ಆಫೀಸ್ ಹೋಗುವಾಗ ನಿಮ್ಮ ಹೇರ್ ಸ್ಟೈಲ್ ಹೀಗಿದ್ದರೆ ಚೆನ್ನ...
ಚೇರಿ ಕೆಲಸಕ್ಕೆ ಹೋಗುವಾಗ ಹೇಗೆಂದರೆ ಹಾಗೆ ಹೋಗಲು ಸಾಧ್ಯವಿಲ್ಲ. ಉಡುಗೆ-ತೊಡುಗೆ ಸೇರಿದಂತೆ ಕೇಶವಿನ್ಯಾಸವೂ ಬಹು ಮುಖ್ಯ ಪಾತ್ರ ವಹಿಸುತ್ತದೆ. ಸೂಕ್ತ ರೀತಿಯ ಕೇಶ ವಿನ್ಯಾಸಮಾಡಿಕೊಳ್ಳದಿದ್ದರೆ ನೋಡುವವರಿಗಷ್ಟೇ ಅಲ್ಲ ನಮಗೂ ಕೆಲಸ ಮಾಡಲು ಅಡ್ಡಿ ಉಂಟಾಗುತ್ತದೆ. ಜೊತೆಗೆ ಅವುಗಳನ್ನು ಸರಿ ಪಡಿಸಿಕೊಳ್ಳುವಷ್ಟರಲ್ಲೇ ಒಂದಿಷ್ಟು ಸಮಯ ಕಳೆದಿರುತ್ತೇವೆ. ಜೊತೆಗೆ ಕೆಲಸದಲ್ಲಿ ಗಮನ ವಹಿಸಲು ಸಾಧ್ಯವಾಗದು.
ಈ ರೀತಿಯ ತೊಂದರೆಗೆ ಪರಿಹಾರ ನೀಡಬಲ್ಲ ಕೇಶವಿನ್ಯಾಸವೆಂದರೆ ಅದು "ಹೇರ್ ಬನ್". ಇದರ ಹೆಸರು ಕೇಳಲು ಉದಾಸ ಎನಿಸಿದರೂ ವಿನ್ಯಾಸಮಾಡಲು ಸುಲಭ. ಒಮ್ಮೆ ಈ ವಿನ್ಯಾಸ ಮಾಡಿಕೊಂಡರೆ ಕಚೇರಿ ಕೆಲಸ ಮುಗಿಸಿ ಮನೆಗೆ ಹೋಗುವವರೆಗೂ ಯಾವುದೇ ಕಿರಿಕಿರಿ ಉಂಟಾಗದು. ಈ ಹೇರ್ ಬನ್ ವಿನ್ಯಾಸದಲ್ಲಿಯೇ ಹಲವು ಬಗೆಯಿದೆ. ಎಲ್ಲವೂ ಸರಳ ಹಾಗೂ ಸುಲಭ. ನೋಡಲು ಹೆಚ್ಚು ಆಕರ್ಷಕ ನೋಟವನ್ನು ನೀಡುತ್ತವೆ. ನೀವೂ ಈ ವಿನ್ಯಾಸಗಳ ಬಗ್ಗೆ ತಿಳಿಯಬೇಕೆಂದರೆ ಇಲ್ಲಿದೆ ನೋಡಿ ವಿವರ...
* ಬನ್ ತಲೆಯ ಯಾವ ಭಾಗದಲ್ಲಿ ಇರಬೇಕೆಂದು ಬಯಸುತ್ತೀರಿ ಎಂದು ನಿರ್ಧರಿಸಿ.
* ನೆತ್ತಿಯ ಮೇಲೆ, ತಲೆಯ ಹಿಂಭಾಗದಲ್ಲಿ ಎಡ ಬದಿಗೆ ಅಥವಾ ಬಲ ಬದಿಗೆ ಎಲ್ಲಾದರೊಂದು ಕಡೆ ರಬ್ಬರ್ ಬ್ಯಾಂಡ್‍ನಿಂದ ಕೂದಲು ರಾಶಿಯನ್ನು ಕಟ್ಟಿ.
* ನಂತರ ರಬ್ಬರ್ ಸುತ್ತಲು ಕೂದಲು ಬರುವಂತೆ ಹೊರ ತೆಗೆದು, ಅದರ ಮೇಲಿನಿಂದ ಒಂದು ತೆಳುವಾದ ರಬ್ಬರ್ ಬ್ಯಾಂಡ್ ಹಾಕಿರಿ.
* ಹೊರ ಬಂದ ಕೂದಲುಗಳನ್ನು ಸುತ್ತಲು ಬಳ್ಳಿಯಂತೆ ಸುತ್ತಿ, ತುದಿಗೆ ಬಿಚ್ಚದಂತೆ ಒಂದು ಹೇರ್ ಪಿನ್ ಹಾಕಿರಿ.
