Posts

Showing posts from July, 2018

ಮುಖದ ಅಂದ ಹೆಚ್ಚಿಸಲು ಏನೇನು ಮಾಡಬೇಕು?

Image
ಮುಖ ನಮ್ಮ ವ್ಯಕ್ತಿತ್ವದ ಗುರುತು ಇದ್ದಂತೆ. ನಮ್ಮ ಮುಖ ಹೇಗಿರುತ್ತದೋ ಹಾಗೇ ನಮ್ಮ ವ್ಯಕ್ತಿತ್ವವೂ ಇರುತ್ತದೆ ಅಂತಾರೆ. ಅಂದದ ಮುಖದಲ್ಲೇ ಇಂಪ್ರೆಸ್ ಮಾಡಬೇಕಾದರೆ ಅದನ್ನು ಸರಳ ಉಪಾಯಗಳಿಂದ ಸುಂದರವಾಗಿರಿಸಿ. ·         ಒಳ್ಳೆ ಕಾಂತಿಗೆ ಟೊಮೆಟೋ ರಸವನ್ನು ಹಚ್ಚಿ ನಂತರ ಮುಖ ತೊಳೆದುಕೊಳ್ಳಿ. ·         ಗುಲಾಬಿ ಹೂವಿನ ದಳ ಮತ್ತು ಶ್ರೀಗಂಧವನ್ನು ಜತೆಗೆ ಅರೆದುಕೊಂಡು ಮುಖಕ್ಕೆ ಹಚ್ಚಿಕೊಂಡು ನಂತರ ತೊಳೆದುಕೊಳ್ಳಿ. ·         ಮುಖ ಎಣ್ಣೆ ಸೋಕಿದಂತೆ ಜಿಡ್ಡು ಇದ್ದರೆ ತಣ್ಣೀರಿನಲ್ಲಿ ಆಗಾಗ್ಗೆ ಮುಖ ತೊಳೆದುಕೊಳ್ಳಿ. ·         ಎಳೆನೀರು ಕುಡಿಯಿರಿ ಮತ್ತು ತೆಂಗಿನ ಕಾಯಿಯ ನೀರಿನಿಂದ ಮುಖ ತೊಳೆದುಕೊಂಡರೆ ಉತ್ತಮ. ·         ಚರ್ಮ ಬಿರುಕಾಗಿದ್ದರೆ ಪ್ರತಿ ನಿತ್ಯ ಆ ಭಾಗಗಳಿಗೆ ಸಾಸಿವೆ ಎಣ್ಣೆ ಹಚ್ಚಿ. ·         ಮಂಜುಗಡ್ಡೆ ಲೇಪನ ಮುಖಕ್ಕೆ ಒಳ್ಳೆ ಲೇಪನ. ·         ರಾತ್ರಿ ಮಲಗುವ ಮುನ್ನ ಹಾಲಿನ ಕೆನೆ ಸವರಿ ಮಲಗಿಕೊಂಡರೆ ಚರ್ಮ ಮೃದುವಾಗುವುದು. ·         ಎಷ್ಟೇ ಮೇಕಪ್ ಮಾಡಿಕೊಂಡರೂ ರಾತ್ರಿ ಮಲಗುವ ಮುನ್ನ ಮಂಜುಗಡ್ಡೆ ಹಾಕಿ ಮುಖ ತೊಳೆದುಕೊಂಡು ಮಲಗಿ.

ಕಣ್ಣಿನ ಆರೋಗ್ಯಕ್ಕಾಗಿ ಒಂದಷ್ಟು ...!

