ಮೊಡವೆಯ ಕಾಟ ನಿಯಂತ್ರಿಸುವ ಕೆಮಿಕಲ್ ಫ್ರೀ ಫೇಶಿಯಲ್
ಹದಿಹರೆಯದವರ ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುವುದು ವಯಸ್ಸಿನ ಪ್ರಭಾವದಿಂದ ಎನ್ನಬಹುದು. ಕೆಲವರಲ್ಲಿ ಹದಿಹರೆಯ ದಾಟಿದ ಬಳಿಕವೂ ಮೊಡವೆಗಳು ಕಾಣಿಸಿಕೊಳ್ಳುತ್ತಾ ಇರುತ್ತದೆ. ಇಂತಹವರ ತ್ವಚೆಯು ತುಂಬಾ ಸೂಕ್ಷ್ಮವಾಗಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಮೊಡವೆಗಳು ಇರುವಾಗ ಯಾವುದೇ ಬ್ಯೂಟಿ ಸಲೂನಿಗೆ ಹೋದರೂ ಫೇಶಿಯಲ್ ಮಾಡಿಕೊಳ್ಳಿ, ಮುಖದ ಮೇಲಿನ ಮೊಡವೆಗಳು ಹೋಗುತ್ತದೆ ಎಂದು ಹೇಳುತ್ತಾರೆ. ಪ್ರತಿಯೊಬ್ಬರ ಚರ್ಮವು ಒಂದೇ ರೀತಿಯಾಗಿ ಇರದೆ ಇರುವ ಕಾರಣದಿಂದ ಹಲವಾರು ರೀತಿಯ ಫೇಶಿಯಲ್‌ಗಳು ಮಾರುಕಟ್ಟೆಗೆ ಬಂದಿದೆ.
ಆದರೆ ನಮ್ಮ ಚರ್ಮ ಯಾವ ವರ್ಗಕ್ಕೆ ಸೇರಿದ್ದು ಮತ್ತು ಇದಕ್ಕೆ ಯಾವ ಫೇಶಿಯಲ್ ಅಗತ್ಯವೆಂದು ನಮಗೆ ತಿಳಿದಿದ್ದರೆ ಒಳ್ಳೆಯದು. ಒಂದು ವೇಳೆ ನಿಮ್ಮ ಚರ್ಮ ಯಾವ ವರ್ಗಕ್ಕೆ ಸೇರಿದ್ದು ಎಂದು ತಿಳಿಯದೇ ಇದ್ದರೆ ತಜ್ಞರನ್ನು ಭೇಟಿಯಾಗಿ ಅವರಿಂದ ಮಾಹಿತಿ ಪಡೆದು ಯಾವ ರೀತಿಯ ಫೇಶಿಯಲ್ ಬಳಸಬಹುದು ಎಂದು ತಿಳಿಯಬಹುದು.
ಇದಕ್ಕೆ ಬಿಸಿ ನೀರನ್ನು ಕಾಯಿಸಿ ಅದರಿಂದ ಮುಖಕ್ಕೆ ಹಬೆಯನ್ನು ತೆಗೆದುಕೊಳ್ಳಬೇಕು. 5-7 ನಿಮಿಷ ಹಬೆ ತೆಗೆದುಕೊಂಡ ನಂತರ ಚರ್ಮದ ರಂಧ್ರಗಳು ತೆರೆದುಕೊಂಡಿರುತ್ತವೆ. ನಂತರ ಬೆರಳಿನ ಸಹಾಯದಿಂದ ಬ್ಲಾಕ್ ಹೆಡ್ ತೆಗೆಯಬಹುದು.
* ಇನ್ನೊಂದು ವಿಧಾನವೆಂದರೆ ಬರೆಯ ಹಬೆಗಿಂತಲೂ ಕುದಿಯುತ್ತಿರುವ ನೀರಿನಲ್ಲಿ ಲ್ಯಾವೆಂಡರ್ ಹೂವು, ಲಿಂಬೆಯ ಸಿಪ್ಪೆ ಅಥವಾ ಪುದಿನಾ ಎಲೆಗಳನ್ನು ಸೇರಿಸಿ ಈಗ ಬರುವ ಹಬೆಯಲ್ಲಿ ಮುಖವನ್ನು ಒಡ್ಡುವುದರಿಂದ ಬ್ಲಾಕ್ ಹೆಡ್ ಗಳು ಶೀಘ್ರವಾಗಿ ಹೊರಬರುತ್ತವೆ.
