Posts

Showing posts from May, 2018

ಬಿಳಿ ತ್ವಚೆ ಪಡೆಯಲು ಕೆಲವು ನೈಸರ್ಗಿಕ ಫೇಸ್ ಮಾಸ್ಕ್‌ಗಳು

Image
ಪ್ರತಿಯೊಬ್ಬರಿಗೂ ತನ್ನ ಮೈಕಾಂತಿ ಬಿಳಿಯಾಗಿರಬೇಕೆಂಬ ಆಸೆ. ಹಿಂದಿನಿಂದಲೂ ದೇಹದ ವರ್ಣದ ಬಗ್ಗೆ ಅದಮ್ಯ ಪ್ರೀತಿ ಕಂಡುಬರುತ್ತಲಿದೆ. ಇದನ್ನೇ ಬಳಸಿಕೊಂಡು ಕಂಪೆನಿಗಳು ತ್ವಚೆಯ ವರ್ಣ ಬಿಳಿಯಾಗಿಸುವಂತಹ ಹಲವಾರು ರೀತಿಯ ಲೋಷನ್, ಕ್ರೀಮ್ ಮತ್ತು ಇತರ ಕೆಲವೊಂದು ಕಾಸ್ಮೆಟಿಕ್ ಗಳನ್ನು ಮಾರುಕಟ್ಟೆಗೆ ತರುತ್ತಲೇ ಇದೆ. ಇಂತಹ ಉತ್ಪನ್ನಗಳಿಂದ ಪಡೆಯುವಂತಹ ಬಿಳಿ ತ್ವಚೆಯು ಕೇವಲ ತಾತ್ಕಾಲಿಕ. ಇದು ದಿನಗಳೆದಂತೆ ನಿಮ್ಮ ತ್ವಚೆಯ ಬಣ್ಣ ಮತ್ತೆ ಹಿಂದಿನಂತೆ ಆಗುವಂತೆ ಮಾಡುವುದು. ಆದರೆ ಕೆಲವೊಂದು ನೈಸರ್ಗಿಕ ಸಾಮಗ್ರಿಗಳಿಂದ ಮೈಕಾಂತಿಯನ್ನು ಬಿಳಿಯಾಗಿಸಬಹುದು. ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಕೂಡ ಇಲ್ಲ. ಕಾಂತಿಯುತ ತ್ವಚೆ ಪಡೆಯಲು ಕೆಲವೊಂದು ನೈಸರ್ಗಿಕ ಸಾಮಗ್ರಿಗಳ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಾಗುವುದು. ಇಲ್ಲಿ ಕೊಟ್ಟಿರುವ ಹತ್ತು ತ್ವಚೆಯನ್ನು ಬಿಳಿಯಾಗಿಸುವ ಸಾಮಗ್ರಿಗಳಲ್ಲಿ ನೀವು ಒಂದು ಬಳಸಿಕೊಂಡು ಕಾಂತಿಯು ತ್ವಚೆ ಪಡೆಯಬಹುದು. ಈ ಮನೆಮದ್ದನ್ನು ಬಳಸುವ ಮೊದಲು ನೀವು ಮುಖವನ್ನು ಸರಿಯಾಗಿ ತೊಳೆದುಕೊಂಡು ಕೊಳೆ ಹಾಗೂ ಕಲ್ಮಷವನ್ನು ಒರೆಸಿಕೊಳ್ಳಿ. ಕಡಲೆಹಿಟ್ಟು+ಅರಶಿನ+ಹಾಲಿನಕೆನೆ+ರೋಸ್ ವಾಟರ್ ಎರಡು ಚಮಚ ಕಡಲೆ ಹಿಟ್ಟು , ಒಂದು ಚಿಟಿಕೆ ಅರಶಿನ ಹುಡಿ, ಒಂದು ಚಮಚ ಹಾಲಿನ ತಾಜಾ ಕೆನೆ ಮತ್ತು ಕೆಲವು ಹನಿ ರೋಸ್ ವಾಟರ್ ಹಾಕಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ನಿಮ್ಮ ಚರ್ಮವು ತುಂಬಾ ಒಣಗಿದ್ದರೆ ಇದಕ್ಕೆ ಕೆಲವು ಹನಿ ತೆಂಗಿ...

