Posts

Showing posts from August, 2018

ಕಣ್ಣಿನ ಆರೋಗ್ಯಕ್ಕಾಗಿ ಒಂದಷ್ಟು ...!

Image
ಕಣ್ಣು ಸೌಂದರ್ಯ ಮತ್ತು ಆತ್ಮವಿಶ್ವಾಸಕ್ಕೆ ಪ್ರತೀಕ. ಇದು ಮುಖದ ಸೌಂದರ್ಯ ಆಕರ್ಷಣೀಯವಾಗಿ ಇರಬೇಕೆಂದರೆ ಕಣ್ಣಿನ ಹೊಳಪು ಸುಂದರವಾಗಿರ ಬೇಕು ಎನ್ನುತ್ತಾರೆ ತಜ್ಞರು. ಆದ್ದರಿಂದ ಸೌಂದರ್ಯ ವರ್ಣಿಸಬೇಕೆಂದರೆ ಕಣ್ಣಿನ ಬಗ್ಗೆ ಬರೆಯುವುದು- ಹೇಳುವುದು ಸಾಮಾನ್ಯ ಸಂಗತಿ. ಮುತ್ತಿನಂತಹ, ದುಂಬಿಯಂತಹ ಕಣ್ಣು ಎಂದೆಲ್ಲ ವರ್ಣಿಸುವುದು ಸಾಮಾನ್ಯ.  ಆದರೆ ಅನೇಕ ಕಾರಣಗಳಿಂದ ಕಣ್ಣುಗಳು ಕಳಾಹೀನವಾಗುತ್ತದೆ. ಇದಕ್ಕೆ ಮುಖ್ಯ ಕಾರಣಗಳು ಏನೇ ಇದ್ದರೂ, ಮನಸ್ಸಿಗೆ ಕಿರಿಕಿರಿ ಆಗುವುದು ಸಹಜ. ಅದರಲ್ಲೂ ಕಣ್ಣಿನ ಕೆಳಗೆ ಉಬ್ಬಿದಂತೆ ಇದ್ದರೆ, ಕಪ್ಪು ವರ್ತುಲದಂತಹ ಸಮಸ್ಯೆಗಳು ಇದ್ದಾಗ ನಮ್ಮಲ್ಲಿ ಆತ್ಮವಿಶ್ವಾಸವೇ ದೂರವಾಗುತ್ತದೆ.  ಒಂದು ಕರವಸ್ತ್ರ ಇಲ್ಲವೇ ಚಿಕ್ಕ ಟವೆಲಿನಲ್ಲಿ ಐಸ್ ಕ್ಯೂಬ್ ಇಟ್ಟು ಸ್ವಲ್ಪ ಕಾಲ ಕಣ್ಣಿನ ಮೇಲಿಡಿ. ಹಸಿಯಾದ ಆಲುಗಡ್ಡೆ ತುರಿದು ಅದನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳಿ  ಸೌತೆ ಕಾಯಿಯನ್ನು ಸಹ ಇದೆ ರೀತಿ ಮಾಡ ಬಹುದಾಗಿದೆ.  ಸಮಯಕ್ಕೆ ಸರಿಯಾಗಿ ನಿದ್ರಿಸಿ, ಅನಗತ್ಯ ಸಂಗತಿಗಳ ಬಗ್ಗೆ ಚಿಂತೆ ಮಾಡದಿರಿ. ದೇಹಕ್ಕೆ ವ್ಯಾಯಾಮ ಅತ್ಯಗತ್ಯ . ನಿರಂತವಾದ ವ್ಯಾಯಾಮ ಮಾಡುವುದರಿಂದ ಕಣ್ಣಿನ ಕೆಳಗೆ ಇರುವ ಉಬ್ಬು ದೂರ ಮಾಡ ಬಹುದಾಗಿದೆ. ಉಪ್ಪಿನ ಪ್ರಮಾಣದ ಬಳಕೆ ಮಿತಿಯಲ್ಲಿರಲಿ .  ಹೀಗೆ ಸಣ್ಣ ಪುಟ್ಟ ಸಂಗತಿಗಳು ನಿಮ್ಮ ಕಣ್ಣನ್ನು ಸುಂದರವಾಗಿಡುತ್ತದೆ

ಮುಖದ ಅಂದ ಹೆಚ್ಚಿಸಲು ಏನೇನು ಮಾಡಬೇಕು?