* ಇನ್ನೊಂದು ಭಾಗದಲ್ಲಿ ಜಡೆಯನ್ನು ನೆಯ್ದು ರಬ್ಬರ್ ಬ್ಯಾಂಡ್ ಹಾಕಿ.
* ಬನ್‍ಗೆ ಬಿಟ್ಟ ಕೂದಲನ್ನು ಡೋನಟ್ ನಂತೆ ಹಾಕಿ. ಉಳಿತ ಕೂದಲನ್ನು ಸುತ್ತಲೂ ಸುತ್ತಿ ಪಿನ್ ಮಾಡಬೇಕು.
* ಪಕ್ಕದಲ್ಲಿ ನೆಯ್ದ ಜಡೆಯನ್ನು ಡೋನಟ್ ಸುತ್ತ ಸುತ್ತ ಬೇಕು. ತುದಿ ಕಾಣದಂತೆ ಹೇರ್ ಪಿನ್ ಹಾಕಬೇಕು.
* ನೆತ್ತಿಯ ಮೇಲ್ಭಾಗದ ಕೂದಲನ್ನು ಬನ್ ರೀತಿಯಲ್ಲಿ ಗಂಟು ಕಟ್ಟಿ, ಉಳಿದ ಕೂದಲನ್ನು ಅದರ ಸುತ್ತಲೂ ಸುತ್ತಬೇಕು.
* ಕೆಳಭಾಗದಲ್ಲಿರುವ ಕೂದಲನ್ನು ಹಾಗೇ ಫ್ರೀ ಆಗಿ ಬಿಟ್ಟರೆ ಆಯಿತು.
* ನಂತರ ಉಳಿದ ಕೂದಲನ್ನು ಪೋನಿಟೇಲ್ ಸುತ್ತಲೂ ಸುತ್ತಿ, ಪಿನ್ ಮಾಡಬೇಕು.
* ನಂತರ ಉಳಿದ ಕೇಶರಾಶಿಯನ್ನು ಲೂಪ್ ಹೇರ್‍ನ ಮೇಲ್ಭಾಗಕ್ಕೆ ಬರುವಂತೆ ಟ್ವಿಸ್ಟ್ ಮಾಡಿ ಒಂದು ಗಂಟು ಹಾಕಬೇಕು.
* ಕೂದಲು ಮೇಲೆ ಬರದಂತೆ ಪಿನ್ ಮಾಡಬೇಕು.
* ಅದರಲ್ಲಿ ಸರಿಯಾಗಿ ಎರಡು ಭಾಗ ಮಾಡಿ, ಮೇಲ್ಭಾಗದ ಕೂದಲಿಂದ ಜಡೆ ನೇಯ್ದುಕೊಳ್ಳಬೇಕು.
* ಉಳಿದ ಕೇಶಗಳಿಂದ ಒಂದು ಬನ್ ಹಾಕಬೇಕು.
* ನಂತರ ಬನ್‍ನ ಸುತ್ತಲೂ ಜಡೆಯನ್ನು ಸುತ್ತಿ, ಪಿನ್ ಮಾಡಬೇಕು.
ಈ ರೀತಿಯ ತೊಂದರೆಗೆ ಪರಿಹಾರ ನೀಡಬಲ್ಲ ಕೇಶವಿನ್ಯಾಸವೆಂದರೆ ಅದು "ಹೇರ್ ಬನ್". ಇದರ ಹೆಸರು ಕೇಳಲು ಉದಾಸ ಎನಿಸಿದರೂ ವಿನ್ಯಾಸಮಾಡಲು ಸುಲಭ. ಒಮ್ಮೆ ಈ ವಿನ್ಯಾಸ ಮಾಡಿಕೊಂಡರೆ ಕಚೇರಿ ಕೆಲಸ ಮುಗಿಸಿ ಮನೆಗೆ ಹೋಗುವವರೆಗೂ ಯಾವುದೇ ಕಿರಿಕಿರಿ ಉಂಟಾಗದು. ಈ ಹೇರ್ ಬನ್ ವಿನ್ಯಾಸದಲ್ಲಿಯೇ ಹಲವು ಬಗೆಯಿದೆ. ಎಲ್ಲವೂ ಸರಳ ಹಾಗೂ ಸುಲಭ. ನೋಡಲು ಹೆಚ್ಚು ಆಕರ್ಷಕ ನೋಟವನ್ನು ನೀಡುತ್ತವೆ. ನೀವೂ ಈ ವಿನ್ಯಾಸಗಳ ಬಗ್ಗೆ ತಿಳಿಯಬೇಕೆಂದರೆ ಇಲ್ಲಿದೆ ನೋಡಿ ವಿವರ...