Image
ಕಣ್ಣು ಸೌಂದರ್ಯ ಮತ್ತು ಆತ್ಮವಿಶ್ವಾಸಕ್ಕೆ ಪ್ರತೀಕ. ಇದು ಮುಖದ ಸೌಂದರ್ಯ ಆಕರ್ಷಣೀಯವಾಗಿ ಇರಬೇಕೆಂದರೆ ಕಣ್ಣಿನ ಹೊಳಪು ಸುಂದರವಾಗಿರ ಬೇಕು ಎನ್ನುತ್ತಾರೆ ತಜ್ಞರು. ಆದ್ದರಿಂದ ಸೌಂದರ್ಯ ವರ್ಣಿಸಬೇಕೆಂದರೆ ಕಣ್ಣಿನ ಬಗ್ಗೆ ಬರೆಯುವುದು- ಹೇಳುವುದು ಸಾಮಾನ್ಯ ಸಂಗತಿ. ಮುತ್ತಿನಂತಹ, ದುಂಬಿಯಂತಹ ಕಣ್ಣು ಎಂದೆಲ್ಲ ವರ್ಣಿಸುವುದು ಸಾಮಾನ್ಯ.  ಆದರೆ ಅನೇಕ ಕಾರಣಗಳಿಂದ ಕಣ್ಣುಗಳು ಕಳಾಹೀನವಾಗುತ್ತದೆ. ಇದಕ್ಕೆ ಮುಖ್ಯ ಕಾರಣಗಳು ಏನೇ ಇದ್ದರೂ, ಮನಸ್ಸಿಗೆ ಕಿರಿಕಿರಿ ಆಗುವುದು ಸಹಜ. ಅದರಲ್ಲೂ ಕಣ್ಣಿನ ಕೆಳಗೆ ಉಬ್ಬಿದಂತೆ ಇದ್ದರೆ, ಕಪ್ಪು ವರ್ತುಲದಂತಹ ಸಮಸ್ಯೆಗಳು ಇದ್ದಾಗ ನಮ್ಮಲ್ಲಿ ಆತ್ಮವಿಶ್ವಾಸವೇ ದೂರವಾಗುತ್ತದೆ.  ಒಂದು ಕರವಸ್ತ್ರ ಇಲ್ಲವೇ ಚಿಕ್ಕ ಟವೆಲಿನಲ್ಲಿ ಐಸ್ ಕ್ಯೂಬ್ ಇಟ್ಟು ಸ್ವಲ್ಪ ಕಾಲ ಕಣ್ಣಿನ ಮೇಲಿಡಿ. ಹಸಿಯಾದ ಆಲುಗಡ್ಡೆ ತುರಿದು ಅದನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳಿ  ಸೌತೆ ಕಾಯಿಯನ್ನು ಸಹ ಇದೆ ರೀತಿ ಮಾಡ ಬಹುದಾಗಿದೆ.  ಸಮಯಕ್ಕೆ ಸರಿಯಾಗಿ ನಿದ್ರಿಸಿ, ಅನಗತ್ಯ ಸಂಗತಿಗಳ ಬಗ್ಗೆ ಚಿಂತೆ ಮಾಡದಿರಿ. ದೇಹಕ್ಕೆ ವ್ಯಾಯಾಮ ಅತ್ಯಗತ್ಯ . ನಿರಂತವಾದ ವ್ಯಾಯಾಮ ಮಾಡುವುದರಿಂದ ಕಣ್ಣಿನ ಕೆಳಗೆ ಇರುವ ಉಬ್ಬು ದೂರ ಮಾಡ ಬಹುದಾಗಿದೆ. ಉಪ್ಪಿನ ಪ್ರಮಾಣದ ಬಳಕೆ ಮಿತಿಯಲ್ಲಿರಲಿ .  ಹೀಗೆ ಸಣ್ಣ ಪುಟ್ಟ ಸಂಗತಿಗಳು ನಿಮ್ಮ ಕಣ್ಣನ್ನು ಸುಂದರವಾಗಿಡುತ್ತದೆ

ಫ್ರೆಂಚ್ ಮಹಿಳೆಯರ ಬ್ಯೂಟಿ ಸೀಕ್ರೆಟ್ಸ್- ಕೇಳಿದರೆ ಅಚ್ಚರಿಗೊಳ್ಳುವಿರಿ!

