ಬ್ಯೂಟಿ ಟಿಪ್ಸ್: ಮೊಡವೆ ನಿವಾರಣೆಗೊಂದು ಸುಲಭ ಫೇಸ್ ಪ್ಯಾಕ್
ಒಂದು ಪಾರ್ಟಿಗೆ ಅಥವಾ ಯಾವುದಾದರೂ ಕಾರ್ಯಕ್ರಮಕ್ಕೆ ನೀವು ಹೋಗುತ್ತಿದ್ದೀರಿ ಎಂದಾದರೆ ಮೊದಲು ವಿಶೇಷ ಉಡುಗೆಯನ್ನು ಆಯ್ಕೆ ಮಾಡುತ್ತೀರಿ. ನಂತರ ಮುಖಕ್ಕೆ ಮೇಕಪ್ ಮಾಡಿಕೊಳ್ಳುತ್ತೀರಿ ಅಲ್ಲವಾ? ಆದರೂ ಮುಖದ ಮೇಲಿರುವ ಮೊಡವೆಗಳು ಚರ್ಮದ ಮೇಲಿರುವ ಅಸಹಜತೆಯಯನ್ನು ತೋರಿಸಿಕೊಡುತ್ತದೆ. ಮೊಡವೆ ಸಾಮಾನ್ಯವಾದದ್ದೇ ಆದರೂ ಅದು ಮುಖದ ತುಂಬ ಆವರಿಸಿಕೊಂಡಾಗ ನೋಡುಗರಿಗೆ ಸ್ವಲ್ಪ ಇರಿಸು ಮುರಿಸು ಉಂಟಾಗಬಹುದು. ಹಾಗಾಗಿ ತ್ವಚೆಯ ಮೇಲಿರುವ ಮೊಡೆಯ ನಿವಾರಣೆಗಾಗಿ ವಿವಿಧ ಬಗೆಯ ಆಧುನಿಕ ಚಿಕಿತ್ಸೆ, ಮೊಡವೆ ಮರೆಮಾಚುವ ಮೇಕಪ್, ವಿವಿಧ ಬಗೆಯ ವಿಟಮಿನ್ ಮಾತ್ರೆಗಳನ್ನು ಬಳಸುವ ಸಾಹಸಗಳನ್ನು ಮಾಡುತ್ತಾರೆ. ಈ ಸಾಹಸಗಳಿಂದ ಮೊಡವೆಗಳ ಸಂಖ್ಯೆಯೇನು ಕಡಿಮೆಯಾಗುವುದಿಲ್ಲ. ಬದಲಿಗೆ ಇನ್ನಷ್ಟು ಕಲೆಗಳು ಹಾಗೂ ತ್ವಚೆಯ ಮೇಲೆ ಹಾನಿ ಉಂಟಾಗುತ್ತದೆ. ಇದರಿಂದ ನಮಗೂ ಒಂದು ಬಗೆಯ ಮುಜುಗರ ಹಾಗೂ ಕಿರಿಕಿರಿಯ ಭಾವ ಕಾಡುತ್ತಿರುತ್ತದೆ. ಸ್ವಲ್ಪ ಹುಷಾರ್, ಇದು ಅಂತಿಂಥ ಮೊಡವೆ ಅಲ್ಲ..! ಒಂದು ವಯಸ್ಸಿನಲ್ಲಿ ಸಾಮಾನ್ಯವಾಗಿ ತೋರುವ ಮೊಡವೆಗಳ ನಿವಾರಣೆಗೆ ಅತಿಯಾಗಿ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಕಡಿಮೆ ಸಮಯದಲ್ಲಿ ಬಹು ಬೇಗ ನಿಯಂತ್ರಣಕ್ಕೆ ತರಬಹುದು. ಅದಕ್ಕಾಗಿ ಮಾಡುವ ಆರೈಕೆಯ ವಿಚಾರದಲ್ಲಿ ನಿಮಗೆ ಕೊಂಚ ತಾಳ್ಮೆಯಿರಬೇಕು ಅಷ್ಟೇ. ಆ ಒಂದು ಬಗೆಯ ವಿಶೇಷ ಆರೈಕೆ ಯಾವುದು ಎನ್ನುವುದನ್ನು ನೀವು ತಿಳಿದುಕೊಳ್ಳಲು ಬಯಸುವುದಾದರೆ ಈ ಕೆಳಗಿರುವ ವಿವರಣೆಯನ್ನು ಓ...