*ಎರಡು ಚಮಚ ಓಟ್ ಮೀಲ್, ಒಂದು ಚಮಚ ಜೇನು ತುಪ್ಪ ಮತ್ತು ಒಂದು ಚಮಚ ರೋಸ್ ವಾಟರ್ ಮಿಶ್ರಣ ಮಾಡಿಕೊಂಡು ಅದನ್ನು ನಿಮ್ಮ ಮುಖದ ಮೇಲೆ ಚೆನ್ನಾಗಿ ಹಚ್ಚಿಕೊಂಡು, ಸುಮಾರು 15 ನಿಮಿಷಗಳ ಕಾಲ ಒಣಗಲು ಬಿಡಿ, ಬಳಿಕ ಮುಖವನ್ನು ತಣ್ಣಿರಿನಿಂದ ತೊಳೆದು ನಯವಾದ ಟವೆಲ್ ನಿಂದ ಮುಖವನ್ನು ಒರೆಸಿಕೊಳ್ಳಿ.
*ಅಡುಗೆ ಸೋಡಾ ಬಳಸಿ ಫೇಶಿಯಲ್ ತಯಾರಿಸಬಹುದು. ಮೊಡವೆಗಳ ಒಳಗೆ ಇರುವಂತಹ ನೀರಿನಾಂಶ ತೆಗೆದು ಹಾಕುವ ಅಡುಗೆ ಸೋಡಾ ಮೊಡವೆಗಳು ಒಣಗುವಂತೆ ಮಾಡುತ್ತದೆ. ಮೂರರಿಂದ ನಾಲ್ಕು ಚಮಚ ಅಡುಗೆ ಸೋಡಾಕ್ಕೆ ನೀರು ಹಾಕಿ ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ
*ಮೊಡವೆಗಳಿಂದ ಕಂಗೆಟ್ಟು ಹೋಗಿದ್ದರೆ ಮತ್ತು ಅದನ್ನು ಸಂಪೂರ್ಣವಗಿ ಕಿತ್ತು ಹಾಕಬೇಕೆಂದು ನೀವು ಬಯಸುವುದೇ ಆದರೆ ಓಟ್ ಮೀಲ್ ಹುಡಿಯಿಂದ ಮಾಡುವಂತಹ ಫೇಶಿಯಲ್ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಇದಕ್ಕೆ ಈರುಳ್ಳಿ ರಸ ಮತ್ತು ಜೇನುತುಪ್ಪ ಸೇರಿಸಿಕೊಳ್ಳಬೇಕು. ಒಂದು ಈರುಳ್ಳಿಯ ರಸ ತೆಗೆಯಿರಿ ಮತ್ತು ಇದನ್ನು ಓಟ್ ಮೀಲ್ ಹುಡಿಗೆ ಹಾಕಿ. ಅದಕ್ಕೆ ಜೇನುತುಪ್ಪ ಕೂಡ ಬೆರೆಸಿ. ಮೊಡವೆಗಳ ನಿವಾರಣೆಗೆ ಈ ನೈಸರ್ಗಿಕ ಫೇಶಿಯಲ್ ನ್ನು ಬಳಸಿಕೊಳ್ಳಿ.
ಆದರೆ ನಮ್ಮ ಚರ್ಮ ಯಾವ ವರ್ಗಕ್ಕೆ ಸೇರಿದ್ದು ಮತ್ತು ಇದಕ್ಕೆ ಯಾವ ಫೇಶಿಯಲ್ ಅಗತ್ಯವೆಂದು ನಮಗೆ ತಿಳಿದಿದ್ದರೆ ಒಳ್ಳೆಯದು. ಒಂದು ವೇಳೆ ನಿಮ್ಮ ಚರ್ಮ ಯಾವ ವರ್ಗಕ್ಕೆ ಸೇರಿದ್ದು ಎಂದು ತಿಳಿಯದೇ ಇದ್ದರೆ ತಜ್ಞರನ್ನು ಭೇಟಿಯಾಗಿ ಅವರಿಂದ ಮಾಹಿತಿ ಪಡೆದು ಯಾವ ರೀತಿಯ ಫೇಶಿಯಲ್ ಬಳಸಬಹುದು ಎಂದು ತಿಳಿಯಬಹುದು.
