಯೌವನದ ಕಳೆ ಇರಲಿ  ಆದರೆ ಚರ್ಮಕ್ಕೆ ವಯಸ್ಸಾಗುವುದನ್ನು ತಡೆಯಲು ಹಲವಾರು ರೀತಿಯ ವಿಧಾನಗಳು ಇವೆ ಮತ್ತು ಇದು ಚರ್ಮಕ್ಕೆ ತುಂಬಾ ಒಳ್ಳೆಯ ರೀತಿಯಿಂದ ನೆರವಾಗುವುದು. 30ರ ಹರೆಯದಲ್ಲಿ ಚರ್ಮದ ಸೌಂದರ್ಯ ಮತ್ತು ಅದರ ಆರೋಗ್ಯ ಕಾಪಾಡುವುದು ಹೇಗೆ ಎಂದು ತಿಳಿಯಿರಿ. ವಯಸ್ಸಾಗುವ ಲಕ್ಷಣ ತಡೆಗಟ್ಟುವ ಮತ್ತು ವಯಸ್ಸಾಗುತ್ತಿರುವಂತೆ ಕಾಣಿಸಿಕೊಳ್ಳುವ ಸಮಸ್ಯೆಗೆ ಕೆಲವೊಂದು ನೈಸರ್ಗಿಕ ವಿಧಾನಗಳನ್ನು ಅನುರಿಸಲು ಬಗ್ಗೆ ಬೋಲ್ಸ್ ಸ್ಕೈ ನಿಮಗೆ ಹೇಳಲಿದೆ.  ಈ ವಿಧಾನಗಳು ಚರ್ಮವನ್ನು ಸುಂದರ ಹಾಗೂ ಅದ್ಭುತವಾಗಿಸಲಿದೆ. ಇದು ಹೇಗೆಂದು ತಿಳಿಯಿರಿ.... ಕಣ್ಣಿನ ಕ್ರೀಮ್  ಕಣ್ಣಿನ ಸುತ್ತಲಿನ ಚರ್ಮ ತುಂಬಾ ತೆಳು ಹಾಗೂ ಸೂಕ್ಷ್ಮವಾಗಿರುವುದು. ಇದು ಹಾನಿಗೊಳಗಾಗುವ ಸಾಧ್ಯತೆ ಹೆಚ್ಚು. ದೇಹದ ಇತರ ಭಾಗದ ಚರ್ಮಕ್ಕಿಂತ ಇದಕ್ಕೆ ಬೇಗನೆ ವಯಸ್ಸಾಗುವುದು. ಇದರ ಕಡೆ ಹೆಚ್ಚಿನ ಗಮನ...

ಮುಖದ ಮೇಲಿನ ಬಿಳಿ ಕಲೆ ಹೋಗಬೇಕಾ...? ಹಾಗಾದರೆ ಹೀಗೆ ಮಾಡಿ

Image
ಬೆಂಗಳೂರು :  ಮುಖದ ಮೇಲಿರುವ ಕೆಲವು ಕಲೆಗಳು ಮುಖದ ಅಂದವನ್ನು ಕೆಡಿಸುತ್ತವೆ. ಕೆಲವು ಕಲೆಗಳು ಅಪಾಯದ ಸೂಚನೆಯಾದರೆ, ಕೆಲವು ದೇಹದಲ್ಲಿರುವ ಪೋಷ್ಠಿಕಾಂಶ ಹಾಗು ಹಾರ್ಮೊನುಗಳ ಏರುಪೇರಿನಿಂದ ಉಂಟಾಗುತ್ತದೆ. ಇದರಿಂದಾಗಿ ಮುಖದ ಹಾಗು ದೇಹದ ಇತರ ಭಾಗಗಳಲ್ಲಿ ಬಿಳಿ ಕಲೆಗಳು ಕಾಣಿಸುತ್ತದೆ. ಇವುಗಳನ್ನು ಹೋಗಲಾಡಿಸಲು ಕೆಲವು ಮನೆಮದ್ದುಗಳಿವೆ. ಕೊಬ್ಬರಿ ಎಣ್ಣೆಯನ್ನು ಬಿಳಿ ಕಲೆಗಳ ಮೇಲೆ ಹಚ್ಚಿ ಮಸಾಜ್ ಮಾಡಿದರೆ  2 ವಾರಗಳಲ್ಲಿ ಅದು ಹೋಗುತ್ತದೆ. ಶುಂಠಿ ಪೇಸ್ಟನ್ನು ಕಲೆಗಳ ಮೇಲೆ ಹಚ್ಚಿ ಒಣಗಿದ ಮೇಲೆ ತೊಳೆದರೆ ಕಲೆಗಳು ಕಡಿಮೆಯಾಗುತ್ತದೆ. 1 ಚಮಚ ಅರಶಿನ ಪುಡಿಗೆ 2 ಚಮಚ ಸಾಸಿವೆ ಎಣ್ಣೆ ಸೇರಿಸಿ ಪೇಸ್ಟ್ ಮಾಡಿ ಕಲೆ ಭಾಗಕ್ಕೆ ಹಚ್ಚಿದರೆ ಕಲೆ ಹೋಗುತ್ತದೆ. ಇದನ್ನು ದಿನಕ್ಕೆ 2 ಬಾರಿ ಮಾಡಬೇಕು. ಕಹಿಬೇವಿನ ಎಲೆ ಹಾಗು ಹೂವನ್ನು ಬಿಸಿಲಿನಲ್ಲಿ ಒಣಗಿಸಿ ನಂತರ ಅದನ್ನು ಪುಡಿ ಮಾಡಿ ಪ್ರತಿದಿನ 1 ಗ್ಲಾಸ್ ನೀರಿಗೆ 1 ಚಮಚ ಪುಡಿ ಮಿಕ್ಸ್ ಮಾಡಿ ಕುಡಿಯಿರಿ. ಇಲ್ಲವಾದಲ್ಲಿ ಕಹಿಬೇವಿನ ಎಲೆ ಯನ್ನು ಅರೆದು ಪೇಸ್ಟ್ ಮಾಡಿ ಕಲೆ ಭಾಗಕ್ಕೆ ಹಚ್ಚಿ 10-15 ನಿಮಿಷ ಬಿಟ್ಟು ತೊಳೆಯಿರಿ. 1 ಚಮಚ ಗಂಧದ ಪೇಸ್ಟ್, 1 ಚಮಚ ಅರಶಿನ ಪುಡಿ, 1ಚಮಚ ಅಕ್ಕಿಹಿಟ್ಟು ಗಳನ್ನು 2 ಚಮಚ ಜೇನುತುಪ್ಪಕ್ಕೆ ಸೇರಿಸಿ ಕಲೆಗೆ ಹಚ್ಚಿ 10 ನಿಮಿಷ ಬಿಟ್ಟು ತೊಳೆದರೆ ಬಿಳಿ ಕಲೆಗಳು ಕಡಿಮೆಯಾಗುತ್ತದೆ. ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡ...

ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಸಾರಭೂತ ತೈಲಗಳು

Image
ಚಳಿಗಾಲ ಬಂತೆಂದರೆ ಸಾಕು, ಚರ್ಮದ ಸಂಕಷ್ಟ ಆರಂಭವಾಗುವುದು. ಅತಿಯಾದ ಶೀತ, ತಾಪಮಾನ ಕಡಿಮೆಯಾಗುವುದರಿಂದ ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಚಳಿಗಾಲದಲ್ಲಿ ಚರ್ಮವು ತುಂಬಾ ಒಣ, ತೇವಾಂಶವಿಲ್ಲದಂತೆ ಮತ್ತು ನಿಸ್ತೇಜವಾಗಿ ಕಾಣಿಸುವುದು. ಇಂತಹ ಸಮಯದಲ್ಲಿ ಚರ್ಮಕ್ಕೆ ಮೊಶ್ವಿರೈಸ್ ನೀಡಿ ತೇವಾಂಶ ಕಾಪಾಡಿಕೊಳ್ಳುವಂತಹ ತೈಲದಿಂದ ಚರ್ಮದ ಆರೈಕೆ ಮಾಡಿಕೊಳ್ಳುವುದು ಅತೀ ಅಗತ್ಯ. ಸಾರಭೂತ ತೈಲಗಳು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಇದು ಚರ್ಮಕ್ಕೆ ಶಮನ ನೀಡಿ, ಮೊಡವೆ, ಒಣಚರ್ಮ ಸಮಸ್ಯೆ ತಡೆದು ಚರ್ಮಕ್ಕೆ ತುಂಬಾ ಪರಿಣಾಮಕಾರಿಯಾಗಿ ಮೊಶ್ವಿರೈಸ್ ಮಾಡುವುದು. ಈ ಸಾರಭೂತ ತೈಲಗಳನ್ನು ಬಳಸುವುದು ತುಂಬಾ ಸುರಕ್ಷಿತ. ಖರ್ಚು ಕಡಿಮೆ ಮತ್ತು ಹೆಚ್ಚು ಪರಿಣಾಮಕಾರಿ. ಹಲವಾರು ರೀತಿಯಿಂದ ಚರ್ಮಕ್ಕೆ ಲಾಭ ನೀಡುವಂತಹ ಸಾರಭೂತ ತೈಲವು ಚಳಿಗಾಲದಲ್ಲಿ ತ್ವಚೆಯ ಆರೈಕೆಗೆ ಹೇಳಿ ಮಾಡಿಸಿದಂತಿದೆ. ಚಳಿಗಾಲದಲ್ಲಿ ನಿಮ್ಮ ಚರ್ಮದ ಆರೈಕೆಯಲ್ಲಿ ಬಳಕೆ ಮಾಡಬಹುದಾದ ಕೆಲವೊಂದು ಸಾರಭೂತ ತೈಲಗ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಅದು ಯಾವುದೆಂದು ನೀವು ತಿಳಿಯಿರಿ. ಸೂಚನೆ:  ಸಾರಭೂತ ತೈಲಗಳನ್ನು ತೆಳು ಮಾಡಿಕೊಂಡು ಬಳಸಿಕೊಳ್ಳಬೇಕು. ಬಳಸುವ ಮೊದಲು ದೇಹದ ಒಂದು ಭಾಗಕ್ಕೆ ಸ್ವಲ್ಪ ಹಚ್ಚಿಕೊಂಡು ಅಲರ್ಜಿಯಾಗುತ್ತದೆಯಾ ಎಂದು ನೋಡಿಕೊಳ್ಳಿ. 1. ಶ್ರೀಗಂಧದ ಸಾರಭೂತ ತೈಲ  ಈ ಸಾರಭೂತ ತೈಲದಲ್ಲಿ ಇರುವಂತಹ ಪುನಃಶ್ವೇತನಗೊಳಿಸುವ...