Image
ಮುಖ ನಮ್ಮ ವ್ಯಕ್ತಿತ್ವದ ಗುರುತು ಇದ್ದಂತೆ. ನಮ್ಮ ಮುಖ ಹೇಗಿರುತ್ತದೋ ಹಾಗೇ ನಮ್ಮ ವ್ಯಕ್ತಿತ್ವವೂ ಇರುತ್ತದೆ ಅಂತಾರೆ. ಅಂದದ ಮುಖದಲ್ಲೇ ಇಂಪ್ರೆಸ್ ಮಾಡಬೇಕಾದರೆ ಅದನ್ನು ಸರಳ ಉಪಾಯಗಳಿಂದ ಸುಂದರವಾಗಿರಿಸಿ. ·         ಒಳ್ಳೆ ಕಾಂತಿಗೆ ಟೊಮೆಟೋ ರಸವನ್ನು ಹಚ್ಚಿ ನಂತರ ಮುಖ ತೊಳೆದುಕೊಳ್ಳಿ. ·         ಗುಲಾಬಿ ಹೂವಿನ ದಳ ಮತ್ತು ಶ್ರೀಗಂಧವನ್ನು ಜತೆಗೆ ಅರೆದುಕೊಂಡು ಮುಖಕ್ಕೆ ಹಚ್ಚಿಕೊಂಡು ನಂತರ ತೊಳೆದುಕೊಳ್ಳಿ. ·         ಮುಖ ಎಣ್ಣೆ ಸೋಕಿದಂತೆ ಜಿಡ್ಡು ಇದ್ದರೆ ತಣ್ಣೀರಿನಲ್ಲಿ ಆಗಾಗ್ಗೆ ಮುಖ ತೊಳೆದುಕೊಳ್ಳಿ. ·         ಎಳೆನೀರು ಕುಡಿಯಿರಿ ಮತ್ತು ತೆಂಗಿನ ಕಾಯಿಯ ನೀರಿನಿಂದ ಮುಖ ತೊಳೆದುಕೊಂಡರೆ ಉತ್ತಮ. ·         ಚರ್ಮ ಬಿರುಕಾಗಿದ್ದರೆ ಪ್ರತಿ ನಿತ್ಯ ಆ ಭಾಗಗಳಿಗೆ ಸಾಸಿವೆ ಎಣ್ಣೆ ಹಚ್ಚಿ. ·         ಮಂಜುಗಡ್ಡೆ ಲೇಪನ ಮುಖಕ್ಕೆ ಒಳ್ಳೆ ಲೇಪನ. ·         ರಾತ್ರಿ ಮಲಗುವ ಮುನ್ನ ಹಾಲಿನ ಕೆನೆ ಸವರಿ ಮಲಗಿಕೊಂಡರೆ ಚರ್ಮ ಮೃದುವಾಗುವುದು. ·         ಎಷ್ಟೇ ಮೇಕಪ್ ಮಾಡಿಕೊಂಡರೂ ರಾತ್ರಿ ಮಲಗುವ ಮುನ್ನ ಮಂಜುಗಡ್ಡೆ ಹಾಕಿ ಮುಖ ತೊಳೆದುಕೊಂಡು ಮಲಗಿ.

ಬಿಸಿಲಿಗೆ ಧಗೆಗೆ ಮುಖ ಕಪ್ಪಾಗುವುದನ್ನು ತಡೆಯಬೇಕೆ...? ಇಲ್ಲಿದೆ ನೋಡಿ ಟಿಪ್ಸ್

Image
ಬಿಸಿಲಿನಲ್ಲಿ ಹೆಚ್ಚು ತಿರುಗಾಡುವುದರಿಂದ ನಮ್ಮ ಮುಖ ಕಪ್ಪಾಗುತ್ತದೆ. ಇದರಿಂದ ಮುಖದ ಅಂದ ಕೆಡುತ್ತದೆ. ಇದನ್ನು ತಡೆಯಲು ಈ ವಿಧಾನಗಳನ್ನು ಅನುಸರಿಸಿ. ಅತಿ ಪ್ರಕಾಶಮಾನವಾದ ಸೂರ್ಯ ಕಿರಣಗಳಿಗೆ ಹೆಚ್ಚು ನಮ್ಮನ್ನು ಒಡ್ಡದಿರುವದು, ಮಾಸ್ಕ್ ಹಾಕುವದು, ಛತ್ರಿಗಳನ್ನು ಬಳಸುವದು, ಸನ್‌ ಕೋಟ್‌ ಹಾಕುವುದು. ಸನ್‌ ಕ್ರೀಮ್‌'ಗಳನ್ನು ಇಲ್ಲವೆ, ಸನ್‌ ಪೊಟೆಕ್ಷನ್‌ ಫ್ಯಾಕ್ಟರ್‌ ಇರುವ ಜೆಲ್‌, ಲೋಶನ್‌, ಕ್ರೀಮ್‌ ಬಳಸುವುದು. ಅಲೊವೆರಾ ಕ್ರೀಮ್‌, ಲೋಶನ್‌ಗಳನ್ನು ಉಪಯೊಗಿಸಬಹುದು. ಮನೆಯಲ್ಲಿ ನೈಸರ್ಗಿಕವಾಗಿ ಮಾಡಿಕೊಳ್ಳಬಹುದಾದ ಮನೆಮದ್ದುಗಳು - ನಿತ್ಯ ಸ್ನಾನಕ್ಕೆ 10 ನಿಮಿಷ ಮೊದಲು ಹಾಲಿನಿಂದ ಮಸಾಜ್‌ ಮಾಡಿ, ಜೇನುತುಪ್ಪವನ್ನು ಟ್ಯಾನ್‌ ಆದ ಜಾಗದಲ್ಲಿ ಲೇಪಿಸಿ, 20 ನಿಮಿಷ ಬಿಟ್ಟು ತೊಳೆಯುವುದು. ಟೊಮ್ಯಾಟೊ ರಸವನ್ನು, ಜೇನುತುಪ್ಪವನ್ನು ಹಾಲಿನೊಂದಿಗೆ ಬೆರೆಸಿ ಲೇಪಿಸಿ. ಮೊಸರು, ಲೊಳೆಸರ, ಅರಿಶಿನ ಬೆರೆಸಿ ಲೇಪಿಸಿ, ಹೆಚ್ಚು ನೀರನ್ನು ಸೇವಿಸಿ, ಆ್ಯಂಟಿಆಕ್ಸಿಡೆಂಟ್‌ ಇರುವ ಹಣ್ಣು, ಆಹಾರವನ್ನು ಸೇವಿಸಿ ಇದನ್ನು ತಡೆಗಟ್ಟಬಹುದಾಗಿದೆ.