ತ್ವಚೆಯ ಸೌಂದರ್ಯಕ್ಕಾಗಿ ಫೇಶಿಯಲ್ ಮಸಾಜ್
ಆದರೆ ಮಾರುಕಟ್ಟೆಯಲ್ಲಿ ಸಿಗುವಂತಹ ಫೇಶಿಯಲ್ ಗಳು ಮೊಡವೆಗಳನ್ನು ನಿವಾರಣೆ ಮಾಡುವಲ್ಲಿ ಶೇಕಡಾ ನೂರರಷ್ಟು ಪರಿಣಾಮಕಾರಿಯಾಗಿ ಇರುವುದಿಲ್ಲ. ನಿಮಗೆ ಬೇಕಾದಂತೆ ಮನೆಯಲ್ಲೇ ಕೆಲವೊಂದು ಫೇಶಿಯಲ್ ನ್ನು ತಯಾರಿಸಿಕೊಂಡು ಬಳಸಬಹುದು. ಇದರಿಂದ ಯಾವುದೇ ಅಡ್ಡಪರಿಣಾಮಗಳು ಇಲ್ಲ. ಮುಖದ ಮೇಲಿನ ಮೊಡವೆಗಳಿಗೆ ಯಾವ ರೀತಿಯ ಫೇಶಿಯಲ್ ಬಳಸಬಹುದು ಎಂದು ಬೋಲ್ಡ್ ಸ್ಕೈ ನಿಮಗೆ ಈ ಲೇಖನ ಮೂಲಕ ತಿಳಿಸಿಕೊಡಲಿದೆ. * ಫೇಶಿಯಲ್ ಹಾಕಿಕೊಳ್ಳುವ ಮುನ್ನ ಮುಖದ ಮೇಲಿನ ಬ್ಲಾಕ್ ಹೆಡ್ ಮತ್ತು ವೈಟ್ ಹೆಡ್ ಹೋಗಲಾಡಿಸಬೇಕು. ಇವುಗಳೇ ಮುಖದಲ್ಲಿ ಮೊಡವೆ ಮೂಡಲು ಕಾರಣವಾಗಿರುತ್ತವೆ.ಇದಕ್ಕೆ ಬಿಸಿ ನೀರನ್ನು ಕಾಯಿಸಿ ಅದರಿಂದ ಮುಖಕ್ಕೆ ಹಬೆಯನ್ನು ತೆಗೆದುಕೊಳ್ಳಬೇಕು. 5-7 ನಿಮಿಷ ಹಬೆ ತೆಗೆದುಕೊಂಡ ನಂತರ ಚರ್ಮದ ರಂಧ್ರಗಳು ತೆರೆದುಕೊಂಡಿರುತ್ತವೆ. ನಂತರ ಬೆರಳಿನ ಸಹಾಯದಿಂದ ಬ್ಲಾಕ್ ಹೆಡ್ ತೆಗೆಯಬಹುದು.
* ಇನ್ನೊಂದು ವಿಧಾನವೆಂದರೆ ಬರೆಯ ಹಬೆಗಿಂತಲೂ ಕುದಿಯುತ್ತಿರುವ ನೀರಿನಲ್ಲಿ ಲ್ಯಾವೆಂಡರ್ ಹೂವು, ಲಿಂಬೆಯ ಸಿಪ್ಪೆ ಅಥವಾ ಪುದಿನಾ ಎಲೆಗಳನ್ನು ಸೇರಿಸಿ ಈಗ ಬರುವ ಹಬೆಯಲ್ಲಿ ಮುಖವನ್ನು ಒಡ್ಡುವುದರಿಂದ ಬ್ಲಾಕ್ ಹೆಡ್ ಗಳು ಶೀಘ್ರವಾಗಿ ಹೊರಬರುತ್ತವೆ.
