ನೈಸರ್ಗಿಕ ಬ್ಯೂಟಿ ಟಿಪ್ಸ್: ಕೊತ್ತಂಬರಿ ಸೊಪ್ಪಿನ ಫೇಸ್ ಪ್ಯಾಕ್
ತ್ವಚೆಯ ಆರೈಕೆಗೆ ಬರುವಂತಹ ಕ್ರೀಮ್‌ಗಳಲ್ಲಿ ವಿವಿಧ ರೀತಿಯ ಹಣ್ಣುಗಳನ್ನು ಬಳಸಲಾಗುವುದು ಎಂದು ಅದರ ಉತ್ಪನ್ನಗಳ ಜಾಹೀರಾತು ನೋಡಿದಾಗ ನಮಗೆ ತಿಳಿದುಬರುವುದು. ಆದರೆ ಈ ಉತ್ಪನ್ನಗಳಲ್ಲಿ ನಿಜವಾಗಿಯೂ ಎಷ್ಟು ಹಣ್ಣುಗಳನ್ನು ಬಳಸಿದ್ದಾರೆ ಎಂದು ಹೇಳುವುದು ಕಷ್ಟ. ಅದರ ಬದಲಿಗೆ ತಾಜಾ ಹಣ್ಣುಗಳನ್ನು ಬಳಸಿದರೆ ಒಳ್ಳೆಯದು. ತ್ವಚೆಯ ಆರೈಕೆಯಲ್ಲಿ ಹಣ್ಣುಗಳ ಬಳಕೆ ಬಗ್ಗೆ ನಾವು ಕೇಳಿದ್ದೇವೆ. ಆದರೆ ತರಕಾರಿಗಳನ್ನು ಬಳಸುವುದು ತುಂಬಾ ಕಡಿಮೆ.
ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿರುವ ಕೊತ್ತಂಬರಿ ಸೊಪ್ಪು ಮೊಡವೆ, ಕಲೆ ಮತ್ತು ಬೊಕ್ಕೆಗಳಿಗೆ ತುಂಬಾ ಪರಿಣಾಮಕಾರಿ. ವಯಸ್ಸಾಗುವ ಲಕ್ಷಣಗಳನ್ನು ಇದು ತಡೆಗಟ್ಟುವುದು. ದೀರ್ಘಕಾಲದ ಚರ್ಮದ ಕಾಯಿಲೆ ಹಾಗೂ ಸಮಸ್ಯೆಗಳಿಗೆ ಕೊತ್ತಂಬರಿ ಸೊಪ್ಪು ಪರಿಣಾಮಕಾರಿ.
ಕೊತ್ತಂಬರಿ ಸೊಪ್ಪು ಬಳಸುವುದರಿಂದ ತ್ವಚೆಗೆ ಮಾಯಿಶ್ಚರೈಸರ್, ಪುನರುಜ್ಜೀವನ ಮತ್ತು ತಾಜಾತನ ಸಿಗುವುದು. ಕೊತ್ತಂಬರಿ ಸೊಪ್ಪಿನ ಫೇಸ್ ಪ್ಯಾಕ್ ಅಥವಾ ಸ್ಕ್ರಬ್ ಮಾಡುವುದಿದ್ದರೆ ನೀವು ಕೇವಲ ಎಲೆಗಳನ್ನು ಮಾತ್ರ ಬಳಸಿಕೊಳ್ಳಿ. ಮೂರು ನಿಮಿಷ ಕಾಲ ನೀರಿನಲ್ಲಿ ನೆನೆಸಿ ಬಳಿಕ ಬಳಸಿ. ಕೊತ್ತಂಬರಿ ಸೊಪ್ಪಿನ ಫೇಸ್ ಪ್ಯಾಕ್ ಅಥವಾ ಸ್ಕ್ರಬ್ ಅನ್ನು ಮನೆಯಲ್ಲೇ ತಯಾರಿಸುವುದು ಹೇಗೆ ಎಂದು ತಿಳಿಯಿರಿ.