Image
ನೈಸರ್ಗಿಕ ಸೌಂದರ್ಯ ಮತ್ತು ಚರ್ಮದ ಕಾಳಜಿ ವಿಚಾರಕ್ಕೆ ಬಂದರೆ ಫ್ರೆಂಚ್ ಮಹಿಳೆಯರು ಮುಂಚೂಣಿ ಯಲ್ಲಿ ಇರುತ್ತಾರೆ ಮತ್ತು ಅವರ ಬ್ಯೂಟಿ ಬಗ್ಗೆ ಯಾವುದೇ ಸೀಕ್ರೇಟ್ ಕೂಡ ಇಲ್ಲ. ಭಾರತೀಯ ಮಹಿಳೆಯರಿಗೆ ಅವರ ತ್ವಚೆಯ ಸೌಂದರ್ಯ ರಹಸ್ಯ ಏನು ಎಂಬ ಬಗ್ಗೆ ಕುತೂಹಲ ಮೂಡುವುದು ಸಹಜವೇ ಆಗಿದೆ. ಹೊಳೆಯುವ ತ್ವಚೆ ಮತ್ತು ಕಾಂತಿಯುವ ಚರ್ಮವು ಎಂತವರನ್ನು ಸೆಳೆಯುತ್ತದೆ.  ಹಾಗಾದ್ರೆ ಫ್ರೆಂಚ್ ಮಹಿಳೆಯರು ಅನುಸರಿಸುವ ಬ್ಯೂಟಿ ಸೂತ್ರ ಯಾವುದು? ಯಾವ ಸೌಂದರ್ಯ ಕಾಳಜಿಯು ಅವರನ್ನು ಇಷ್ಟು ಸೌಂದರ್ಯವಂತರನ್ನಾಗಿ ಮಾಡುತ್ತದೆ? ನಮಗಿಂತ ಅವರು ಯಾವ ವಿಭಿನ್ನ ಸೌಂದರ್ಯ ಪ್ರಜ್ಞೆಯನ್ನು ಹೊಂದಿರುತ್ತಾರೆ ಎಂಬುದು ಎಲ್ಲರಲ್ಲೂ ಉಂಟಾಗುವ ಸಹಜ ಪ್ರಶ್ನೆ.  ಹಾಗಂತ, ಇದ್ಯಾವುದೇ ರಾಕೆಟ್ ವಿಜ್ಞಾನವೂ ಅಲ್ಲ, ಅವರು ಯಾವುದೇ ವಿಶೇಷ ತಂತ್ರಜ್ಞಾನವನ್ನು ತಮ್ಮ ಸೌಂದರ್ಯಕ್ಕಾಗಿ ಬಳಸುವುದೂ ಇಲ್ಲ. ಕೆಲವು ಸರಳ ವಿಚಾರಗಳೇ ಫ್ರೆಂಚ್ ಮಹಿಳೆಯರನ್ನು ಅಷ್ಟು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಅವರು ಅವರ ಬೇಸಿಕ್ ಸೌಂದರ್ಯ ವಿಚಾರಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಅವರು ಯಾವುದೇ ಕಠಿಣ ವಿಚಾರಗಳನ್ನು, ಗಾಢವಾಗಿರುವ ಮತ್ತು ಆಳವಾದ ಮೇಕಪ್ ಗಳನ್ನು ಅಥವಾ ಬ್ಯೂಟಿ ಟ್ರೀಟ್ ಮೆಂಟ್ ಗಳನ್ನು ಪಡೆಯುವುದಿಲ್ಲ. ಅವರು ಸರಳವಾಗಿರುತ್ತಾರೆ .. ಅತ್ಯಂತ ಸರಳವಾಗಿರುತ್ತಾರೆ. ಬಹುಶ್ಯಃ ಅದೇ ಕಾರಣವೇ ಅವರನ್ನು ಅಷ್ಟು ಸುಂದರ ಗೊಳಿಸುವುದಾಗಿದೆ.ಅವರು ಅದೇ ಬೆಸ್ಟ್ ಎಂದು ಹೇಳ...