ಡೋನಟ್ ಹೇರ್ ಬನ್
ಸಾಮಾಗ್ರಿಗಳು
ದಪ್ಪದಾದ ರಬ್ಬರ್ ಬ್ಯಾಂಡ್ ಅಥವಾ ಹೇರ್ ಡೋನಟ್ ಮತ್ತು ಹೇರ್ ಪಿನ್.ವಿಧಾನ:
* ಮೊದಲು ಕೇಶರಾಶಿಯನ್ನು ಜಡಕಿಲ್ಲದಂತೆ ಬಾಚಿಕೊಳ್ಳಬೇಕು.* ಬನ್ ತಲೆಯ ಯಾವ ಭಾಗದಲ್ಲಿ ಇರಬೇಕೆಂದು ಬಯಸುತ್ತೀರಿ ಎಂದು ನಿರ್ಧರಿಸಿ.
* ನೆತ್ತಿಯ ಮೇಲೆ, ತಲೆಯ ಹಿಂಭಾಗದಲ್ಲಿ ಎಡ ಬದಿಗೆ ಅಥವಾ ಬಲ ಬದಿಗೆ ಎಲ್ಲಾದರೊಂದು ಕಡೆ ರಬ್ಬರ್ ಬ್ಯಾಂಡ್‍ನಿಂದ ಕೂದಲು ರಾಶಿಯನ್ನು ಕಟ್ಟಿ.
* ನಂತರ ರಬ್ಬರ್ ಸುತ್ತಲು ಕೂದಲು ಬರುವಂತೆ ಹೊರ ತೆಗೆದು, ಅದರ ಮೇಲಿನಿಂದ ಒಂದು ತೆಳುವಾದ ರಬ್ಬರ್ ಬ್ಯಾಂಡ್ ಹಾಕಿರಿ.
* ಹೊರ ಬಂದ ಕೂದಲುಗಳನ್ನು ಸುತ್ತಲು ಬಳ್ಳಿಯಂತೆ ಸುತ್ತಿ, ತುದಿಗೆ ಬಿಚ್ಚದಂತೆ ಒಂದು ಹೇರ್ ಪಿನ್ ಹಾಕಿರಿ.
ಸೈಡ್ ಪ್ಲೇಟ್ ಜೊತೆ ಸರಳ ಡೋನಟ್ ಬನ್
ಸಾಮಾಗ್ರಿಗಳು
ದಪ್ಪದಾದ/ಡೋನಟ್ ಹೇರ್ ಬ್ಯಾಂಡ್, ಹೇರ್ ಪಿನ್ವಿಧಾನ:
* ಕೇಶರಾಶಿಯನ್ನು ಸರಿಯಾಗಿ ಎರಡು ಭಾಗ ಮಾಡಿ. ಒಂದು ಭಾಗಕ್ಕೆ ರಬ್ಬರ್ ಬ್ಯಾಂಡ್ ಹಾಕಿ.* ಇನ್ನೊಂದು ಭಾಗದಲ್ಲಿ ಜಡೆಯನ್ನು ನೆಯ್ದು ರಬ್ಬರ್ ಬ್ಯಾಂಡ್ ಹಾಕಿ.
* ಬನ್‍ಗೆ ಬಿಟ್ಟ ಕೂದಲನ್ನು ಡೋನಟ್ ನಂತೆ ಹಾಕಿ. ಉಳಿತ ಕೂದಲನ್ನು ಸುತ್ತಲೂ ಸುತ್ತಿ ಪಿನ್ ಮಾಡಬೇಕು.
* ಪಕ್ಕದಲ್ಲಿ ನೆಯ್ದ ಜಡೆಯನ್ನು ಡೋನಟ್ ಸುತ್ತ ಸುತ್ತ ಬೇಕು. ತುದಿ ಕಾಣದಂತೆ ಹೇರ್ ಪಿನ್ ಹಾಕಬೇಕು.
ಓಪನ್ ಹೇರ್‌ನೊಂದಿಗೆ ಟಾಪ್ ಹಾಫ್ ಬನ್
ಇದೊಂದು ಅತ್ಯಂತ ಪ್ರಚಲಿತದಲ್ಲಿರುವ ಕೇಶ ವಿನ್ಯಾಸ. ಇದನ್ನು ಮಾಡಲು ರಬ್ಬರ್ ಬ್ಯಾಂಡ್ ಮತ್ತು ಹೇರ್ ಪಿನ್ ಬೇಕು.