ಡ್ಯಾಂಡ್ರಫ್ ಸಮಸ್ಯೆ ಇದೆಯೇ? ಹಾಗಾದರೆ ಎಳ್ಳೆಣ್ಣೆ ತಲೆಗೆ ಹಚ್ಚಿಕೊಳ್ಳಿ!

Image
ಕಪ್ಪು, ದಪ್ಪ ಹಾಗೂ ಉದ್ದಗಿನ ಕೂದಲು ಮಹಿಳೆಯರ ಕನಸಾಗಿರುವುದು. ಇದನ್ನು ಪಡೆಯಲೆಂದು ಮಾರುಕಟ್ಟೆಯಲ್ಲಿ ಸಿಗುವಂತಹ ಹಲವಾರು ರೀತಿಯ ಶಾಂಪೂಗಳನ್ನು ಬಳಕೆ ಮಾಡುವರು. ಆದರೆ ಇದು ರಾಸಾಯನಿಕಯುಕ್ತವಾಗಿರುವ ಕಾರಣ ಕೂದಲಿಗೆ ಹಾನಿಯುಂಟು ಮಾಡುವುದು. ಮಹಿಳೆಯರಿಗೆ ಕೂದಲು ತೆಳುವಾಗಿದ್ದರೆ ಅದೇನೋ ಒಂದು ರೀತಿಯ ಸಂಕಟ. ಅದರಲ್ಲೂ ತಲೆಹೊಟ್ಟು ಇದ್ದರೆ ಹೇಳುವುದೇ ಬೇಡ. ಇಂತಹ ಸಮಸ್ಯೆಗಳಿಗೆ ನಮ್ಮ ಅಡುಗೆ ಮನೆಯಲ್ಲೇ ಕೆಲವೊಂದು ಪರಿಹಾರಗಳು ಇವೆ.  ಎಳ್ಳೆಣ್ಣೆಯಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆ ಮಾಡಬಹುದು. ಎಳ್ಳೆಣ್ಣೆಯು ರಕ್ತಪರಿಚಲನೆಯನ್ನು ಹೆಚ್ಚಿಸಿ, ವಿಷಕಾರಿ ಅಂಶ ಹೊರಹಾಕಿ, ಕೂದಲಿನ ಕೋಶಗಳು ವೇಗವಾಗಿ ಬೆಳೆಯಲು ನೆರವಾಗುವುದು. ನಂಜುನಿರೋಧಕ, ಶಿಲೀಂಧ್ರ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ಶಮನಕಾರಿ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿರುವ ಎಳ್ಳೆಣ್ಣೆಯು ಕೂದಲು ತುಂಬಾ ಆರೋಗ್ಯ ಹಾಗೂ ಶುದ್ಧವಾಗಿರುವಂತೆ ಮಾಡುವುದು. ಎಳ್ಳೆಣ್ಣೆಯು ಕೂದಲನ್ನು ಬಲಗೊಳಿಸಿ, ತುಂಡಾಗುವುದನ್ನು ತಪ್ಪಿಸುವುದು. ತಲೆಹೊಟ್ಟು ನಿವಾರಣೆ ಮಾಡುವುದು.  ತಲೆಹೊಟ್ಟು ಮತ್ತು ಹೇನು ನಿವಾರಣೆಗೆ ಇದು ತುಂಬಾ ಪರಿಣಾಮಕಾರಿಯಾಗಿದೆ. ತುರಿಕೆ, ತಲೆಹೊಟ್ಟು ಮತ್ತು ಒಣಗಿದ ತಲೆಬುರುಡೆ ನಿವಾರಣೆ ಮಾಡಲು ಎಳ್ಳೆಣ್ಣೆ ಉತ್ತಮ. ಇದು ಒಣ ಹಾಗೂ ಜಿಡ್ಡಿನ ತಲೆಬುರುಡೆಯನ್ನು ನಿವಾರಿಸಿ ತಲೆಬುರುಡೆಯ ಪಿಎಚ್ ಮಟ್ಟ ಮರುಸ್ಥಾಪಿಸುವುದು. ಕೂದಲಿನ ಬೆಳವಣ...

ಮೇಯನೇಸ್ ಬಳಸುವುದರ ಮೂಲಕ ಹೇನುಗಳಿಂದ ಮುಕ್ತಿ ಪಡೆಯಬಹುದೇ?