ಉಗುರಿನ ಸಂರಕ್ಷಣೆ-ಸುಂದರ ಉಗುರಿನ ಒಡೆಯರಾಗಬೇಕೇ?

Image
ಸಾಮಾನ್ಯವಾಗಿ ಪೆಡಿಕ್ಯೂರ್ ಮತ್ತು ಮ್ಯಾನಿಕುರ್ ಮಾಡಿಕೊಳ್ಳುವುದರಿಂದ ನಾವು ಉಗುರಿನ  ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದಾಗಿದೆ. ಆದರೆ ಅದನ್ನು ಹೊರತು ಪಡಿಸಿಯೂ ನೀವು ಗಮನ  ಕೊಟ್ಟು ಮಾಡಿಕೊಳ್ಳುವ ಅನೇಕ ಉಪಚಾರಗಳು ಉಗುರಿನ ರಕ್ಷಣೆ ಮಾಡುತ್ತದೆ.  ಕೆಳಗೆ ನೀಡಿರುವ ಅಂಶಗಳತ್ತ ಗಮನ ನೀಡಿದರೆ ಸುಂದರ ಉಗುರಿನ ಒಡೆಯರಾಗುತ್ತೀರಿ  ನಿಸ್ಸಂಶಯವಾಗಿ. ಮಾಡ ಬೇಕಾಗಿರುವುದು: ನೀವು ನೈಲ್ ಪಾಲಿಶ್ ತೆಗೆದ ಬಳಿಕ ತಪ್ಪದೆ ಕೈ ಮತ್ತು  ಉಗುರಿಗೆ ಮಾಯಿಶ್ಚರೈಸರ್ ಕ್ರೀಮ್ ಲೇಪಿಸಿ ನಿಮ್ಮ ಕೈಗಳನ್ನು ನಿಧಾನವಾಗಿ ಸೋಪಿನಿಂದ ಉಜ್ಜಿ  ತೊಳೆಯಿರಿ. ಒಂದು ಸರಳ ಪ್ಯಾಕ್ ಹಾಕಿರಿ. ಈ ಪ್ರಕ್ರಿಯೆಯಿಂದ ಚರ್ಮದಲ್ಲಿ ಅಡಗಿರುವ ಸತ್ತ ಕಣಗಳು ಹೊರ ಬಂದು  ಚರ್ಮವು ತಾಜವಾಗುತ್ತದೆ. ನೀವು ಆರೈಕೆ ಮಾಡಿಸಿಕೊಳ್ಳುವ ಸೆಲೂನ್ ಶುಚಿಯಾಗಿದ್ದಾರೆ ಮಾತ್ರ ಅವರ ಸೇವೆ ಪಡೆಯಿರಿ.. ಇದು  ನಿಮ್ಮ ಉಗುರಿನ ಆರೋಗ್ಯದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ.  ನೀವು ಹೆಚ್ಚು ಬಾರಿ ಪೆಡಿಕ್ಯೂರ್ ಮತ್ತು ಮ್ಯಾನಿಕ್ಯೂರ್ ಮಾಡಿಕೊಳ್ಳುತ್ತಿದ್ದರೆ ನಿಮ್ಮದೇ ಸ್ವಂತ  ಪೆಡಿಕ್ಯೂರ್ -ಮ್ಯಾನಿಕ್ಯೂರ್ ಸೆಟ್ ಮನೆಯಲ್ಲಿ ತಂದಿಟ್ಟು ಕೊಂಡು ಬಳಸುವುದು ಎಲ್ಲ ರೀತಿಯಿಂದಲೂ  ಸೂಕ್ತ. ನೀವು ಬಳಸುವ ಉಪಕರಣಗಳು ಸ್ವಚ್ಛವಾಗಿರುವಂತೆ ನೋಡಿ ಕೊಳ್ಳಿ  ನೀವು ಉಗುರುಗಳಿಗೆ ಬಳಸುವ ಪಾಲೀಶ್ 3 ರಿ...