ಸೌಂದರ್ಯ ಕೂದಲಿನ ಆರೈಕೆಯ ರಹಸ್ಯ ಲಿಂಬೆ ಜ್ಯೂಸ್‌ನಲ್ಲಿದೆ!

ಮಹಿಳೆಯರು ಹಾಗೂ ಪುರುಷರಲ್ಲಿ ಕೂದಲು ಉದುರುವ ಸಮಸ್ಯೆ ಇರುವುದು. ಹೊರಗಿನ ಕಲುಷಿತ ವಾತಾವರಣ, ಜೀವನಶೈಲಿ, ಆಹಾರ ಇತ್ಯಾದಿಗಳು ಕೂದಲು ಉದುರುವಿಕೆಗೆ ಪ್ರಮುಖ ಕಾರಣವಾಗಿದೆ. ಆದರೆ ಪ್ರಕೃತಿದತ್ತವಾಗಿರುವ ಕೆಲವೊಂದು ಹಣ್ಣುಗಳು ಹಾಗೂ ತರಕಾರಿಗಳು ಕೂದಲು ಉದುರುವ ಸಮಸ್ಯೆ ಕಡಿಮೆ ಮಾಡುವುದು. ಇದರಲ್ಲಿ ಪ್ರಮುಖವಾಗಿ ಲಿಂಬೆ. ಹೌದು, ಲಿಂಬೆರಸವು ಕೂದಲು ಉದುರುವಿಕೆ ತಡೆದು ಕೂದಲಿನ ಬೆಳವಣೆಗೆಗೆ ನೆರವಾಗುವುದು. ವಿಟಮಿನ್ ಎ, ಬಿ, ಫೋಸ್ಪರಸ್ ಮತ್ತು ಆ್ಯಂಟಿಆಕ್ಸಿಡೆಂಟ್ ಹೊಂದಿರುವ ಲಿಂಬೆಯು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವುದು.

  ಲಿಂಬೆ ಹಣ್ಣು: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು..! 

ಕೂದಲಿಗೆ ಲಿಂಬೆರಸ ಬಳಸಿದರೆ ಅದರಿಂದ ಕೂದಲು ಆರೋಗ್ಯಕಾರಿ, ಕಾಂತಿಯುತ ಮತ್ತು ಬಲಿಷ್ಠವಾಗುವುದು. ಉಗುರುಬೆಚ್ಚಗಿನ ಎಣ್ಣೆಗೆ ಕೆಲವು ಹನಿ ಲಿಂಬೆರಸ ಹಾಕಿಕೊಂಡು ಅದನ್ನು ತಲೆಬುರುಡೆಗೆ ಮಸಾಜ್ ಮಾಡಿಕೊಳ್ಳಬೇಕು. ಕೂದಲು ಉದುರುವಿಕೆ ಮತ್ತು ತಲೆಹೊಟ್ಟಿಗೆ ಇದು ಪ್ರಮುಖ ಮನೆಮದ್ದಾಗಿದೆ. ನೇರವಾಗಿ ಲಿಂಬೆರಸ ಹಚ್ಚಿಕೊಂಡರೆ ಕೂದಲು ಬಲವಾಗುವುದು ಮತ್ತು ತಲೆಹೊಟ್ಟು ಕಡಿಮೆಯಾಗುವುದು. ಲಿಂಬೆರಸ ಬಳಸಿಕೊಂಡರೆ ಒಂದೇ ತಿಂಗಳಲ್ಲಿ ಫಲಿತಾಂಶ ಕಂಡುಬರುವುದು. ಕೂದಲಿಗೆ ಲಿಂಬೆರಸ ಬಳಸಿಕೊಳ್ಳುವ ವಿಧಾನಗಳು
1.ಒಂದು ಮೊಟ್ಟೆಯ ಲೋಳೆ, ಒಂದು ಕಪ್ ಬಿಸಿ ನೀರಿಗೆ ಐದು ಚಮಚ ಹೆನ್ನಾ ಹಾಕಿ. ಇದಕ್ಕೆ ಅರ್ಧ ಚಮಚ ತಾಜಾ ಲಿಂಬೆರಸ ಹಾಕಿ ಮತ್ತು ಇದನ್ನು ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಳ್ಳಿ. ತಲೆಬುರುಡೆ ಒಣಗುವ ತನಕ ಎರಡು ಗಂಟೆಗಳ ಕಾಲ ಹಾಗೆ ಬಿಡಿ ಮತ್ತು ಬಳಿಕ ಸ್ವಲ್ಪ ಶಾಂಪೂ ಹಾಕಿ ತೊಳೆಯಿರಿ. ಕೂದಲು ಬೆಳವಣಿಗೆಗೆ ಇದು ನೈಸರ್ಗಿಕ ಮನೆಮದ್ದಾಗಿದೆ.

  ಕೂದಲಿನ ಆರೈಕೆಯ ರಹಸ್ಯ ಲಿಂಬೆ ಜ್ಯೂಸ್‌ನಲ್ಲಿದೆ! 