Image
ಮಹಿಳೆಯರು ಜೀವನದಲ್ಲಿ ಒಮ್ಮೆಯಾದರೂ ಹೇನುಗಳ ಕಾಟಕ್ಕೆ ಒಳಗಾಗದೆ ಇರಲಿಕ್ಕೆ ಸಾಧ್ಯವಿಲ್ಲ. ಬೆವರು, ಧೂಳು, ಮಣ್ಣು ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ತಲೆಯಲ್ಲಿ ಹೇನುಗಳು ತುಂಬಿಕೊಳ್ಳುತ್ತವೆ. ದಿನದಿಂದ ದಿನಕ್ಕೆ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುವ ಈ ಹೇನುಗಳನ್ನು ಸಣ್ಣ ರಾಕ್ಷಸ ಕುಲ ಎಂದು ಹೇಳಬಹುದು. ಹೇನುಗಳ ಕಾಟದಿಂದ ತಲೆಯಲ್ಲಿ ವಿಪರೀತವಾದ ತುರಿಕೆ, ಬೊಬ್ಬೆಗಳು, ಗಾಯ, ಹುಣ್ಣುಗಳಂತಹ ಸಮಸ್ಯೆಗಳನ್ನು ಎದುರಿಸಬೇಕಾಗುವುದು.  ಹೇನುಗಳ ಕಾಟಕ್ಕೆ ಒಳಗಾದವರ ಜೊತೆಯಲ್ಲಿ ಮಲಗುವುದು, ಕುಳಿತುಕೊಳ್ಳುವುದರ ಮೂಲಕವೂ ಇದು ಹರಡುತ್ತದೆ. ಹಾಗಾಗಿಯೇ ಇದನ್ನು ಒಬ್ಬರ ತಲೆಯಿಂದ ಒಬ್ಬರಿಗೆ ಹರಡಬಹುದಾದ ಪುಟ್ಟ ರಾಕ್ಷಸರು ಎಂದು ಸಹ ಕರೆಯುತ್ತಾರೆ. ಇವುಗಳ ನಿವಾರಣೆ ಕೊಂಚ ಕಷ್ಟ. ಇವುಗಳ ಹೆಚ್ಚಳವು ವಿಪರೀತವನ್ನು ಮೀರಿದರೆ ಕಣ್ಣುಗಳ ರೆಪ್ಪೆಗೆ, ಹುಬ್ಬುಗಳಿಗೆ ಸೇರಿದಂತೆ ದೇಹದ ಇತರೆಡೆಯಲ್ಲೂ ಹರಡುವ ಸಾಧ್ಯತೆಗಳಿರುತ್ತವೆ. ಹೇನುಗಳ ಸಮಸ್ಯೆಯಿಂದ ಮುಕ್ತಿ ಪಡೆಯಲು ಮಾರುಕಟ್ಟೆಯಲ್ಲಿ ಸಾಕಷ್ಟು ಔಷಧೀಯ ಉತ್ಪನ್ನಗಳು ದೊರೆಯುತ್ತವೆ. ಆದರೆ ಅವುಗಳಿಂದ ಸಂಪೂರ್ಣವಾಗಿ ಹೇನುಗಳನ್ನು ನಿವಾರಿಸಲು ಸಾಧ್ಯವಾಗದೆಯೂ ಇರಬಹುದು ಅಥವಾ ಅವುಗಳ ಬಳಕೆಯಿಂದ ಇತರ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆಗಳೂ ಇರುತ್ತವೆ. ಹಾಗಾಗಿ ಕೆಲವು ಮನೆ ಆರೈಕೆಯ ವಿಧಾನದಿಂದ ಹೇನುಗಳನ್ನು ಓಡಿಸುವುದು ಸೂಕ್ತ.  ಹೌದು, ನಿಮಗೆ ಆಶ್ಚರ್ಯ ಎನಿಸಬಹುದು...

ಬ್ಯೂಟಿ ಟಿಪ್ಸ್: ಸೌತೆಕಾಯಿ ಫೇಶಿಯಲ್-ಸ್ಟೆಪ್ ಬೈ ಸ್ಟೆಪ್ ಟಿಪ್ಸ್..

