ಒಣ ಚರ್ಮದ ಸಮಸ್ಯೆಗೆ 'ಹಣ್ಣುಗಳ ಫೇಸ್ ಪ್ಯಾಕ್' ಪ್ರಯತ್ನಿಸಿ ನೋಡಿ..
ಚರ್ಮ ನೋಡಿ ದೇಹದ ಆರೋಗ್ಯದ ಬಗ್ಗೆ ಹೇಳಬಹುದು ಎನ್ನುತ್ತಾರೆ. ಒಬ್ಬನ ಚರ್ಮವು ಒಳ್ಳೆಯ ರೀತಿಯಲ್ಲಿದ್ದರೆ ಆಗ ಆತನ ಆರೋಗ್ಯವು ಚೆನ್ನಾಗಿ ಇದೆ ಎನ್ನಬಹುದು. ಆದರೆ ದೇಹದಲ್ಲಿ ಕೆಲವೊಂದು ಬದಲಾವಣೆಗಳು ಆದಾಗ ಅದು ಚರ್ಮದಲ್ಲಿ ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ನೈಸರ್ಗಿಕ ತೇವಾಂಶ ಇಲ್ಲದೆ ಇರುವಂತಹ ಸಂದರ್ಭದಲ್ಲಿ ಒಣ ಚರ್ಮವು ಕಂಡುಬರುವುದು. ಸಂಪೂರ್ಣ ದೇಹವು ಇದರಿಂದ ಒಣಗದೆ ಇದ್ದರೂ ಕೆಲವೊಂದು ಭಾಗಗಳು ಒಣಗಿರುತ್ತದೆ. ಇಂತಹ ಒಣಚರ್ಮವು ಕೆಲವು ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಚರ್ಮವು ಒಣಗಿದ್ದ ಕಡೆಗಳಲ್ಲಿ ತುರಿಸುವುದು ಮತ್ತು ಗಡುಸಾಗಿರುತ್ತದೆ. ತುರಿಸಿದರೆ ಬಿಳಿ ಬಣ್ಣದ ಗೆರೆ ಚರ್ಮದ ಮೇಲೆ ಮೂಡುತ್ತದೆ. ಒಣ ಚರ್ಮದ ಸಮಸ್ಯೆಯು ಕೆಲವೊಂದು ಸಲ ತೀವ್ರವಾಗಬಹುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಇರುತ್ತದೆ. ಇದಕ್ಕೆ ಕೆಲವೊಂದು ಕ್ರೀಮ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇಂತಹ ಕ್ರೀಮ್‌ಗಳನ್ನು ಬಳಸಿಕೊಂಡು ಒಣ ಚರ್ಮ ನಿವಾರಣೆ ಮಾಡಬಹುದು. ಒಣ ಚರ್ಮ ಸಮಸ್ಯೆಗೆ ನೈಸರ್ಗಿಕ ಪರಿಹಾರ-ಪ್ರಯತ್ನಿಸಿ ನೋಡಿ ಆದರೆ ಇದಕ್ಕೆ ಉತ್ತಮ ಪರಿಹಾರವೆಂದರೆ ಮನೆಯಲ್ಲಿ ತಯಾರಿಸುವಂತಹ ಫೇಸ್ ಪ್ಯಾಕ್ ಬಳಸಿಕೊಳ್ಳುವುದು. ಹಣ್ಣುಗಳಿಂದ ತಯಾರಿಸುವಂತಹ ಫೇಸ್ ಪ್ಯಾಕ್ ಚರ್ಮಕ್ಕೆ ತೇವಾಂಶ ನೀಡುವುದು. ದೇಹದ ಯಾವುದೇ ಭಾಗಕ್ಕೆ ಈ ಪ್ಯಾಕ್ ಹಚ್ಚಿಕೊಳ್ಳಬಹುದು. ಒಳ್ಳೆಯ ಫಲಿತಾಂಶ ನೀಡಿದರೆ ಇದನ್ನು ಮುಂದೆ ಕೂಡ ಬಳಸಬಹುದು. ಹಣ್ಣು...