ಮನೆ ಮದ್ದಿನಿಂದಲೇ ಮುಖವನ್ನು ಸುಂದರಗೊಳಿಸಿ

Image
ನಯವಾದ ಹಾಗೂ ಗುಲಾಬಿ ಬಣ್ಣದ ತ್ವಚೆಯನ್ನು ಹೊಂದಬೇಕು ಎಂದು ಪ್ರತಿಯೊಬ್ಬ ಮಹಿಳೆಯು ಬಯಸುತ್ತಾಳೆ. ಆದರೆ ಕೆಲವು ತ್ವಚೆಯ ಅನಾರೋಗ್ಯ ಹಾಗೂ ಕಲೆಗಳು ನಮ್ಮ ಆಕರ್ಷಣೆಯನ್ನು ಕುಂಟಿತಗೊಳಿಸುತ್ತವೆ. ಅವುಗಳ ಮರೆಮಾಚಲು ಸೌಂದರ್ಯ ವರ್ಧಕ ಮತ್ತು ಇತರ ರಾಸಾಯನಿಕ ಉತ್ಪನ್ನಗಳನ್ನು ಅವಲಂಬಿಸಿರುತ್ತಾರೆ. ಇವು ತಾತ್ಕಾಲಿಕ ನ್ಯಾಯೋಚಿತತೆಯನ್ನು ನೀಡಬಹುದು. ಆದರೆ ಅವು ನಮ್ಮ ಚರ್ಮದ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತವೆ.  ಚರ್ಮದ ಆರೋಗ್ಯ ಸುಧಾರಿಸಲು ಕೆಲವು ಆಯುರ್ವೇದದ ಆರೈಕೆಗಳು ಇವೆ. ಇವುಗಳ ಮೊರೆ ಹೋಗುವುದರಿಂದ ಚರ್ಮವು ನೈಸರ್ಗಿಕವಾಗಿಯೇ ಆರೋಗ್ಯವನ್ನು ಪಡೆದುಕೊಳ್ಳುವುದು. ನೈಸರ್ಗಿಕವಾದ ಕೆಲವು ಉತ್ನ್ನಗಳು ಚರ್ಮದ ಪೋಷಣೆಯನ್ನು ಬಹು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತವೆ. ಇವುಗಳ ಬಳಕೆ ಮಾಡಿದರೆ ಚರ್ಮದ ಮೇಲೆ ಯಾವುದೇ ಅಡ್ಡ ಪರಿಣಾಮಗಳು ಉಂಟಾಗದರೆ ಸದಾ ತಾಜಾತನದಿಂದ ಕಂಗೊಳಿಸುತ್ತದೆ. ಜೊತೆಗೆ ಮೃದು ಹಾಗೂ ಆಕರ್ಷಣೆಯನ್ನು ಪಡೆದುಕೊಳ್ಳುವ ಕನಸು ನನಸಾಗುವುದು. ಹಾಗಾದರೆ ಆ ಉತ್ಪನ್ನಗಳು ಯಾವವು? ಅವುಗಳ ಬಳಕೆ ಹೇಗೆ? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎನ್ನುವ ಉತ್ಸಾಹದಲ್ಲಿ ಇದ್ದರೆ ಈ ಮುಂದೆ ಇರುವ ವಿವರಣೆಯನ್ನು ಪರಿಶೀಲಿಸಿ.... ದಾಳಿಂಬೆ ಮತ್ತು ಜೇನುತುಪ್ಪ  ದಾಳಿಂಬೆ ಮತ್ತು ಜೇನುತುಪ್ಪದ ಫೇಸ್ ಪ್ಯಾಕ್ ಚರ್ಮವನ್ನು ನೈಸರ್ಗಿಕವಾಗಿ ಇಡಲು ಸಹಾಯ ಮಾಡುತ್ತದೆ. - ಅರ್ಧ ಕಪ್ ದಾಳಿಂಬೆ ಕಾಳಿನ ಪೇಸ್ಟ್‍ಗೆ ಒಂದು...