ಕೊತ್ತಂಬರಿ ಸೊಪ್ಪಿನ ಚಟ್ನಿ, ಒಮ್ಮೆ ನೀವೂ ಮಾಡಿ ನೋಡಿ...
ತರಕಾರಿಯನ್ನು ತ್ವಚೆಯ ಆರೈಕೆಗೆ ಬಳಸಲು ನಾವು ಹಿಂದೆ ಮುಂದೆ ನೋಡುತ್ತೇವೆ. ಕೆಲವು ತರಕಾರಿಗಳು ಕೂಡ ತ್ವಚೆಯ ಆರೈಕೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಅಂತಹ ಒಂದು ತರಕಾರಿ ಸೊಪ್ಪಿನ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಕೊತ್ತಂಬರಿ ಸೊಪ್ಪು ಹಲವಾರು ರೀತಿಯಿಂದ ತ್ವಚೆಗೆ ತುಂಬಾ ಲಾಭಕಾರಿ. ಇದನ್ನು ಹೇಗೆ ಬಳಸಬಹುದು ಎಂದು ತಿಳಿಯಿರಿ...ಕೊತ್ತಂಬರಿ ಸೊಪ್ಪು
ಎಲ್ಲಾ ವಿಧದ ಚರ್ಮಗಳಿಗೆ ಕೊತ್ತಂಬರಿ ಸೊಪ್ಪು ಬಳಸಬಹುದು. ಆದರೆ ಸೂಕ್ಷ್ಮ ವಿಧದ ಚರ್ಮವಿರುವವರು ಸ್ವಲ್ಪ ಜಾಗೃತೆ ವಹಿಸಿ.ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿರುವ ಕೊತ್ತಂಬರಿ ಸೊಪ್ಪು ಮೊಡವೆ, ಕಲೆ ಮತ್ತು ಬೊಕ್ಕೆಗಳಿಗೆ ತುಂಬಾ ಪರಿಣಾಮಕಾರಿ. ವಯಸ್ಸಾಗುವ ಲಕ್ಷಣಗಳನ್ನು ಇದು ತಡೆಗಟ್ಟುವುದು. ದೀರ್ಘಕಾಲದ ಚರ್ಮದ ಕಾಯಿಲೆ ಹಾಗೂ ಸಮಸ್ಯೆಗಳಿಗೆ ಕೊತ್ತಂಬರಿ ಸೊಪ್ಪು ಪರಿಣಾಮಕಾರಿ.
ಕೊತ್ತಂಬರಿ ಸೊಪ್ಪು ಬಳಸುವುದರಿಂದ ತ್ವಚೆಗೆ ಮಾಯಿಶ್ಚರೈಸರ್, ಪುನರುಜ್ಜೀವನ ಮತ್ತು ತಾಜಾತನ ಸಿಗುವುದು. ಕೊತ್ತಂಬರಿ ಸೊಪ್ಪಿನ ಫೇಸ್ ಪ್ಯಾಕ್ ಅಥವಾ ಸ್ಕ್ರಬ್ ಮಾಡುವುದಿದ್ದರೆ ನೀವು ಕೇವಲ ಎಲೆಗಳನ್ನು ಮಾತ್ರ ಬಳಸಿಕೊಳ್ಳಿ. ಮೂರು ನಿಮಿಷ ಕಾಲ ನೀರಿನಲ್ಲಿ ನೆನೆಸಿ ಬಳಿಕ ಬಳಸಿ. ಕೊತ್ತಂಬರಿ ಸೊಪ್ಪಿನ ಫೇಸ್ ಪ್ಯಾಕ್ ಅಥವಾ ಸ್ಕ್ರಬ್ ಅನ್ನು ಮನೆಯಲ್ಲೇ ತಯಾರಿಸುವುದು ಹೇಗೆ ಎಂದು ತಿಳಿಯಿರಿ.

Comments
Post a Comment