Image
ನಾವೆಲ್ಲರೂ ನಮ್ಮ ಚರ್ಮ ಮತ್ತು ಕೂದಲಿನ ಕಾಳಜಿ ತೆಗೆದುಕೊಳ್ಳುವುದನ್ನು ಪ್ರೀತಿಸುತ್ತೇವೆ. ಆದರೆ ಹೆಚ್ಚಿನವರು ಚರ್ಮದ ಕಾಳಜಿಗಾಗಿ ಮತ್ತು ಮಸಾಜ್ , ಫೇಶಿಯಲ್ ಇತ್ಯಾದಿ ಬ್ಯೂಟಿ ಚಿಕಿತ್ಸೆಗಳಿಗಾಗಿ ಅತಿಯಾಗಿ ಹಣ ತೆಗೆದುಕೊಳ್ಳುವ ಪಾರ್ಲರ್ ಗಳ ಮೊರೆ ಹೋಗುತ್ತೇವೆ. ಆದರೆ ಅವರು ನಿಜಕ್ಕೂ ನಮಗೆ ಹಿತವಾದದ್ದಾ? ಹೀಗೆ ಕೇಳಿದರೆ ಉತ್ತರ ಖಂಡಿತ ಇಲ್ಲ ಎನ್ನುವುದೇ ಆಗಿರುತ್ತದೆ. ಇದಕ್ಕೆ ಕಾರಣ ಸಲೂನ್ ನಲ್ಲಿ ನೀಡಲಾಗುವ ಚಿಕಿತ್ಸೆಗಳಲ್ಲಿ ಬಹಳಷ್ಟು ರಾಸಾಯನಿಕಗಳಿರುತ್ತವೆ.  ಒಂದು ವೇಳೆ ನೀವು ಹಣ್ಣಿನ ಮಸಾಜ್ ಇಲ್ಲವೇ ಹಣ್ಣಿನ ಫೇಶಿಯಲ್ ಅಥವಾ ಕ್ಲೀನ್ ಅಪ್ ಗಳನ್ನು ಮಾಡಿಸಿಕೊಂಡರೂ ಕೂಡ ಅದರಲ್ಲೂ ಕೆಲವು ಬಗೆಯ ಕೆಮಿಕಲ್ ಗಳಿರುವ ಸಾಧ್ಯತೆಯಿದೆ. ನೀವು ಹಣ್ಣಿನ ಚಿಕಿತ್ಸೆ ತೆಗೆದುಕೊಂಡಿದ್ದೀರಿ ಎಂದಾದರೆ ಅದು ನೈಸರ್ಗಿಕವಾಗಿಯೇ ಇರುತ್ತೆ ಮತ್ತು ರಾಸಾಯನಿಕ ರಹಿತವಾಗಿಯೇ ಇರುತ್ತೆ ಎಂದು ಹೇಳಲಾಗುವುದಿಲ್ಲ. ಹಾಗಾದ್ರೆ, ನಾವೇನು ಮಾಡಬೇಕು? ಮನೆಯಲ್ಲೇ ಫೇಶಿಯಲ್ ಮಾಡಿಕೊಂಡರೆ ಹೇಗಿರುತ್ತೆ? ಕೇಳೋಕೆ ಕುತೂಹಲಕಾರಿಯಾಗಿದೆ ಅಲ್ವಾ? ನಮ್ಮನ್ನ ನಂಬಿ. ನಾವು ಹೇಳುವ ಯಾವುದೇ ವಿಚಾರ ಕಠಿಣವಾಗಿ ಇರುವುದಿಲ್ಲ.ಬದಲಾಗಿ ನೀವು ಸುಲಭದಲ್ಲಿ ಕಡಿಮೆ ಪದಾರ್ಥಗಳನ್ನು ಬಳಸಿ ಮನೆಯಲ್ಲೇ ಫೇಶಿಯಲ್ ಮಾಡಿಕೊಳ್ಳಬಹುದು.  ಈ ಫೇಶಿಯಲ್ ಗಳನ್ನು ನೀವು ಮನೆಯಲ್ಲೇ 3 ಹಂತಗಳಲ್ಲಿ ತಯಾರಿಸಿಕೊಳ್ಳಬಹುದು. ಅವುಗಳು ಯಾವುವೆಂದರೆ ಟೋನರ್, ಸ್ಕ್ರಬ್ ಮತ್ತು ಫೇಸ್...

