ಮೊಡವೆ ಸಮಸ್ಯೆಗೆ ಯಾಕೆ ಚಿಂತೆ? ಮನೆಯಲ್ಲಿಯೇ ಇದೆ ಪರಿಹಾರ!
ಮನೆಯಿಂದ ಹೊರಗಡೆ ಹೋದರೆ ಸಾಕು ಧೂಳು ಹಾಗೂ ವಾಹನಗಳ ಹೊಗೆ ದೇಹಕ್ಕೆ ಬಂದು ಅಂಟಿಕೊಳ್ಳುವುದು. ಅತಿಯಾದ ವಾಹನ ದಟ್ಟನೆ ಹಾಗೂ ಕೈಗಾರಿಕೆಗಳಿಂದಾಗಿ ವಾತಾವರಣವೂ ಕಲುಷಿತವಾಗಿದೆ. ಹೊರಗಡೆ ಹೋದರೆ ದೊಡ್ಡ ಚಿಂತೆಯಾಗುವುದು ಚರ್ಮದ ಆರೋಗ್ಯದ ಬಗ್ಗೆ ಚರ್ಮವು ಈ ಕಲುಷಿತ ವಾತಾವರಣದಲ್ಲಿ ಕೆಡಿಸಿಕೊಳ್ಳುತ್ತದೆ.
ಸಾಸಿವೆ ಮತ್ತು ಜೇನುತುಪ್ಪ ಸಾಸಿವೆಯಲ್ಲಿ ಸಲಿಸ್ಯಲಿಕ್ ಎನ್ನುವ ಆಮ್ಲವು ಇರುವ ಕಾರಣದಿಂದಾಗಿ ಇದು ಸೋಂಕು ಹಾಗೂ ಮೊಡವೆಗಳನ್ನು ನಿವಾರಣೆ ಮಾಡುತ್ತದೆ. ಸಾಸಿವೆಯು ಮೊಡವೆಗಳಿಗೆ ಅತ್ಯುತ್ತಮ ಔಷಧಿಯಾಗಿದೆ. ¼ ಚಮಚ ಸಾಸಿವೆ ಹುಡಿ ಮತ್ತು ಒಂದು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು 15 ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ.
ಸಿಂಪಲ್ ಮನೆಮದ್ದು, ಮೊಡವೆ ಕಲೆಗೆ ತ್ವರಿತ ಪರಿಹಾರ
ಇದರಿಂದ ಮುಖದಲ್ಲಿ ಮೊಡವೆಗಳು, ಕಲೆಗಳು ಹಾಗೂ ಬೊಕ್ಕೆಗಳು ಮೂಡುತ್ತದೆ. ಮೊಡವೆಗಳು ಮಹಿಳೆಯರು ಹಾಗೂ ಪುರುಷರಲ್ಲಿ ಸಾಮಾನ್ಯವೆನ್ನುವಂತಾಗಿದೆ. ಅದರಲ್ಲೂ ಎಣ್ಣೆಯಂಶವಿರುವ ಚರ್ಮವನ್ನು ಹೊಂದಿರುವವರಲ್ಲಿ ಈ ಸಮಸ್ಯೆಯು ತುಂಬಾ ದೀರ್ಘವಾಗಿರುತ್ತದೆ.ಮೊಡವೆ ಸಮಸ್ಯೆಗೆ ಅಂಗೈಯಲ್ಲಿಯೇ ಇದೆ ಪರಿಹಾರ!
ಚರ್ಮದ ರಂಧ್ರಗಳ ಒಳಗಡೆ ಎಣ್ಣೆಯಂಶವು ಸೇರಿಕೊಂಡು ಸಮಸ್ಯೆಯನ್ನು ಉಂಟುಮಾಡುತ್ತದೆ. ಮೊಡವೆಗಳು ಮುಖದಲ್ಲಿ ಮೂಡಿದರೆ ಅದರ ನೋವು ತೀವ್ರವಾಗಿರುತ್ತದೆ ಮತ್ತು ಮುಖದ ಸೌಂದರ್ಯವನ್ನು ಕೂಡ ಇದು ಕೆಡಿಸುತ್ತದೆ. ಮುಖದ ತುಂಬಾ ಮೊಡವೆಗಳಿದ್ದರೆ ಯಾವುದೇ ಕಾರ್ಯಕ್ರಮಕ್ಕೆ ಹೋಗಲು ಹಿಂಜರಿಕೆಯಾಗುತ್ತದೆ.ಮೊಡವೆ ಸಮಸ್ಯೆಗೆ ಸಾಮಾನ್ಯವಾದ ಆರು ಕಾರಣ
ಇಂತಹ ಸಮಯದಲ್ಲಿ ಯಾವುದಾದರೂ ಕ್ರೀಮ್ ಅಥವಾ ಮೊಡವೆ ನಿವಾರಕ ಔಷಧಿಗಳನ್ನು ಬಳಸುತ್ತೇವೆ. ಆದರೆ ಒಂದು ವಾರಕ್ಕಿಂತ ಹೆಚ್ಚು ಸಮಯ ಇದನ್ನು ಬಳಸಿದರೆ ಅದರಿಂದ ಅಡ್ಡಪರಿಣಾಮಗಳು ಇರುತ್ತದೆ. ಮೊಡವೆಗಳ ನಿವಾರಣೆ ಮಾಡಲು ಮನೆಯಲ್ಲೇ ಸಿಗುವಂತಹ ಕೆಲವೊಂದು ಸಾಮಗ್ರಿಗಳನ್ನು ಬಳಸಿಕೊಳ್ಳಿ. ಅದು ಹೇಗೆಂದು ತಿಳಿಯಲು ಮುಂದಕ್ಕೆ ಓದಿಕೊಳ್ಳಿ....ಸಾಸಿವೆ ಮತ್ತು ಜೇನುತುಪ್ಪ ಸಾಸಿವೆಯಲ್ಲಿ ಸಲಿಸ್ಯಲಿಕ್ ಎನ್ನುವ ಆಮ್ಲವು ಇರುವ ಕಾರಣದಿಂದಾಗಿ ಇದು ಸೋಂಕು ಹಾಗೂ ಮೊಡವೆಗಳನ್ನು ನಿವಾರಣೆ ಮಾಡುತ್ತದೆ. ಸಾಸಿವೆಯು ಮೊಡವೆಗಳಿಗೆ ಅತ್ಯುತ್ತಮ ಔಷಧಿಯಾಗಿದೆ. ¼ ಚಮಚ ಸಾಸಿವೆ ಹುಡಿ ಮತ್ತು ಒಂದು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು 15 ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ.






Comments
Post a Comment