2.ಲಿಂಬೆ ರಸ ಮತ್ತು ತೆಂಗಿನ ನೀರನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿಕೊಂಡು ಅದನ್ನು ತಲೆಗೆ ಹಚ್ಚಿಕೊಳ್ಳಿ. 30 ನಿಮಿಷ ಕಾಲ ಹಾಗೆ ಬಿಟ್ಟು, ಶಾಂಪೂ ಹಾಕಿ ತೊಳೆಯಿರಿ. ಕೂದಲು ಉದುರುವಿಕೆಗೆ ಇದು ನೈಸರ್ಗಿಕ ಚಿಕಿತ್ಸೆ. ಇದರಿಂದ ಕೂದಲು ಕಾಂತಿಯುತ ಹಾಗೂ ದಪ್ಪವಾಗುವುದು.
3.ಲಿಂಬೆರಸವು ಕೂದಲಿನ ಬಣ್ಣ ಹಗುರಗೊಳಿಸುವುದು. ಬಿಸಿಲಿಗೆ ಹೋಗುವ ಮೊದಲು ಸ್ವಲ್ಪ ಲಿಂಬೆರಸದೊಂದಿಗೆ ಮಾಯಿಶ್ಚರೈಸ್ ನ್ನು ಕೂದಲಿಗೆ ಹಚ್ಚಿಕೊಳ್ಳಿ. ಕೂದಲಿನ ಬಣ್ಣ ಹಗುರವಾಗಿಸಿಕೊಳ್ಳಲು ಇದು ನೈಸರ್ಗಿಕ ವಿಧಾನ.

 4.ಲಿಂಬೆಯ ಹೇರ್ ಸ್ಪ್ರೇ ಯಾವುದೇ ವಿಧದ ಕೂದಲಿಗೆ ಬಳಸಿಕೊಳ್ಳಬಹುದು. ಲಿಂಬೆಯ ತುಂಡುಗಳನ್ನಾಗಿ ಮಾಡಿಕೊಳ್ಳಿ ಮತ್ತು ಇದನ್ನು ಸ್ವಲ್ಪ ನೀರಿರುವ ತವಾಗೆ ಹಾಕಿ. 15 ನಿಮಿಷ ಕಾಲ ಇದು ಕುದಿಯಲು ಬಿಡಿ ಮತ್ತು ಅರ್ಧ ನೀರು ಆವಿಯಾಗಲಿ. ಬಳಿಕ ಇದನ್ನು ತೆಗೆದು ಸೋಸಿಕೊಂಡು ಸಾರಭೂತ ತೈಲದೊಂದಿಗೆ ಮಿಶ್ರಣ ಮಾಡಿ. ಸ್ಪ್ರೇ ಬಾಟಲಿಗೆ ಇದನ್ನು ಹಾಕಿಟ್ಟು, ಒಂದು ವಾರ ಕಾಲ ಬಳಸಬಹುದು.
5.ಆರೋಗ್ಯಕಾರಿಯಾಗಿ ಕೂದಲು ಬೆಳೆಯಲು ಲಿಂಬೆಯನ್ನು ನೈಸರ್ಗಿಕ ಶಾಂಪೂ ಆಗಿ ಬಳಸಬಹುದು. ಬಿಸಿ ನೀರಿಗೆ ಕೆಲವು ತುಂಡು ಸಾಬೂನು ಹಾಕಿ, ಅದು ಸಂಪೂರ್ಣವಾಗಿ ಕರಗಲು ಬಿಸಿ. ಇದಕ್ಕೆ ಕೆಲವು ಹನಿ ಆಲಿವ್ ತೈಲ ಮತ್ತು ಕೆಲವು ಹನಿ ಲಿಂಬೆರಸ ಹಾಕಿ ಮಿಶ್ರಣ ಮಾಡಿಕೊಂಡು ಶಾಂಪೂವಿನಂತೆ ಬಳಸಿ. ಒಂದು ವಾರ ಕಾಲ ಶಾಂಪೂ ಬಳಸಲು ಇದನ್ನು ಫ್ರಿಡ್ಜ್ ನಲ್ಲಿ ಇಟ್ಟುಬಿಡಿ.
ಅತಿಯಾಗಿ ಲಿಂಬೆರಸ ಬಳಸಿಕೊಂಡರೆ ಇದರಿಂದ ಸಮಸ್ಯೆಯಾಗಬಹುದು. ಯಾಕೆಂದರೆ ಇದರಲ್ಲಿ ಸಿಟ್ರಿಕ್ ಆಮ್ಲವಿದೆ. ಇದು ಕೂದಲನ್ನು ಸುಡಬಹುದು. ಇದರಿಂದ ಎಚ್ಚರಿಕೆ ವಹಿಸಿ. ನಿಮ್ಮ ಕೂದಲಿಗೆ ಹೊಂದಿಕೊಳ್ಳದೆ ಇದ್ದರೆ ಬಳಸಬೇಡಿ.



Comments

Popular posts from this blog

ಕೂದಲು ತೊಳೆದ ಬಳಿಕ, ಆರೈಕೆ ಹೀಗಿರಲಿ.. ಯಾವ ಸಮಸ್ಯೆಯೂ ಬಾರದು!

ಚೆಲುವೆಯ ಅಂದದ ಮುಖಕ್ಕೆ ಜೇನಿನ ಫೇಸ್ ಮಾಸ್ಕ್!

ತ್ವಚೆಯ ಎಲ್ಲಾ ಸಮಸ್ಯೆಗೆ ರಾಮಬಾಣ 'ಅಲೋವೆರಾ' ಫೇಸ್ ಮಾಸ್ಕ್