ಮೇಕಪ್ ಪ್ರಿಯ ಮಹಿಳೆಯರಿಗೆ ಸಿಂಪಲ್ ಟ್ರಿಕ್ಸ್! ಒಮ್ಮೆ ಪ್ರಯತ್ನಿಸಿ ನೋಡಿ...

ಮೇಕಪ್ ಮಾಡದೆ ಇರುವ ಮಹಿಳೆಯರೇ ಇಲ್ಲವೆನ್ನಬಹುದು. ಕೆಲವು ಮಹಿಳೆಯರು ತುಂಬಾ ಗಾಢವಾಗಿ ಮೇಕಪ್ ಮಾಡಿಕೊಂಡರೆ ಇನ್ನು ಕೆಲವರು ಸರಳವಾಗಿ ಮೇಕಪ್ ಮಾಡಿಕೊಳ್ಳುವರು. ಆದರೆ ಮೇಕಪ್ ಮಾಡಿಕೊಳ್ಳುವ ವೇಳೆ ಕೆಲವೊಂದು ತಪ್ಪುಗಳು ನಡೆದೇ ನಡೆಯುತ್ತದೆ.

 ದುಂಡಗಿನ ಮುಖಕ್ಕೆ ಸೂಕ್ತವಾಗಿರುವ 7 ಮೇಕಪ್ ಸಲಹೆಗಳು

 ಮೇಕಪ್ ವೇಳೆ ಮಹಿಳೆಯರು ಕೆಲವೊಂದು ಸಮಸ್ಯೆಗಳನ್ನು ಎದುರಿಸುವರು. ಮೇಕಪ್ ವೇಳೆ ಹೆಚ್ಚಿನ ಮಹಿಳೆಯರನ್ನು ಕಾಡುವಂತಹ ಮೂರು ಸಮಸ್ಯೆಗಳನ್ನು ಬೋಲ್ಡ್ ಸ್ಕೈ ಇಂದಿನ ಲೇಖನದಲ್ಲಿ ನಿಮ್ಮ ಮುಂದಿಡಲಿದೆ. ಮೇಕಪ್‌ನ ಸಮಸ್ಯೆಗೆ ಕೆಲವೊಂದು ಪರಿಹಾರ ಕೂಡ ಸೂಚಿಸಲಾಗಿದೆ. ನೀವು ಹೇಳಿರುವಂತಹ ಪ್ರತಿಯೊಂದು ಮೇಕಪ್ ಸಮಸ್ಯೆಗೂ ಇಲ್ಲಿ ಪರಿಹಾರವಿದೆ. ಇದರ ಬಗ್ಗೆ ತಿಳಿದುಕೊಂಡು ಮೇಕಪ್ ಸಮಸ್ಯೆ ನಿವಾರಣೆ ಮಾಡಿ.

ಮೊದಲನೇ ಮೇಕಪ್ ಸಮಸ್ಯೆ

 ಲಿಪ್ ಸ್ಟಿಕ್ ಸೋರುವುದು ತುಂಬಾ ಮುಜುಗರ ಉಂಟು ಮಾಡುತ್ತದೆ. ಆದರೆ ಹೆಚ್ಚಿನ ಮಹಿಳೆಯರಿಗೆ ಹೀಗೆ ಆಗುವುದು ಇದೆ. ಲಿಪ್ ಸ್ಟಿಕ್ ಸೋರಿಕೆಯಾದರೆ ಸಂಪೂರ್ಣವಾಗಿ ತುಟಿಯ ಮೇಕಪ್ ಎದ್ದು ಹೋಗುವುದು. ಇದರಿಂದ ಮುಖವು ನಿಸ್ತೇಜ ಹಾಗೂ ಕಳೆಗುಂದಿದಂತೆ ಕಾಣಬಹುದು. ಇದಕ್ಕೆ ಪರಿಹಾರವೆಂದರೆ ಬಾಯಿಗೆ ಒಂದು ಕ್ಯಾಂಡಿ ಹಾಕಿಕೊಳ್ಳಿ. ಕ್ಯಾಂಡಿಯು ಸಿಹಿ ಜ್ಯೂಸ್ ಅನ್ನು ಬಿಡುಗಡೆ ಮಾಡುವುದು. ಇದರಿಂದ ಬಾಯಿಯಲ್ಲಿ ತೇವಾಂಶ ಬಂದು ವ್ಯಸ್ಥವಾಗಿರುವಂತೆ ಮಾಡುವುದು. ಕ್ಯಾಂಡಿಯೊಂದಿಗೆ ನಾಲಗೆಯು ಆಟವಾಡುತ್ತಿರುವಂತೆ ಲಿಪ್ ಸ್ಟಿಕ್ ಹಾಗೆ ಉಳಿಯುವುದು.

ಎರಡನೇ ಮೇಕಪ್ ಸಮಸ್ಯೆ

 ಕಣ್ಣಿನ ಮೇಕಪ್ ಮಾಡುವ ವೇಳೆ ಕಣ್ಣಿನಿಂದ ನೀರು ಬರುವುದು. ನೀವು ಕಾಡಿಗೆ, ಐಲೈನರ್ ಅಥವಾ ಐ ಪ್ರೈಮರ್ ನ್ನು ಬಳಸಬಹುದು. ಆದರೆ ಕಣ್ಣುಗಳು ನೀರಿನಿಂದ ತುಂಬಿದರೆ ಆಗ ಮೇಕಪ್ ಉಳಿಯದು. ಇದರಿಂದ ಕಣ್ಣು ತೆರೆಯಲು ಆಗದು. ಇದು ಪ್ರತಿಯೊಬ್ಬರಿಗೂ ಆಗುವುದು. ಇದಕ್ಕೆ ಕಾಟನ್ ಬಡ್ ಬಳಸಿ. ಕಾಟನ್ ಬಡ್‌ನ್ನು ಮೂಗಿನ ಹತ್ತಿರ ಕಣ್ಣಿನ ಬದಿಯಲ್ಲಿ ತುಂಬಾ ಎಚ್ಚರಿಕೆಯಿಂದ ಇಟ್ಟುಬಿಡಿ. ಹತ್ತಿಯು ಕಣ್ಣಿನ ಹೆಚ್ಚುವರಿ ನೀರನ್ನು ಹೀರಿಕೊಳ್ಳುವುದು. ಇದರಿಂದ ಕಣ್ಣನ್ನು ಆರಾಮವಾಗಿ ತೆರೆಯಬಹುದು. ಇದರ ಬಳಿಕ ಮೇಕಪ್ ಮಾಡಿಕೊಳ್ಳಬಹುದು.



Comments

Popular posts from this blog

ಕೂದಲು ತೊಳೆದ ಬಳಿಕ, ಆರೈಕೆ ಹೀಗಿರಲಿ.. ಯಾವ ಸಮಸ್ಯೆಯೂ ಬಾರದು!

ಚೆಲುವೆಯ ಅಂದದ ಮುಖಕ್ಕೆ ಜೇನಿನ ಫೇಸ್ ಮಾಸ್ಕ್!

ತ್ವಚೆಯ ಎಲ್ಲಾ ಸಮಸ್ಯೆಗೆ ರಾಮಬಾಣ 'ಅಲೋವೆರಾ' ಫೇಸ್ ಮಾಸ್ಕ್