ಡ್ಯಾಂಡ್ರಫ್ ಸಮಸ್ಯೆ ಇದೆಯೇ? ಹಾಗಾದರೆ ಎಳ್ಳೆಣ್ಣೆ ತಲೆಗೆ ಹಚ್ಚಿಕೊಳ್ಳಿ!
ಕಪ್ಪು, ದಪ್ಪ ಹಾಗೂ ಉದ್ದಗಿನ ಕೂದಲು ಮಹಿಳೆಯರ ಕನಸಾಗಿರುವುದು. ಇದನ್ನು ಪಡೆಯಲೆಂದು ಮಾರುಕಟ್ಟೆಯಲ್ಲಿ ಸಿಗುವಂತಹ ಹಲವಾರು ರೀತಿಯ ಶಾಂಪೂಗಳನ್ನು ಬಳಕೆ ಮಾಡುವರು. ಆದರೆ ಇದು ರಾಸಾಯನಿಕಯುಕ್ತವಾಗಿರುವ ಕಾರಣ ಕೂದಲಿಗೆ ಹಾನಿಯುಂಟು ಮಾಡುವುದು. ಮಹಿಳೆಯರಿಗೆ ಕೂದಲು ತೆಳುವಾಗಿದ್ದರೆ ಅದೇನೋ ಒಂದು ರೀತಿಯ ಸಂಕಟ. ಅದರಲ್ಲೂ ತಲೆಹೊಟ್ಟು ಇದ್ದರೆ ಹೇಳುವುದೇ ಬೇಡ. ಇಂತಹ ಸಮಸ್ಯೆಗಳಿಗೆ ನಮ್ಮ ಅಡುಗೆ ಮನೆಯಲ್ಲೇ ಕೆಲವೊಂದು ಪರಿಹಾರಗಳು ಇವೆ.
ಎಳ್ಳೆಣ್ಣೆಯಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆ ಮಾಡಬಹುದು. ಎಳ್ಳೆಣ್ಣೆಯು ರಕ್ತಪರಿಚಲನೆಯನ್ನು ಹೆಚ್ಚಿಸಿ, ವಿಷಕಾರಿ ಅಂಶ ಹೊರಹಾಕಿ, ಕೂದಲಿನ ಕೋಶಗಳು ವೇಗವಾಗಿ ಬೆಳೆಯಲು ನೆರವಾಗುವುದು. ನಂಜುನಿರೋಧಕ, ಶಿಲೀಂಧ್ರ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ಶಮನಕಾರಿ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿರುವ ಎಳ್ಳೆಣ್ಣೆಯು ಕೂದಲು ತುಂಬಾ ಆರೋಗ್ಯ ಹಾಗೂ ಶುದ್ಧವಾಗಿರುವಂತೆ ಮಾಡುವುದು. ಎಳ್ಳೆಣ್ಣೆಯು ಕೂದಲನ್ನು ಬಲಗೊಳಿಸಿ, ತುಂಡಾಗುವುದನ್ನು ತಪ್ಪಿಸುವುದು. ತಲೆಹೊಟ್ಟು ನಿವಾರಣೆ ಮಾಡುವುದು.
ತಲೆಹೊಟ್ಟು ಮತ್ತು ಹೇನು ನಿವಾರಣೆಗೆ ಇದು ತುಂಬಾ ಪರಿಣಾಮಕಾರಿಯಾಗಿದೆ. ತುರಿಕೆ, ತಲೆಹೊಟ್ಟು ಮತ್ತು ಒಣಗಿದ ತಲೆಬುರುಡೆ ನಿವಾರಣೆ ಮಾಡಲು ಎಳ್ಳೆಣ್ಣೆ ಉತ್ತಮ. ಇದು ಒಣ ಹಾಗೂ ಜಿಡ್ಡಿನ ತಲೆಬುರುಡೆಯನ್ನು ನಿವಾರಿಸಿ ತಲೆಬುರುಡೆಯ ಪಿಎಚ್ ಮಟ್ಟ ಮರುಸ್ಥಾಪಿಸುವುದು. ಕೂದಲಿನ ಬೆಳವಣಿಗೆ ದ್ವಿಗುಣಗೊಳಿಸುವ ಮತ್ತು ತಲೆಹೊಟ್ಟು ನಿವಾರಣೆಗೆ ಸಹಕರಿಸುವ ಕೆಲವು ಮನೆಮದ್ದಿನ ಬಗ್ಗೆ ಈ ಲೇಖನದಲ್ಲಿ ತಿಳಿಯುವ.

Comments
Post a Comment