ಲಿಂಬೆ ಹಣ್ಣಿನ ಫೇಸ್ ಪ್ಯಾಕ್..! ಇನ್ನಷ್ಟು ಸೌಂದರ್ಯವಾಗಿ ಕಾಣುವಿರಿ

Image
ಸಿಟ್ರಸ್ ಗುಣವನ್ನು ಹೊಂದಿರುವ ಲಿಂಬೆಹಣ್ಣು ಹಲವಾರು ರೀತಿಯಿಂದ ನಮ್ಮ ಆರೋಗ್ಯಕ್ಕೆ ಲಾಭಕಾರಿಯಾಗಿದೆ. ಇದರಲ್ಲಿ ಕೆಲವೊಂದು ಪ್ರಮುಖ ವಿಟಮಿನ್ ಗಳು ಮತ್ತು ಖನಿಜಾಂಶಗಳು ಮಾತ್ರವಲ್ಲದೆ ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಇದರ ಹೊರತಾಗಿ ಲಿಂಬೆಯನ್ನು ಸೌಂದರ್ಯವರ್ಧಕವಾಗಿಯೂ ಬಳಸಿಕೊಳ್ಳಬಹುದಾಗಿದೆ. ಹೌದು, ನಿಮ್ಮ ಸೌಂದರ್ಯದ ಆರೈಕೆಯಲ್ಲಿ ಲಿಂಬೆಯನ್ನು ಫೇಸ್ ಪ್ಯಾಕ್ ಹಾಗೂ ಮಾಸ್ಕ್ ಆಗಿ ಬಳಸಬಹುದು. ಇದರಿಂದ ನಿಮ್ಮ ಸೌಂದರ್ಯವೃದ್ಧಿಯಾಗುವುದು. ನಮಗೆಲ್ಲರಿಗೂ ಮೊಡವೆ, ಕಲೆಗಳು ಮತ್ತು ಒಣಚರ್ಮ ಇತ್ಯಾದಿ ಸಾಮಾನ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು.  ಇದಕ್ಕೆ ಒಳ್ಳೆಯ ಪರಿಣಾಮವೆಂದರೆ ಲಿಂಬೆಯನ್ನು ಬಳಸುವುದು. ಎಲ್ಲಾ ಋತುಗಳಲ್ಲಿ ಲಭ್ಯವಿರುವಂತಹ ಲಿಂಬೆ ಹಣ್ಣನ್ನು ಹೇಗೆ ಬಳಸುವುದು ಎನ್ನುವ ಬಗ್ಗೆ ನಿಮಗೆ ಚಿಂತೆಯಾಗಿದೆಯಾ? ಅದರ ಬಗ್ಗೆ ನೀವು ಯೋಚಿಸುವುದೇ ಬೇಡ. ಈ ಲೇಖನವನ್ನು ಓದುತ್ತಾ ಹೋದರೆ ನಿಮಗೆ ಲಿಂಬೆಯ ಸೌಂದರ್ಯವರ್ಧಕ ಗುಣಗಳ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ. ನೀವು ಮನೆಯಲ್ಲೇ ಇದ್ದುಕೊಂಡು ಲಿಂಬೆಯನ್ನು ಬಳಸಿದರೆ ಕಾಂತಿಯುತ, ಸುಂದರ ತ್ವಚೆಯು ನಿಮ್ಮದಾಗುವುದು. ಲಿಂಬೆ ಬಳಸುವುದು ಹೇಗೆ ತಿಳಿಯಿರಿ.  ಮೊದಲ ಹಂತ: ಶುಚಿಗೊಳಿಸುವುದು  ಫೇಶಿಯಲ್ ಗೆ ಮೊದಲು ನಿಮ್ಮ ಮುಖವನ್ನು ಶುಚಿಗೊಳಿಸುವುದು ತುಂಬಾ ಮುಖ್ಯ. ಇದರಿಂದ ಧೂಳು, ಕೊಳೆ, ಅತಿಯಾದ ಎಣ್ಣೆ ಮತ್ತು ಕಲ್ಮಶಗಳು ದೂರವಾಗುವುದು. ಇದರಿಂದ ಚರ್ಮವು ಸುಂದ...