*ಎರಡು ಚಮಚ ಓಟ್ ಮೀಲ್, ಒಂದು ಚಮಚ ಜೇನು ತುಪ್ಪ ಮತ್ತು ಒಂದು ಚಮಚ ರೋಸ್ ವಾಟರ್ ಮಿಶ್ರಣ ಮಾಡಿಕೊಂಡು ಅದನ್ನು ನಿಮ್ಮ ಮುಖದ ಮೇಲೆ ಚೆನ್ನಾಗಿ ಹಚ್ಚಿಕೊಂಡು, ಸುಮಾರು 15 ನಿಮಿಷಗಳ ಕಾಲ ಒಣಗಲು ಬಿಡಿ, ಬಳಿಕ ಮುಖವನ್ನು ತಣ್ಣಿರಿನಿಂದ ತೊಳೆದು ನಯವಾದ ಟವೆಲ್ ನಿಂದ ಮುಖವನ್ನು ಒರೆಸಿಕೊಳ್ಳಿ.
ಮ್ಯಾಜಿಕ್ ಫೇಶಿಯಲ್ ಬಗ್ಗೆ ನಿಮಗೆ ಗೊತ್ತೇ?
*ಸಣ್ಣ ಪ್ರಮಾಣದ ಮೊಡವೆಗಳ ಸಮಸ್ಯೆಗೆ ಮೊಟ್ಟೆಯ ಬಿಳಿ ಲೋಳೆಯು ತುಂಬಾ ಪರಿಣಾಮಕಾರಿಯಾಗಿದೆ. ಸಲೂನಿಗೆ ಹೋಗಬಾರದು ಎಂದು ನೀವು ನಿರ್ಧರಿಸಿದ್ದರೆ ಎರಡು ಮೊಟ್ಟೆಯ ಬಿಳಿಯ ಲೋಳೆ ತೆಗೆದುಕೊಂಡು ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ. ಮುಖಕ್ಕೆ ಇದನ್ನು ಹಚ್ಚಿಕೊಂಡು ಹತ್ತು ನಿಮಿಷ ಕಾಲ ಹಾಗೆ ಬಿಡಿ. ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.*ಅಡುಗೆ ಸೋಡಾ ಬಳಸಿ ಫೇಶಿಯಲ್ ತಯಾರಿಸಬಹುದು. ಮೊಡವೆಗಳ ಒಳಗೆ ಇರುವಂತಹ ನೀರಿನಾಂಶ ತೆಗೆದು ಹಾಕುವ ಅಡುಗೆ ಸೋಡಾ ಮೊಡವೆಗಳು ಒಣಗುವಂತೆ ಮಾಡುತ್ತದೆ. ಮೂರರಿಂದ ನಾಲ್ಕು ಚಮಚ ಅಡುಗೆ ಸೋಡಾಕ್ಕೆ ನೀರು ಹಾಕಿ ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ
*ಮೊಡವೆಗಳಿಂದ ಕಂಗೆಟ್ಟು ಹೋಗಿದ್ದರೆ ಮತ್ತು ಅದನ್ನು ಸಂಪೂರ್ಣವಗಿ ಕಿತ್ತು ಹಾಕಬೇಕೆಂದು ನೀವು ಬಯಸುವುದೇ ಆದರೆ ಓಟ್ ಮೀಲ್ ಹುಡಿಯಿಂದ ಮಾಡುವಂತಹ ಫೇಶಿಯಲ್ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಇದಕ್ಕೆ ಈರುಳ್ಳಿ ರಸ ಮತ್ತು ಜೇನುತುಪ್ಪ ಸೇರಿಸಿಕೊಳ್ಳಬೇಕು. ಒಂದು ಈರುಳ್ಳಿಯ ರಸ ತೆಗೆಯಿರಿ ಮತ್ತು ಇದನ್ನು ಓಟ್ ಮೀಲ್ ಹುಡಿಗೆ ಹಾಕಿ. ಅದಕ್ಕೆ ಜೇನುತುಪ್ಪ ಕೂಡ ಬೆರೆಸಿ. ಮೊಡವೆಗಳ ನಿವಾರಣೆಗೆ ಈ ನೈಸರ್ಗಿಕ ಫೇಶಿಯಲ್ ನ್ನು ಬಳಸಿಕೊಳ್ಳಿ.

Comments
Post a Comment