*ಒಂದು ಕಿವಿಯ ಮೇಲ್ಭಾಗದಿಂದ ಒನ್ನೊಂದು ಕಿವಿಯ ಮೇಲ್ಭಾಗದ ವರೆಗೆ ಸರಿಯಾಗಿ ಕೂದಲನ್ನು ಬೇರ್ಪಡಿಸಬೇಕು.* ನೆತ್ತಿಯ ಮೇಲ್ಭಾಗದ ಕೂದಲನ್ನು ಬನ್ ರೀತಿಯಲ್ಲಿ ಗಂಟು ಕಟ್ಟಿ, ಉಳಿದ ಕೂದಲನ್ನು ಅದರ ಸುತ್ತಲೂ ಸುತ್ತಬೇಕು.
* ಕೆಳಭಾಗದಲ್ಲಿರುವ ಕೂದಲನ್ನು ಹಾಗೇ ಫ್ರೀ ಆಗಿ ಬಿಟ್ಟರೆ ಆಯಿತು.
ಸೆಂಟರ್ ಲೂಪ್ ಬನ್
ಈ ಕೇಶ ವಿನ್ಯಾಸ ಒಂದು ಬಗೆಯ ಪೋನಿಟೇಲ್ ಮೇಲೆ ಅವಲಂಬಿತವಾದಂತೆ ಇರುತ್ತದೆ. ಇದಕ್ಕೆ ತೆಳುವಾದ ರಬ್ಬರ್ ಬ್ಯಾಂಡ್ ಮತ್ತು ಹೇರ್ ಪಿನ್‍ಗಳು ಬೇಕು.ವಿಧಾನ
*ಕೇಶ ರಾಶಿಯನ್ನು ಸರಿಯಾಗಿ ಬಾಚಿಕೊಂಡು, ಪೋನಿಟೇಲ್ ಹಾಕುವ ಹಾಗೆ ಅರ್ಧ ಕೇಶಕ್ಕೆ ರಬ್ಬರ್ ಹಾಕಬೇಕು.* ನಂತರ ಉಳಿದ ಕೂದಲನ್ನು ಪೋನಿಟೇಲ್ ಸುತ್ತಲೂ ಸುತ್ತಿ, ಪಿನ್ ಮಾಡಬೇಕು.
ಕಡಿಮೆ ಟ್ವಿಸ್ಟೆಡ್ ಲೂಪ್ ಹೇರ್ ಬನ್
ಬೇಕಾಗುವ ಸಾಮಾಗ್ರಿಗಳು: ರಬ್ಬರ್ ಬ್ಯಾಂಡ್ ಮತ್ತು ಹೇರ್ ಪಿನ್.ವಿಧಾನ:
* ಒಂದು ಪೋನಿಟೇಲ್‍ಅನ್ನು ಅರ್ಧಕ್ಕೆ ಬರುವಹಾಗೆ ರಬ್ಬರ್ ಬ್ಯಾಂಡ್ ಹಾಕಬೇಕು.* ನಂತರ ಉಳಿದ ಕೇಶರಾಶಿಯನ್ನು ಲೂಪ್ ಹೇರ್‍ನ ಮೇಲ್ಭಾಗಕ್ಕೆ ಬರುವಂತೆ ಟ್ವಿಸ್ಟ್ ಮಾಡಿ ಒಂದು ಗಂಟು ಹಾಕಬೇಕು.
* ಕೂದಲು ಮೇಲೆ ಬರದಂತೆ ಪಿನ್ ಮಾಡಬೇಕು.
ಟ್ವಿಸ್ಟೆಡ್ ಪ್ಲೆಟೆಡ್ ನಡುವೆ ಬನ್
ಸಾಮಾಗ್ರಿ: ಹೇರ್ ಬ್ಯಾಂಡ್ ಮತ್ತು ಹೇರ್ ಪಿನ್‍ಗಳು.ವಿಧಾನ:
ಮೊದಲು ಒಂದು ಪೋನಿಟೇಲ್ ಹಾಕಿಕೊಳ್ಳಬೇಕು.* ಅದರಲ್ಲಿ ಸರಿಯಾಗಿ ಎರಡು ಭಾಗ ಮಾಡಿ, ಮೇಲ್ಭಾಗದ ಕೂದಲಿಂದ ಜಡೆ ನೇಯ್ದುಕೊಳ್ಳಬೇಕು.
* ಉಳಿದ ಕೇಶಗಳಿಂದ ಒಂದು ಬನ್ ಹಾಕಬೇಕು.
* ನಂತರ ಬನ್‍ನ ಸುತ್ತಲೂ ಜಡೆಯನ್ನು ಸುತ್ತಿ, ಪಿನ್ ಮಾಡಬೇಕು.

Comments
Post a Comment